Just In
Don't Miss
- News
NEP- ತಿಂಗಳ ಬಳಿಕ ರಾಜ್ಯದ ಶಾಲೆಗಳಲ್ಲಿ ಎನ್ಇಪಿ ಜಾರಿ
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಮಿಥುನ, ಸಿಂಹ, ವೃಶ್ಚಿಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯ
- Sports
DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್
- Movies
ಹೆಣ್ ಮಕ್ಕಳ ದಿಲ್ ಕದ್ದ ಅಭಿನವ್: ಹ್ಯಾಂಡ್ಸಮ್ ಹುಡುಗನ ಕಲರ್ ಫುಲ್ ಜಗತ್ತು ಹೇಗಿದೆ?
- Finance
ಮೇ 16ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಆಕರ್ಷಕ ಬೆಲೆಯಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಡಿ15 ಇವಿ ಸ್ಕೂಟರ್ ಬಿಡುಗಡೆಗೊಳಿಸಿದ ಬಿಗೌಸ್
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯೂಟ್ಯೂಬ್ನಿಂದ ಎರಡು ಹೊಸ ಪ್ರೀಮಿಯಂ ಪ್ಲಾನ್ ಲಾಂಚ್! ಏನೆಲ್ಲಾ ಉಪಯೋಗ?
ಗೂಗಲ್ ಒಡೆತನದ ಯೂಟ್ಯೂಬ್ ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಇಂದಿನ ದಿನಗಳಲ್ಲಿ ಯಾವುದೇ ವಿಚಾರದ ಮಾಹಿತಿ ಬೇಕಿದ್ದರೂ ಮೊದಲಿಗೆ ಯೂಟ್ಯೂಬ್ನಲ್ಲಿ ಸರ್ಚ್ ಮಾಡುತ್ತಾರೆ. ಇನ್ನು ಯೂಟ್ಯೂಬ್ ಆಡಿಯೋ ಮತ್ತು ವೀಡಿಯೋ ಎರಡನ್ನು ಒದಗಿಸುವುದರಿಂದ ಎಲ್ಲರನ್ನು ಆಕರ್ಷಿಸಿದೆ. ಇನ್ನು ಯೂಟ್ಯೂಬ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಬಳಕೆದಾರರಿಗೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತಿದೆ. ಇದಕ್ಕಾಗಿ ಯೂಟ್ಯೂಬ್ ಪ್ರೀಮಿಯಂ ಪ್ಲಾನ್ಗಳನ್ನು ಸಹ ನೀಡುತ್ತಿದೆ.

