ಕೇರಳ ಪ್ರವಾಹದ ಬಗ್ಗೆ ಕೀಳು ಕಾಮೆಂಟ್ ಮಾಡಿ ಕೆಲಸ ಕಳೆದುಕೊಂಡ!!

|
Help Kerala Flood victims using Paytm - KANNADA

ಮಾನವೀಯತೆ ಇನ್ನು ಉಳಿದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೇರಳ ಮತ್ತು ಕರ್ನಾಟಕದಲ್ಲಿ ವರುಣನ ರೌದ್ರಾವತಾರಕ್ಕೆ ಸಿಲುಕಿ ನಲುಗಿ ಹೋಗಿದ್ದವರ ಸಹಾಯಕ್ಕೆ ಇಡೀ ಮಾನವ ಸಮುದಾಯವೇ ನಿಂತಿದೆ. ಆದರೆ, ಇಲ್ಲೊರ್ವ ಪ್ರವಾಹ ಪೀಡಿತ ಸಂತ್ರಸ್ತರ ಬಗ್ಗೆ ಜಾಲತಾಣದಲ್ಲಿ ಕೀಳುಮಟ್ಟದ ಕಾಮೆಂಟ್ ಮಾಡಿದ್ದಾನೆ. ಜೊತೆಗೆ ಆ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಹೌದು, ಫೇಸ್‌ಬುಕ್‌ನಲ್ಲಿ ಪ್ರವಾಹ ಪೀಡಿತ ಸಂತ್ರಸ್ತರ ಬಗ್ಗೆ ಕೀಳುಮಟ್ಟದ ಕಾಮೆಂಟ್ ಮಾಡಿದ್ದ ಕೇರಳದ ವ್ಯಕ್ತಿಯೊಬ್ಬನಿಗೆ ಗಲ್ಫ್ ಕಂಪನಿಯೊಂದು ತಕ್ಷಣವೇ ಕೆಲಸದಿಂದ ವಜಾಗೊಳಿಸಿರುವ ಘಟನೆ ಗಲ್ಫ್‌ನಲ್ಲಿ ನಡೆದಿದೆ. ಕೇರಳ ಮೂಲದ ರಾಹುಲ್ ಸಿ.ಪಿ ಪೂತಲಟ್ಟು ಎಂಬ ಗಲ್ಫ್ ಉದ್ಯೋಗಿಯೋರ್ವ ತನ್ನಿಂದಾದ ಒಂದು ಪ್ರಮಾದಕ್ಕೆ ಉದ್ಯೋಗವನ್ನೇ ಕಳೆದುಕೊಂಡಿದ್ದಾನೆ.

ಕೇರಳ ಪ್ರವಾಹದ ಬಗ್ಗೆ ಕೀಳು ಕಾಮೆಂಟ್ ಮಾಡಿ ಕೆಲಸ ಕಳೆದುಕೊಂಡ!!

ಫೇಸ್‌ಬುಕ್‌ನಲ್ಲಿ ತಿಳಿದೋ ಅಥವಾ ತಮಾಷೆಗೋ ಪ್ರವಾಹ ಪೀಡಿತ ಸಂತ್ರಸ್ತರ ಅಣಕಿಸಿ ಸಾಮಾಜಿಕ ಅಸಭ್ಯತೆಯನ್ನು ತೋರಿಸುವಂತಹ ಕಾಮೆಂಟ್ ಹಾಕಿ ಈತ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. ಹಾಗಾದರೆ, ಏನಿದು ವರದಿ? ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸುವಂತಹ ಯಾವ ಕಮೆಂಟ್ ಅನ್ನು ಆತ ಮಾಡಿದ್ದ ಎಂಬುದನ್ನು ಮುಂದೆ ತಿಳಿಯಿರಿ.

ಏನಿದು ಘಟನೆ?

ಏನಿದು ಘಟನೆ?

ಕೇರಳ ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಡುವ ಜೊತೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಸಹ ಕಳುಹಿಸಿಕೊಡಿ. ಈ ಕಷ್ಟದ ಸಮಯದಲ್ಲಿ ಮಹಿಳೆಯರಿಗೆ ಆಗುವ ತೊಂದರೆ ಹೆಚ್ಚಿರುತ್ತದೆ. ಇದು ನಾಚಿಕೆಯ ವಿಷಯವಲ್ಲ. ಅವರಿಗೆ ನಾಚಿಕೆಯಾಗದಂತೆ ಸಹಾಯ ಮಾಡಬೇಕು ಎಂಬ ಪೋಸ್ಟ್ ಒಂದು ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು.

ಕೀಳುಮಟ್ಟದ ಕಾಮೆಂಟ್!

ಕೀಳುಮಟ್ಟದ ಕಾಮೆಂಟ್!

ಮಾನವೀಯತೆಯ ದೃಷ್ಟಿಯಿಂದ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮಾಡಲಾಗಿದ್ದ ಈ ಪೋಸ್ಟ್‌ಗೆ ರಾಹುಲ್ ಎಂಬುವವ "ಸ್ವಲ್ಪ ಕಾಂಡೋಮ್ ಕೂಡ ಕಳುಹಿಸಿದರೆ ಹೇಗೆ" ಎಂದು ರಾಹುಲ್ ಸಿ.ಪಿ ಪೂತಲಟ್ಟು ಕಾಮೆಂಟ್ ಮಾಡಿದ್ದ. ಈ ಕಾಮೆಂಟ್ ಅನ್ನು ನೋಡಿದ ಕೇರಳಿಗರು ಕೆರಳಿದ್ದರು. ಆತನನ್ನು ಕೆಲಸದಿಂದ ತೆಗೆಯುವಂತೆ ಸ್ಕ್ರೀನ್‌ಶಾಟ್ ಹಿರಿಬಿಟ್ಟು ಒತ್ತಾಯಿಸಿ ಪ್ರತಿಭಟಿಸಿದ್ದರು.

