ಈ ಬ್ರಾಡ್‌ಬ್ಯಾಂಡ್‌ ಯೋಜನೆಯ ಬೆಲೆ 400ರೂ.!..ದಂಗಾದ ಏರ್‌ಟೆಲ್‌, ಜಿಯೋ!

|

ಪ್ರಮುಖ ಡೇಟಾ ಪೂರೈಕೆದಾರ ಸಂಸ್ಥೆಗಳು ಗ್ರಾಹಕರಿಗೆ ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆ ನೀಡಿವೆ. ಆ ಪೈಕಿ ಬಜೆಟ್‌ ದರದಲ್ಲಿ ಹಾಗೂ ಅಗ್ಗದ ಬೆಲೆಗೆ ಸಿಗುವ ಆಕರ್ಷಕ ಸೌಲಭ್ಯಗಳ ಯೋಜನೆಗಳು ಹೆಚ್ಚು ಡಿಮ್ಯಾಂಡ್ ಪಡೆದಿವೆ. ಜಿಯೋಫೈಬರ್, ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಹಾಗೂ ಟಾಟಾಸ್ಕೈ ಸಂಸ್ಥೆಗಳು ಬಜೆಟ್‌ ದರದಲ್ಲಿ ಭಿನ್ನ ಪ್ರಯೋಜನಗಳ ಬ್ರಾಡ್‌ಬ್ಯಾಂಡ್‌ ಯೋಜನೆ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇದೀಗ ಯೂ ಸಂಸ್ಥೆಯ ಕಡಿಮೆ ಬೆಲೆಯ ಯೋಜನೆಯೊಂದು ಸದ್ದು ಮಾಡುತ್ತಿದೆ.

ಭಾರತದ

ಹೌದು, ಯೂ ಬ್ರಾಡ್‌ಬ್ಯಾಂಡ್ ವೊಡಾಫೋನ್ ಐಡಿಯಾ (ವಿಐ) ನ ಇಂಟರ್ನೆಟ್ ಅಂಗಸಂಸ್ಥೆ ಆಗಿದೆ. ಯೂ ಬ್ರಾಡ್‌ಬ್ಯಾಂಡ್‌ ಭಾರತದ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್‌ ಸೇವೆಗಳನ್ನು ಒದಗಿಸುತ್ತದೆ. ಸಂಸ್ಥೆಯು 2021 ರಲ್ಲಿ ತನ್ನ ಕೆಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಷ್ಕರಿಸಿದೆ. ಇನ್ನು ಸಂಸ್ಥೆಯು ಪರಿಷ್ಕೃತ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಆಯ್ದ ವಲಯಗಳಲ್ಲಿ ಲಭ್ಯವಿದೆ. ಆ ಪೈಕಿ ಯೂ ಬ್ರಾಡ್‌ಬ್ಯಾಂಡ್‌ನ 400ರೂ. ಯೋಜನೆ ಗ್ರಾಹಕರ ಗಮನ ಸೆಳೆದಿದೆ.

ಬ್ರಾಡ್‌ಬ್ಯಾಂಡ್‌

ಯೂ ಬ್ರಾಡ್‌ಬ್ಯಾಂಡ್ ನ 400ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಬಜೆಟ್‌ ದರದಲ್ಲಿ ಉತ್ತಮ ಪ್ರಯೋಜನ ಪಡೆದ ಯೋಜನೆ ಆಗಿ ಆಕರ್ಷಿಸಿದೆ. ಇನ್ನು ಈ ಯೋಜನೆಯು ಬಳಕೆದಾರರಿಗೆ ಇಂಟರ್ನೆಟ್ 30 Mbps ವೇಗ ಮತ್ತು 3.5TB ನ್ಯಾಯೋಚಿತ ಬಳಕೆ ನೀತಿ (FUP) ಡೇಟಾವನ್ನು ನೀಡುತ್ತದೆ (ತೆರಿಗೆಗಳಿಂದ ಪ್ರತ್ಯೇಕ). ಇನ್ನು ಈ ಯೋಜನೆಯು ತೆರಿಗೆ ಒಳಗೊಂಡಂತೆ 472ರೂ. ಆಗಲಿದೆ.

