ಎಚ್ಚರ ತಪ್ಪಿದರೆ ಹಣ ನುಂಗುತ್ತದೆ ಈ ಸ್ಕಿಮ್ಮಿಂಗ್ ಭೂತ!


ಇತ್ತೀಚಿನ ದಿನಗಳಲ್ಲಿ ಕ್ರಿಮಿನಲ್‌ಗಳು ಹೆಗೆಲ್ಲಾ ಮೋಸ ಮಾಡುತ್ತಾರೆ ಎಂಬುದನ್ನು ಅರಿಯಲು ಸಾಧ್ಯವಿಲ್ಲ. ಅದರಲ್ಲಿ ಒಂದು ಇತ್ತಿಚಿಗೆ ವೈರಲ್ ಆಗಿರುವ ಸ್ಕಿಮ್ಮಿಂಗ್ ಭೂತ.! ಆನ್‌ಲೈನ್‌ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಬಗ್ಗೆ ನಾವೆಷ್ಟೇ ಜಾಗರೂಕತೆಯಿಂದ ಸಹ ಮೋಸಗಾರರು ನಮ್ಮನ್ನು ವಂಚಿಸುವಲ್ಲಿ ಸಫಲವಾಗುವ ಒಂದು ಮೋಸದ ಕಾರ್ಯ ಇದು.

ವಂಚಕರು ನಮಗೇ ತಿಳಿಯದಂತೆ ನಮ್ಮ ಹಣ ಕದಿಯುವ ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಈ ಸ್ಕಿಮ್ಮಿಂಗ್ ಭೂತ ಎಂಬ ಕುತಂತ್ರ ಇತ್ತೀಚಿಗೆ ನಡೆಯುತ್ತಿರುವ ಸಾಮಾನ್ಯ ಮೋಸವಾಗಿದ್ದು, ಪೊಲೀಸರು ಇಂತಹ ವಂಚನೆ ನಡೆಸುವ ಹಲವರನ್ನು ಸೆರೆ ಹಿಡಿದಿದ್ದಾರೆ. ಆದರೆ, ಇವರ ತಂಡ ಬಹಳ ದೊಡ್ಡದಾಗಿರುವುದರಿಂದ ವಂಚನೆಯನ್ನು ತಡೆಯಲು ಸಾಧ್ಯವಾಗಿಲ್ಲ.

ಹಾಗಾಗಿ, ನಾವು ಒಂದು ಕ್ಷಣ ಮೈ ಮರೆತರೂ ನಮ್ಮ ಬ್ಯಾಂಕ್‌ನಲ್ಲಿರುವ ಹಣವನ್ನು ಸುಲಭವಾಗಿ ದೋಚುತ್ತಿರುವ ಸ್ಕಿಮ್ಮಿಂಗ್ ಭೂತದ ಬಗ್ಗೆ ನಾವು ತಿಳಿಯಲೇಬೇಕಿದೆ. ಹಾಗಾಗಿ, ಇಂದಿನ ಲೆಖನದಲ್ಲಿ ಏನಿದು ಸ್ಕಿಮ್ಮಿಂಗ್ ಭೂತ? ವಂಚಕರು ನಮ್ಮ ಹಣವನ್ನು ಹೇಗೆ ಕದಿಯುತ್ತಾರೆ? ಮುನ್ನೆಚ್ಚರಿಕೆಗಳು ಯಾವುವು ಎಂಬ ಪೂರ್ಣ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸ್ಕಿಮ್ಮಿಂಗ್ ಒಂದು ಉಪಕರಣ.

ಸ್ಕಿಮ್ಮಿಂಗ್ ಒಂದು ಕಾರ್ಡ್‌ ರೀಡರ್‌ ಉಪಕರಣವಾಗಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಕೆದಾರರ ಡೇಟಾಗೆ ಕನ್ನ ಹಾಕಲಾಗುತ್ತಿದೆ. ಸ್ಕಿಮ್ಮಿಂಗ್ ಉಪಕರಣದ ಸಹಾಯದಿಂದ ಕಾರ್ಡ್‌ ಮಾಹಿತಿ ಪಡೆದು ಅದೇ ರೀತಿಯ ಡ್ಯೂಪ್ಲಿಕೇಟ್ ಎಟಿಎಂ ಕಾರ್ಡ್ ತಯಾರಿಸಿ ಹಣ ಎಗರಿಸಲಾಗುತ್ತದೆ.

