ನಿಮ್ಮ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?.. ಹೀಗೆ ಮಾಡಿ?

|

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಬಳಕೆದಾರರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಡೇಟಾ ಸಮಸ್ಯೆಯಾಗಿದೆ. ಮೊಬೈಲ್‌ನಲ್ಲಿ ಡೇಟಾ ಇದ್ದರೂ ಕೂಡ ಕೆಲವೊಮ್ಮೆ ಕಾರ್ಯನಿರ್ವಹಿಸುವುದಿಲ್ಲ. ಮುಖ್ಯವಾದ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಡೇಟಾ ವರ್ಕ್‌ ಆಗದೇ ಕೈ ಕೊಟ್ಟರೆ ಹೇಗಾಗಬೇಡ. ಅಷ್ಟೇ ಯಾಕೆ ಆನ್‌ಲೈನ್‌ ಬ್ರೌಸಿಂಗ್‌ ಮಾಡುವಾಗಲೂ ಇಂತಹ ಸಮಸ್ಯೆ ಕಾಣಿಸಿಕೊಂಡರೇ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಆದರೆ ಈ ಸಮಸ್ಯೆಯನ್ನು ತಪ್ಪಿಸೋಕೆ ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡಬೇಕಾಗುತ್ತದೆ.

ನಿಮ್ಮ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?.. ಹೀಗೆ ಮಾಡಿ?

ಹೌದು, ನಿಮ್ಮ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ. ನೀವು ಮೊಬೈಲ್‌ನಲ್ಲಿ ಡೇಟಾ ಸಮಸ್ಯೆ ಇಲ್ಲದೆ ನಿಮ್ಮ ಬ್ರೌಸಿಂಗ್‌ ಮುಂದುವರೆಸಬೇಕಾ? ಇದಕ್ಕಾಗಿ ನಿವು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದರಿಂದ ನೀವು ಆಗಾಗ್ಗೆ ಎದುರಿಸುವ ಮೊಬೈಲ್ ಡೇಟಾ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಹಾಗಾದ್ರೆ ಮೊಬೈಲ್‌ನಲ್ಲಿ ಎದುರಾಗುವ ಡೇಟಾ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಅನ್ನದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂದಿನ ದಿನಗಳಲ್ಲಿ ಇಂಟರ್‌ನೆಟ್‌ ಬಳಕೆ ಅತಿ ಮುಖ್ಯವಾಗಿದೆ. ಯಾವುದೇ ಮಾಹಿತಿಯಾಗಲಿ, ಯಾವುದೇ ಡಾಕ್ಯುಮೆಂಟ್‌ ಶೇರ್‌ ಮಾಡುವುದಕ್ಕಾಗಲಿ, ಅಷ್ಟೇ ಯಾಕೆ ಯಾವುದೇ ವೀಡಿಯೋ ಸ್ಟ್ರೀಮಿಂಗ್‌ ಆ್ಯಪ್‌ಗಳನ್ನು ತೆರೆಯುವುದಕ್ಕಾಗಿಲಿ ಮೊಬೈಲ್‌ ಡೇಟಾ ಕಾರ್ಯನಿರ್ವಹಣೆ ಅತಿ ಮುಖ್ಯವಾಗಿದೆ. ಯಾಕೆಂದರೆ ನಿಮ್ಮ ಮೊಬೈಲ್ ಡೇಟಾ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಿಮಗೆ ಇಂಟರ್‌ನೆಟ್‌ ಅನುಭವ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಇದಕ್ಕಾಗಿ ನೀವು ಕೆಲವು ಉಪಯುಕ್ತ ಕೆಲಸಗಳನ್ನು ಮಾಡಬೇಕಾಗುತ್ತದೆ.

ನಿಮ್ಮ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?.. ಹೀಗೆ ಮಾಡಿ?

ನಿಮ್ಮ ಮೊಬೈಲ್‌ ಡೇಟಾ ಸರಿಯಾಗಿ ನಿರ್ವಹಿಸುವಂತೆ ಮಾಡೋದು ಹೇಗೆ?
* ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ
ನಿಮ್ಮ ಮೊಬೈಲ್‌ನಲ್ಲಿ ಡೇಟಾ ಕಾರ್ಯನಿರ್ವಹಣೆ ಸರಿಯಿಲ್ಲದ ಸಮಯದಲ್ಲಿ ಏರ್‌ಪ್ಲೇನ್‌ ಮೋಡ್‌ ಅನ್ನು ಆನ್‌ ಮಾಡುವುದು ಸೂಕ್ತ. ಕೆಲವು ನಿಮಿಷಗಳ ನಂತರ ಏರ್‌ಪ್ಲೇನ್‌ ಮೋಡ್‌ ಅನ್ನು ಆಫ್‌ ಮಾಡಬೇಕಾಗುತ್ತದೆ. ಏರ್‌ಪ್ಲೇನ್ ಮೋಡ್ ಅನ್ನು ಟಾಗಲ್ ಮಾಡುವುದರಿಂದ ನಿಮ್ಮ ಮೊಬೈಲ್ ಡೇಟಾ ನೆಟ್‌ವರ್ಕ್‌ಗಳನ್ನು ಸರಿಯಾಗಲಿದೆ.

