ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್ ಬಳಕೆ ಹೇಗೆ? ಈ 5 ಟಿಪ್ಸ್ ಪಾಲಿಸಿ ಮೋಸಹೋಗದಿರಿ!!

ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ಬಿಡಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲಾ!!

Written By:

ಭಾರತದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಸಾವಿರಾರು ಪಟ್ಟು ಹೆಚ್ಚಾಗಿದೆ. ಇದರ ಜೊತೆಯಲ್ಲಿಯೇ ಆನ್‌ಲೈನ್‌ ಮೋಸವೂ ಸಹ ಹೆಚ್ಚಾಗಿದೆ.! ಹೌದು, ಭಾರತದಲ್ಲಿ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ಇತ್ತೀಚಿಗೆ ಕಾಲಿಡುತ್ತಿದ್ದು, ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕ್ರಿಮಿನಲ್‌ಗಳು ಜನರನ್ನು ಮೋಸಗೊಳಿಸುತ್ತಿದ್ದಾರೆ.!!

ಹಣ ರದ್ದಾದ ನಂತರ ದೇಶದಲ್ಲಿ ಸರಿಸುಮಾರು 1 ಲಕ್ಷಕ್ಕೂ ಆನ್‌ಲೈನ್ ಮೊಸದ ಕೇಸ್‌ಗಳು ದಾಖಲಾಗಿದ್ದುರುವುದು ಇದಕ್ಕೆ ಉದಾಹರಣೆಯಾಗಿದೆ. ಹಾಗಂತ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ಬಿಡಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲಾ . ಕಾಲ ಬದಲಾದಂತೆ ನಾವು ಬದಲಾಗಬೇಕಿದ್ದು, ತಂತ್ರಜ್ಞಾನದ ಹಿಂದೆ ಓಡಬೇಕಿದೆ.!!

ಓದಿರಿ: ಈ ಆಪ್ ಇದ್ದರೆ ಸ್ಮಾರ್ಟ್‌ಫೋನ್ ಕಳೆದುಹೋಗಲು ಸಾಧ್ಯವೇ ಇಲ್ಲ!!

ಹಾಗಾಗಿ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ನಡೆಸಲು ಕೆಲವೊಂದು ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಿಂದ ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ಮುನ್ನೆಚ್ಚರಿಕೆ ಕ್ರಮಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನಕಲಿ ಇ-ಮೇಲ್ಗಳು (ಫಿಷಿಂಗ್)

ಯಾವುದೇ ಕಾರಣಕ್ಕೂ ಬ್ಯಾಂಕಿನವರು ಗ್ರಾಹಕರೊಂದಿಗೆ ಇ-ಮೇಲ್ ವ್ಯವಹಾರ ನಡೆಸುವುದಿಲ್ಲ. ಹಾಗಾಗಿ, ಬ್ಯಾಂಗ್ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಇ-ಮೇಲ್ ಬಂದರೂ ಪ್ರತಿಕ್ರಿಯಿಸಬೇಡಿ. ಇದು ಸೈಬರ್ ಕ್ರಿಮಿನಲ್‌ಗಳು ಕೆಲಸವಾಗಿರುತ್ತದೆ. ಇಂತಹ ಇ ಮೇಲ್‌ಗಳಿಗೆ ನೀವು ಉತ್ತರಿಸಿದರೆ ನಿಮ್ಮ ಖಾತೆಯ ಮಾಹಿತಿ ಮತ್ತು ಹಣ ಸುಲಭವಾಗಿ ವಂಚಕರ ಪಾಲಾಗುತ್ತದೆ.!!

ಪಾಸ್‌ವರ್ಡ್

ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚು ನೆನಪಿರುವ ಮತ್ತು ಹೆಚ್ಚು ಬಳಕೆ ಮಾಡುತ್ತಿರುವ ಯೂಸರ್ ನೇಮ್/ಐಡಿ ಮತ್ತು ಪಾಸ್‌ವರ್ಡ್‌ ಅನ್ನೇ ಕೊಡಬಾರದು. ನಮ್ಮ ಖಾತೆಯ ಮಾಹಿತಿ ಮತ್ತು ಹಣದ ರಕ್ಷಣೆಗೆ ಆನ್‌ಲೈನ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್‌ ಹೆಚ್ಚು ಖಾಸಗಿಯಾಗಿರುವಂತಿರಬೇಕು.!!

ಅಧಿಕೃತ ತಾಣವೇ?

ಆನ್‌ಲೈನ್ ಬ್ಯಾಂಕಿಂಗ್ ಆರಂಭಿಸುವುದಕ್ಕೂ ಮುನ್ನ ನೀವು ಬಳಸುತ್ತಿರುವ ತಾಣ ಅಧಿಕೃತವಾದುದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ನಕಲಿ ಆನ್‌ಲೈನ್ ತಾಣಗಳು ನಮ್ಮ ಮಾಹಿತಿ ಪಡೆಯಲು ಲಾಗಿನ್ ಆಗಲು ಪ್ರೇರೇಪಿಸುತ್ತವೆ ಅವುಗಳಿಂದ ದೂರವಿರಿ.

ಸ್ಮಾರ್ಟ್‌ಫೋನ್ ರಕ್ಷಣೆ!!

ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ ಅನ್ನು ವೈರಸ್‌ಗಳಿಂದ ರಕ್ಷಣೆ ಮಾಡುವುದು ಅತ್ಯಗತ್ಯ. ಹ್ಯಾಕರ್‌ಗಳಿಂದ ಹುಟ್ಟಿರುವ ಇಂತಹ ವೈರಸ್ ತಂತ್ರಾಂಶಗಳು ಬ್ಯಾಂಕ್ ಖಾತೆಯ ಮಾಹಿತಿ ಪಡೆಯುವ ಸಾಧ್ಯತೆ ಇರುತ್ತದೆ.!! ಹಾಗಾಗಿ, ಆಂಟಿ ವೈರಸ್ ಉಪಯೋಗಿಸಬೇಕು ಜೊತೆಗೆ ಬ್ಯಾಂಕಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡಬೇಕು!!

ಒನ್‌ಟೈಮ್ ಪಾಸ್ವರ್ಡ್ ಉತ್ತಮ.!!

ಮೊಬೈಲ್ ನಂಬರನ್ನು ಬ್ಯಾಂಕಿನಲ್ಲಿ ನಮೂದಿಸಿದರೆ ನೋಂದಾಯಿತ ಫೋನ್ ನಂಬರಿಗೆ ಬರುವ ಕೋಡ್ ನಿಮ್ಮ ವ್ಯವಹಾರವನ್ನು ಸುರಕ್ಷಿತವಾಗಿಡುತ್ತದೆ. ಈ ಒನ್‌ಟೈಮ್ ಪಾಸ್ವರ್ಡ್ ಬಳಕೆಯಿಂದ ನಿಮ್ಮ ಹಣವನ್ನು ಅಷ್ಟು ಸುಲಭವಾಗಿ ಕದಿಯಲಾಗದು.!! ಈ ಎಲ್ಲಾ ಅಂಶಗಳು ಸುರಕ್ಷತಾ ಆನ್‌ಲೈನ್ ವ್ಯವಹಾರಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ, ಇದನ್ನು ಶೇರ್ ಮಾಡಿ ಇತರರಿಗೂ ಸಹಾಯ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ



English summary
So you think you're safe doing internet banking? to know more visit to kannada.gizbot.com
Please Wait while comments are loading...
Opinion Poll

Social Counting