ನಿಮ್ಮ ಸ್ಮಾರ್ಟ್ಫೋನ್ ಸುರಕ್ಷಿತವಾಗಿರಲು ಈ ಕೆಲಸಗಳನ್ನು ಮೊದಲು ಮಾಡಿ!!
ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ, ಇಮೇಲ್ ಮುಂತಾದ ಎಲ್ಲಾ ಅತ್ಯಗತ್ಯ ಸುರಕ್ಷಿತ ದಾಖಲೆಗಳೆಲ್ಲವೂ ಸ್ಮಾರ್ಟ್ಫೋನ್ ಎಂಬ ಮಾಯಾ ಪೆಟ್ಟಿಗೆಯಲ್ಲಿ ಬೀಡುಬಿಟ್ಟಿವೆ. ಅದರ ಜತೆಗೆ ಫೋಟೊ, ವೀಡಿಯೊ, ಡಾಕ್ಯುಮೆಂಟ್ಗಳು ಮುಂತಾದ ಖಾಸಗಿ ಫೈಲುಗಳು ಕೂಡ ಸೇರಿಕೊಂಡು ಸ್ಮಾರ್ಟ್ಪೋನ್ ಎಂಬ ಸಾಧನ ಈಗ ನಮ್ಮ ಪ್ರತಿರೂಪವಾಗಿದೆ ಎನ್ನಬಹುದು.
ಒಂದು ವೇಳೆ ನಿಮ್ಮ ಫೋನ್ ಯಾರ ಕೈಗಾದರೂ ಸಿಕ್ಕಿಬಿಟ್ಟರೆ ಅವರು ನಿಮ್ಮ ಜನ್ಮ ಜಾಲಾಡಬಹುದಾದ ಎಲ್ಲಾ ಸಾಧ್ಯತೆಗಳನ್ನು ಊಹಿಸುವುದು ಕಷ್ಟವೇನಲ್ಲ. ಸ್ಮಾರ್ಟ್ಫೋನ್ನ ಅಗತ್ಯವೂ ಬಳಕೆಯೂ ಹೆಚ್ಚಾಗುವುದರೊಂದಿಗೆ ಅದರ ದುರ್ಬಳಕೆ ಕೂಡ ಜಾಸ್ತಿಯಾಗುತ್ತಿರುವದರಿಂದ ನಮ್ಮ ಸ್ಮಾರ್ಟ್ಪೋನ್ ಸುರಕ್ಷತೆ ಎಂಬುದು ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದು.

ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್ಫೋನ್ ಸುರಕ್ಷತೆಯ ಮೂಲ ವ್ಯವಸ್ಥೆ ಮತ್ತು ಅದರ ವಿಧಗಳ ಕುರಿತಾದ ಮಾಹಿತಿಗಳನ್ನು ನೀಡುವ ಪ್ರಯತ್ನ ನಮ್ಮದಾಗಿದೆ. ನಮ್ಮ ಫೋನ್ಗಳಲ್ಲಿಯೇ ಅಡಗಿರುವ ಸಾಮಾನ್ಯ ವೈಶಿಷ್ಟ್ಯಗಳಿಂದ ಹಿಡಿದು, ಅತ್ಯುತ್ತಮ ಸ್ಮಾರ್ಟ್ಫೋನ್ ರಕ್ಷಣಾ ಹಂತಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ತಿಳಿಯಿರಿ.

ಪಾಸ್ವರ್ಡ್ ಕದಿಯಲ್ಪಟ್ಟಿದೆಯಾ ತಿಳಿಯಿರಿ.!
ನಿಮ್ಮ ಪಾಸ್ವರ್ಡ್ ಕದಿಯಲ್ಪಟ್ಟಿದೆಯಾ ಅಥವಾ ಇಲ್ಲವಾ ತಿಳಿಯೋದು ಹೇಗೆ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ಈ ಸಮಸ್ಯೆಗೆ ಪರಿಹಾರವಿದೆ. ಪಾಸ್ ಪ್ರೊಟೆಕ್ಟ್ ಎಂಬ ಪ್ಲಗ್ ಇನ್ನಲ್ಲಿ ನೀವು ನೀಡಿದ ಈ ಪಾಸ್ ವರ್ಡ್ ಬಳಸುವುದು ನಿಮಗೆ ಹಿತವಲ್ಲದಿದ್ದರೆ ಡಾಟಾ ಬ್ರೀಚ್ ನಲ್ಲಿ ಈ ಪಾಸ್ವರ್ಡ್ ಗೋಚರಿಸಿರುವ ಬಗ್ಗೆ ಸಂದೇಶ ನೀಡುತ್ತದೆ.

