ಜಗತ್ತನ್ನೇ ಮಾರ್ಪಡಿಸಬಹುದಾದ ಫೇಸ್‌ಬುಕ್ 10 ನಿರ್ಧಾರಗಳೇನು?

By Shwetha
|

ಫೇಸ್‌ಬುಕ್‌ನ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್ ಎಫ್8 ಸ್ಯಾನ್‌ಫ್ರಾನಿಸ್ಕೋದಲ್ಲಿ ಬುಧವಾರ ನಡೆಯಲಿದ್ದು, ಫೇಸ್‌ಬುಕ್ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಈ ಕಾರ್ಯಾಗಾರದಲ್ಲಿ ತೆಗೆದುಕೊಳ್ಳಲಿದೆ.

ಫೇಸ್‌ಬುಕ್ ಮೆಸೆಂಜರ್ ಅನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿ ಪರಿವರ್ತಿಸಲಿದ್ದು, ವೀಡಿಯೊ ಶೇರಿಂಗ್ ಮತ್ತು ಹಲವು ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನೊದಗಿಸುವ ವೇದಿಕೆಯಾಗಿ ಇದು ಮಾರ್ಪಡಲಿದೆ. ಇಷ್ಟಲ್ಲದೆ ಇನ್ನಷ್ಟು ಮಹತ್ವದ ನಿರ್ಧಾರಗಳನ್ನು ಫೇಸ್‌ಬುಕ್ ತನ್ನ ಪ್ರಗತಿಗಾಗಿ ತೆಗೆದುಕೊಳ್ಳಲಿದ್ದು ಅದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

