Home
ಟೆಕ್ ನೌಕರಿ

ಮೊಬೈಲ್‌ನಲ್ಲಿ ಬರುವ ಜಾಹಿರಾತು ಕಿರಿಕಿರಿ ತಪ್ಪಿಸುವುದು ಹೇಗೆ?

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರಸ್ತುತ 330 ಕೋಟಿಗೂ ಹೆಚ್ಚು ಆಪ್‌ಗಳು ಲಭ್ಯ ಇವೆ. ಇದರಲ್ಲಿರುವ ಶೇ 80 ರಷ್ಟು ಆಪ್‌ಗಳು ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತವೆ. ಹೀಗೆ ಉಚಿತವಾಗಿ ದೊರೆಯುವ ಬಹುತೇಕ ಆಪ್‌ಗಳ ಆದಾಯ ಮೂಲ ಜಾಹೀರಾತುಗಳೇ ಆಗಿರುವುದರಿಂದ, ಯಾವ ಆಪ್‌ಗಳನ್ನು ಡೌನ್‌ಲೋಡ್ ಮಾಡಿದರೂ ಸಹ ನಮಗೆ ಕಿರಿಕಿರಿ ಉಂಟಾಗುವುದು ಸಹಜ.

ಉದಾಹರಣೆಗಾಗಿ, ಕಾಲರ್ ಐಡಿಗಾಗಿ ಇರುವ ಟ್ರೂ ಕಾಲರ್, ಮಾಹಿತಿ ಹಂಚಿಕೊಳ್ಳಲಿರುವ ಶೇರ್‌ಇಟ್‌ನಂತಹ ಬಹುತೇಕ ಆಪ್‌ಗಳು ಹೆಚ್ಚು ಸೇವೆಯನ್ನು ನೀಡುವುದರಿಂದ ಪ್ರತಿಯೊಬ್ಬ ಮೊಬೈಲ್ ಬಳಕೆದಾರ ಇಂಥಹ ಆಪ್‌ಗಳನ್ನು ತನ್ನ ಮೊಬೈಲ್‌ನಲ್ಲಿ ಇಟ್ಟುಕೊಂಡಿರುತ್ತಾನೆ. ಆದರೆ, ಅವುಗಳು ಮಾತ್ರ ಜಾಹೀರಾತುಗಳನ್ನು ನೀಡಿ ನಿಮಗೆ ಕಿರಿಕಿರಿಗೆ ಉಂಟುಮಾಡುತ್ತದೆ.

ಮೊಬೈಲ್‌ನಲ್ಲಿ ಬರುವ ಜಾಹಿರಾತು ಕಿರಿಕಿರಿ ತಪ್ಪಿಸುವುದು ಹೇಗೆ?

ಹಾಗಾಗಿ, ಯಾವುದೇ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿಯುವುದು ಒಳಿತು. ಒಂದು ವೇಳೆ ಅಂತಹ ಆಪ್ ಬೇಕೇ ಬೇಕು ಎಂದಾದಲ್ಲಿ, ಜಾಹೀರಾತುಗಳ ಇಂಥ ಕಿರಿಕಿರಿಯಿಂದ ಪಾರಾಗಲು ಇನ್ನೂ ಕೆಲವು ಮಾರ್ಗಗಳಿವೆ.ನಿಮ್ಮ ಫೋನಿನಲ್ಲಿ ಆಡ್ ಬ್ಲಾಕಿಂಗ್ ಆಪ್‌ಗಳ ಮೂಲಕವೂ ಜಾಹಿರಾತುಗಳನ್ನು ನಿರ್ಬಂಧಿಸಬಹುದಾಗಿದೆ.

ಪಾಪಪ್ ಆಡ್ ಟರ್ನ್‌ಆಫ್‌

ಪಾಪಪ್ ಆಡ್ ಟರ್ನ್‌ಆಫ್‌

ಆಂಡ್ರಾಯ್ಡ್ ಓಎಸ್‌ನಲ್ಲಿ ಬ್ರೌಸರ್ ಬಳಸುವಾಗ ಬರುವ ಪಾಪಪ್ ಆಡ್‍ಗಳನ್ನು ಅತ್ಯಂತ ಸುಲಭವಾಗಿ ಯಾವುದೇ ಆಪ್ ಇನ್‍ಸ್ಟಾಲ್ ಮಾಡದೆ ತಡೆಗಟ್ಟಬಹುದು. ಕ್ರೋಮ್ ಬಳಕೆದಾರರು ಸೆಟ್ಟಿಂಗ್ಸ್ ತೆರೆದು ಸೈಟ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಬೇಕು ಮತ್ತು ಪಾಪಪ್ ಅನ್ನು ಟರ್ನ್‌ಆಫ್‌ ಮಾಡಬೇಕು. ಇದಿರಿಂದ ನಿಮ್ಮ ಫೋನಿಗೆ ಬರುವ ಜಾಹೀರಾತುಗಳಿಗೆ ಕಡಿವಾಣ ಬೀಳುತ್ತದೆ.