* ನಿಮ್ಮ ಫೋನ್‌ ಅನ್ನು ರಿಸ್ಟಾರ್ಟ್‌ ಮಾಡಿ
ಒಂದು ವೇಳೆ ನಿಮ್ಮ ಫೋನ್‌ ಡೇಟಾ ನಿರ್ವಹಣೆ ಸರಿಯಾಗಿಲ್ಲದಿದ್ದರೆ ನಿಮ್ಮ ಫನ್‌ ರಿಸ್ಟಾರ್ಟ್‌ ಮಾಡುವುದು ಕೂಡ ಉಪಯುಕ್ತವಾಗಿದೆ.

* ನಿಮ್ಮ ಸಿಮ್ ಕಾರ್ಡ್ ತೆಗೆದು ಮತ್ತೊಮ್ಮೆ ಸೇರಿಸಿ
ಫೋನ್‌ ಡೇಟಾ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಸಿಮ್‌ ಅನ್ನು ತೆಗೆದು ಮತ್ತೊಮ್ಮೆ ಸೇರಿಸುವುದು ಬಹುತೇಕ ಎಲ್ಲರೂ ಮಾಡುವ ಕೆಲಸವಾಗಿದೆ. ಇದು ನಿಮಗೆ ಉಪಯುಕ್ತ ಕೂಡ ಹಾಗಲಿದೆ. ಸಿಮ್‌ ತೆಗೆದು ಮತ್ತೊಮ್ಮೆ ಸೇರಿಸಿದರೆ ನಿಮ್ಮ ಡೇಟಾ ಸರಿಯಾಗಿ ಕಾರ್ಯನಿರ್ವಹಣೆ ಆರಂಭಿಸಲಿದೆ.ನೀವು ಭೌತಿಕ SIM ಕಾರ್ಡ್ ಅನ್ನು ಬಳಸಿದರೆ, ಅದನ್ನು ನಿಮ್ಮ ಸಾಧನದಿಂದ ತೆಗೆದುಹಾಕುವುದು ಮತ್ತು ಅದನ್ನು ಮತ್ತೆ ಸೇರಿಸುವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬಹುದು.

ನಿಮ್ಮ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?.. ಹೀಗೆ ಮಾಡಿ?

* ಡೇಟಾ ನೆಟ್‌ವರ್ಕ್‌ ಗಳ ಆಯ್ಕೆಯನ್ನು ಬದಲಾಯಿಸಿ
ನೀವು ಎರಡು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಇದು ಸೂಕ್ತವಾಗಿದೆ. ನಿಮ್ಮ ಮೊಬೈಲ್‌ ಡೇಟಾ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಲಭ್ಯವಿರುವ ಅತ್ಯುತ್ತಮ ನೆಟ್‌ವರ್ಕ್‌ನಿಂದ ಆಯ್ಕೆ ಮಾಡಲು ನಿಮ್ಮ ಫೋನ್‌ನಲ್ಲಿ ಆಯ್ಕೆಯನ್ನು ಆಕ್ಟಿವ್‌ ಮಾಡುವುದು ಸೂಕ್ತ.

* ನಿಮ್ಮ ಮೊಬೈಲ್ ನೆಟ್‌ವರ್ಕ್ ಲಿಮಿಟ್‌ ಅನ್ನು ಚೆಕ್‌ ಮಾಡಿ
ಮೊಬೈಲ್‌ ಡೇಟಾ ಕಾರ್ಯನಿರ್ವಹಿಸದೇ ಇದ್ದಾಗ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಮೊಬೈಲ್‌ ನೆಟ್‌ವರ್ಕ್‌ ಮಿತಿ ಎಷ್ಟಿದೆ ಅನ್ನೊದನ್ನ ಪರಿಶೀಲಿಸಿ.

* ನಿಮ್ಮ ಫೋನ್ ಅಪ್‌ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ
ಕೆಲವೊಮ್ಮೆ ಮೊಬೈಲ್‌ ಸಾಫ್ಟ್‌ವೇರ್ ಅಪ್ಡೇಟ್‌ ಮಾಡೋದನ್ನೇ ಜನರು ಮರೆತುಬಿಡುತ್ತಾರೆ. ಅದರಿಂದ ಕೂಡ ಮೊಬೈಲ್‌ ಡೇಟಾ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗಲಿದೆ. ಆದರಿಂದ ನಿಮ್ಮ ಮೊಬೈಲ್‌ ಸಾಫ್ಟ್‌ವೇರ್‌ ಅಪ್ಡೇಟ್‌ ಆಗಿದೆಯಾ ಅನ್ನೊದನ್ನ ಪರಿಶೀಲಿಸಿ.

Best Mobiles in India

English summary
Your Mobile data not working? These tips that might be useful!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X