ಫೇಸ್‌ಬುಕ್‌ ಬಳಕೆದಾರರೇ ಎಚ್ಚರ!..ಯಾಮಾರಿದರೆ ಬೀಳುತ್ತೆ ಕ್ರಿಮಿನಲ್‌ ಕೇಸ್!!

|

"ಸಾಮಾಜಿಕ ಮಾಧ್ಯಮ'ಗಳ ಮೇಲೆ ನಿಗಾ ಇಡುವುದು ಸದ್ಯದ ಪರಿಸ್ಥಿತಿಯಲ್ಲಿ ಸವಾಲಿನ ಕೆಲಸ ಆಗಿದ್ದರೂ ಸಹ, ಅವುಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಈ ವಿಚಾರದಲ್ಲಿ ಗೂಗಲ್‌, ಫೇಸ್‌ಬುಕ್‌, ವಾಟ್ಸ್‌ಆಪ್‌ ಮತ್ತಿತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಜೊತೆಗೆ ಚುನಾವಣಾ ಆಯೋಗ ಸಮನ್ವಯ ಸಾಧಿಸಿ ಅವರಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್‌ ಅವರು ಮತ ಜಾಗೃತಿ ಅಭಿಯಾನದ ಭಾಗವಾಗಿ ಸಾರ್ವಜನಿಕರಿಗೂ ಸಹ ಎಚ್ಚರಿಕೆ ನೀಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿ ದೃಷ್ಟಿಯಿಂದ "ಸಾಮಾಜಿಕ ಮಾಧ್ಯಮ'ಗಳ ಮೇಲೆ ನಿಗಾ ಇಡುವುದು ಸದ್ಯದ ಪರಿಸ್ಥಿತಿಯಲ್ಲಿ ಸವಾಲಿನ ಕೆಲಸ ಆಗಿದ್ದರೂ, ಆಯೋಗ ಈ ದಿಸೆಯಲ್ಲಿ ಬಹಳ ಗಂಭೀರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು, ನೇತಾರರು ಹಾಗೂ ಚುನಾವಣೆಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರನ್ನು ಸಹ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ ಬಳಕೆದಾರರೇ ಎಚ್ಚರ!..ಯಾಮಾರಿದರೆ ಬೀಳುತ್ತೆ ಕ್ರಿಮಿನಲ್‌ ಕೇಸ್!!

ವೈಯುಕ್ತಿಕ ನಿಂದನೆಗಳು, ಸಮಾಜದಲ್ಲಿ ಕ್ಷೋಭೆ ಹುಟ್ಟು ಹಾಕುವ, ಸಂಘರ್ಷಕ್ಕೆ ಅವಕಾಶ ಮಾಡಿಕೊಡುವ, ಯಾವುದೇ ನಿರ್ದಿಷ್ಟ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಮತದಾರರಿಗೆ ಆಮಿಷ ನೀಡುವಂತಹ ಅಂಶಗಳು ಕಂಡು ಬಂದರೆ, ಅವುಗಳ ಪೈಕಿ ಐಪಿಸಿ ಅಥವಾ ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗುತ್ತದೆ. ವಿಷಯಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ನೀವು ಈಗ ಜಾಲತಾಣಗಳ ಬಳಕೆ ಬಗ್ಗೆ ಈ ವಿಷಯಗಳನ್ನು ತಿಳಿಯಬೇಕಿದೆ.

ಸೈಬರ್ ಲ್ಯಾಬ್ ಸ್ಥಾಪನೆ

ಸೈಬರ್ ಲ್ಯಾಬ್ ಸ್ಥಾಪನೆ

ಕೇಂದ್ರ ಸರ್ಕಾರ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿಯೇ ಪ್ರತ್ಯೇಕ ಲ್ಯಾಬ್ ಹಾಗೂ ಆನ್‌ಲೈನ್ ದೂರು ಸ್ವೀಕಾರ ಪೋರ್ಟಲ್ ರಚಿಸಲು ಸೂಚಿಸಿತ್ತು. ಅದಕ್ಕಾಗಿ ಮಹಿಳೆ ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧ ನಿಯಂತ್ರಣ ಯೋಜನೆಯಡಿ ಎಲ್ಲ ರಾಜ್ಯಗಳಿಗೂ ತಲಾ 4 ಕೋಟಿ ಅನುದಾನವನ್ನೂ ಮಂಜೂರು ಮಾಡಿದ್ದು, ಈ ಸೈಬರ್ ಲ್ಯಾಬ್ ಈಗ ಸಿದ್ದವಾಗಿದೆ. ಈ ಲ್ಯಾಬ್‌ನಲ್ಲಿ ಕಂಪ್ಯೂಟರ್ ಬಳಸಿ ಮಾಡುವ ಎಲ್ಲ ದೌರ್ಜನ್ಯಗಳ ಮೇಲೆ ನಿಗಾ ವಹಿಸಲಾಗುತ್ತದೆ.

ಮೊದಲೇ ನಿಗಾ ಇಡಲಿದೆ ಲ್ಯಾಬ್!

ಮೊದಲೇ ನಿಗಾ ಇಡಲಿದೆ ಲ್ಯಾಬ್!