ಕೆಲಸ ಕಳೆದುಕೊಂಡ ಕಾಂಡೋಮ್ ಮ್ಯಾನ್!

ಕೆಲಸ ಕಳೆದುಕೊಂಡ ಕಾಂಡೋಮ್ ಮ್ಯಾನ್!

ಒಮಾನ್‌ ಮೂಲದ ಲುಲು ಗ್ರೂಪ್ ಇಂಟರ್ ನ್ಯಾಶನಲ್ ನ ಶಾಖೆಯಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಹುಲ್ ಸಿ.ಪಿ ಪೂತಲಟ್ಟುವಿನ ಈ ಘಟನೆ ಕಂಪೆನಿಗೂ ತಿಳಿದಿದೆ. ಕೇವಲ ಒಂದೇ ದಿನದಲ್ಲಿ ಕಾಂಡೋಮ್ ಮ್ಯಾನ್ ಎಂದು ಹೆಸರು ಪಡೆದ ರಾಹುಲ್ ಸಿ.ಪಿ ಅವನನ್ನು ಲುಲು ಗ್ರೂಪ್ ಕಂಪೆನಿ ಕೆಲಸದಿಂದ ವಜಾ ಮಾಡಿರುವ ಬಗ್ಗೆ ನೋಟಿಸ್ ನೀಡಿದೆ.

ನೋಟಿಸ್ ನೀಡಿರುವುದು ಹೇಗೆ?

ನೋಟಿಸ್ ನೀಡಿರುವುದು ಹೇಗೆ?

ಕೇರಳಪ್ರವಾಹ ಪರಿಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕೀಳುಮಟ್ಟದ ಕಾಮೆಂಟ್ ಹಿನ್ನೆಲೆಯಲ್ಲಿ ನಿಮ್ಮನ್ನು ತಕ್ಷಣಕ್ಕೆ ಜಾರಿಯಾಗುವಂತೆ ಕೆಲಸದಿಂದ ವಜಾ ಮಾಡಲಾಗಿದೆ. ಕೂಡಲೇ ನಿಮ್ಮ ರಿಪೋರ್ಟಿಂಗ್ ಮ್ಯಾನೇಜರ್‌ಗೆ ಕಚೇರಿ ನಿರ್ವಹಣೆಯ ಎಲ್ಲಾ ಜವಾಬ್ದಾರಿಗಳನ್ನು ವರ್ಗಾಯಿಸಿ ಫೈನಲ್ ಸೆಟಲ್ ಮೆಂಟ್ ಮಾಡಿಕೊಂಡು ಹೋಗಬೇಕು ಎಂದು ಸೂಚಿಸಿದೆ.

ಕಂಪೆನಿ ಹೇಳಿದ್ದೇನು?

ಕಂಪೆನಿ ಹೇಳಿದ್ದೇನು?

ಈ ಪ್ರಕರಣದ ಬಗ್ಗೆ ಮಾತನಾಡಿರುವ ಲುಲು ಗ್ರೂಮ್ ಪ್ರಧಾನ ಸಂವನ ಅಧಿಕಾರು, ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಾವು ಸಮಾಜಕ್ಕೆ ಸ್ಪಷ್ಟ ಹಾಗೂ ದಿಟ್ಟ ನಿಲುವನ್ನು ತೋರಿಸಿದ್ದೇವೆ. ನಮ್ಮ ಸಂಸ್ಥೆ ಸದಾ ಮಾನವೀಯ ಮೌಲ್ಯಗಳಿಗೆಬೆಲೆ ನೀಡಿದೆ ಎಂದು ಹೇಳಿದ್ದಾರೆ.

ಕ್ಷಮೆ ಕೇಳಿದ ಭೂಪ!

ಕ್ಷಮೆ ಕೇಳಿದ ಭೂಪ!

ಇನ್ನು ಘಟನೆಯ ನಂತರ ರಾಹುಲ್ ಶನಿವಾರ ಫೇಸ್ ಬುಕ್ ನಲ್ಲಿ ಮತ್ತೊಂದು ವಿಡಿಯೋ ಫೋಸ್ಟ್ ಮಾಡಿ ಕ್ಷಮೆ ಕೇಳೀದ್ದಾನೆ.ನಾನು ಆ ಕಮೆಂಟ್ ಹಾಕಿರುವ ವೇಳೆ ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೇನೆಂಬ ಅರಿವು ಇರಲಿಲ್ಲ. ಯಾರಿನ್ನೂ ಬೇಸರಗೊಳಿಸುವ ಉದ್ದೇಶ ತನಗೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

Most Read Articles
Best Mobiles in India

English summary
After facing the heat for his remarks, Rahul apologised by posting a video on Facebook on Sunday, "I am really sorry for what I did. I was in an inebriated state when I posted that message. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more