ಎಲೆಕ್ಟ್ರಿಕ್ ಕಾರ್‌ ಲಾಂಚ್ ಮಾಡುವ ಸುಳಿವು ನೀಡಿದ 'ಶಿಯೋಮಿ'!

|

ಪ್ರತಿಷ್ಠಿತ ಮೊಬೈಲ್‌ ಕಂಪನಿಗಳಲ್ಲಿ ಒಂದಾಗಿರುವ ಶಿಯೋಮಿ ಭಿನ್ನ ಪ್ರೈಸ್‌ನ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನ ಪಡೆದಿದೆ. ಫ್ಲ್ಯಾಗ್‌ಶಿಪ್ ಫೀಚರ್ಸ್‌ಗಳೊಂದಿಗೆ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸುವುದರ ಹೊರತಾಗಿ, ಶಿಯೋಮಿ ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಇದೀಗ ಎಲೆಕ್ಟ್ರಿಕ್ ವಾಹನಗಳ (EV) ಮಾರುಕಟ್ಟೆಗೆ ಪ್ರವೇಶಿಸಲು ಸಕಲ ಸಜ್ಜಾಗಿದೆ.

ಎಲೆಕ್ಟ್ರಿಕ್ ಕಾರ್‌ ಲಾಂಚ್ ಮಾಡುವ ಸುಳಿವು ನೀಡಿದ 'ಶಿಯೋಮಿ'!

ಹೌದು, ಶಿಯೋಮಿ ಕಂಪನಿಯು 2024 ರ ಮೊದಲಾರ್ಧದಿಂದ ಬೃಹತ್ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (EV) ಉತ್ಪಾದನೆ ಮಾಡಲು ಪ್ರಾರಂಭಿಸುತ್ತದೆ ಎಂದು ಆರಂಭಿಸುತ್ತದೆ ಎಂದು ಶಿಯೋಮಿಯ ಸಿಇಒ, ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕರಾದ ಲೀ ಜುನ್ ಹೇಳಿದ್ದಾರೆ. ಇತ್ತೀಚೆಗೆ ಬೀಜಿಂಗ್‌ನಲ್ಲಿ ನಡೆದ ಶಿಯೋಮಿ ಇನ್ವೆಸ್ಟರ್ ಡೇ ಕಾನ್ಫರೆನ್ಸ್‌ನಲ್ಲಿ ಕಾರ್ಯಕ್ರಮದಲ್ಲಿ ಶಿಯೋಮಿ ಸಿಇಒ ಈ ಘೋಷಣೆಯನ್ನು ಮಾಡಿದರು.

ಎಲೆಕ್ಟ್ರಿಕ್ ಕಾರ್‌ ಲಾಂಚ್ ಮಾಡುವ ಸುಳಿವು ನೀಡಿದ 'ಶಿಯೋಮಿ'!

ಶಿಯೋಮಿ ಕಂಪನಿಯು ಯಾವ ರೀತಿಯ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತದೆ ಎಂಬುದರ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗವಾಗಿಲ್ಲ. ಆದರೆ ವರದಿಗಳ ಪ್ರಕಾರ ಶಿಯೋಮಿ ಆರಂಭದಲ್ಲಿ ಎಂಟ್ರಿ-ಲೆವೆಲ್ ಮಾದರಿಯಲ್ಲಿ ಕಾರು ಉತ್ಪಾದನೆಯಲ್ಲಿ ಕೆಲಸ ಮಾಡಲು ಆರಂಭಿಸುತ್ತದೆ ಎನ್ನಲಾಗಿದೆ. ಆ ನಂತರದ ಹಂತಗಳಲ್ಲಿ ಐಷಾರಾಮಿ ಮಾದರಿಯ ಕಾರುಗಳು ಮತ್ತು ಉನ್ನತ ಮಟ್ಟದ EV ಮಾದರಿಗಳನ್ನು ಉತ್ಪಾದಿಸಲು ಆರಂಭಿಸುತ್ತದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಶಿಯೋಮಿ ಕಂಪನಿಯು ಆಟೋನೋಮಸ್ ಡ್ರೈವಿಂಗ್ ಟೆಕ್ನಾಲಜಿ ಸ್ಟಾರ್ಟ್ಅಪ್ ಡೀಪ್‌ಮೋಶನ್ ಅನ್ನು $ 77 ಮಿಲಿಯನ್‌ಗೆ (ಅಂದಾಜು 562ರೂ. ಕೋಟಿ) ಖರೀದಿಸಿತು. ಈ ಸ್ವಾಧೀನವು ಶಿಯೋಮಿಗೆ ಅದರ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಲ್ಲಿ ಸಹಾಯ ಮಾಡುವುದು. EV ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿಲ್ಲ. ಬದಲಾಗಿ ಆಪಲ್‌ ಸಂಸ್ಥೆಯು ಸಹ ಎಲೆಕ್ಟ್ರಿಕ್ ಕಾರ ತಯಾರಿಕೆಯಲ್ಲಿ ಕೆಲಸ ಮಾಡುತ್ತಿರಬಹುದು ಎಂದು ಕೆಲವು ವರದಿಗಳು ಸೂಚಿಸಿವೆ.

