Home
ಟೆಕ್ ನೌಕರಿ

ಅಮೇಜಾನ್ ಎಖೋ ಸಾಧನಗಳಿಗೆ ಕಸ್ಟಮ್ ಅಲೆಕ್ಸಾ ಸ್ಕಿಲ್ ಅಭಿವೃದ್ಧಿಪಡಿಸುವುದು ಹೇಗೆ?

By Tejaswini P G

ಎಖೋ ಸ್ಪೀಕರ್ಗಳನ್ನು ಲಾಂಚ್ ಮಾಡಿದ 3 ವರ್ಷಗಳ ನಂತರ ಅಮೇಜಾನ್ ಈ ಉತ್ಪನ್ನಗಳನ್ನು ಭಾರತಕ್ಕೆ ತಂದಿದೆ. ಅಮೇಜಾನ್ ಭಾರತದಲ್ಲಿ ಬಿಲ್ಟ್-ಇನ್ ಅಲೆಕ್ಸಾ ಹೊಂದಿರುವ ಎಖೋ, ಎಖೋ ಡಾಟ್ ಮತ್ತು ಎಖೋ ಪ್ಲಸ್ ಅನ್ನು ಬಿಡುಗಡೆಮಾಡಿದೆ.

ಅಮೇಜಾನ್ ಎಖೋ ಸಾಧನಗಳಿಗೆ ಕಸ್ಟಮ್ ಅಲೆಕ್ಸಾ ಸ್ಕಿಲ್ ಅಭಿವೃದ್ಧಿಪಡಿಸುವುದು ಹೇಗೆ?

ಅಲೆಕ್ಸಾ ಅಮೇಜಾನ್ ನ ವಾಯ್ಸ್ ಸರ್ವೀಸ್ ಆಗಿದ್ದು ಅಮೇಜಾನ್ ಎಖೋ ನಂತಹ ಹಲವು ಸಾಧನಗಳ ಬೆನ್ನೆಲುಬಾಗಿದೆ. ಇದು ಗ್ರಾಹಕರಿಗೆ ವಿವಿಧ ಸಾಮರ್ಥ್ಯಗಳನ್ನು ನೀಡುವ ಮೂಲಕ ಸ್ವಂತಿಕೆಯ ಅನುಭವವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಕೋಡಿಂಗ್ ನ ಜ್ಞಾನವಿಲ್ಲದವರೂ ಸಹ ಇದನ್ನು ಬಳಸಿ ಹೊಸ ಸ್ಕಿಲ್ಗಳನ್ನು ಸೃಷ್ಟಿಸಬಹುದಾಗಿದೆ.

ಅಮೇಜಾನ್ ಅಲೆಕ್ಸಾ ಸ್ಕಿಲ್ ಸೆಟ್ ಅನ್ನು ನೀಡುತ್ತಿದ್ದು, ಡಿಸೈನರ್ಗಳು, ಡೆವಲಪರ್ಗಳು ಮತ್ತು ಬ್ರ್ಯಾಂಡ್ಗಳು ಇದನ್ನು ಬಳಸಿ ಆಕರ್ಷಕ ಸ್ಕಿಲ್ ಗಳನ್ನು ಸೃಷ್ಟಿಸಿ ಹೊಸ ಗ್ರಾಹಕರನ್ನು ಸೆಳೆಯಬಹುದಾಗಿದೆ. ASK ಸ್ವಯಂ-ಸೇವೆಯ APIಗಳ ಸಂಕಲನವಾಗಿದ್ದು ಅಲೆಕ್ಸಾ ಗೆ ನಿಮ್ಮದೇ ಸ್ಕಿಲ್ ಗಳನ್ನು ಸೇರಿಸಲು ಸಹಾಯವಾಗುವಂತೆ ಅಗತ್ಯ ಟೂಲ್, ಡಾಕ್ಯುಮೆಂಟೇಶನ್ ಮತ್ತು ಸ್ಯಾಂಪಲ್ ಕೋಡ್ ಗಳನ್ನು ಹೊಂದಿದೆ. ಈ ಮೂಲಕ ವಾಯ್ಸ್ ಡಿಸೈನ್ ಕ್ಷೇತ್ರದಲ್ಲಿ ಅಮೇಜಾನ್ ಗಳಿಸಿರುವ ಜ್ಞಾನದ ಸದ್ಬಳಕೆಯನ್ನು ಮಾಡಬಹುದು.

ಅಮೇಜಾನ್ ಎಖೋ ಸಾಧನಗಳಿಗೆ ಕಸ್ಟಮ್ ಅಲೆಕ್ಸಾ ಸ್ಕಿಲ್ ಅಭಿವೃದ್ಧಿಪಡಿಸುವುದು ಹೇಗೆ?

ಈಗಾಗಲೇ ಭಾರತದಲ್ಲಿ ಝೊಮ್ಯಾಟೋ,ಟೈಮ್ಸ್ ಆಫ್ ಇಂಡಿಯಾ, ಓಲಾ, ಸಾವ್ನ್,ಗೋಐಬಿಬೋ ಮೊದಲಾದ ಬ್ರ್ಯಾಂಡ್ಗಳಿಂದ ಹಲವಾರು ಸ್ಕಿಲ್ ಸೆಟ್ ಗಳು ಲಭ್ಯವಿದೆ.