ಗಮನಾರ್ಹ

ಈ ಯೋಜನೆಯ ಇನ್ನೊಂದು ಗಮನಾರ್ಹ ಅಂಶವೆಂದರೇ ಈ ಯೋಜನೆಯನ್ನು 90 ದಿನಗಳ ಅವಧಿಗೆ ಖರೀದಿಸುವ ಗ್ರಾಹಕರು 5 ದಿನಗಳ ಹೆಚ್ಚುವರಿ (ಒಟ್ಟು 95 ದಿನಗಳು) ಸೇವೆಯನ್ನು ಪಡೆಯುತ್ತಾರೆ. ಹಾಗೆಯೇ 180 ದಿನಗಳಿಗೆ ಕಂಪನಿಯು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 10 ಹೆಚ್ಚುವರಿ ದಿನಗಳ ಸೇವೆಯನ್ನು ನೀಡುತ್ತದೆ. ಅದೇ ರೀತಿ 365 ದಿನಗಳ ವಾರ್ಷಿಕ ಅವಧಿಯ ಯೋಜನೆಗೆ, ಹೆಚ್ಚುವರಿಯಾಗಿ 15 ದಿನಗಳ ನೀಡುತ್ತದೆ. ಅಂದರೇ ಒಟ್ಟು 380 ದಿನಗಳ ಕಾಲ ಸೇವೆ ಸಿಗಲಿವೆ.

ಬ್ರಾಡ್‌ಬ್ಯಾಂಡ್‌

ಈ ಯೋಜನೆಯು ಗ್ರಾಹಕ ಸ್ನೇಹಿ ಬೆಲೆ ಪಡೆದಿದೆ. ಹಾಗೆಯೇ ಪ್ರತಿ ತಿಂಗಳು 3.5TB ಡೇಟಾವನ್ನು ನೀಡುತ್ತದೆ. ಏರ್‌ಟೆಲ್, ಜಿಯೋ ಮತ್ತು ಬಿಎಸ್‌ಎನ್‌ಎಲ್‌ನಿಂದ ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳಿಗೆ ಹೋಲಿಸಿದರೆ, ಯೂ ಬ್ರಾಡ್‌ಬ್ಯಾಂಡ್ ನ 400ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಕೈಗೆಟುಕುವ ಯೋಜನೆ ಎನಿಸಲಿದೆ. ಅಂದಹಾಗೇ ಯೂ ಬ್ರಾಡ್‌ಬ್ಯಾಂಡ್ ನ 400ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಅಹಮದಾಬಾದ್‌ನಲ್ಲಿ ಬಳಕೆದಾರರಿಗೆ ಲಭ್ಯ ಇದೆ.

1000ರೂ.ಒಳಗಿನ ಕೆಲವು ಆಕರ್ಷಕ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು

1000ರೂ.ಒಳಗಿನ ಕೆಲವು ಆಕರ್ಷಕ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು

ಟಾಟಾ ಸ್ಕೈ 950ರೂ. ಬ್ರಾಡ್‌ಬ್ಯಾಂಡ್ ಯೋಜನೆ ಟಾಟಾ ಸ್ಕೈ ನ ಈ ಬ್ರಾಡ್‌ಬ್ಯಾಂಡ್ ಪ್ಲಾನ್ 100 Mbps ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಇದರ ಬೆಲೆ ತಿಂಗಳಿಗೆ 950 ರೂ.ಆಗಿದೆ. ಇದೇ ಯೋಜನೆಯು 2700ರೂ. 4500ರೂ ಮತ್ತು 8400ರೂ, 900ರೂ. 750ರೂ ಮತ್ತು 700ರೂ ಪ್ಲಾನ್‌ಗಳನ್ನು ನೀಡಲಿದೆ. ಈ ಪ್ಲಾನ್‌ಗಳು ಕ್ರಮವಾಗಿ 3 ತಿಂಗಳು, 6 ತಿಂಗಳು ಮತ್ತು 12 ತಿಂಗಳುಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ. ಟಾಟಾ ಸ್ಕೈ ಈ ಯೋಜನೆಯೊಂದಿಗೆ ಯಾವುದೇ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡುವುದಿಲ್ಲ.

