ಆಂಡ್ರಾಯ್ಡ್'ನಲ್ಲಿ ನಿಮ್ಮ ನೆಚ್ಚಿನ ವಿನ್ಯಾಸದ ಲಾಕ್ ಸ್ಕ್ರೀನ್ ಕ್ರಿಯೇಟ್ ಮಾಡುವುದು ಹೇಗೆ?

ಈ ಕೆಳಗಿನ 5 ಹಂತಗಳ ಸಹಾಯದಿಂದ ನಿಮ್ಮದೇ ನಿಚ್ಚಿನ ಪ್ಯಾಟರ್ನ್‌ ಲಾಕ್‌ ಸ್ಕ್ರೀನ್‌ ಕ್ರಿಯೇಟ್ ಮಾಡುವುದು ಹೇಗೆ ತಿಳಿಯಿರಿ.

Written By:

ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾದ ಪ್ಯಾಟರ್ನ್ ಸ್ಕ್ರೀನ್‌ ಲಾಕ್‌ ಬಳಸುವುದು ದಿನೇ ದಿನೇ ಸ್ವಲ್ಪಕ್ಕಿಂತ ಹೆಚ್ಚಾಗೆ ಬೋರ್‌ ಆಗುತ್ತಿದೆ. ಆದ್ದರಿಂದ ನಾವೇ ನಮಗೆ ಬೇಕಾದ ರೀತಿಯಲ್ಲಿ ಪ್ಯಾಟರ್ನ್ ಸ್ಕ್ರೀನ್‌ ಲಾಕ್‌ ಅನ್ನು ಕ್ರಿಯೇಟ್ ಮಾಡಿಕೊಂಡರೇ ಇತ್ತ ಬೇಜಾರು ತಪ್ಪುತ್ತದೆ. ಹಾಗೆ ಇನ್ನೂ ಹೆಚ್ಚು ಸುರಕ್ಷಿತ ಲಾಕ್‌ ಸ್ಕ್ರೀನ್‌ ಅನ್ನು ಕೊಟ್ಟಿಕೊಳ್ಳಬಹುದು.

ಕೇವಲ ಒಂದು ಆಂಡ್ರಾಯ್ಡ್ ಕೂಲ್ ಆಪ್‌ನ ಮೂಲಕ ಯಾವ ವಿನ್ಯಾಸದಲ್ಲಿ ಬೇಕೋ ಆ ರೀತಿಯಲ್ಲಿ ಲಾಕ್‌ ಸ್ಕ್ರೀನ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ಹಂತ ಹಂತವಾಗಿ ಈ ಕೆಳಗೆ ಓದಿ ತಿಳಿಯಿರಿ.

ಆಂಡ್ರಾಯ್ಡ್ ಫೋನ್‌ ಕ್ಲೀನ್ ಮಾಡಿ ವೇಗಗೊಳಿಸುವುದು ಹೇಗೆ? ಕೇವಲ 5 ಹಂತಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಲಾಕ್‌ ಸ್ಕ್ರೀನ್‌ ಕ್ಲಬ್ ಆಪ್ ಫೀಚರ್‌ಗಳು

* ಸಾವಿರಾರು ಲಾಕ್‌ ಸ್ಕ್ರೀನ್‌ ಥೀಮ್‌ಗಳು ಆಂಡ್ರಾಯ್ಡ್ ಫೋನ್‌ಗಳಿಗೆ ಇವೆ.
* ಪೂರ್ಣ ಕಸ್ಟಮೈಜ್ ವಿಜೆಟ್‌ಗಳು ಡಿವೈಸ್‌ಗೆ ಲಭ್ಯ
* ಆಪ್‌ನಲ್ಲಿ ಪೂರ್ಣ ಎಚ್‌ಡಿ ಥೀಮ್‌ಗಳನ್ನು ಅಧ್ಬುತ ಕಲೆಯಲ್ಲಿ ಕ್ರಿಯೇಟ್ ಮಾಡಬಹುದು.
* ಪ್ರತಿ ಥೀಮ್‌ಗೆ ವಿವಿಧ ವರ್ಗಗಳಿದ್ದು, ಸುಲಭವಾಗಿ ಬ್ರೌಸ್ ಮಾಡಬಹುದು.
* ಮೈ ಲಾಕರ್ ಎಂಬ ಆಪ್‌ ಅನ್ನು ಲಾಕ್‌ ಸ್ಕ್ರೀನ್‌ ಕ್ರಿಯೇಟ್ ಮಾಡಲು ಬಳಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 1

ಕೂಲ್‌ ಆಂಡ್ರಾಯ್ಡ್ ಆಪ್‌ 'ಲಾಕ್‌ ಸ್ಕ್ರೀನ್‌ ಕ್ಲಬ್: ಎಚ್‌ಡಿ ಥೀಮ್ಸ್" ಅನ್ನು ನಿಮ್ಮ ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಬೇಕು.

ಹಂತ 2

ನಂತರದಲ್ಲಿ ಆಪ್‌ ನಿಮ್ಮ ಖಾತೆಯೊಂದಿಗೆ ಲಾಗಿನ್‌ ಆಗಲು ಕೇಳುತ್ತದೆ. ಫೇಸ್‌ಬುಕ್‌ ಖಾತೆಯೊಂದಿಗೆ ಸುಲಭವಾಗಿ ಲಾಗಿನ್‌ ಆಗಬಹುದು.

ಹಂತ 3

ಇನ್‌ಸ್ಟಾಲ್ ಆದ ನಂತರ ಆಪ್‌ ಲಾಂಚ್ ಮಾಡಿ 'Crate a theme' ಎಂಬ ಆಪ್ಶನ್ ಟ್ಯಾಪ್‌ ಮಾಡಿ ಮತ್ತು ಥೀಮ್‌ ಸೆಟ್ ಮಾಡಲು 'Diffrent artist' ವಿನ್ಯಾಸ ಸೆಲೆಕ್ಟ್ ಮಾಡಿ.

ಹಂತ 4

ಈ ಹಂತದಲ್ಲಿ 'ಲೇಟೌಟ್ ಮತ್ತು ಅಪಿಯರೆನ್ಸ್' ಅನ್ನು ಹೊಂದಿಸಿ, ನಿಮ್ಮ ನೆಚ್ಚಿನ ಥೀಮ್‌ನ ಲಾಕ್ ಸ್ಕ್ರೀನ್‌ ಅನ್ನು ಕ್ರಿಯೇಟ್ ಮಾಡಬಹುದು.

ಹಂತ 5

ಕ್ರಿಯೇಟ್ ಮಾಡಿದ ನಂತರ ಟಿಕ್ ಚಿಹ್ನೆ ಇರುವಲ್ಲಿ ಕ್ಲಿಕ್ ಮಾಡಿದರೆ ಯಶಸ್ವಿ ಟಾಸ್ಕ್ ಮುಗಿದಂತೆ.

ಹಂತ 6

ನಿಮ್ಮ ನೆಚ್ಚಿನ ವಿನ್ಯಾಸದ ಲಾಕ್‌ ಸ್ಕ್ರೀನ್‌ ಥೀಮ್ ಯಶಸ್ವಿ ಆಗಿ ಕ್ರಿಯೇಟ್ ಆಗಿ ಸೇವ್‌ ಆಗಿರುತ್ತದೆ. ಸುಲಭವಾಗಿ ನಂತರ ಬಳಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
How To Create Your Own Lock Screen On Android. TO know more visit kannada.gizbot.com
Please Wait while comments are loading...
Opinion Poll

Social Counting