ಆಪಲ್‌ನಿಂದ ಫೋಟೋಗ್ರಫಿ ಸ್ಪರ್ಧೆ..! ವಿಜೇತರಿಗೆ ಬಂಪರ್‌ ಬಹುಮಾನ..!

By Gizbot Bureau
|

ಆಪಲ್ ಕಂಪನಿಯ ಐಫೋನ್ ಬಳಕೆದಾರರು ತಮ್ಮ ಡಿವೈಸ್‌ಗಳನ್ನು ಎಲ್ಲರಿಗೂ ತೋರಿಸಲು ಇಷ್ಟಪಡುತ್ತಾರೆ. ಇದರ ಜೊತೆ ಐಫೋನ್‌ನಲ್ಲಿ ಕ್ಲಿಕ್ ಮಾಡಿದ ಚಿತ್ರಗಳನ್ನು ಹಂಚಿಕೊಳ್ಳಲು ಬಹಳಷ್ಟು ಜನ ಇಷ್ಟಪಡುತ್ತಾರೆ. ಈ ಪ್ರಕ್ರಿಯೆಯನ್ನು ಹೊಸ ಐಫೋನ್‌ ಹೊಂದಿರುವವರು ಹೆಚ್ಚು ಮಾಡುತ್ತಾರೆ. ಆದರೆ, ಇದು ಒಳ್ಳೆಯದು. ಆ ಎಲ್ಲಾ ಐಫೋನ್ ಬಳಕೆದಾರರಿಗೆ ಚಿನ್ನ ಮತ್ತು ಇತರ ಉತ್ಪನ್ನಗಳನ್ನು ಗೆಲ್ಲುವ ಅವಕಾಶ ಹೊಂದಿದ್ದು, ಐಫೋನ್ ಫೋಟೋಗ್ರಫಿ ಪ್ರಶಸ್ತಿಗಳಿಗೆ ನಾಮಿನೇಷನ್‌ ಪ್ರಾರಂಭವಾಗಿದ್ದು, ಆಪಲ್‌ ಪ್ರವೇಶಗಳನ್ನು ಸ್ವೀಕರಿಸುತ್ತಿದೆ.

ಸ್ಪರ್ಧೆಯ ನಿಯಮಗಳೇನು..?

ಸ್ಪರ್ಧೆಯ ನಿಯಮಗಳೇನು..?

ತಮ್ಮ ಚಿತ್ರಗಳನ್ನು ಕಳುಹಿಸಲು ಬಯಸುವವರಿಗೆ ಒಂದಿಷ್ಟು ನಿಯಮಗಳಿವೆ. ಫೋಟೋಗಳನ್ನು ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು ಮತ್ತು ಐಫೋನ್ ಹಾಗೂ ಐಪ್ಯಾಡ್‌ ಕ್ಲಿಕ್ಕಿಸಿರಬೇಕು. ವೈಯಕ್ತಿಕ ಖಾತೆಗಳಲ್ಲಿನ ಪೋಸ್ಟ್‌ಗಳು (ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಇತ್ಯಾದಿ) ಅರ್ಹವಾಗಿದ್ದು, ಫೋಟೋಶಾಪ್‌ನಂತಹ ಯಾವುದೇ ಡೆಸ್ಕ್‌ಟಾಪ್ ಇಮೇಜ್ ಪ್ರೊಸೆಸಿಂಗ್ ಪ್ರೋಗ್ರಾಂನಲ್ಲಿ ಫೋಟೋಗಳನ್ನು ಎಡಿಟ್‌ ಮಾಡಿರಬಾರದು. ಆದರೆ, ಆ ಚಿತ್ರಗಳ ಎಡಿಟಿಂಗ್‌ಗೆ ಐಒಎಸ್ ಸಾಫ್ಟ್‌ವೇರ್‌ಗಳನ್ನು ಬಳಸಬಹುದು.

ಆಡ್‌ಆನ್‌ ಲೆನ್ಸ್‌ ಬಳಕೆ

ಆಡ್‌ಆನ್‌ ಲೆನ್ಸ್‌ ಬಳಕೆ

ಚಿತ್ರಗಳನ್ನು ಕ್ಲಿಕ್ಕಿಸಲು ಬಳಕೆದಾರರು ಯಾವುದೇ ಐಫೋನ್ ಬಳಸಬಹುದಾಗಿದ್ದು, ಆಡ್ ಆನ್ ಲೆನ್ಸ್‌ಗಳ ಮೂಲಕ ಫೋಟೋ ಕ್ಲಿಕ್‌ ಮಾಡಬಹುದು. ವೆಬ್‌ಸೈಟ್‌ನ ಪ್ರಕಾರ, ಸ್ಪರ್ಧೆಗೆ ಸಲ್ಲಿಸುವ ಫೋಟೋಗಳು ಮೂಲ ಗಾತ್ರದಲ್ಲಿರಬೇಕು. 1000 ಪಿಕ್ಸೆಲ್‌ಗಳಿಗಿಂತ ಚಿತ್ರ ಚಿಕ್ಕದಾಗಿರಬಾರದು.