ಫೈಬರ್

BSNL ಸಂಸ್ಥೆಯ 999ರೂ,ಗಳ ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಪ್ಲಾನ್ 200 Mbps ವೇಗವನ್ನು ನೀಡಲಿದೆ. ಇದು ಒಂದು ತಿಂಗಳ ವ್ಯಾಲಿಡಿಟಿ ಪಡೆದುಕೊಂಡಿದ್ದು, ಈ ಪ್ಲಾನ್‌ 3.3 TB ವರೆಗೆ ಡೇಟಾವನ್ನು ನೀಡಲಿದೆ. ನಂತರ ಅದರ ವೇಗವನ್ನು 2Mbps ಗೆ ಇಳಿಸಲಾಗುತ್ತದೆ. ಇನ್ನು ಈ ಪ್ಲಾನ್‌ ಡಿಸ್ನಿ+ ಹಾಟ್‌ಸ್ಟಾರ್‌ಗೆ ಉಚಿತ ಪ್ರೀಮಿಯಂ ಸದಸ್ಯತ್ವದೊಂದಿಗೆ ಬರುತ್ತದೆ. ಇದಲ್ಲದೆ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ತಿಂಗಳಿಗೆ ರೂ 129 ಕ್ಕೆ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡಲು ಬಿಎಸ್‌ಎನ್‌ಎಲ್ ಸಹ YuppTV ಜೊತೆ ಪಾಲುದಾರಿಕೆ ಹೊಂದಿದೆ. ಇದರೊಂದಿಗೆ ಚಂದಾದಾರರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು ಸಹ ನೀಡುತ್ತದೆ. ಹಾಗೆಯೇ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ವಿಐಪಿ ಚಂದಾದಾರಿಕೆಯ ಪ್ರಯೋಜನ ನೀಡಿದೆ.

ಇಂಟರ್‌ನೆಟ್‌ನೊಂದಿಗೆ

ಜಿಯೋಫೈಬರ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ 150Mbps ವರೆಗಿನ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡಲಿದೆ. ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಇದು ಅನಿಯಮಿತ ಇಂಟರ್‌ನೆಟ್‌ನೊಂದಿಗೆ ಬರುತ್ತದೆ. ಇದಲ್ಲದೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್ ಸ್ಟಾರ್ ಸೇರಿದಂತೆ 14 OTT ಆಪ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಲಯನ್ಸ್‌ಗೇಟ್, ಸನ್‌ಎನ್‌ಕ್ಸ್ಟ್, ಹೊಯಿಚೊಯ್, ಆಲ್ಟ್ ಬಾಲಾಜಿ, ವೂಟ್ ಕಿಡ್ಸ್, ಇರೋಸ್ ನೌ, ಡಿಸ್ಕವರಿ +, ಆಲ್ಟ್ ಬಾಲಾಜಿ, ಮತ್ತು ಹಂಗಾಮ ಪ್ಲೇ ಸೇವೆಗಳಿಗೆ ಬೆಲೆಗಳು ಸ್ವಲ್ಪ ಉನ್ನತ ಶ್ರೇಣಿಯಲ್ಲಿ ಇರಲಿದೆ.

Most Read Articles
Best Mobiles in India

English summary
You Broadband Rs 400 Plan Offers Best Data With Additional Validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X