ಸದ್ಯದಲ್ಲೇ ಬಿಡುಗಡೆ ಆಗಲಿದೆ ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 6 ಡಿವೈಸ್‌!

|

ಜನಪ್ರಿಯ ಶಿಯೋಮಿ ಕಂಪನಿಯು ಸ್ಮಾರ್ಟ್‌ಫೋಣ್‌ಗಳ ಜೊತೆಗೆ ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಶಿಯೋಮಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಮಿ ಬ್ಯಾಂಡ್‌ 5 ಡಿವೈಸ್‌ ಹಲವು ಆಕರ್ಷಕ ಫೀಚರ್ಸ್‌ಗಳಿಂದ ಫಿಟ್ನೆಸ್‌ ಪ್ರಿಯರ ಗಮನ ಸೆಳೆದಿದೆ. ಅದರ ಬೆನ್ನಲ್ಲೇ ಶಿಯೋಮಿ ಇದೀಗ ಹೊಸದಾಗಿ ಮಿ ಬ್ಯಾಂಡ್ 6 ಡಿವೈಸ್‌ ಅನಾವರಣ ಮಾಡಲು ಸಕಲ ತಯಾರಿ ನಡೆಸುತ್ತಿದೆ.

ಟ್ರೆಂಡಿಂಗ್‌ನಲ್ಲಿ

ಹೌದು, ಮಾರುಕಟ್ಟೆಯಲ್ಲಿಗ ಭಿನ್ನ ಫೀಚರ್ಸ್‌ಗಳ ತರಹೇವಾರಿ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳಲ್ಲಿ ಶಿಯೋಮಿ ಸಂಸ್ಥೆಯ ಬ್ಯಾಂಡ್‌ಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಕಂಪನಿಯು ತನ್ನ ಬ್ಯಾಂಡ್‌ಗಳ ಲಿಸ್ಟ್‌ಗೆ ಈಗ ನೂತನವಾಗಿ ಮಿ ಬ್ಯಾಂಡ್ 6 ಡಿವೈಸ್‌ ಬಿಡುಗಡೆ ಮಾಡುವ ಸೂಚನೆ ಹೊರಹಾಕಿದೆ. ಹಾಗೆಯೇ ಈ ಡಿವೈಸ್‌ನ ಕೆಲವು ಲೀಕ್ ಫೀಚರ್ಸ್‌ಗಳು ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ. ಹಾಗಾದರೇ ಮಿ ಬ್ಯಾಂಡ್ 6 ಡಿವೈಸ್‌ನ ಫೀಚರ್ಸ್‌ಗಳು ಹೇಗಿರಲಿವೆ ಎಂಬುದನ್ನು ನೋಡೋಣ ಬನ್ನಿರಿ.

ಡಿವೈಸ್‌

ಹೊಸ ಮಿ ಬ್ಯಾಂಡ್ 6 ಡಿವೈಸ್‌ ವಿನ್ಯಾಸವು ಬಹುತೇಕ ಮಿ ಬ್ಯಾಂಡ್ 5 ಗೆ ಹೋಲುವಂತೆ ಕಾಣಿಸಲಿದೆ. ಆವೃತ್ತಿಯು ಅಮೆಜಾನ್‌ನ ಅಲೆಕ್ಸಾ ವಾಯಿಸ್‌ ಸಹಾಯಕರನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ಈ ಡಿವೈಸ್‌ ಎಸ್‌ಪಿಒ 2 ರಕ್ತದ ಆಮ್ಲಜನಕದ ಶುದ್ಧತ್ವ ಮಾಪನ ಹೊಂದಿರಲಿದೆ. ಫರ್ಮ್‌ವೇರ್ ಫೈಲ್ ಡಯಲ್ ಮಾದರಿಗಳ ಸರಣಿಯನ್ನು ಸಹ ತೋರಿಸುತ್ತದೆ.

ಡೌಯಿನ್

ಚಾಟ್ ಮಾಹಿತಿಯ ಪ್ರದರ್ಶನಕ್ಕಾಗಿ ಮಿ ಬ್ಯಾಂಡ್ 6 ಡಿವೈಸ್‌ 308 ನೋಟಿಫೀಕೇಶನ್‌ ಐಕಾನ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ, ಜೆಡಿ, ಟಿಮಾಲ್, ಮೀಟೂವಾನ್ ಕ್ಯೂಕ್ಯೂ, ಡೌಯಿನ್ ಮತ್ತು ಇತರ ಹಲವು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಐಕಾನ್‌ಗಳಿವೆ. ಅವುಗಳ ನೋಟಿಫೀಕೇಶನ್‌ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳಲಿವೆ. ಹಾಗೆಯೇ ಈ ಡಿವೈಸ್‌ NFC ಹಾಗೂ ನಾನ್ NFC ಮಾಡೆಲ್‌ಗಳ ಆಯ್ಕೆ ಹೊಂದಿರಲಿದೆ.

ಟ್ರ್ಯಾಕಿಂಗ್

ಇನ್ನು ಈ ಹಿಂದಿನ ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 5 ಡಿವೈಸ್‌ ಫಿಟ್ನೆಸ್‌ ಆಧಾರಿತ ಫೀಚರ್ಸ್‌ಗಳನ್ನು ಪಡೆದಿದೆ. ಇದು ಫಿಟ್‌ನೆಸ್ ಮತ್ತು ಹಾರ್ಟ್‌ರೇಟ್‌‌ ಮಾನಿಟರಿಂಗ್‌ , ಸ್ಲಿಪ್‌ ಟ್ರ್ಯಾಕಿಂಗ್, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್, ಒತ್ತಡ ಮೇಲ್ವಿಚಾರಣೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ. ಹಾಗೆಯೇ ಈ ಡಿವೈಸ್‌ 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ.

Most Read Articles
Best Mobiles in India

English summary
Xiaomi Mi Band 6 should be released in two versions, where one will be deprived of the NFC module, but the second will receive it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X