ಸ್ಕಿಮ್ಮಿಂಗ್ ಉಪಕರಣ ಹೇಗಿರುತ್ತದೆ?

ನೀವು ಎಟಿಎಂಗೆ ಹೋಗಿ ಹಣ ಡ್ರಾ ಮಾಡಿದರೂ ಸಹ ನಿಮಗೆ ಅಲ್ಲಿ ಸ್ಕಿಮ್ಮಿಂಗ್ ಉಪಕರಣ ಇದೆ ಎಂಬುದೇ ಗೊತ್ತಾಗುವುದಿಲ್ಲ. ಏಕೆಂದರೆ, ನೀವು ಎಟಿಎಂ ಮಷಿನ್‌ನಲ್ಲಿ ಕಾರ್ಡ್ ಹಾಕುವ ಜಾಗದಲ್ಲಿಯೇ ಈ ಉಪಕರಣವನ್ನು ಅಳವಡಿಸಿರುತ್ತಾರೆ. ಮೇಲಿನ ಚಿತ್ರದಲ್ಲಿ ಹೇಗೆ ಎಂಬುದನ್ನು ಒಮ್ಮೆ ನೋಡಿ.

ಮೋಷನ್ ಸೆನ್ಸರ್ ಇರಬಹುದು.!

ಎಟಿಎಂ ನಂಬರ್ ಒತ್ತುವ ನ್ಯೂಮರಿಕ್ ಪ್ಯಾಡ್‌ ಮೇಲೆ ಪಾಸ್‌ವರ್ಡ್‌ ಎಂಟ್ರಿ ಮಾಡುವುದನ್ನು ಗ್ರಹಿಸಲು ಅದರ ಮೇಲ್ಭಾಗದಲ್ಲೇ ಟೇಪ್‌ ಅಂಟಿಸಿರುವ ಕ್ಯಾಮರಾ ಸಹಿತ ಮತ್ತೊಂದು ಉಪಕರಣವನ್ನು ಅಳವಡಿಸಿರುವ ಬಗ್ಗೆಯೂ ಎಲ್ಲೆಡೇ ಮಾಹಿತಿ ಇದೆ. ಇದು ನಿಮ್ಮ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುತ್ತದೆ.

ಸ್ಕಿಮ್ಮಿಂಗ್‌ನಿಂದ ಬಚಾವಾಗುವುದು ಹೇಗೆ?

ಮ್ಮಿಂಗ್ ಉಪಕರಣದ ಸಹಾಯದಿಂದ ಕಾರ್ಡ್‌ ಮಾಹಿತಿ ಪಡೆದರೂ ಕೂಡ ಪಾಸ್‌ವರ್ಡ್‌ ಇಲ್ಲದೇ ಖದೀಮರಿಗೆ ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಅವರು ಕ್ಯಾಮೆರಾವನ್ನು ಎಲ್ಲಾದರೂ ಮುಚ್ಚಿಟ್ಟಿರಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ ಎಂಟ್ರಿ ಮಾಡುವ ವೇಳೆ ಇನ್ನೊಂದು ಹಸ್ತವನ್ನು ಅಡ್ಡ ಹಿಡಿದು ಪಿನ್ ಒತ್ತಿರಿ.

ಅನುಮಾನಾಸ್ಪದವಾಗಿದ್ದರೆ ಚೆಕ್‌ ಮಾಡಿ!

ಎಟಿಎಂ ಯಂತ್ರದ ಮೇಲೆ ಅಥವಾ ಸುತ್ತ ಮುತ್ತ ಏನಾದರೂ ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಆ ಬಗ್ಗೆ ಎಚ್ಚರಿಕೆ ವಹಿಸಿ.!ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ಅನ್ನು ಕರೆದು ಈ ಬಗ್ಗೆ ಮಾಹಿತಿ ತಿಳಿಸಿ. ಮತ್ತು ಯಾವುದೇ ಕಾರಣಕ್ಕೂ ಅಲ್ಲಿ ಹಣ ತೆಗೆಯುವ ಸಾಹಸಕ್ಕೆ ಮುಂದಾಗಬೇಡಿ.


Read More About: fraud credit card online internet
Have a great day!
Read more...

English Summary

The bank told us that the transactions were made using my debit card number. However, the strange thing is that my debit card number was never lost or stolen.to know more visit to kannada.gizbot.com