ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ Mi QLED TV 75 ಸ್ಮಾರ್ಟ್‌ಟಿವಿ!

|

ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲಿ ಕೂಡ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ಇದೇ ಏಪ್ರಿಲ್ 23 ರಂದು ತನ್ನ ಅತಿದೊಡ್ಡ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಟಿವಿಯನ್ನು Mi QLED TV 75 ಅನ್ನು ಮಿ 11 ಪ್ರಮುಖ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ Mi QLED TV 75 ಸ್ಮಾರ್ಟ್‌ಟಿವಿ ಲಾಂಚ್‌ ಡೇಟ್‌ ಫಿಕ್ಸ್‌ ಮಾಡಿದೆ. ಇದು ಭಾರತದಲ್ಲಿ ಶಿಯೋಮಿಯ 75 ಇಂಚಿನ ಮೊದಲ ಸ್ಮಾರ್ಟ್ ಟಿವಿ ಆಗಿದೆ. ಶಿಯೋಮಿ ಸಂಸ್ಥೆ 2018 ರಲ್ಲಿ ಭಾರತದಲ್ಲಿ ಟೆಲಿವಿಷನ್ ಮಾರಾಟವನ್ನು ಪ್ರಾರಂಭಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಅದರ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಇನ್ನುಳಿದಂತೆ Mi QLED TV 75 ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ

ಶಿಯೋಮಿ ಸ್ಮಾರ್ಟ್‌ಟಿವಿಗಳು ಈಗ ಹೆಚ್ಚು ಪ್ರೀಮಿಯಂ ಮಾರುಕಟ್ಟೆಯನ್ನು ಗುರಿಯಾಗಿಸಿವೆ. ಅಲ್ಲದೆ ಈ ವರ್ಷದ ಅಂತ್ಯದ ವೇಳೆಗೆ ಎರಡು ಲೈನ್‌ಅಪ್‌ಗಳನ್ನು ಗುರುತಿಸಲಾಗುವುದು ಎಂದು ಶಿಯೋಮಿ ಸ್ಪಷ್ಟಪಡಿಸಿದೆ. ಮಿ ಕ್ಯೂಎಲ್ಇಡಿ ಟಿವಿ 75 ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಪರಿಚಯಿಸಲಾದ 75 ಇಂಚಿನ ಟಿವಿ ಶಿಯೋಮಿ ಆಗಿರುತ್ತದೆ. ಆದಾಗ್ಯೂ, ಇದು ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಗ್ರಾಹಕೀಕರಣಗಳನ್ನು ಮಾಡುವ ನಿರೀಕ್ಷೆಯಿದೆ. ಇವು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ವಿಷಯದಲ್ಲಿ ಉನ್ನತ ಮಟ್ಟದಲ್ಲಿರಲಿವೆ ಎನ್ನಲಾಗಿದೆ.

Mi QLED TV 75

Mi QLED TV 75 ಸ್ಮಾರ್ಟ್‌ಟಿವಿ 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 75 ಇಂಚಿನ QLED 4K UHD ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಂಟಮ್ ಡಾಟ್ ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೆ ಇದು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 10,000 ರ ವ್ಯತಿರಿಕ್ತ ಅನುಪಾತದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಟಿವಿಯು ಜಾಗತಿಕವಾಗಿ ಡೈನಾಮಿಕ್ ಲೋಕಲ್ ಡಿಮ್ಮಿಂಗ್, ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10+ ಬೆಂಬಲವನ್ನು ಹೊಂದಿದೆ.

ಶಿಯೋಮಿ

ಇನ್ನು ಶಿಯೋಮಿ Mi QLED TV 75 30W ಸ್ಟಿರಿಯೊ ಸ್ಪೀಕರ್ ಸಿಸ್ಟಮ್‌ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಜೊತೆಗೆ ಇದು ಆರು ಸ್ಪೀಕರ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಎರಡು ಟ್ವೀಟರ್‌ಗಳು ಮತ್ತು ನಾಲ್ಕು ವೂಫರ್‌ಗಳು ಸೇರಿರಲಿವೆ. ಅಲ್ಲದೆ ಇದು ಡಾಲ್ಬಿ ಆಡಿಯೋ ಮತ್ತು ಡಿಟಿಎಸ್-ಎಚ್‌ಡಿ ಬೆಂಬಲದೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ 1.5GHz ಮೀಡಿಯಾಟೆಕ್ MT9611 ಪ್ರೊಸೆಸರ್ ಹೊಂದಿದ್ದು, 2GB of RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಸ್ಮಾರ್ಟ್‌ಟಿವಿ

Mi QLED TV 75 ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಒಂದು ಎಚ್‌ಡಿಎಂಐ 2.1 ಪೋರ್ಟ್, ಎರಡು ಎಚ್‌ಡಿಎಂಐ 2.0 ಪೋರ್ಟ್‌ಗಳು, ಎರಡು ಯುಎಸ್‌ಬಿ 2.0 ಪೋರ್ಟ್‌ಗಳು, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ. ಗೇಮಿಂಗ್‌ಗಾಗಿ ಮೀಸಲಾದ ಆಟೋ ಲೋ ಲ್ಯಾಟೆನ್ಸಿ ಮೋಡ್ ಇದೆ. ಇನ್ನು ಈ ಸ್ಮಾರ್ಟ್‌ಟಿವಿ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿದ್ದು, ಇದು ವೆಚ್ಚವನ್ನು ಸ್ಪರ್ಧಾತ್ಮಕವಾಗಿಡಲು ಸಹಾಯ ಮಾಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ. ಇನ್ನೂ, ದೇಶದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್ ಟಿವಿಗಳ ಬೆಲೆಯನ್ನು ಗಮನಿಸಿದರೆ ಇದರ ಬೆಲೆ 1 ಲಕ್ಷ ರೂ.ಹೊಂದಿರುವ ಸಾಧ್ಯತೆ ಇದೆ.

Most Read Articles
Best Mobiles in India

English summary
Xiaomi is launching its largest smart TV in India on April 23.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X