ಸುಲಭ ಪಾಸ್ವರ್ಡ್ ನೀಡದಿರಿ.!
ಸುಲಭವಾಗಿ ನೆನಪಿನಲ್ಲಿರಲಿ ಎನ್ನೋ ಕಾರಣಕ್ಕೆ ಬಹಳ ಸುಲಭವಾದ ಪಾಸ್ವರ್ಡ್ನ್ನು ಬಳಸುವವರೇ ಹೆಚ್ಚಿದ್ದು, ಸೈಬರ್ ಕ್ರಿಮಿನಲ್ಗಳಿಗೆ ಇದನ್ನು ಕ್ರಾಕ್ ಮಾಡಲು ಕ್ಷಣ ಮಾತ್ರದಲ್ಲಿ ಸಾಧ್ಯವಾಗುತ್ತದೆ. 111111, 22222222, 33333333, 44444444, 55555555, 66666666, 77777777, 0987654321, 987654321 ಇಂತಹ ಪಾಸ್ವರ್ಡ್ ಬಳಸಬೇಡಿ.

ಮಾಲ್ವೇರ್ ಬೈಟ್ಸ್
ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಬ್ರೌಸರ್ ಸುರಕ್ಷತೆಗಾಗಿ ಇನ್ಸ್ಟಾಲ್ ಮಾಡಿಕೊಂಡಿರುವ ಟೂಲ್ಬಾರ್ಎಕ್ಸ್ಟೆನ್ಷನ್ಸ್ ಮಾಲ್ವೇರ್ ಬೈಟ್ಸ್ (Malwarebytes Anti-Exploit)ವೈರಸ್ ಮತ್ತು ಇತರೆ ಸೈಬರ್ ದಾಳಿಗಳಿಂದ ರಕ್ಷಣೆ ಒದಗಿಸುತ್ತಿದೆ. ಆದರೆ, ಟ್ರಯಲ್ ವರ್ಷನ್ನಲ್ಲಿರುವ ಪಾಪ್-ಅಪ್ ಬ್ಲಾಕರ್ಗಳು ಅನಿಮೇಟೆಡ್ ಮತ್ತು ಫ್ಲೋಟಿಂಗ್ ಆಡ್ಗಳನ್ನು ತಡೆಯಲಾರವು.

ಆಪ್ ಡೌನ್ಲೋಡ್ ಹುಷಾರು.
ಗೂಗಲ್ ಆಪ್ಸ್ಟೋರ್ನಲ್ಲಿರುವ ಆಪ್ಗಳ ಬಗ್ಗೆ ಎಚ್ಚರವಿರಲಿ. ಏಕೆಂದರೆ ಆಪ್ಸ್ಟೋರ್ನಲ್ಲಿರುವ ಶೇಕಡ 3 ಪರ್ಸೆಂಟ್ ಆಪ್ಗಳು ನಂಬಿಕೆಗೆ ಅರ್ಹವಾಗಿಲ್ಲ. ಆದರೆ, ಗೂಗಲ್ ಮಾತ್ರ ಇಂತಹ ಆಪ್ಗಳನ್ನು ಕಂಡುಹಿಡಿದು ನಿಷೇಧಿಸಲು ಸಾಧ್ಯವಿಲ್ಲ. ಹಾಗಾಗಿ, ಯಾವುದೇ ಆಪ್ ಡೌನ್ಲೋಡ್ ಮಾಡಬೇಕಾದರೆ ನೀವೆ ಎಚ್ಚರಿಕೆಯಿಂದರಬೇಕು.

ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ.
ಯಾವುದೋ ಗೊತ್ತಿಲ್ಲದ ಇ-ಮೇಲ್ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮನ್ನು ಸೈಬರ್ ಕ್ರಿಮಿನಲ್ಗಳು ಸಂಪರ್ಕಿಸಲು ಸಾಧ್ಯ. ಇದರಿಂದ ನಿಮ್ಮ ಮಾಹಿತಿ ಅವರ ಪಾಲಾಗುವುದು ಕ್ಷಣಮಾತ್ರದಲ್ಲಿ ಸಾಧ್ಯ. ಹಾಗಾಗಿ, ಅಪರಿಚಿತರು ಕಳುಹಿಸಿರುವ ತಿಳಿಯದ ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ ಎಂದು ಗೂಗಲ್ ಹೇಳಿದೆ.


