ಫೇಸ್ ಬುಕ್ ಹೊಸ ಸಿಗರೇಟ್ ಇದ್ದ ಹಾಗೆ- ಸೇಲ್ಸ್ ಫೋರ್ಸ್ ಸಿಇಓ ಹೇಳಿಕೆ

By Gizbot Bureau
|

ಚಟ ಅಂದ್ರೆ ಯಾವುದು ಹೇಳಿ? ಡ್ರಿಂಕ್ಸ್ ಮಾಡೋದು, ಧೂಮಪಾನ ಮಾಡುವುದು ಇತ್ಯಾದಿ ಅಲ್ಲವೇ? ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಕೂಡ ಒಂದು ಚಟವಾಗಿ ಪರಿಣಮಿಸುತ್ತಿದ್ದು ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದೆ.

ಹೊಸ ಸಿಗರೇಟ್ ಫೇಸ್ ಬುಕ್:

ಹೊಸ ಸಿಗರೇಟ್ ಫೇಸ್ ಬುಕ್:

ಇದೀಗ ಯುಎಸ್ ಮೂಲದ ಸಾಫ್ಟ್ ವೇರ್ ಸಂಸ್ಥೆಯಾಗಿರುವ ಸೇಲ್ಸ್ ಫೋರ್ಸ್ ನ ಸಿಇಓ ಮಾರ್ಕ್ ಬೆನಿಯೋಫ್ ಸಾಮಾಜಿಕ ನೆಟ್ ವರ್ಕಿಂಗ್ ಫ್ಲ್ಯಾಟ್ ಫಾರ್ಮ್ ನ್ನು "ಹೊಸ ಸಿಗರೇಟ್" ಎಂದು ಕರೆದಿದ್ದಾರೆ ಮತ್ತು ಈ ಸಿಗರೇಟ್ ಮಕ್ಕಳಿಗೆ ವ್ಯಸನವನ್ನು ಹುಟ್ಟಿಸುತ್ತಿದೆ ಎಂದು ಹೇಳಿದ್ದಾರೆ.

ಭಾಷಣದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ:

ಭಾಷಣದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ:

ಫೇಸ್ ಬುಕ್ ಸಿಇಓ ಮಾರ್ಕ್ ಜ್ಯೂಕ್ ಬರ್ಗ್ ಮುಕ್ತ ಅಭಿವ್ಯಕ್ತಿಯ ಕುರಿತು ಭಾಷಣ ಮಾಡುವುದಾಗಿ ತಿಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆನಿಯೋಫ್ ಅವರು ಪ್ರತಿಕ್ರಿಯಿಸಿದ್ದು ಇದೀಗ ಫೇಸ್ ಬುಕ್ ಸಂಸ್ಥೆ ಹೆಚ್ಚು ಜವಾಬ್ದಾರಿಯುತವಾಗಬೇಕಿದೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿದ ಸಿಇಓ:

ಟ್ವೀಟ್ ಮಾಡಿದ ಸಿಇಓ:

" ಫೇಸ್ ಬುಕ್ ಒಬ್ಬ ಪ್ರಕಾಶಕ. ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ನಡೆಯುವ ವಿಚಾರಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಕಂಪನಿ ಜವಾಬ್ದಾರರಾಗಿರಬೇಕು.ಕಾನೂನಿನಿಂಯದ ನಿರ್ಧರಿಸಲ್ಪಟ್ಟ ಮಾನದಂಡಗಳು ಮತ್ತು ಅಭ್ಯಾಸಗಳನ್ನು ನಾವು ಹೊಂದಿರಬೇಕು. ಎಫ್ ಬಿ ಹೊಸ ಸಿಗರೇಟ್ ಆಗಿದೆ ಮತ್ತು ಇದು ವ್ಯಸನಕಾರಿಯಾಗಿದೆ, ಇದು ನಮಗೆ ಅಹಿತವಾಗಿದ್ದು ನಮ್ಮ ಮಕ್ಕಳನ್ನು ಇದಕ್ಕೆ ತಳ್ಳುತ್ತಿದೆ. ನಾವು ಸೆಕ್ಷನ್ 230 ನ್ನು ರದ್ದು ಪಡಿಸುವ ಅಗತ್ಯವಿದೆ," ಎಂದು ಅವರು ಟ್ವೀಟರ್ ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಕಾಯ್ದೆ ಹೇಳುವುದೇನು?

ಕಾಯ್ದೆ ಹೇಳುವುದೇನು?

1996 ರ ಯುಎಸ್ ಸಂವಹನ ಸಭ್ಯತೆ ಕಾಯ್ದೆ ಸೆಕ್ಷನ್ 230 ರ ಅಡಿಯಲ್ಲಿ ಯಾವುದೇ ಸಾಮಾಜಿಕ ಜಾಲತಾಣಕ್ಕೆ ತನ್ನ ಬಳಕೆದಾರರು ಪೋಸ್ಟ್ ಮಾಡಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ವಯಂಚಾಲಿತ ಹೊಣೆಗಾರಿಕೆ ನೀಡಿ ಭದ್ರತೆಯನ್ನು ಒದಗಿಸುತ್ತದೆ.

