ರಿಯಾಯಿತಿ ದರದಲ್ಲಿ ಶಿಯೋಮಿ ಉತ್ಪನ್ನ ಖರೀದಿಸಲು ಇದುವೇ ಸೂಕ್ತ ಸಮಯ!

|

ಇ ಕಾಮರ್ಸ್‌ಗಳಂತೆ ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಗಳು ವಿಶೇಷ ಸೇಲ್ ಆಯೋಜಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿವೆ. ಆ ಪೈಕಿ ಶಿಯೋಮಿ ಕಂಪನಿಯು ಒಂದಾಗಿದೆ. ಇದೀಗ ಶಿಯೋಮಿ ಸಂಸ್ಥೆಯು ಶಿಯೋಮಿ ಬ್ಲ್ಯಾಕ್ ಪ್ರೈಡ್‌ (Xiaomi Black Friday Sale) ಸೇಲ್ ಮೇಳವನ್ನು ಆಯೋಜಿಸಿದ್ದು, ಆಯ್ದ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಡಿವೈಸ್‌ಗಳಿಗೆ ಆಕರ್ಷಕ ಕೊಡುಗೆ ಘೋಷಿಸಿದೆ.

ನವೆಂಬರ್

ಹೌದು, ಶಿಯೋಮಿ ಆಯೋಜಿಸಿರುವ ಶಿಯೋಮಿ ಬ್ಲ್ಯಾಕ್ ಪ್ರೈಡ್‌ ಸೇಲ್‌ ಇದೀಗ ಲೈವ್ ಇದೆ. ಈ ಸೇಲ್ ಇದೇ ನವೆಂಬರ್ 30 ರಂದು ಮುಕ್ತಾಯವಾಗಲಿದೆ. ಈ ವಿಶೇಷ ಮಾರಾಟದಲ್ಲಿ ಆಯ್ದ, ಫೋನ್‌, ಇಯರ್‌ಫೋನ್, ಸ್ಮಾರ್ಟ್‌ ಟಿವಿ ಸೇರಿದಂತೆ ಇತರೆ ಕೆಲವು ಸಾಧನಗಳಿಗೆ ಭರ್ಜರಿ ರಿಯಾಯಿತಿ, ಗ್ರಾಹಕರಿಗೆ ವಿನಿಮಯ ವ್ಯವಹಾರಗಳು, ಯಾವುದೇ EMI ಕೊಡುಗೆಗಳು ಸೇರಿದಂತೆ ಇತರೆ ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತಿದೆ. ಹಾಗಾದರೇ ಶಿಯೋಮಿ ಬ್ಲ್ಯಾಕ್ ಪ್ರೈಡ್‌ ಸೇಲ್‌ ನಲ್ಲಿ ರಿಯಾಯಿತಿ ಪಡೆದ ಸಾಧನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿಬುಕ್ 15 ಪ್ರೊ (RedmiBook 15 Pro)

ರೆಡ್ಮಿಬುಕ್ 15 ಪ್ರೊ (RedmiBook 15 Pro)

ಶಿಯೋಮಿ ಬ್ಲ್ಯಾಕ್ ಪ್ರೈಡ್‌ ಸೇಲ್‌ ನಲ್ಲಿ ರೆಡ್ಮಿಬುಕ್ 15 ಪ್ರೊ ಪ್ರಸ್ತುತ 47,999ರೂ. ನಲ್ಲಿ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕೊಡುಗೆಯೊಂದಿಗೆ, ಹೆಚ್ಚುವರಿ 3,500ರೂ. ರಿಯಾಯಿತಿಯ ಲಭ್ಯ ಆಗಲಿದೆ. ಕೊಡುಗೆ ನಂತರದಲ್ಲಿ ಗ್ರಾಹಕರು ಈ ಡಿವೈಸ್ 44,499ರೂ. ಪಡೆಯಬಹುದು.

ಮಿ ಟಿವಿ 4A ಹರೈಸನ್ ಆವೃತ್ತಿ (Mi TV 4A 43 Horizon Edition)

ಮಿ ಟಿವಿ 4A ಹರೈಸನ್ ಆವೃತ್ತಿ (Mi TV 4A 43 Horizon Edition)

ಬ್ಲ್ಯಾಕ್ ಪ್ರೈಡ್‌ ಸೇಲ್‌ ನಲ್ಲಿ ಈ ಸ್ಮಾರ್ಟ್‌ ಟಿವಿ ಪ್ರಸ್ತುತ ರೂ 26,999 ನಲ್ಲಿ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು ಹೆಚ್ಚುವರಿಯಾಗಿ 1,500 ರೂ. ರಿಯಾಯಿತಿಯನ್ನು ಪಡೆಯುತ್ತಾರೆ. ಇನ್ನು ಈ ಮಿ ಟಿವಿ 4A ಹರೈಸನ್ ಆವೃತ್ತಿಯ 32 ಇಂಚಿನ ಸ್ಮಾರ್ಟ್‌ಟಿವಿ 1,368x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಎಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಟಿವಿ 20D ಸ್ಟಿರಿಯೊ ಸ್ಪೀಕರ್‌ಗಳನ್ನ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಕ್ವಾಡ್‌-ಕೋರ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು ಪ್ಯಾಚ್‌ವಾಲ್ ಇಂಟರ್‌ಪೇಸ್‌ ಜೊತೆಗೆ ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಮಾಲಿ -450 GPU ಮತ್ತು 1GB RAM ಅನ್ನು ಹೊಂದಿದ್ದು, ಇದು 8GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ V4.2, ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ರೆಡ್ಮಿಬುಕ್ 15 ಇ-ಲರ್ನಿಂಗ್ ಆವೃತ್ತಿ

