ಇಂದಿನಿಂದ ಈ ಫೋನ್‌ಗಳಲ್ಲಿ ಯೂಟ್ಯೂಬ್, ಗೂಗಲ್ ಮ್ಯಾಪ್ ಮತ್ತು ಜಿ-ಮೇಲ್‌ ಕಥೆ ಕ್ಲೋಸ್‌!

|

ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯು ಹತ್ತು ಹಲವು ಸೇವೆಗಳ ಪರಿಚಯಿಸುವ ಮೂಲಕ ಲೀಡಿಂಗ್ ಟೆಕ್ ಸಂಸ್ಥೆಯಾಗಿ ಎನಿಸಿಕೊಂಡಿದೆ. ಗೂಗಲ್‌ ಸೇವೆಗಳ ಪೈಕಿ ಮುಖ್ಯವಾಗಿ ಗೂಗಲ್ ಮ್ಯಾಪ್, ಜಿ-ಮೇಲ್ ಹಾಗೂ ಯೂಟ್ಯೂಬ್ ಗಳು ಅತೀ ಅಗತ್ಯ ಮತ್ತು ಅವಶ್ಯ ಎನಿಸಿಕೊಂಡಿವೆ. ಆದರೆ ಗೂಗಲ್‌ ಸಂಸ್ಥೆಯು ಇದೀಗ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಹೊರಹಾಕಿದೆ.

ಇಂದಿನಿಂದ ಈ ಫೋನ್‌ಗಳಲ್ಲಿ ಯೂಟ್ಯೂಬ್, ಗೂಗಲ್ ಮ್ಯಾಪ್ ಮತ್ತು ಜಿಮೇಲ್‌ ಕಥೆ ಕ್ಲೋಸ್

ಹೌದು, ಗೂಗಲ್‌ ಕೆಲವು ಹಳೆಯ ಆಪರೇಟಿಂಗ್ ಸಿಸ್ಟಂನ ಒಳಗೊಂಡ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಜಿ-ಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್‌ ಸೇರಿದಂತೆ ಕೆಲವು ಇತರ ಅಪ್ಲಿಕೇಶನ್‌ಗಳ ಸಪೋರ್ಟ್‌ ನಿಲ್ಲಿಸಲಿದೆ ಎಂದು ಗೂಗಲ್ ಘೋಷಿಸಿದೆ. ಖಾತೆಗಳ ಸುರಕ್ಷತೆಯನ್ನು ರಕ್ಷಿಸುವ ಕಂಪನಿಯ ಯೋಜನೆಗಳ ಭಾಗವಾಗಿ, ಆಂಡ್ರಾಯ್ಡ್ 2.3.7 ಜಿಂಜರ್ ಬ್ರೆಡ್ ಅಥವಾ ಅದಕ್ಕಿಂತಲೂ ಕಡಿಮೆ ಆವೃತ್ತಿಯ ಓಎಸ್‌ ಇರುವ ಯಾವುದೇ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್‌ ಉತ್ಪನ್ನಗಳು ಮತ್ತು ಸೇವೆಗಳಿಗೆ ಸೈನ್ ಇನ್ ಮಾಡಲು ಸಾಧ್ಯವಾಗುವುದಿಲ್ಲ.

ಇಂದಿನಿಂದ ಈ ಫೋನ್‌ಗಳಲ್ಲಿ ಯೂಟ್ಯೂಬ್, ಗೂಗಲ್ ಮ್ಯಾಪ್ ಮತ್ತು ಜಿಮೇಲ್‌ ಕಥೆ ಕ್ಲೋಸ್

ಗೂಗಲ್‌ ಸಂಸ್ಥೆಯ ಆಪ್‌ಗಳಿಗೆ ಆಕ್ಸಸ್ ಪ್ರಕ್ರಿಯೇಯನ್ನು ಉಳಿಸಿಕೊಳ್ಳಲು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕನಿಷ್ಠ ಆಂಡ್ರಾಯ್ಡ್ 3.0 ಅಥವಾ ಅದಕ್ಕಿಂತಲೂ ಅಧಿಕ ಓಎಸ್‌ ಅನ್ನು ಇನ್‌ಸ್ಟಾಲ್ ಮಾಡಿರಬೇಕು. ಆಂಡ್ರಾಯ್ಡ್ 3.0 ಮತ್ತು ಅದಕ್ಕಿಂತಲೂ ಮೇಲಿನ ಓಎಸ್‌ ಹೊಮದಿರುವ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಗೂಗಲ್‌ ಸೇವೆಗಳನ್ನು ಬಳಕೆ ಮಾಡಲು ಯಾವುದೇ ಅಡೆ ತಡೆ ಇರುವುದಿಲ್ಲ.