ಅನಗತ್ಯ ಪ್ರಭಾವ ಬೀರುವ ಫೇಸ್ ಬುಕ್:

ಅನಗತ್ಯ ಪ್ರಭಾವ ಬೀರುವ ಫೇಸ್ ಬುಕ್:

ಸಿಎನ್ಎನ್ ಜೊತೆಗೆ ನಂತರ ಮಾತನಾಡಿದ ಸೇಲ್ಸ್ ಫೋರ್ಸ್ ನ ಮುಖ್ಯಸ್ಥ ಫೇಸ್ ಬುಕ್ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಇತರೆ ಕಂಪೆನಿಗಳನ್ನು ಕೂಡ ಅವರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಮತ್ತು ಸಹ-ಬೆರೆಯುವಿಕೆ ಪ್ರಾರಂಭವಾಗಿದೆ. ಇದರಿಂದಾಗಿ ಸದ್ಯದ ಅತೀದೊಡ್ಡ ಸಾಮಾಜಿಕ ವೇದಿಕೆಯಾಗಿ ಅನಗತ್ಯ ಪ್ರಭಾವವನ್ನು ಫೇಸ್ ಬುಕ್ ಹೊಂದಿದೆ. ಇದು ಒಡೆಯಬೇಕು ಅಥವಾ ಬೇರ್ಡಪಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಕೇವಲ ಬೆನಿಯೋಫ್ ಮಾತ್ರವಲ್ಲ ಹಲವಾರು ಯುಎಸ್ ಕಾನೂನು ತಜ್ಞರು ಕೂಡ ಫೇಸ್ ಬುಕ್ ನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಕಮಲಾ ಹ್ಯಾರಿಸ್ ಮತ್ತು ಎಲಿಜಬೆತ್ ವಾರೆನ್ ಕೂಡ ಇದರಲ್ಲಿ ಪ್ರಮುಖರು.

ವಾರೆನ್ ಅವರು ಯಶಸ್ವಿಯಾಗಿ ಸಾಮಾಜಿಕ ಮೀಡಿಯಾ ಫ್ಲ್ಯಾಟ್ ಫಾರ್ಮ್ ನಲ್ಲಿ ನಕಲಿ ಜಾಹೀರಾತನ್ನು ರನ್ ಮಾಡುತ್ತಿದ್ದು ಅದರಲ್ಲಿ ಮಾರ್ಕ್ ಜ್ಯೂಕ್ ಬರ್ಗ್ ಮತ್ತು ಫೇಸ್ ಬುಕ್ ಡೊನಾಲ್ಡ್ ಟ್ರಂಪ್ ಅವರ ಮರುಚುನಾವಣೆಗೆ ಫೇಸ್ ಬುಕ್ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.

ಹೋರಾಟ:

ಹೋರಾಟ:

ಜ್ಯೂಕ್ ಬರ್ಗ್ ಈ ನಿಟ್ಟಿನಲ್ಲಿ ಹೋರಾಟ ಮಾಡುವುದಾಗಿ ತನ್ನ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ. ಒಂದು ವೇಳೆ ವಾರೆನ್ 2020 ರ ಎಲೆಕ್ಷನ್ ನಲ್ಲಿ ಗೆದ್ದು ತನ್ನ ಘೋಷಿತ ಫೇಸ್ ಬುಕ್ ನ್ನು ಒಡೆಯುವ ನಿರ್ಧಾರವನ್ನು ಮಾಡಿದ್ದೇ ಆದಲ್ಲಿ ಹೋರಾಟ ಖಚಿತ ಎಂದಿದ್ದಾರೆ ಜ್ಯೂಕ್ ಬರ್ಗ್.

ಒಟ್ಟಿನಲ್ಲಿ ಬೆನಿಯೋಫ್ ಹೇಳಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವುದು ಮಾತ್ರ ಸುಳ್ಳಲ್ಲ. ಫೇಸ್ ಬುಕ್ ನ್ನು ಇಷ್ಟು ದಿನ ಯಾರೂ ಕೂಡ ಸಿಗರೇಟಿಗೆ ಹೋಲಿಸಿರಲಿಲ್ಲ. ಇದೀಗ ಈ ರೀತಿ ಹೋಲಿಕೆ ಮಾಡಿರುವುದು ಕೆಲವರಿಗೆ ಖುಷಿಯಾದರೆ, ಫೇಸ್ ಬುಕ್ ಪ್ರಿಯರಿಗೆ ನಿರಾಸೆ ಉಂಟು ಮಾಡಿದೆ.

Most Read Articles
Best Mobiles in India

Read more about:
English summary
Facebook is as harmful as cigarette for kids, says report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X