600 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮೆಸೆಂಜರ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿ ಪರಿವರ್ತನೆಗೊಳ್ಳಲಿದೆ. ವೀಡಿಯೊ ಶೇರಿಂಗ್ ಮತ್ತು ಇನ್ನಿತರ ಚಟುವಟಿಕೆಗಳನ್ನು ನಾವು ಇದರಲ್ಲಿ ಕೈಗೊಳ್ಳಬಹುದಾಗಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಖರೀದಿಗಳನ್ನು ಮಾಡುವಾಗ ವ್ಯಾವಹಾರಿಕವಾಗಿ ಬಳಕೆದಾರರು ಮಾತನಾಡಬಹುದಾದ ಸುಯೋಗವನ್ನು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕಲ್ಪಿಸುತ್ತಿದೆ. ಫೇಸ್‌ಬುಕ್ ಪೇಮೆಂಟ್ ಸಿಸ್ಟಮ್ ಅನ್ನು ಈ ಅಪ್ಲಿಕೇಶನ್‌ನಲ್ಲಿ ಕಲ್ಪಿಸುತ್ತಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ನಿಮ್ಮ ವೆಬ್‌ಸೈಟ್‌ನಲ್ಲಿ ಜನರಿಗೆ ಕಮೆಂಟ್ ಮಾಡಲು ನೀವು ಅನುಮತಿಸಬಹುದಾಗಿದ್ದು, ಈ ಫೀಚರ್ ಮುಖ್ಯ ನವೀಕರಣವನ್ನು ಪಡೆದುಕೊಳ್ಳಲಿದೆ. ನಿಮ್ಮ ಕಮೆಂಟ್‌ಗಳು ಈ ಸೈಟ್‌ಗಳಲ್ಲಿ ನೈಜ ಸಮಯದಲ್ಲಿ ಗೋಚರವಾಗಲಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಯೂಟ್ಯೂಬ್‌ಗೆ ಪ್ರತಿಸ್ಪರ್ಧೆಯನ್ನು ಒಡ್ಡುವಂತೆ ನೆಟ್‌ವರ್ಕ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ವೆಬ್‌ನಲ್ಲೇ ಎಂಬೆಡ್ ಮಾಡಬಹುದಾಗಿದೆ. ಗೌಪ್ಯತಾ ನೀತಿಯನ್ನು ಅನುಸರಿಸುವ ವೀಡಿಯೊ ಮಾತ್ರವೇ ಎಂಬೆಡ್ ಮಾಡಬಹುದಾಗಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಬಹು ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿದ ಚಿತ್ರೀಕರಣಗಳನ್ನು ಸ್ಫೆರಿಕಲ್ ವೀಡಿಯೊಗಳು ಎಂದು ಫೇಸ್‌ಬುಕ್ ಘೋಷಿಸಿದ್ದು, ಈ ವೀಡಿಯೊಗಳನ್ನು ನ್ಯೂಸ್ ಫೀಡ್‌ನಲ್ಲೇ ನಿಮಗೆ ಪ್ರವೇಶಿಸಬಹುದಾಗಿದೆ ಮತ್ತು ಸಂಪೂರ್ಣ ವೀಡಿಯೊ ಕ್ಲಿಪ್ ಅನ್ನು ನಿಮಗೆ ವೀಕ್ಷಿಸಬಹುದಾಗಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಅಪ್ಲಿಕೇಶನ್‌ಗಳು ಉತ್ತಮ ಶೇರಿಂಗ್ ಅನುಭವವನ್ನು ನೀಡಬಹುದಾದ ಹೊಸ ಶೇರ್ ಶೀಟ್ ಅನ್ನು ಫೇಸ್‌ಬುಕ್ ಪ್ರಸ್ತುತಪಡಿಸಿದೆ. ತಾವು ಬಳಸುತ್ತಿರುವ ಇತರ ಅಪ್ಲಿಕೇಶನ್‌ನಿಂದ ಹೊರಹೋಗದೆಯೇ ಫೇಸ್‌ಬುಕ್ ಸ್ನೇಹಿತರಿಗೆ ಟ್ಯಾಗ್ ಮಾಡುವುದು ಅಥವಾ ಮೆಸೆಂಜರ್‌ನಲ್ಲಿ ಶೇರ್ ಮಾಡುವುದು ಮೊದಲಾದ ಕಾರ್ಯಗಳನ್ನು ಬಳಕೆದಾರರಿಗೆ ನಡೆಸಬಹುದಾಗಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುತ್ತಿರುವಾಗಲೇ ಅಪ್ಲಿಕೇಶನ್ ಆಮಂತ್ರಣಗಳನ್ನು ಕಳುಹಿಸುವ ತಂತ್ರವನ್ನು ಫೇಸ್‌ಬುಕ್ ಪ್ರಸ್ತುತಪಡಿಸುತ್ತಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಸಾಮಾಜಿಕ ತಾಣದ ಸಮಸ್ಯೆಗಳನ್ನು ನೀಗಿಸುವ ವೇದಿಕೆಯಾಗಿ ಪಾರ್ಸ್ ಅನ್ನು ಫೇಸ್‌ಬುಕ್ ಪರಿಚಯಿಸುತ್ತಿದ್ದು, ಯಾವ ವಿಷಯದಲ್ಲಿ ತಾಣ ಸೋಲುತ್ತಿದೆ ಎಂಬುದನ್ನು ಅರಿತು ಈ ನಿಟ್ಟಿನಲ್ಲಿ ವೇದಿಕೆ ಕಾರ್ಯತತ್ಪರವಾಗಲಿದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಡಿವೈಸ್‌ಗಳಾದ್ಯಂತ ತಮ್ಮ ಅಪ್ಲಿಕೇಶನ್‌ಗಳನ್ನು ಜನರು ಯಾವ ರೀತಿಯಲ್ಲಿ ಬಳಸುತ್ತಿದ್ದಾರೆ ಎಂಬುದನ್ನು ಡೆವಲಪರ್‌ಗಳಿಗೆ ತಿಳಿಸುವ ಟೂಲ್ ಅನಾಲಿಟಿಕ್ಸ್ ಆಗಿದೆ. ಮಾರುಕಟ್ಟೆ ಕ್ಯಾಂಪೈನ್‌ಗಳ ಪರಿಣಾಮವನ್ನು ಇದು ಅಳತೆ ಮಾಡುತ್ತದೆ.

ಫೇಸ್‌ಬುಕ್ 10 ನಿರ್ಧಾರಗಳು

ಫೇಸ್‌ಬುಕ್ 10 ನಿರ್ಧಾರಗಳು

ಮೊಬೈಲ್ ಡಿಸ್‌ಪ್ಲೇ ಜಾಹೀರಾತುಗಳ ಮೂಲಕ ದುಡ್ಡು ಮಾಡುವ ಒಂದು ವಿಧಾನವನ್ನು ಡೆವಲಪರ್‌ಗಳಿಗೆ ಇದು ಅನುಮತಿಸುತ್ತದೆ.

Best Mobiles in India

English summary
Facebook's annual developer conference F8 kicked off in San Francisco on Wednesday, and one of the strongest themes to be repeated through various announcements was consolidation of Facebook as an ecosystem, most clearly highlighted by the idea of the Facebook Messenger platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X