ಪಾರ್ನ್ ನೋಡುವಾಗ ಎಚ್ಚರ!
ಜನರೆ ಮುಗಿಬಿದ್ದು ಭೇಟಿ ನೀಡುತ್ತುರವ ವೆಬ್ಸೈಟ್ಗಳೆಂದರೆ ಅವು ಪಾರ್ನ್ಸೈಟ್. ಇದನ್ನೇ ಎನ್ಕ್ಯಾಶ್ ಮಾಡಿಕೊಂಡು ಜನರಿಗೆ ಮೋಸಗೊಳಿಸುವ ಸಾಧ್ಯತೆ ಹೆಚ್ಚು. ಕೆಲವೊಂದು ಪಾರ್ನ್ಸೈಟ್ಳನ್ನು ಬಿಟ್ಟರೆ, ಉಳಿದ ಬಹುತೇಕ ಪಾರ್ನ್ಸೈಟ್ಗಳು ಮೋಸದ ಜಾಲದಲ್ಲಿ ತೊಡಗಿವೆ ಹುಷಾರು.

ಪ್ರೈವೇಟ್/ ಪೋರ್ನ್ ವಿಂಡೋ?
ಇಂಟರ್ನೆಟ್ ಬಳಕೆದಾರರ ಖಾಸಾಗಿತನವನ್ನು ಕಾಪಾಡುವ ವ್ಯವಸ್ಥೆಗೆ ಪ್ರೈವೇಟ್/ ಪೋರ್ನ್ ವಿಂಡೋ ಎಂದು ಕರೆಯುತ್ತಾರೆ. ಪ್ರೈವೇಟ್/ ಪೋರ್ನ್ ವಿಂಡೋ ತೆರೆದು ಇಂಟರ್ನೆಟ್ ಬಳಕೆ ಮಾಡಿದರೆ ನಿಮ್ಮ ಜಾಲತಾಣವನ್ನು ಇನ್ನೊಬ್ಬರು ನೋಡಲು ಸಾಧ್ಯವಿಲ್ಲ. ಅಂದರೆ ಗೂಗಲ್ ಕೂಡ ನಿಮ್ಮನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲಾ.

ಸಾಮಾನ್ಯ ವೈಶಿಷ್ಟ್ಯಗಳು!
ನಮ್ಮ ಸ್ಮಾರ್ಟ್ಫೋನಿನಲ್ಲಿಯೇ ಸ್ಕ್ರೀನ್ ಲಾಕ್ ಮಾಡಲು ಪಿನ್, ಪಾಸ್ವರ್ಡ್, ಪ್ಯಾಟ್ರಾನ್, ಫಿಂಗರ್ಪ್ರಿಂಟ್ ಮುಂತಾದ ಸ್ಮಾರ್ಟ್ಫೋನ್ ಅನ್ಲಾಕಿಂಗ್ ಮುಂತಾದ ತಂತ್ರಜ್ಞಾನ ವೈಶಿಷ್ಟ್ಯಗಳು ಇವೆ. ಇದು ಹೆಚ್ಚಿನವರಿಗೆ ತಿಳಿದಿದೆಯಾದರೂ, ಹೆಚ್ಚಿನ ಮಾಹಿತಿ ಜೊತೆಗೆ ಈ ಮಾಹಿತಿಗಳನ್ನು ಸಹ ಮತ್ತೊಮ್ಮೆ ತಿಳಿಸಿಕೊಡುವುದರಲ್ಲಿ ತಪ್ಪೇನಿಲ್ಲ ಅಲ್ಲವೇ?.

'ಸೆಕ್ಯುರಿಟಿ ಆಂಡ್ ಲೊಕೇಶನ್'!
ನಿಮ್ಮ ಸ್ಮಾರ್ಟ್ಫೋನ್ ತೆರೆದರೆ ಸೆಟ್ಟಿಂಗ್ಸ್ ತೆರೆದರೆ, 'ಸೆಕ್ಯುರಿಟಿ ಆಂಡ್ ಲೊಕೇಶನ್' ಎಂಬ ವಿಭಾಗವಿದೆ. 'ಡಿವೈಸ್ ಸೆಕ್ಯುರಿಟಿ' ಎಂಬಲ್ಲಿ 'ಸ್ಕ್ರೀನ್ ಲಾಕ್' ವಿಭಾಗಕ್ಕೆ ಹೋದರೆ, ಸ್ಕ್ರೀನ್ ಲಾಕ್ ಬೇಡ, ಸ್ವೈಪ್, ಎಂಬ ಆಯ್ಕೆಗಳಿರುತ್ತವೆ. ಇವುಗಳಿಂದ ಫೋನ್ ಲಾಕ್ ರಕ್ಷಣೆ ಸಾಧ್ಯವಿಲ್ಲದಿದ್ದರೂ, ಪಿನ್, ಪಾಸ್ವರ್ಡ್, ಪ್ಯಾಟರ್ನ್, ಫಿಂಗರ್ಪ್ರಿಂಟ್ ಆಯ್ಕೆಗಳು ನಿಮಗೆ ಸಹಾಯಕ.


Click it and Unblock the Notifications








