ಶಿಯೋಮಿ ಸಂಸ್ಥೆಯಿಂದ ವೈಫೈ 6 ಬೆಂಬಲಿಸುವ 'ಮಿ ರೂಟರ್ AX1800' ಬಿಡುಗಡೆ!

|

ಚೀನಾದ ಜನಪ್ರಿಯ ಕಂಪೆನಿ ಶಿಯೋಮಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ಟೆಕ್‌ ವಲಯದಲ್ಲಿ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನು ಪರಿಚಯಿಸಿ ತನ್ನ ಪ್ರಾಬಲ್ಯವನ್ನ ವಿಸ್ತಿರಿಸಿಕೊಂಡಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಶಿಯೋಮಿ ಈಗಾಗಲೇ ವೈಫೈ ರೂಟರ್‌ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಶಿಯೋಮಿ ಮಿ AX1800 ಅನ್ನು ಲಾಂಚ್‌ ಮಾಡಿದ್ದು, ತನ್ನ ವ್ಯಾಪ್ತಿಯ ರೂಟರ್‌ಗಳನ್ನು ವಿಸ್ತರಿಸಿದೆ.

ಹೌದು

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ತನ್ನ ಹೊಸ ಮಿ AX1800 ರೂಟರ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಮಿ ರೂಟರ್‌ ಮಾದರಿಯು ವೈ-ಫೈ 6 ಬೆಂಬಲವನ್ನು ಹೊಂದಿದೆ. ಅಲ್ಲದೆ ಈ ರೂಟರ್‌ ಆಸುಸ್ ಮತ್ತು ನೆಟ್‌ಗಿಯರ್‌ನಂತಹ ಕಂಪೆನಿಗಳ ರೂಟರ್‌ಗಳ ವಿರುದ್ಧ ಸ್ಪರ್ಧಿಸಲು ಮಿ ರೂಟರ್‌ಟವರ್ ತರಹದ ವಿನ್ಯಾಸವನ್ನು ಹೊಂದಿದೆ ಇದಲ್ಲದೆ ಈ ರೂಟರ್‌ನಲ್ಲಿ ಶಿಯೋಮಿ ಆರ್ಥೋಗೋನಲ್ ಫ್ರೀಕ್ವೆನ್ಸಿ-ಡಿವಿಷನ್ ಮಲ್ಟಿಪಲ್ ಆಕ್ಸೆಸ್ (OFDMA) ಟೆಕ್ನಾಲಜಿಯನ್ನು ಒಳಗೊಂಡಿದೆ. ಇನ್ನು ಈ ಹೊಸ ರೂಟರ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಶಿಯೋಮಿಯ

ಶಿಯೋಮಿಯ ಮಿ AX1800 ರೂಟರ್ ನೆಟ್‌ವರ್ಕ್ ಲೇಟೆನ್ಸಿ ಅನ್ನು ಶೇಕಡಾ 66 ರಷ್ಟು ಕಡಿಮೆ ಮಾಡುತ್ತದೆ. ಅಲ್ಲದೆ, ಉಷ್ಣ ನಿರ್ವಹಣೆಯನ್ನು ಸಕ್ರಿಯಗೊಳಿಸಲು ಮಿ ರೂಟರ್ ಮಿ AX1800 ರೂಟರ್ ಹೀಟ್‌ಸಿಂಕ್ ಅನ್ನು ಒಳಗೊಂಡಿದೆ. ಜೊತೆಗೆ ವ್ಯಾಪಕ ವ್ಯಾಪ್ತಿಯೊಂದಿಗೆ ಸಮರ್ಥ ನೆಟ್‌ವರ್ಕ್ ಅನುಭವವನ್ನು ನೀಡಲು ಇದು ಜಾಲರಿ ನೆಟ್‌ವರ್ಕ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಶಿಯೋಮಿಯ ಈ ರೂಟರ್‌ ವೈ-ಫೈ 6 ಬೆಂಬಲಿಸುವ ಎರಡನೇ ರೂಟರ್ ಆಗಿದೆ. ಈಗಾಗಲೇ ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಮಿ ಎಐಒಟಿ ರೂಟರ್ ಎಎಕ್ಸ್ 3600 ಕೂಡ ವೈಫೈ 6 ಅನ್ನು ಬೆಂಬಲಿಸುತ್ತಿತ್ತು ಅನ್ನೊದನ್ನ ಗಮನಿಸಬೇಕಿದೆ.