ರೆಡ್ಮಿಬುಕ್ 15 ಇ-ಲರ್ನಿಂಗ್ ಆವೃತ್ತಿ

ಶಿಯೋಮಿ ಬ್ಲ್ಯಾಕ್ ಪ್ರೈಡ್‌ ಸೇಲ್‌ ನಲ್ಲಿ ಈ ಡಿವೈಸ್ ಪ್ರಸ್ತುತ 37,999ರೂ. ರಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 2,500 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತಾರೆ. ಇನ್ನು ಈ ರೆಡ್ಮಿಬುಕ್ 15 ಇ-ಲರ್ನಿಂಗ್ ಆವೃತ್ತಿಯು 11 ನೇ ಜೆನ್‌ ಕೋರ್ i3 ನಿಂದ ನಡೆಸಲ್ಪಡುತ್ತಿದೆ.

ಮಿ ರೋಬೋಟ್ ವ್ಯಾಕ್ಯೂಮ್-ಮಾಪ್ ಕ್ಲೀನರ್

ಮಿ ರೋಬೋಟ್ ವ್ಯಾಕ್ಯೂಮ್-ಮಾಪ್ ಕ್ಲೀನರ್

ಬ್ಲ್ಯಾಕ್ ಪ್ರೈಡ್‌ ಸೇಲ್‌ ನಲ್ಲಿ ಈ ಡಿವೈಸ್ ಮಿ ರೋಬೋಟ್ ವ್ಯಾಕ್ಯೂಮ್-ಮಾಪ್ ಕ್ಲೀನರ್ ಪ್ರಸ್ತುತ 21,999ರೂ. ನಲ್ಲಿ ಲಭ್ಯವಿದೆ. ಅಲ್ಲದೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು ಹೆಚ್ಚುವರಿ 2,000ರೂ. ರಿಯಾಯಿತಿಗೆ ಅರ್ಹರಾಗಿದ್ದಾರೆ.

ಶಿಯೋಮಿ ಮಿ 11 ಫೋನ್ ಸರಣಿ

ಶಿಯೋಮಿ ಮಿ 11 ಫೋನ್ ಸರಣಿ

ಶಿಯೋಮಿ ಕಂಪನಿಯ ಮಿ 11 ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿವೆ. ಆ ಪೋನ್‌ಗಳ ಪೈಕಿ ಮಿ 11 ಲೈಟ್ NE, ಮಿ 11X ಪ್ರೊ ಮತ್ತು ಮಿ 11X ಫೋನ್‌ಗಳು ಆಕರ್ಷಕ ರಿಯಾಯಿತಿ ಪಡೆದಿವೆ. ಬ್ಲ್ಯಾಕ್ ಪ್ರೈಡ್‌ ಸೇಲ್‌ ನಲ್ಲಿ ಮಿ 11 ಲೈಟ್ NE ಫೋನ್ ಸದ್ಯ 21,499ರೂ. ಪಡೆದಿದೆ. ಮಿ 11X ಪ್ರೊ ಫೋನ್ 31,499ರೂ. ಹೊಂದಿದೆ ಹಾಗೆಯೇ ಮಿ 11X ಫೋನ್‌ 22,499ರೂ. ಬೆಲೆ ಪಡೆದಿದೆ.

ಶಿಯೋಮಿ 11 ಲೈಟ್ 5G NE ಸ್ಮಾರ್ಟ್‌ಫೋನ್ ಫೀಚರ್ಸ್‌

ಶಿಯೋಮಿ 11 ಲೈಟ್ 5G NE ಸ್ಮಾರ್ಟ್‌ಫೋನ್ ಫೀಚರ್ಸ್‌

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

ಮಿ 11X ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್‌

ಮಿ 11X ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್‌

ಮಿ 11X ಪ್ರೊ ಈ ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌, 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಹಾಗೆಯೇ ಮಿ 11X ಪ್ರೊ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 888SoC ಪ್ರೊಸೆಸರ್‌ ಹೊಂದಿದೆ. ಇದು 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ಎಚ್‌ಎಂ 2 ಸೆನ್ಸಾರ್‌ ಹೊಂದಿದೆ. ಇತರ ಎರಡು ಕ್ಯಾಮೆರಾಗಳು ಮಿ 11X ಸ್ಮಾರ್ಟ್‌ಫೋನ್‌ ಮಾದರಿಯನ್ನೇ ಹೊಂದಿವೆ. ಇದಲ್ಲದೆ ಈ ಎರಡೂ ಫೋನ್‌ಗಳು 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ.

Most Read Articles
Best Mobiles in India

English summary
Xiaomi Black Friday Sale Live: Best Deals On These Phones, Smart TVs And More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X