Home
ಟೆಕ್ ನೌಕರಿ

ಯಾವುದೇ ಆಪ್‌ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಒಮ್ಮೊಮ್ಮೆ ಸ್ಲೋ ಆಗುತ್ತದೆ. ಕೆಲವೊಮ್ಮೆ ಕೆಲ ಆಪ್‌ಗಳು ಸ್ಲೋ ಆಗಿ ಕಾರ್ಯನಿರ್ವಹಣೆ ನೀಡುತ್ತವೆ. ಅಂತಹ ಸಮಯದಲ್ಲಿ ನೀವು ಫೋನಿನಲ್ಲಿರುವ ಆಪ್‌ಗಳ ಕ್ಯಾಶೆ ಕ್ಲಿಯರ್ ಮಾಡಿದರೆ ಈ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು. ಏಕೆಂದರೆ, ನೀವು ಬಳಸುವ ಆಪ್‌ಗಳಲ್ಲಿ ಅವುಗಳನ್ನು ಬಳಸಿದಷ್ಟೂ ಡಾಟಾ ವಿವರಗಳು ಶೇಖರವಾಗುತ್ತಾ ಹೋಗುವುದರಿಂದ ಅವುಗಳ ಕಾರ್ಯನಿರ್ವಹಣೆ ನಿಧಾನವಾಗಿರುತ್ತದೆ.

ಉದಾಹರಣೆಗೆ, ನೀವು ಯಾವುದೇ ಆಪ್ ಅನ್ನು ಹೆಚ್ಚು ಬಳಸಿದಾಗ ಅದು ಮನೆಯ ಕಸದ ಡಬ್ಬವು ತುಂಬಿಕೊಂಡಿರುವಂತಹ ಪರಿಸ್ಥಿತಿಯನ್ನು ಹೊಂದಿರುತ್ತದೆ. ಹಾಗಾಗಿ, ಆ ಕಸದ ಡಬ್ಬವನ್ನು ನೀವು ಖಾಲಿಮಾಡಬೇಕು. ಆ ನಂತರವಷ್ಟೇ ಮತ್ತೆ ನೀವು ಅದಕ್ಕೆ ಕಸ ಹಾಕಬಹುದು. ಹಾಗೆಯೇ, ಆಪ್‌ಗಳ ವಿಚಾರದಲ್ಲೂ ಕೂಡ ಹೀಗೆ ಆಗುತ್ತದೆ. ಯಾವಾಗಲೂ ಆಪ್‌ಗ ಕ್ಯಾಶೆ ಕ್ಲಿಯರ್ ಮಾಡುತ್ತಾ ಆಪ್‌ನ ಕಾರ್ಯನಿರ್ವಹಣೆಯನ್ನು ಹೆಚ್ಚಿಸಿಕೊಳ್ಳಬೇಕು.

ಯಾವುದೇ ಆಪ್‌ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?

ಈ ಸಮಸ್ಯೆ ನಿವಾರಣೆಯಾಗಬೇಕಾದರೆ ಹೀಗೆ ಮಾಡಬಹುದು. ನಿಮ್ಮ ಫೋನ್‌ ಸೆಟ್ಟಿಂಗ್ ತೆರೆದು ಹೋಗಿ. ಅದರಲ್ಲಿ ಆಪ್ಸ್ ಎಂಬಲ್ಲಿಗೆ ಬನ್ನಿ. ಅದನ್ನು ಒತ್ತಿ. ಆಪ್‌ಗಳ ವಿವರ ಬರುತ್ತದೆ. ನಂತರ ನೀವು ಡಾಟಾ ಕ್ಲಿಯರ್ ಮಾಡಬೇಕೆಂದುಕೊಂಡಿರುವ ಆಪ್‌ನ ಮೇಲೆ ಒತ್ತಿ. ಆಗ ಅದರಲ್ಲಿ ನೊಟಿಫಿಕೇಷನ್ ಮ್ಯಾನೇಜ್‌ಮೆಂಟ್‌, ಪರ್‌ಮಿಷನ್‌, ಡಾಟಾ ಯೂಸೇಜ್ ಸ್ಟೋರೇಜ್‌ ಅಂತೆಲ್ಲಾ ಇರುತ್ತದೆ. ಅದರಲ್ಲಿ ಸ್ಟೋರೇಜ್‌ ಆಯ್ಕೆ ಮಾಡಿ.

ಸ್ಟೋರೇಜ್‌ ಆಯ್ಕೆ ಮಾಡಿದ ನಂತರ ಅದರಲ್ಲಿ ಕ್ಲಿಯರ್ ಡಾಟಾ, ಕ್ಲಿಯರ್ ಕ್ಯಾಶೆ (ಅಥವಾ ಕ್ಯಾಶ್‌) ಎಂದಿರುತ್ತದೆ. ಅದನ್ನು ಕ್ಲಿಯರ್ ಮಾಡಿ. ಹೀಗೆ ಮಾಡಿದರೆ ಆ ಆಪ್‌ ಹೊಸದರಂತಾಗುತ್ತದೆ. ಹೀಗೆ ಮಾಡಿದ ನಂತರ ಆಪ್‌ನಲ್ಲಿ ನೀವು ನಡೆಸಿದ ಕಾರ್ಯಗಳೆಲ್ಲವೂ ಅಳಿಸಿಹೋಗಿರುತ್ತದೆ. ಇದರಿಂದ ಅದರ ಕಾರ್ಯನಿರ್ವಹಣೆಯ ವೇಗ ಕೂಡ ಹೆಚ್ಚಿರುತ್ತದೆ. ಆದರೆ, ನೆನಪಿಡಿ, ಕ್ಲಿಯರ್ ಡಾಟಾ ಒತ್ತಿದರೆ ಆ ಆಪ್‌ನಲ್ಲಿದ್ದ ಪಾಸ್ವರ್ಡ್, ಸೇರಿದಂತೆ ಇನ್ನಿತರ ವಿವರಗಳೆಲ್ಲವೂ ಅಳಿಸಿಹೋಗುತ್ತವೆ.

ಯಾವುದೇ ಆಪ್‌ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?

ಇನ್ನು ಅನೇಕ ಫೋನ್‌ಗಳಲ್ಲಿ ಫೋನ್‌ ಮ್ಯಾನೇಜರ್‌ ಎಂಬ ಆಪ್‌ ಇರುತ್ತದೆ. ಇದನ್ನು ಬಳಸಿದರೂ ಸಹ ನಿಮಗೆ ಅನುಕೂಲವಿದೆ. ಆದರೆ, ಮೇಲೆ ಹೇಳಿದ ರೀತಿಯಲ್ಲಿ ನೀವೇ ಖುದ್ದಾಗಿ ಆಪ್‌ಗಳ ಕ್ಯಾಶೆ ಕ್ಲಿಯರ್ ಮಾಡಿದರೆ ಸ್ಮಾರ್ಟ್‌ಫೋನ್ ಸ್ಲೋ ಆಗುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತಿಂಗಳಿಗೊಮ್ಮೆ ಇದೇ ರೀತಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಆಪ್‌ಗಳನ್ನು ಕ್ಲೋನ್ ಮಾಡಿಕೊಳ್ಳುತ್ತಿದ್ದರೆ ನಿಮಗೂ ಕ್ಷೇಮ ಎಂದು ಹೇಳಬಹುದು.

Best Mobiles in India

English summary
How to clear the app cache. Open the Settings of your phone. Tap the Storage heading to open its settings page. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+