ಹೌದು, ಯೂಟ್ಯೂಬ್ ತನ್ನ ಗ್ರಾಹಕರಿಗೆ ಚಂದಾದಾರಿಕೆ ಪಾವತಿಸುವ ಪ್ರೀಮಿಯಂ ಯೋಜನೆಗಳನ್ನು ಸಹ ನೀಡುತ್ತಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ವಾರ್ಷಿಕ ಅವಧಿಯ ಎರಡು ಹೊಸ ಪ್ರೀಮಿಯಂ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನ್ಗಳು ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಗಳಿಗೆ ಸೇರಿವೆ. ಸದ್ಯ ಈ ಪ್ಲಾನ್ಗಳು ಭಾರತ ಮತ್ತು ಯುಎಸ್ ಸೇರಿದಂತೆ ಕೆಲವು ದೇಶಗಳಲ್ಲಿ ಮಾತ್ರ ಪರಿಚಯಿಸಲಾಗಿದೆ. ಇದರಿಂದ ಬಳಕೆದಾರರು ವಾರ್ಷಿಕ ಅವಧಿಯ ತನಕ ಯೂಟ್ಯೂಬ್ ಪ್ರೀಮಿಯಂ ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ. ಹಾಗಾದ್ರೆ ಯೂಟ್ಯೂಬ್ ಪರಿಚಯಿಸಿರುವ ವಾರ್ಷಿಕ ಪ್ರೀಮಿಯಂ ಪ್ಲಾನ್ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್ ಭಾರತ ಮತ್ತು ಯುಎಸ್ ನಲ್ಲಿ ಹೊಸ ಪ್ರೀಮಿಯಂ ಪ್ಲಾನ್ಗಳನ್ನು ಪರಿಚಯಿಸಿದೆ. ಈ ಪ್ಲಾನ್ಗಳು ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂನಲ್ಲಿ ವೈಯಕ್ತಿಕ ಬಳಕೆದಾರರಿಗೆ ವಾರ್ಷಿಕ ಪ್ರಯೋಜನಗಳನ್ನು ನೀಡಲಿದೆ. ಯೂಟ್ಯೂಬ್ ಪ್ರಮೋಷನ್ ಆಫರ್ನಲ್ಲಿ ಈ ಪ್ಲಾನ್ಗಳನ್ನು ಪರಿಚಯಿಸಿದೆ. ಇದರಿಂದಾಗಿ ಗ್ರಾಹಕರಿಗೆ ವಾರ್ಷಿಕ ಪ್ಲಾನ್ಗಳು ಜನವರಿ 23 ರವರೆಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಅದರಂತೆ ಯೂಟ್ಯೂಬ್ ಪ್ರೀಮಿಯಂ ವಾರ್ಷಿಕ ಯೋಜನೆಯನ್ನು 1,159ರೂ. (ಯುಎಸ್ನಲ್ಲಿ $107.99)ಗಳಿಗೆ ಖರೀದಿಸಬಹುದಾಗಿದೆ. ಆದರೆ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂನ ವಾರ್ಷಿಕ ಪ್ಲಾನ್ ರಿಯಾಯಿತಿ ದರದಲ್ಲಿ 889ರೂ. (US ನಲ್ಲಿ $89.99)ಗಳಿಗೆ ಲಭ್ಯವಾಗಲಿದೆ.

ಇನ್ನು ಈ ಪ್ರಮೋಷನಲ್ ಆಫರ್ ಮುಗಿದ ನಂತರ ಭಾರತದಲ್ಲಿ ಬಳಕೆದಾರರು ಎಷ್ಟು ಪಾವತಿಸಬೇಕಾಗುತ್ತದೆ ಎಂಬ ಬಗ್ಗೆ ಯೂಟ್ಯೂಬ್ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಯೂಟ್ಯೂಬ್ ಪ್ರೀಮಿಯಂನ ವಾರ್ಷಿಕ ಪ್ಲಾನ್ ಸಾಮಾನ್ಯವಾಗಿ $119.99 ದರದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಯೂಟ್ಯೂಬ್ ಪ್ರೀಮಿಯಂ ತಿಂಗಳಿಗೆ 129ರೂ (US ನಲ್ಲಿ $11.99) ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ 99ರೂ. (US ನಲ್ಲಿ $9.99)ಗಳಿಗೆ ಲಭ್ಯವಾಗಲಿದೆ. ಸದ್ಯ ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ, ಬ್ರೆಜಿಲ್, ಕೆನಡಾ, ಜರ್ಮನಿ, ಜಪಾನ್, ರಷ್ಯಾ, ಥೈಲ್ಯಾಂಡ್, ಟರ್ಕಿ ಮತ್ತು US ನಲ್ಲಿ ಮಾತ್ರ ಲಭ್ಯವಿದೆ ಎಂದು ಯೂಟ್ಯೂಬ್ ಸಪೋರ್ಟ್ ಪೇಜ್ನಲ್ಲಿ ಹೇಳಲಾಗಿದೆ.