ಚಿತ್ರ ವಿಭಾಗಗಳು

ಚಿತ್ರ ವಿಭಾಗಗಳು

ಸ್ಪರ್ಧೆಗೆ ಚಿತ್ರಗಳನ್ನು ಈ ವಿಭಾಗಗಳಲ್ಲಿ ಸಲ್ಲಿಸಬಹುದಾಗಿದ್ದು, ಅಬ್‌ಸ್ಟ್ರಾಕ್ಟ್‌, ಪ್ರಾಣಿಗಳು, ವಾಸ್ತುಶಿಲ್ಪ, ಮಕ್ಕಳು, ಹೂವು, ಲ್ಯಾಂಡ್‌ಸ್ಕೇಪ್‌, ಜೀವನಶೈಲಿ, ಪ್ರಕೃತಿ, ಸುದ್ದಿ ಮತ್ತು ಘಟನೆಗಳು, ಪನೋರಮಾ, ಜನರು, ಭಾವಚಿತ್ರ, ಸರಣಿ (3 ಚಿತ್ರಗಳು), ಸ್ಟಿಲ್ ಲೈಫ್, ಸೂರ್ಯಾಸ್ತ, ಪ್ರಯಾಣ, ಮರಗಳು ಮತ್ತಿತರ ವಿಭಾಗಗಳಿವೆ.

ಪ್ರಶಸ್ತಿ ಏನು..?

ಪ್ರಶಸ್ತಿ ಏನು..?

ಆಪಲ್‌ ಪೋಟೋಗ್ರಫಿ ಸ್ಪರ್ಧೆಯಲ್ಲಿ 18 ಚಿನ್ನದ ಬಾರ್‌ಗಳಿದ್ದು, ಇದನ್ನು 18 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ನೀಡಲಾಗುವುದು. 18 ವಿಭಾಗಗಳಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು ಪಲ್ಲಾಡಿಯಮ್ ಬಾರ್ ಗೆಲ್ಲುತ್ತಾರೆ. ವರ್ಷದ ಐಪಿಪಿಎ ಛಾಯಾಗ್ರಾಹಕ ಐಪ್ಯಾಡ್ ಏರ್ ಪಡೆದರೆ, ಅಗ್ರ ಮೂರು ವಿಜೇತರು ಆಪಲ್ ವಾಚ್ ಸಿರೀಸ್‌ 3ನ್ನು ಪಡೆಯಲಿದ್ದಾರೆ. ತೀರ್ಪುಗಾರರು ಎಲ್ಲಾ ಪ್ರವೇಶಗಳನ್ನು ಪರಿಶೀಲಿಸಲಿದ್ದು, ಕಲಾತ್ಮಕ ಅರ್ಹತೆ, ಸ್ವಂತಿಕೆ, ವಿಷಯ ಮತ್ತು ಶೈಲಿಯ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಿದ್ದಾರೆ.

ಪ್ರವೇಶ ಶುಲ್ಕ..?

ಪ್ರವೇಶ ಶುಲ್ಕ..?

ಆಪಲ್‌ ಫೋಟೋಗ್ರಫಿ ಸ್ಪರ್ಧೆಗೆ ಪ್ರವೇಶ ಉಚಿತವಾಗಿಲ್ಲ. ಹೌದು, ಸ್ಪರ್ಧಿಸಲು ಬಯಸುವವರು 1 ಚಿತ್ರಕ್ಕಾಗಿ 3.50 ಡಾಲರ್‌, 3 ಚಿತ್ರಗಳಿಗಾಗಿ 9.50 ಡಾಲರ್‌, 5 ಚಿತ್ರಗಳಿಗಾಗಿ 15.50 ಡಾಲರ್‌, 10 ಚಿತ್ರಗಳಿಗಾಗಿ 29.50 ಡಾಲರ್‌, 15 ಚಿತ್ರಗಳಿಗೆ 45.50 ಡಾಲರ್‌, 20 ಚಿತ್ರಗಳಿಗಾಗಿ 57.00 ಡಾಲರ್ ಮತ್ತು 25 ಚಿತ್ರಗಳಿಗಾಗಿ 65.50 ಡಾಲರ್‌ ನೀಡಬೇಕು.

ಮಾರ್ಚ್‌ 31 ಗಡುವು..!

ಮಾರ್ಚ್‌ 31 ಗಡುವು..!

ನೀವು ‘ವಿಜೇತ' ಹೊಂದುತ್ತೇವೆ ಎಂದಾದರೆ..? ನಿರ್ದಿಷ್ಟ ಪ್ರಮಾಣದ ಹಣವನ್ನು ಸಲ್ಲಿಸಲು ಸಿದ್ಧರಿದ್ದರೆ ನೀವು ಚಿನ್ನದ ಪಟ್ಟಿ ಗೆಲ್ಲಬಹುದು. ಇದು 13 ನೇ ಆವೃತ್ತಿಯಾಗಿದ್ದು, ಚಿತ್ರಗಳನ್ನು ಸಲ್ಲಿಸಲು ಮಾರ್ಚ್ 31, 2020 ಗಡುವು ಆಗಿದೆ.

Most Read Articles
Best Mobiles in India

Read more about:
English summary
Your Shot On iPhone Picture Might Get You A Gold Bar

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X