ಗೂಗಲ್ ಆಂಡ್ರಾಯ್ಡ್ 2.3.7 (ಜಿಂಜರ್ ಬ್ರೆಡ್) ಓಎಸ್‌ ಅನ್ನು ಡಿಸೆಂಬರ್ 2010 ರಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಈಗ ಈ OS ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಅಪ್ಲಿಕೇಶನ್‌ಗಳ ಸೇವೆಯನ್ನು ಬಳಕೆದಾರರು ಆಕ್ಸಸ್ ಮಾಡಲು ಅನುಮತಿಸುವುದಿಲ್ಲ ಎಂದು ಕಂಪನಿ ಘೋಷಿಸಿದೆ. ಅದಾಗ್ಯೂ, ಒಂದು ವೇಳೆ ಬಳಕೆದಾರರು ಈ ಅಪ್ಲಿಕೇಶನ್‌ಗಳಿಗೆ ಸೈನ್ ಇನ್ ಮಾಡಲು ಪ್ರಯತ್ನಿಸಿದರೆ, ಅವರು ತಪ್ಪಾದ ಬಳಕೆದಾರ ಹೆಸರು ಅಥವಾ ಪಾಸ್‌ವರ್ಡ್ ದೋಷವನ್ನು ಕಾಣಬಹುದು ಎನ್ನಲಾಗಿದೆ.

ಇಂದಿನಿಂದ ಈ ಫೋನ್‌ಗಳಲ್ಲಿ ಯೂಟ್ಯೂಬ್, ಗೂಗಲ್ ಮ್ಯಾಪ್ ಮತ್ತು ಜಿಮೇಲ್‌ ಕಥೆ ಕ್ಲೋಸ್

ಯಾವ ಗೂಗಲ್ ಆಪ್‌ಗಳ ಸೇವೆ ನಿಲ್ಲಿಸುತ್ತವೆ?
* ಜಿಮೇಲ್
* ಯೂಟ್ಯೂಬ್
* ಗೂಗಲ್ ಮ್ಯಾಪ್‌
* ಗೂಗಲ್ ಪ್ಲೇ ಸ್ಟೋರ್
* ಗೂಗಲ್ ಕ್ಯಾಲೆಂಡರ್
* ಇನ್ನೂ ಗೂಗಲ್ ಕೆಲವು ಆಪ್‌.

ಯಾವ ಪೋನ್‌ಗಳಲ್ಲಿ ಸೇವೆ ಸ್ಥಗಿತ ಆಗಲಿದೆ?
* ಸೋನಿ ಎಕ್ಸ್‌ಪೀರಿಯಾ ಅಡ್ವಾನ್ಸ್
* ಲೆನೊವೊ K800
* ಸೋನಿ ಎಕ್ಸ್‌ಪೀರಿಯಾ ಗೋ
* ವೊಡಾಫೋನ್ ಸ್ಮಾರ್ಟ್ II
* ಸ್ಯಾಮ್‌ಸಂಗ್ ಗ್ಯಾಲಕ್ಸಿ S2
* ಸೋನಿ ಎಕ್ಸ್ಪೀರಿಯಾ P
* ಎಲ್‌ಜಿ ಸ್ಪೆಕ್ಟ್ರಮ್
* ಸೋನಿ ಎಕ್ಸ್ಪೀರಿಯಾ S
* ಎಲ್‌ಜಿ ಪ್ರಾಡಾ 3.0
* ಹೆಚ್‌ಟಿಸಿ ವೇಲೋಸಿಟಿ
* ಹೆಚ್‌ಟಿಸಿ Evo 4G
* ಮೊಟೊರೊಲಾ ಫೈರ್
* ಮೊಟೊರೊಲಾ XT532

ಆಂಡ್ರಾಯ್ಡ್ 3.0 ಅಥವಾ ಅದಕ್ಕಿಂತಲೂ ಹೆಚ್ಚಿನ ಓಎಸ್‌ಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಾಗದ ಬಳಕೆದಾರರು ತಮ್ಮ ಫೋನ್‌ಗಳ ವೆಬ್ ಬ್ರೌಸರ್‌ನಲ್ಲಿ ತಮ್ಮ ಗೂಗಲ್‌ ಖಾತೆಗೆ ಲಾಗಿನ್ ಮಾಡಲು ಪ್ರಯತ್ನಿಸಬಹುದು.

Most Read Articles
Best Mobiles in India

English summary
YouTube, Gmail, And Google Maps Will Stop Working On These Phones From Today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X