ಆಡ್ ಬ್ಲಾಕ್ ಪ್ಲಸ್

ಆಡ್ ಬ್ಲಾಕ್ ಪ್ಲಸ್

ಉಚಿತವಾಗಿ ಲಭ್ಯವಿರುವ ಈ ಆಡ್ ಬ್ಲಾಕ್ ಪ್ಲಸ್ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಸೆಟ್ಟಿಂಗ್ಸ್‌ನಲ್ಲಿ ಅಪರಿಚಿತ ಮೂಲಗಳು (unknown sources) ಆನ್ ಮಾಡಿದರೆ ಸಾಕು. ನಿಮ್ಮ ಮೊಬೈಲ್‌ ಅನ್ನು ಪ್ರವೇಶಿಸುವ ಜಾಹಿರಾತುಗಳನ್ನು ತಡೆಯುತ್ತದೆ. ಆದರೆ, ಕಾಲಕಾಲಕ್ಕೆ ಆಪ್‌ನಿಂದ ನೀಡುವ ಅಪ್‌ಡೇಟ್‌ಳನ್ನು ಇನ್‍ಸ್ಟಾಲ್ ಮಾಡುವುದನ್ನು ಮಾತ್ರ ಮರೆಯಬಾರದು.

ಹೋಸ್ಟ್ ಫೈಲ್

ಹೋಸ್ಟ್ ಫೈಲ್

ಅತ್ಯಂತ ಪರಿಣಾಮಕಾರಿ ಆಡ್ ಬ್ಲಾಕರ್ ಇದಾಗಿದೆ. ಆದರೆ, ಇದರ ಬಳಕೆಯ ವಿಧಾನ ಸ್ವಲ್ಪ ಕಷ್ಟ. HOSTSFILE.MINE.NU ಸಹಾಯದಿಂದ ಒಂದು ಹೋಸ್ಟ್ ಎನ್ನುವ ಫೈಲ್ ಅನ್ನು ಕಂಪ್ಯೂಟರ್‌ನಲ್ಲಿ ನಿರ್ಮಿಸಿ. ನಂತರ ನಿಮ್ಮ ಪೋನಿನಲ್ಲಿ ಹೋಸ್ಟ್ ಫೈಲ್‌ ಸ್ಥಳವನ್ನು ಕಂಡುಕೊಂಡು ಸಿಸ್ಟಮ್ ರೂಟ್ ಡೈರೆಕ್ಟರಿಯಲ್ಲಿ ಪೇಸ್ಟ್ ಮಾಡಿ ಜಾಹೀರಾತುಗಳನ್ನು ನಿಲ್ಲಿಸಬಹುದು.

ಇನ್‌ಸ್ಟಾಲ್ ಮಾಡುವ ಮುನ್ನ

ಇನ್‌ಸ್ಟಾಲ್ ಮಾಡುವ ಮುನ್ನ

ಪ್ಲೇ ಸ್ಟೋರ್‌ನಲ್ಲಿ ಅದೆಷ್ಟೊ ಆಪ್‌ಗಳು ಜಾಹೀರಾತುಗಳಿಗಾಗಿಯೇ ಮೀಸಲಿರುತ್ತವೆ. ಅವುಗಳಲ್ಲಿ ಉಪಯುಕ್ತವಾದ ಆಪ್‌ಗಳನ್ನು ನೀವು ಇನ್‍ಸ್ಟಾಲ್ ಮಾಡುವಾಗ ಅನೇಕ ಅನುಮತಿಗಳ ಕೋರಿಕೆಯನ್ನು ಆಪ್ ನಿಮ್ಮ ಮುಂದಿಡುತ್ತದೆ. ಹಾಗಾಗಿ, ಇನ್‌ಸ್ಟಾಲ್ ಮಾಡುವ ಮುನ್ನ ಜಾಗರೂಕತೆಯಿಂದ ಆ ಮಾಹಿತಿಯನ್ನು ಓದಿ ನಂತರ ಅದಕ್ಕೆ ಅನುಮತಿಯನ್ನು ನೀಡಿ.

ಬ್ಲಾಕ್ ಮಾಡುವ ಮುನ್ನ

ಬ್ಲಾಕ್ ಮಾಡುವ ಮುನ್ನ

ಭಾರತದಲ್ಲಿ ಮೊಬೈಲ್ ಜಾಹೀರಾತು ಮಾರುಕಟ್ಟೆ 2018ರ ಕೊನೆಯಲ್ಲಿ ರೂ 12,046 ಕೋಟಿಗೂ ಹೆಚ್ಚು ವಹಿವಾಟು ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಕೆಲವು ಆಪ್‍ಗಳು ಜಾಹೀರಾತು ಕಳುಹಿಸುವಿಕೆಗೆ ತೊಡಕನ್ನು ಉಂಟು ಮಾಡುವವರಿಗೆ ಸೇವೆ ಕೂಡ ಸಿಗದಂತೆ ಮಾಡುತ್ತವೆ. ಇದರಿಂದ ನಿಮಗೆ ಕೆಲ ಸೇವೆಗಳು ಅಲಭ್ಯವಾಗುವ ಸಂಭವ ಹೆಚ್ಚಿರುತ್ತದೆ.

Best Mobiles in India

English summary
How To Block Ads In Android Apps, Games And Browsers. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+