ವರದಿಯೊಂದರ ಪ್ರಕಾರ, ಚೀನಾದ ಈ ಟೆಕ್ ದೈತ್ಯ ಶಿಯೋಮಿ ಈಗಾಗಲೇ ಎಲೆಕ್ಟ್ರಿಕ್ ಕಾರ್ ತಯಾರಕ ಘಟಕವನ್ನು ನೇಮಿಸಿಕೊಂಡಿದೆ ಎನ್ನಲಾಗಿದೆ. ಆದರೆ ಶಿಯೋಮಿ ಎಲೆಕ್ಟ್ರಿಕ್ ಕಾರನ್ನು ಸ್ವತಂತ್ರವಾಗಿ ಉತ್ಪಾದಿಸುತ್ತದೆಯೇ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಕಾರ್ ತಯಾರಕರ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತದೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ.

ಎಲೆಕ್ಟ್ರಿಕ್ ಕಾರ್‌ ಲಾಂಚ್ ಮಾಡುವ ಸುಳಿವು ನೀಡಿದ 'ಶಿಯೋಮಿ'!

ಶಿಯೋಮಿ ಕಂಪನಿಯ ಇತರೆ ಗಮನ ಸೆಳೆದ ಉತ್ಪನ್ನಗಳು:
ಶಿಯೋಮಿ ಸ್ಮಾರ್ಟ್‌ LED ಬಲ್ಬ್:
ಶಿಯೋಮಿ ಕಂಪನಿಯು ಸ್ಮಾರ್ಟ್‌ LED ಬಲ್ಬ್ ನ ವಿಶೇಷವೆಂದರೇ ಈ ಬಲ್ಬ್‌ಗಳನ್ನು ವಾಯಿಸ್‌ ಮೂಲಕ ನಿಯಂತ್ರಿಸಬಹುದಾದ ಸೌಲಭ್ಯವನ್ನು ಪಡೆದುಕೊಂಡಿದೆ. ಗೂಗಲ್‌ ಅಸಿಸ್ಟಂಟ್ ಮತ್ತು ಅಮೆಜಾನ್ ಅಲೆಕ್ಸಾ ವಾಯಿಸ್‌ ಆಯ್ಕೆ ಮೂಲಕ ವಾಯಿಸ್‌ ಕಂಟ್ರೋಲ್ ಮಾಡಬಹುದಾಗಿದೆ. ಹಾಗೂ ಕಂಪನಿಯ ಆಪ್‌ ಮೂಲಕವು ಸಹ ನಿಯಂತ್ರಿಸಲೂಬಹುದು. ಹಾಗೆಯೇ ಸ್ಮಾರ್ಟ್ ಬಲ್ಬ್‌ಗೆ ಸ್ಮಾರ್ಟ್‌ಫೋನ್‌ಗೆ ಲಿಂಕ್ ಮಾಡಿಕೊಳ್ಳುವುದರ ಮೂಲಕ ಸ್ಮಾರ್ಟ್‌ಫೋನ್‌ ಅನ್ನು ಬಲ್ಬ್‌ನ ರಿಮೋಟ್ ತರಹ ಬಳಸಿಕೊಳ್ಳ ಸೌಲಭ್ಯವನ್ನು ನೀಡಲಾಗಿದೆ. ಬಲ್ಬ್‌ನ ಬಣ್ಣ ಬದಲಿಸುವುದು, ಆನ್‌ ಮತ್ತು ಆಫ್‌ ಟೈಮ್‌ ಸೆಡ್ಯುಲ್‌ ಮಾಡುವುದು ಮತ್ತು ಬ್ರೈಟ್‌ನೆಸ್‌ ಏರಿಳಿತ ಮಾಡಿಕೊಳ್ಳಬಹುದಾದ ಆಯ್ಕೆಗಳು ಲಭ್ಯವಾಗುತ್ತವೆ.

