ಅಮೆಜಾನ್‌ನಲ್ಲಿ ಶಿಯೋಮಿ ಮಿ 10i ಸ್ಮಾರ್ಟ್‌ಫೋನಿಗೆ ಭಾರೀ ಡಿಸ್ಕೌಂಟ್‌!

|

ಇತ್ತೀಚಿಗೆ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ಆ ಪೈಕಿ ಮಿ 10i ಸ್ಮಾರ್ಟ್‌ಫೋನ್ ಒಂದಾಗಿದ್ದು, ಈ ಫೋನ್ 108MP ಕ್ಯಾಮೆರಾ ಸೆನ್ಸಾರ್‌ನಿಂದ ಅಟ್ರ್ಯಾಕ್ಟ್‌ ಮಾಡಿದೆ. ಇದೀಗ ಶಿಯೋಮಿ ಮಿ 10i ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಆಗಿದ್ದು, ಮತ್ತೊಮ್ಮೆ ಗ್ರಾಹಕರನ್ನು ತನ್ನತ್ತ ತಿರುಗು ನೋಡುವಂತೆ ಮಾಡಿದೆ.

ಶಿಯೋಮಿ

ಹೌದು, ಅಮೆಜಾನ್ ತಾಣದಲ್ಲಿ ಶಿಯೋಮಿ ಸಂಸ್ಥೆಯ ಶಿಯೋಮಿ ಮಿ 10i ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ 1,500ರೂ. ರಿಯಾಯಿತಿ ಪಡೆದಿದೆ. ಅಮೆಜಾನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೊಂದಿಗೆ ಸಹಭಾಗಿತ್ವದಲ್ಲಿ 1500 ರೂ. ಇನ್‌ಸ್ಟಂಟ್ ರಿಯಾಯಿತಿ ತಿಳಿಸಿದೆ. ಡಿಸ್ಕೌಂಟ್‌ ನಂತರ 6GB RAM ವೇರಿಯಂಟ್‌ನ ಮಿ 10i ಫೋನ್‌ ಬೆಲೆ 20,499ರೂ. ಆಗಿದೆ. ಹಾಗೆಯೇ 8GB RAM ವೇರಿಯಂಟ್‌ 22,499ರೂ.ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಶಿಯೋಮಿ ಮಿ 10i ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. ಫೋನಿನ ಡಿಸ್‌ಪ್ಲೇ 125Hz ರಿಫ್ರೆಶ್‌ ರೇಟ್‌ ಜೊತೆಗೆ 450 ನಿಟ್ಸ್‌ ಬ್ರೈಟ್‌ನೆಶ್‌ ಅನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 84.6% ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಪಡೆದಿದೆ. ಇ-ಪೇಪರ್ ಓದುವುದಕ್ಕೆ ಪೂರಕವಾಗಿದೆ.

ಯಾವ ಪ್ರೊಸೆಸರ್‌

ಯಾವ ಪ್ರೊಸೆಸರ್‌

ಶಿಯೋಮಿ ಮಿ 10i ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 750G ಪ್ರೊಸೆಸರ್‌ ಹೊಂದಿದೆ.ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೆ 6GB RAM+128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಸ್ಪೆಷಲ್ ಕ್ಯಾಮೆರಾ

ಸ್ಪೆಷಲ್ ಕ್ಯಾಮೆರಾ

ಶಿಯೋಮಿ ಮಿ 10i ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಸೌಂಡ್‌ ಫೀಚರ್ಸ್‌

ಬ್ಯಾಟರಿ ಮತ್ತು ಸೌಂಡ್‌ ಫೀಚರ್ಸ್‌

ಶಿಯೋಮಿ ಮಿ10i ಸ್ಮಾರ್ಟ್‌ಫೋನ್‌ 5820mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಜಸ್ಟ್‌ 58 ನಿಮಿಷದಲ್ಲಿ 100% ವರೆಗೂ ಬ್ಯಾಟರಿ ಚಾರ್ಜ್‌ ಆಗುವ ಸಾಮರ್ಥ್ಯ ಪಡೆದಿದೆ ಎಂದು ಕಂಪನಿ ಹೇಳಿಕೊಂಡಿದೆ. ಡ್ಯುಯಲ್‌ ಸ್ಪೀಕರ್ಸ್‌ ಸೌಲಭ್ಯದ ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಹಾಟ್‌ಸ್ಪಾಟ್‌, GPS, USB ಟೈಪ್‌ ಸಿ2 ಅನ್ನು ಬೆಂಬಲಿಸಲಿದೆ.

ಡಿಸ್ಕೌಂಟ್ ಬೆಲೆ ಎಷ್ಟು?

ಡಿಸ್ಕೌಂಟ್ ಬೆಲೆ ಎಷ್ಟು?

ಶಿಯೋಮಿ ಮಿ10i ಸ್ಮಾರ್ಟ್‌ಫೋನ್‌ 6GB RAM+128GB ಮತ್ತು 8GB RAM+128GB ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಡಿಸ್ಕೌಂಟ್‌ ನಂತರ 6GB RAM+128GB ವೇರಿಯಂಟ್‌ ಬೆಲೆಯು 20,499ರೂ. ಆಗಿದೆ. ಅದೇ ರೀತಿ 8GB RAM+128GB ವೇರಿಯಂಟ್‌ ದರವು 22,499ರೂ. ಆಗಿದೆ.

Most Read Articles
Best Mobiles in India

English summary
Xiaomi Mi 10i Gets Discounted By Rs 1,500 On Amazon India: Check The Deal.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X