ಮೊದಲು ಯಾವುದಾದರೂ ‌ಸೈಬರ್ ಅಪರಾಧ ನಡೆದ ನಂತರ ಐ.ಪಿ ವಿಳಾಸ ಹುಡುಕಿ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿತ್ತು. ಆದರೆ, ಕಿಡಿಗೇಡಿಗಳ ಮೇಲೆ ಮೊದಲೇ ನಿಗಾ ಇಡುವ ಉದ್ದೇಶ ಇರುವುದರಿಂದ ಹೊಸ ಸೈಬರ್ ಲ್ಯಾಬ್ ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಸೈಬರ್ ಲ್ಯಾಬ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕೂಡ ತಂತ್ರಜ್ಞಾನದಲ್ಲಿ ಬಹಳ ಅಪ್‌ಡೇಟ್ ಆಗಿದ್ದಾರೆ. ಇದಕ್ಕಾಗಿ 25 ಲಕ್ಷ ವೆಚ್ಚದಲ್ಲಿ ತರಬೇತಿ ಸಹ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಲ್ಯಾಬ್ ವ್ಯಾಪ್ತಿಗೆ ಇವೆಲ್ಲ ಸೇರಲಿದೆ!

ಹೊಸ ಲ್ಯಾಬ್ ವ್ಯಾಪ್ತಿಗೆ ಇವೆಲ್ಲ ಸೇರಲಿದೆ!

ಕಂಪ್ಯೂಟರ್ ಬಳಸಿ ಮಾಡುವ ಎಲ್ಲ ದೌರ್ಜನ್ಯಗಳು ಈ ಲ್ಯಾಬ್‌ನ ತನಿಖೆ ವ್ಯಾಪ್ತಿಗೆ ಬರುತ್ತವೆ. ಅದರಲ್ಲಿಯೂ, ಮಹಿಳೆ ಗೌರವಕ್ಕೆ ಧಕ್ಕೆ ತರುವ ರೀತಿಯ ಬರಹಗಳನ್ನು ಪ್ರಕಟಿಸುವುದು, ಫೋಟೊ ಅಥವಾ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವುದು. ಅಶ್ಲೀಲ ಫೋಟೊಗೆ ಮಹಿಳೆಯ ಮುಖ ಹೊಂದಿಸಿ ಪ್ರಕಟಿಸುವ ಕಿರಾತಕರಿಗೆ ಈ ಸೈಬರ್‌ಲ್ಯಾಬ್ ದುಸ್ವಪ್ನವಾಗಲಿದೆ. ಮಹಿಳೆ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳನ್ನು ಹಾಕುವವರನ್ನು ನೇರ ಜೈಲಿಗೆ ಕಳುಹಿಸುವಂತಹ ಸಾಕ್ಷಿ ಇನ್ನು ಸಂಗ್ರಹವಾಗಲಿದೆ.

ಆನ್‌ಲೈನಿನಲ್ಲೇ ದೂರು ನೀಡುವ ಆಯ್ಕೆ!

ಆನ್‌ಲೈನಿನಲ್ಲೇ ದೂರು ನೀಡುವ ಆಯ್ಕೆ!

ಕಾರ್ಯ ಆರಂಭಿಸಿರುವ ಹೊಸ ಸೈಬರ್ ಲ್ಯಾಬ್ ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎನ್ನುವುದಕ್ಕೆ ಆನ್‌ಲೈನಿನಲ್ಲೇ ದೂರು ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ. ಸಂತ್ರಸ್ತರ ಹೆಸರು ಮತ್ತು ವಿವರಗಳನ್ನು ಗೋಪ್ಯವಾಗಿಟ್ಟು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಆ ಠಾಣೆಯ ಪೊಲೀಸರು, ಲ್ಯಾಬ್ ಸಿಬ್ಬಂದಿ ಕೊಡುವ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆ ಹಿಡಿಯಲಿದ್ದಾರೆ. ಇದರಿಂದ ಪೊಲೀಸ್ ಠಾಣೆಗೆ ತೆರಳಬೇಕಾದ ಅನಿವಾರ್ಯತೆ ಇನ್ನು ತಪ್ಪಲಿದೆ.

ದೂರು ನೀಡುವುದು ಹೇಗೆ?

ದೂರು ನೀಡುವುದು ಹೇಗೆ?

ಯಾವುದೇ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾದವರು ‘cybercrime.gov.in' ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದಾಗಿದೆ. ಸೈಬರ್ ಲ್ಯಾಬ್ ಅಧಿಕಾರಿಗಳು ಆ ದೂರನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸುತ್ತಾರೆ. ನಂತರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಆ ಠಾಣೆಯ ಪೊಲೀಸರು, ಲ್ಯಾಬ್ ಸಿಬ್ಬಂದಿ ಕೊಡುವ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆ ಹಿಡಿಯಲಿದ್ದಾರೆ. ಇದರಿಂದ ಜಾಲತಾಣಗಳಲ್ಲಿನ ಕಿಡಿಗೇಡಿಗಳ ಕಿರುಕುಳಕ್ಕೆ ಬ್ರೇಕ್ ಬೀಳಲಿದೆ.

Most Read Articles
Best Mobiles in India

English summary
Beware of social media promoting distorted truths. Action by Facebook, Twitter andInstagram against dubious accounts must be followed by. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more