ಮಿ ಸ್ಮಾರ್ಟ್ ವಾಟರ್ ಪ್ಯೂರಿಫೈಯರ್
ಶಿಯೋಮಿ ಕಂಪನಿಯು ವಾಟರ್‌ ಫ್ಯೂರಿಫೈಯರ್ ಡಿವೈಸ್‌ ಅನ್ನು ಸಹ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದು ಸ್ಮಾರ್ಟ್‌ ಆಪ್‌ ಹೊಂದಿದ್ದು, ಆಪ್‌ ಮೂಲಕ ಡೇಟಾ ಪಾಯಿಂಟ್‌ಗಳನ್ನು ಟ್ರ್ಯಾಕ್ ಮಾಡಿ ಮತ್ತು ಗಮನಿಸಬಹುದು.

ಮಿ ಬಿಯರ್ಡ್‌ ಟ್ರಿಮ್ಮರ್‌ ಉತ್ಪನ್ನ
ಈ ಉತ್ಪನ್ನವು ಬ್ಲ್ಯಾಕ್‌ ಕಲರ್‌ ವೇರಿಯಂಟ್‌ನಲ್ಲಿದ್ದು, ಇದರೊಂದಿಗೆ 40 ಲೆಂತ್‌ ಸೆಟ್ಟಿಂಗ್, ಸ್ಟೈಲ್‌ನೆಸ್‌ ಸ್ಟೀಲ್‌ ಬಾಡಿಯ ರಚನೆ, ಪವರ್‌ಫುಲ್‌ ಬ್ಯಾಟರಿ, IPX7 ವಾಟರ್‌ಪ್ರೂಫ್‌, ಟ್ರಾವೆಲ್‌ ಲಾಕ್ ಫೀಚರ್ಸ್‌ಗಳನ್ನು ಹೊಂದಿದೆ. ಹಾಗೆಯೇ ಕ್ವಾರ್ಡೆಡ್‌ ಮತ್ತು ಕ್ವಾರ್ಡ್‌ಲೆಸ್‌ (corded/cordless) ನಲ್ಲಿಯೂ ಉಪಯೋಗಿಸಬಹುದಾಗಿದ್ದು, ಈ ಸಾಧನವು ಅಲ್ಟ್ರಾ ಸ್ಪೆಶಿಯಸ್‌ ಸೆಲ್ಫ ಶಾರ್ಪಿಂಗ್ ಬ್ಲೆಡ್‌ ಒಳಗೊಂಡಿದೆ.

ಶಿಯೋಮಿ ರೆಡ್ಮಿ ನೋಟ್ 10 ಸರಣಿ
ಶಿಯೋಮಿ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಸರಣಿಯು ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಸರಣಿಯು ರೆಡ್ಮಿ ನೋಟ್ 10, ರೆಡ್ಮಿ ನೋಟ್ 10 ಪ್ರೊ ಮತ್ತು ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳನ್ನು ಒಳಗೊಂಡಿದೆ.

Most Read Articles
Best Mobiles in India

English summary
Xiaomi will mass produce its own cars in the first half of 2024.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X