ಗೂಗಲ್‌ ಮ್ಯಾಪ್ಸ್‌ನಲ್ಲಿ ಹೊಸ ಫೀಚರ್‌..! ಮಾರ್ಗ ಬದಲಾದರೆ ಬರುತ್ತೆ ಅಲೆರ್ಟ್‌..!


ಕ್ಯಾಬ್‌ಗಳಂತಹ ಆಪ್‌ ಆಧಾರಿತ ಸೇವೆಗಳನ್ನು ಬಳಸುವುದು ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಾಗಿದೆ. ನೀವು ಇಂತಹ ಸೇವೆ ಬಳಸುತ್ತಿರವಾಗ ಕ್ಯಾಬ್‌ ಚಾಲಕ ನಕ್ಷೆಯಲ್ಲಿ ತೋರಿಸಿರುವ ನಿಖರ ಮಾರ್ಗವನ್ನು ಅನುಸರಿಸುತ್ತಿಲ್ಲ ಎಂದು ನಿಮಗೆ ಅನುಮಾನ ಬರುತ್ತದೆ. ಇದರ ಬಗ್ಗೆ ಚಾಲಕನನ್ನು ಪ್ರಶ್ನಿಸಿದರೆ, ಟ್ರಾಫಿಕ್‌ ಎಂಬ ಸಿದ್ಧ ಉತ್ತರ ದೊರೆಯುತ್ತದೆ. ಅಂತಹ ಸಂದರ್ಭಗಳಲ್ಲಿ, ಮ್ಯಾಪ್ಸ್‌ನಲ್ಲಿ ತೋರಿಸಿರುವ ಮಾರ್ಗದಿಂದ ಕಾರು ಬೇರೆ ಮಾರ್ಗದಲ್ಲಿ ಚಲಿಸಿದರೆ ಗೂಗಲ್‌ ಮ್ಯಾಪ್ಸ್‌ ನಿಮಗೆ ಎಚ್ಚರಿಕೆ ನೀಡುತ್ತದೆ. ಈ ಫೀಚರ್‌ ಕ್ಯಾಬ್‌, ಆಟೋ ಸೇವೆಗಳನ್ನು ಬಳಸುವ ಜನರಿಗೆ ಸೂಕ್ತವಾಗಿದೆ.

Advertisement

ನೀವು ಹೊಸ ಸ್ಥಳಕ್ಕೆ ಭೇಟಿ ನೀಡುತ್ತಿದ್ದರೆ ಮತ್ತು ಅಲ್ಲಿನ ಮಾರ್ಗಗಳ ಬಗ್ಗೆ ಗೂಗಲ್ ಮ್ಯಾಪ್ಸ್‌ನ್ನು ಅವಲಂಭಿಸಿದ್ದರೆ, ಗೂಗಲ್ ಮ್ಯಾಪ್ಸ್‌ನಲ್ಲಿ ಆಫ್-ರೂಟ್ ಎಚ್ಚರಿಕೆಗಳನ್ನು ಆನ್ ಮಾಡುವುದು ಮುಖ್ಯ, ಈ ಫೀಚರ್‌ ಮಾರ್ಗದಲ್ಲಿ ಬದಲಾವಣೆಯಾಗಿದೆ ಎಂಬುದನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು ನಿಮಗೆ ಅಧಿಸೂಚನೆ ಕಳುಹಿಸುತ್ತದೆ.

Advertisement
ಈ ಫೀಚರ್‌ನ್ನು ಹೇಗೆ ಸಕ್ರಿಯಗೊಳಿಸುವುದು ಎಂದು ನೀವು ಯೋಚಿಸುತ್ತಿದ್ದರೆ, ಮುಂದಿನ ಹಂತಗಳನ್ನು ಅನುಸರಿಸಿ.

1. ಮೊದಲು ಗೂಗಲ್ ಮ್ಯಾಪ್ಸ್‌ ತೆರೆಯಿರಿ, ಹೋಗುವ ವಿಳಾಸ ನಮೂದಿಸಿ ಮತ್ತು "ಡೈರೆಕ್ಷನ್ಸ್" ಬಟನ್ ಟ್ಯಾಪ್ ಮಾಡಿ

2. ನಂತರ, ಮೇಲೆ ಇರುವ ಡ್ರೈವಿಂಗ್ ಐಕಾನ್ ಟ್ಯಾಪ್ ಮಾಡಿ. ಮತ್ತು ಕೆಳಗೆ ಇರುವ "ಸ್ಟೇ ಸೇಫರ್‌" ಆಯ್ಕೆಯನ್ನು ಕ್ಲಿಕ್ ಮಾಡಿ.

3. ಸ್ಟೇ ಸೇಫರ್ ಆಯ್ಕೆಯಡಿಯಲ್ಲಿ, ನೀವು ಎರಡು ಆಯ್ಕೆಗಳನ್ನು ಪಡೆಯುತ್ತಿರಿ ಒಂದು ಶೇರ್‌ ಲೈವ್‌ ಟ್ರಿಪ್‌, ಮತ್ತೊಂದು ಗೆಟ್‌ ಆಫ್‌-ರೂಟ್‌ ಅಲೆರ್ಟ್ಸ್‌. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಫ್-ರೂಟ್ ಎಚ್ಚರಿಕೆಗಳನ್ನು ಸ್ವೀಕಾರ ಪ್ರಾರಂಭಿಸಲು "ಗೆಟ್‌ ಆಫ್-ರೂಟ್ ಅಲೆರ್ಟ್ಸ್‌" ಆಯ್ಕೆ ಟ್ಯಾಪ್ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತೋರಿಸಿರುವ ನಿರ್ದೇಶನಗಳನ್ನು ಆಧರಿಸಿ ಈ ಫೀಚರ್‌ ಕಾರ್ಯನಿರ್ವಹಿಸುತ್ತದೆ.

Best Mobiles in India

English Summary

Google Maps To Warn If Driver Takes A Wrong Route: Here's How To Activate.