ಕಂಪ್ಯೂಟರ್‌ನಲ್ಲಿ ಕಳೆದ ಫೈಲ್ ಹುಡುಕುವುದು ಹೇಗೆ ಗೊತ್ತಾ..?
ಇಂದಿನ ದಿನದಲ್ಲಿ ಕಂಪ್ಯೂಟರ್ ನಲ್ಲಿ ನಾವು ಹೆಚ್ಚಿನ ಪ್ರಮಾಣದ ಡೇಟಾವನ್ನು ಸೇವ್ ಮಾಡಿ ಇಡುತ್ತೇವೆ. ಅಲ್ಲದೇ ಕ್ಲೌಡ್ ಸ್ಟೋರೆಜ್ ನಲ್ಲಿಯೂ ನಮ್ಮ ಮಾಹಿತಿಗಳನ್ನು ಸೆಕ್ಯೂರ್ ಮಾಡುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಫೈಲ್ ಗಳ ಪ್ರಮಾಣವು ಹೆಚ್ಚಾಗುವ ಸಂದರ್ಭದಲ್ಲಿ ಆವುಗಳನ್ನು ಹುಡುಕುವುದು ಕಷ್ಟ ಸಾಧ್ಯವಾಗಲಿದೆ.

ಈ ಹಿನ್ನಲೆಯಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿ ಮಿಸ್ ಆದ ಫೈಲ್ ಗಳನ್ನು ಹುಡುಕುವುದು ಹೇಗೆ ಎಂದು ತಿಳಿಸುವ ಪ್ರಯತ್ನವು ಇದಾಗಿದೆ. ಇದರಿಂದಾಗಿ ನೀವು ಕಂಪ್ಯೂಟರ್ ನಲ್ಲಿ ಸೇವ್ ಮಾಡಿ ಫೈಲ್ ಗಳನ್ನು ಹುಡುಕಬಹುದಾಗಿದೆ.
1) ಲೋಕೆಷನ್ ರಿಸೆಂಟ್ ಸೇವ್ಡ್ ಫೈಲ್ಸ್:
ನಿಮ್ಮ ಮೈಕ್ರೋ ಸಾಫ್ಟ್ ಎಕ್ಸ್ ಎಲ್ ಇಲ್ಲವೇ ವರ್ಡ್ ಫಾರ್ಮೆಟ್ ನಲ್ಲಿ ನೀವು ಸೇವ್ ಮಾಡಿದ ಫೈಲ್ ಅನ್ನು ಹುಡುಕುವ ಸಂದರ್ಭದಲ್ಲಿ ಅವುಗಳನ್ನು ಲೋಕೆಷನ್ ರಿಸೆಂಟ್ ಸೇವ್ಡ್ ಫೈಲಿನಲ್ಲಿ ಹುಡುಕಬಹುದಾಗಿದೆ. ಇಲ್ಲಿ ನೀವು ಇತ್ತೀಚೆಗೆ ಸೇವ್ ಮಾಡಿದ ಫೈಲ್ ಗಳ ಲಿಸ್ಟ್ ವೊಂದು ಕಾಣಿಸಿಕೊಳ್ಳಲಿದೆ. ಇದರಿಂದಾಗಿ ನಿಮ್ಮ ಕಾರ್ಯವು ಸಲುಭವಾಗಲಿದೆ.
2) ವಿಂಡೋಸ್ ನಲ್ಲಿ ಸರ್ಚ್ ಮಾಡಿ:
ಇದಲ್ಲದೇ ನಿಮ್ಮ ವಿಂಡೋಸ್ ನಲ್ಲಿ ಇರುವ ಸರ್ಚ್ ಆಯ್ಕೆಯಲ್ಲಿಯೂ ನೀವು ಕಳೆದ ಫೈಲ್ ಅನ್ನು ಹುಡುಕಬಹುದಾಗಿದೆ. ಅಲ್ಲದೇ ಅವುಗಳ ಹೆಸರನ್ನು ಹಾಕಬೇಕಾಗಿದೆ. ಆ ಹೆಸರನ್ನು ದಾಖಲು ಮಾಡಿದರೆ ಸಾಕು ಆ ಹೆಸರಿನಲ್ಲಿ ಸೇಲ್ ಆಗಿರುವ ಎಲ್ಲಾ ಫೈಲ್ ಗಳು ಮಾಹಿತಿಯೂ ನಿಮಗೆ ದೊರೆಯಲಿದೆ.
3) ಡಾಕ್ಯೂಮೆಂಟ್ ಹುಡುಕುವುದು:
ನಿಮಗೆ ಹೆಸರು ತಿಳಿಯಲಿಲ್ಲ ಎನ್ನುವುದಾದರೆ ಯಾವ ಫಾರ್ಮೆಟ್ ಅನ್ನುವುದನ್ನು ದಾಖಲು ಮಾಡಿದರೆ ಸಾಕು ಅದಕ್ಕೆ ಕುರಿತಂತೆ ವಿಷಯಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನೀವು ವಿಂಡೋಸ್ ಸರ್ಚ್ ನಲ್ಲಿಯೇ ಹಾಕಬೇಕಾಗಿದೆ. ಇದರಿಂದಾಗಿ ನಿಮ್ಮ ಫೈಲ್ ಗಳು ಕಂಪ್ಯೂಟರ್ ನಲ್ಲಿ ಎಲ್ಲಿದ್ದರೂ ಸಹ ದೊರೆಯಲಿದೆ ಎನ್ನಲಾಗಿದೆ. ನಿಮ್ಮ ಯಾವ ಮಾಹಿತಿ ಬೇಕಾದರೂ ಇಲ್ಲಿ ದೊರೆಯಲಿದೆ.
4) ಕರೋಟನದಲ್ಲಿ ಸರ್ಚ್:
ಇದಲ್ಲದೇ ನೀವು ವಿಂಡೋಸ್ ಕರೋಟನಾದಲ್ಲಿ ಯೂ ಸರ್ಚ್ ಮಾಡಬಹುದಾಗಿದೆ. ಇದರಲ್ಲಿ ನಿಮಗೆ ಬೇಕಾದ ಫೈಲ್ ಕುರಿತು ಮಾಹಿತಿಯನ್ನು ದಾಖಲು ಮಾಡಿದರೆ ಸಾಕು ಸರ್ಚ್ ನಲ್ಲಿ ನಿಮಗೆ ಬೇಕಾದ ಮಾಹಿತಿಯೂ ಲಭ್ಯವಾಗಲಿದೆ.


Click it and Unblock the Notifications








