ಶೀಘ್ರದಲ್ಲೇ ಶಿಯೋಮಿಯಿಂದ ಎರಡು ಹೊಸ ಇಯರ್‌ಫೋನ್‌ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ತನ್ನ ಆಡಿಯೋ ಆಕ್ಸಿಸರಿಸ್‌ಗಳ ಮೂಲಕವೂ ಪ್ರಸಿದ್ದಿಯನ್ನ ಪಡೆದುಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಇಯರ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಧ್ಯ ಇದೀಗ ತನ್ನ ರೆಡ್ಮಿ ಬ್ರಾಂಡ್‌ ಅಡಿಯಲ್ಲಿ ಎರಡು ಹೊಸ ಇಯರ್‌ಫೋನ್‌ಗಳನ್ನ ಅಕ್ಟೋಬರ್ 7 ರಂದು ಬಿಡುಗಡೆ ಮಾಡಲಿದೆ. ಇದು ಭಾರತದಲ್ಲಿ ಅಕ್ಟೋಬರ್ 7 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಇನ್ನು ಈ ಈವೇಂಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಆಡಿಯೊ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಂಪನಿಯು ಸುಳಿವು ನೀಡಿದೆ.

ಶಿಯೋಮಿ

ಹೌದು, ಶಿಯೋಮಿ ಸಂಸ್ಥೆ ತನ್ನ ಎರಡು ಹೊಸ ಇಯರ್‌ಫೋನ್‌ಗಳನ್ನ ಶಿಘ್ರದಲ್ಲೇ ಬಿಡುಗಡೆ ಮಾಡುವ ಸುಳಿವನ್ನು ನೋಡಿದೆ. ಇನ್ನು ಶಿಯೋಮಿ ಬಿಡುಗಡೆ ಮಾಡಿರುವ ಟೀಸರ್‌ಗಳ ಪ್ರಕಾರ ಭಾರತೀಯ ಮಾರುಕಟ್ಟೆಗೆ ವೈರ್ಡ್ ಮತ್ತು ವಾಯರ್‌ಲೆಸ್ ಆಯ್ಕೆಗಳನ್ನು ಪರಿಚಯಿಸುತ್ತಿರಬಹುದು ಎಂಬ ಸೂಚನೆ ಸಿಕ್ಕಿದೆ. ಈಗಾಗಲೇ ಶಿಯೋಮಿ ತನ್ನ ಹೊಸ ಸ್ಮಾರ್ಟ್ ಸ್ಪೀಕರ್, ಮಿ ಬ್ಯಾಂಡ್ 5, ಮತ್ತು ಮಿ ವಾಚ್ ರಿವಾಲ್ವ್, ಮಿ ಸ್ಮಾರ್ಟ್ ಎಲ್ಇಡಿ ಬಲ್ಬ್ ಮತ್ತು ಭಾರತದಲ್ಲಿ ಮಿ ಆಟೋಮ್ಯಾಟಿಕ್ ಸೋಪ್ ಡಿಸ್ಪೆನ್ಸರ್ ಅನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಬಿಡುಗಡೆಗೆ ಸಿದ್ದವಿರುವ ಇಯರ್‌ಫೋನ್‌ ವಿಶೇಷತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ

ಶಿಯೋಮಿ ತನ್ನ ರೆಡ್‌ಮಿ ಬ್ರಾಂಡ್‌ ಅಡಿಯಲ್ಲಿ ಈಗಾಗಲೇ ಹಲವು ಮಾದರಿಯ ಪ್ರಾಡಕ್ಟ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ವೈರಿಂಗ್ ಮತ್ತು ವೈರ್‌ಲೆಸ್ ಆಡಿಯೊ ಪ್ರಾಡಕ್ಟ್‌ಗಳನ್ನ ಪರಿಚಯಿಸಲಿದೆ ಎನ್ನಲಾಗಿದೆ. ಇನ್ನು ಈ ಇಯರ್‌ಫೊನ್‌ ಬಿಡುಗಡೆಯ ಕಾರ್ಯಕ್ರಮಕ್ಕೆ ‘ರೆಡ್‌ಮಿ ಬೀಟ್ ಡ್ರಾಪ್' ಎಂದು ಹೆಸರಿಡಲಾಗಿದೆ. ಹೆವಿ ಬಾಸ್, ಶಬ್ದ ರದ್ದತಿ, ಧ್ವನಿ ಆಜ್ಞೆ ಬೆಂಬಲ, ಮ್ಯೂಸಿಕ್‌ ಕಂಟ್ರೋಲ್‌ ಮತ್ತು ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಈ ಇಯರ್‌ಫೋನ್‌ಗಳು ಹೊಂದಿರಲಿವೆ ಎಂದು ನಿರೀಕ್ಷಿಸಲಾಗಿದೆ.

ಶಿಯೋಮಿ

ಇನ್ನು ಶಿಯೋಮಿ ಬಿಡುಗಡೆ ಮಾಡಿರುವ ಟೀಸರ್‌ ಪ್ರಕಾರ ಈ ಹೊಸ ಇಯರ್‌ಫೋನ್‌ಗಳು ಹೊಸ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ. ಗ್ರಾಹಕರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಈ ಇಯರ್‌ಫೋನ್‌ಗಳು ಹೊಂದಿವೆ ಎನ್ನಲಾಗಿದೆ. ಇನ್ನು ಈ ಇಯರ್‌ಫೋನ್‌ ಒಳಗೊಂಡಿರಬಹುದಾದ ಫೀಚರ್ಸ್‌ಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಹೊಸ ಅನುಭವವನ್ನು ನೀಡಲಿದೆ ಎನ್ನುವುದನ್ನು ಟೀಸರ್‌ ಮೂಲಕ ಸುಳಿವು ನೀಡಿದ್ದಾರೆ.

ಶಿಯೋಮಿ

ಸದ್ಯ ಶಿಯೋಮಿ ಈಗಾಗಲೇ ತನ್ನ ಆಡಿಯೊ ಶ್ರೇಣಿಯಲ್ಲಿ ರೆಡ್‌ಮಿ ಇಯರ್‌ಬಡ್ಸ್ S ಮತ್ತು ರೆಡ್‌ಮಿ ಇಯರ್‌ಫೋನ್‌ಗಳನ್ನು ಪರಿಚಯಿಸಿದೆ. ಸದ್ಯ ರೆಡ್‌ಮಿ ಬೀಟ್‌ ಡ್ರಾಪ್‌ ಈವೆಂಟ್‌ನಲ್ಲಿ ಒಂದು ಜೋಡಿ TWS ಇಯರ್‌ಬಡ್ ಪರಿಚಯಿಸುವ ಸಾಧ್ಯತೆ ಇದೆ. ಆದರೆ ಇನ್ನೊಂದು ವೈರ್ಡ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಇಯರ್‌ಫೋನ್‌ ನೀಲಿ, ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

Most Read Articles
Best Mobiles in India

English summary
Xiaomi will launch two new audio products in its Redmi line-up on October 7.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X