ಯೂಟ್ಯೂಬ್ ಪ್ರೀಮಿಯಂ ಚಂದಾದಾರರು ಈಗಾಗಲೇ ಅಸ್ತಿತ್ವದಲ್ಲಿರುವ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸದಾಗಿ ಸೈನ್ ಅಪ್ ಮಾಡಿದ ನಂತರ ವಾರ್ಷಿಕ ಯೋಜನೆಗಳನ್ನು ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ, ಒಂದು ತಿಂಗಳು ಅಥವಾ ಮೂರು ತಿಂಗಳ ಪ್ರಿಪೇಯ್ಡ್ ಯೋಜನೆಯಲ್ಲಿರುವ ಭಾರತದ ಚಂದಾದಾರರು ತಮ್ಮ ಪ್ರಿಪೇಯ್ಡ್ ಪ್ಲಾನ್ ಅವಧಿ ಮುಗಿದ ನಂತರ ವಾರ್ಷಿಕ ಯೋಜನೆಗಳಿಗೆ ವರ್ಗಾಯಿಸಲ್ಪಡುತ್ತಾರೆ ಎನ್ನಲಾಗಿದೆ. ಇದಲ್ಲದೆ ಆಂಡ್ರಾಯ್ಡ್ ಮತ್ತು ವೆಬ್ನಲ್ಲಿರುವ ಬಳಕೆದಾರರು ಯೂಟ್ಯೂಬ್ ಪ್ರೀಮಿಯಂ ವಾರ್ಷಿಕ ಯೋಜನೆಗೆ ಸೈನ್ ಅಪ್ ಮಾಡಬಹುದು. ಆದರೆ, ಐಒಎಸ್ ಡಿವೈಸ್ಗಳಿಗೆ ಇನ್-ಆಪ್ ಸೈನ್-ಅಪ್ ಆಯ್ಕೆಯನ್ನು ಯೂಟ್ಯೂಬ್ ಇನ್ನು ಕೂಡ ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಲಾಗಿದೆ.

ಇನ್ನು ಯೂಟ್ಯೂಬ್ನ ವಾರ್ಷಿಕ ಪ್ರೀಮಿಯಂ ಪ್ಲಾನ್ಗಳನ್ನು ಆಯ್ಕೆ ಮಾಡುವ ಬಳಕೆದಾರರಿಗೆ ಯೂಟ್ಯೂಬ್ ಯಾವುದೇ ರಿಫಂಡ್ ಅವಕಾಶ ನೀಡಿಲ್ಲ. ಯೋಜನೆಗಳ ಪಾವತಿಯು ಪ್ರಿಪೇಯ್ಡ್ ಆಧಾರದ ಮೇಲೆ ಮತ್ತು ನಾನ್ ರೆಕರಿಂಗ್ ನೇಚರ್ ಅನ್ನು ಹೊಂದಿದೆ. ಇದಲ್ಲದೆ ನೀವು ಬಳಸುತ್ತಿರುವ ಮೂಲ ವಾರ್ಷಿಕ ಯೋಜನೆ ಅವಧಿ ಮುಗಿದ ನಂತರ ನೀವು ಚಂದಾದಾರಿಕೆಯನ್ನು ಹಸ್ತಚಾಲಿತವಾಗಿ ಖರೀದಿಸಬೇಕಾಗುತ್ತದೆ.

ಇದಲ್ಲದೆ ಯೂಟ್ಯೂಬ್ನಲ್ಲಿ ನೀವು ವಿಡಿಯೊ ವೀಕ್ಷಣೆ ಮಾಡುವಾಗ ಪ್ಲೇ ಆಗುತ್ತಿರುವ ವಿಡಿಯೊ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ನೀಡಲಾಗಿದೆ. ಅದಕ್ಕಾಗಿ ಬಲಕ್ಕೆ ಕಾಣುವ ಮೂರು ಡಾಟ್ಗಳ ಮೆನು ಬಟನ್ ಸೆಲೆಕ್ಟ್ ಮಾಡಿರಿ. ಆನಂತರ ಕಾಣಿಸುವ ಆಯ್ಕೆಗಳ ಪಟ್ಟಿಯಲ್ಲಿ ಕ್ವಾಲಿಟಿ ಆಯ್ಕೆಯನ್ನು ಟ್ಯಾಪ್ ಮಾಡಿ ನಿಮಗೆ ಅಗತ್ಯವೆನಿಸುವ ಗುಣಮಟ್ಟದಲ್ಲಿ ಸೆಟ್ ಮಾಡಿ ವಿಡಿಯೊ ನೋಡಬಹುದಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999