ಹೊಸ

ಇನ್ನು ಈ ಹೊಸ ಮಾದರಿಯು ವಿಭಿನ್ನವಾದ, ಗೋಪುರದಂತಹ ವಿನ್ಯಾಸವನ್ನು ಹೊಂದಿದ್ದು, ಇದು ಕ್ವಾಡ್-ಕೋರ್ ಕ್ವಾಲ್ಕಾಮ್ IPQ6000 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನು ಇದರಲ್ಲಿ 1.2GHz ಕಾರ್ಟೆಕ್ಸ್-ಎ 53 ಸಿಪಿಯು, 1.5GHz NPU, ಅನ್ನು ನೀಡಲಾಗಿದೆ. ಜೊತೆಗೆ ಈ ರೂಟರ್‌ 256MB RAM ಮತ್ತು 128MB ROM ಅನ್ನು ಸಹ ನೀಡಲಾಗಿದೆ. ಅಲ್ಲದೆ ಮಿ ರೂಟರ್ AX1800 ನಲ್ಲಿ ನಾಲ್ಕು-ಮಾರ್ಗದ ಆಂಪ್ಲಿಫೈಯರ್ ಅನ್ನು ಒದಗಿಸಲಾಗಿದೆ ಎಂದು ಶಿಯೋಮಿ ಹೇಳಿಕೊಂಡಿದೆ, ಇದರಿಂದ ಸ್ಪರ್ಧಾತ್ಮಕ ಮಾದರಿಯ ಮೇಲೆ 50 ಪ್ರತಿಶತ ಉತ್ತಮ ವ್ಯಾಪ್ತಿಯನ್ನು ನಿಡಲು ಸಾಧ್ಯವಾಗಲಿದೆ.

ರೂಟರ್‌ನಲ್ಲಿ

ಇದಲ್ಲದೆ ಈ ವೈಫೈ ರೂಟರ್‌ನಲ್ಲಿ NPU ಅಳವಡಿಸಲಾಗಿದ್ದು, ಇದು 21% ಥ್ರೋಪುಟ್ ಸುಧಾರಣೆಗೆ ಸಹಾಯ ಮಾಡಲಿದೆ. ಇನ್ನು ನಿಮ್ಮ ಮನೆಯಲ್ಲಿ ತಡೆರಹಿತ ವೈಫೈ ಸಂಪರ್ಕವನ್ನು ಪಡೆಯಲು ನೀವು OFDMA ತಂತ್ರಜ್ಞಾನ ಮತ್ತು ಜಾಲರಿ ನೆಟ್‌ವರ್ಕ್ ಬೆಂಬಲವನ್ನು ಸಹ ಇದರಲ್ಲಿ ನೀಡಲಾಗಿದೆ. ಅಲ್ಲದೆ ಮಿ ರೂಟರ್ AX1800 ಅನ್ನು ಏಕಕಾಲದಲ್ಲಿ 128 ಡಿವೈಸ್‌ಗಳಿಗೆ ಸಂಪರ್ಕಿಸಬಹುದಾಗಿದೆ. ಅಷ್ಟೇ ಅಲ್ಲ ಕೆಲವು ನಿರ್ದಿಷ್ಟ ಶಿಯೋಮಿ ಡಿವೈಸ್‌ಗಳಿಗೆ ರೂಟರ್ ಮಿ ಅಪ್ಲಿಕೇಶನ್ ಮೂಲಕವೂ ಕೂಡ ಕನೆಕ್ಟ್‌ ಮಾಡಬಹುದಾಗಿದೆ. ಇದರಲ್ಲಿ 1,775Mbps ವೇಗವನ್ನು ತಲುಪಿಸಲು ಡ್ಯುಯಲ್-ಬ್ಯಾಂಡ್ (2x2) ವೈ-ಫೈ 6 ಬೆಂಬಲವಿದ್ದು, ಇದು ಸಾಂಪ್ರದಾಯಿಕ ಎಸಿ 1200 ರೂಟರ್‌ನಲ್ಲಿ ನೀವು ಪಡೆಯುವುದಕ್ಕಿಂತ ಶೇಕಡಾ 52 ರಷ್ಟು ಹೆಚ್ಚಾಗಿದೆ.

ಗೇಮರ್‌ಗಳಿಗಾಗಿ

ಇನ್ನು ಗೇಮರ್‌ಗಳಿಗಾಗಿ, ಮಿ ರೂಟರ್ ಎಎಕ್ಸ್ 1800 ಟೆನ್ಸೆಂಟ್ ಆನ್‌ಲೈನ್ ಗೇಮ್ ಆಕ್ಸಿಲರೇಟರ್‌ನೊಂದಿಗೆ ಫ್ರೀ ಲೋಡ್ ಮಾಡಲಾಗಿದೆ. ಇದು ನಿಮ್ಮ ಆನ್‌ಲೈನ್ ಗೇಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಸದ್ಯ ಮಿ ರೂಟರ್ AX1800 ಬೆಲೆ CNY 329 (ಸುಮಾರು 3,500 ರೂ.) ಎಂದು ನಿಗದಿಪಡಿಸಲಾಗಿದೆ. ಅಲ್ಲದೆ ಇದೇ ಮೇ 15 ರಿಂದ ಖರೀದಿಗೆ ಲಬ್ಯವಾಗಲಿದೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
Mi Router AX1800 will be available through a pre-sale at an introductory price of CNY 299 (roughly Rs. 3,200).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X