ಈ ಲೇಖನದಲ್ಲಿ ಎಖೋ ಸಾಧನಗಳಿಗೆ ಕಸ್ಟಮ್ ಸ್ಕಿ ಲ್ ಸೆಟ್ ಅಭಿವೃದ್ಧಿಪಡಿಸುವುದು ಹೇಗೆಂಬುದನ್ನು ನೋಡಲಿದ್ದೇವೆ.

ನಿಮಗೆ ತಿಳಿದಿರಬೇಕಾದ ವಿಷಯಗಳು

ಸ್ಕಿಲ್ ಸೆಟ್ ಅಭಿವೃದ್ಧಿಪಡಿಸಲುವ ಮೊದಲು ನೀವು ವಿವಿಧ ರೀತಿಯ ಸ್ಕಿಲ್ ಸೆಟ್ ಗಳು(ಕಸ್ಟಮ್, ಸ್ಮಾರ್ಟ್-ಹೋಮ್,ವೀಡಿಯೋ ಇತ್ಯಾದಿ) ಇವೆ ಮತ್ತು ಅದಕ್ಕೆ ವಿಭಿನ್ನ ಸರ್ವೀಸ್ ಗಳು ಬೇಕಾಗುತ್ತದೆ ಎಂದು ತಿಳಿದಿರಬೇಕು.

ಕಸ್ಟಮ್ ಸ್ಕಿಲ್ ಅಭಿವೃದ್ಧಿಪಡಿಸಲು ನೀವು ಒಂದು AWS ಲ್ಯಾಂಬ್ಡಾ ಫಂಕ್ಷನ್ ಅಥವಾ ವೆಬ್ ಸರ್ವೀಸ್ ಅನ್ನು ಬಳಸಬಹುದು.

AWS ಲ್ಯಾಂಬ್ಡಾ ಫಂಕ್ಷನ್ ಅಮೇಜಾನ್ ನ ಒಂದು ಸರ್ವೀಸ್ ಆಗಿದ್ದು, ಅದು ನಿಮಗೆ ಯಾವುದೇ ಸರ್ವರ್ಗಳನ್ನು ಮ್ಯಾನೇಜ್ ಮಾಡದೇ ನಿಮ್ಮ ಕೋಡ್ ಅನ್ನು ಕ್ಲೌಡ್ ನಲ್ಲಿ ರನ್ ಮಾಡಲು ಅನುವು ಮಾಡಿಕೊಡುತ್ತದೆ. ಅಲೆಕ್ಸಾ ನಿಮ್ಮ ಕೋಡ್ ಗೆ ಗ್ರಾಹಕರ ರಿಕ್ವೆಸ್ಟ್ಗಳನ್ನು ಕಳುಹಿಸುತ್ತದೆ. ನಿಮ್ಮ ಕೋಡ್ ಆ ರಿಕ್ವೆಸ್ಟ್ ಅನ್ನು ವಿಶ್ಲೇಷಿಸಿ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತದೆ. ನೀವು ನಿಮ್ಮ ಲ್ಯಾಂಬ್ಡಾ ಫಂಕ್ಷನ್ ಅನ್ನು node.js, ಜಾವಾ, ಪೈಥಾನ್ ಅಥವಾ C# ನಲ್ಲಿ ಬರೆಯಬಹುದು.

ನೀವು ನಿಮ್ಮದೇ ವೆಬ್ ಸರ್ವೀಸ್ ಅನ್ನು ಬರೆದು ಯಾವುದೇ ಕ್ಲೌಡ್ ಹೋಸ್ಟಿಂಗ್ ಪ್ರೊವೈಡರ್ ಮೂಲಕ ಹೋಸ್ಟ್ ಮಾಡಬಹುದು. ಇದಕ್ಕಾಗಿ ಅಲೆಕ್ಸಾ ನಿಮ್ಮ ರಿಕ್ವೆಸ್ಟ್ ಅನ್ನು ವೆಬ್ ಸರ್ವರ್ ಗೆ ಕಳುಹಿಸಿ ತಕ್ಕ ಪ್ರತಿಕ್ರಿಯೆಯನ್ನು ಕಳುಹಿಸುತ್ತದೆ. ನೀವು ನಿಮ್ಮ ವೆಬ್ ಸರ್ವೀಸ್ ಅನ್ನು ಯಾವುದೇ ಕೋಡಿಂಗ್ ಲ್ಯಾಂಗ್ವೇಜ್ ನಲ್ಲಿ ಬರೆಯಬಹುದು.

ನಿಮ್ಮ ಸರ್ವೀಸ್ ಅನ್ನು ಸೃಷ್ಟಿಸಿದ ನಂತರ ಆ ಸ್ಕಿಲ್ ಗೆ ಕಸ್ಟಮ್ ಇಂಟರ್ಯಾಕ್ಷನ್ ಮಾಡೆಲ್ ಅನ್ನು ಸೃಷ್ಟಿಸಬೇಕು. ನಿಮ್ಮ ಸ್ಕಿಲ್ ಯಾವ ರೀತಿಯ ರಿಕ್ವೆಸ್ಟ್ಗಳನ್ನು ಸ್ವೀಕರಿಸುತ್ತದೆ ಮತ್ತು ಗ್ರಾಹಕರು ಈ ರಿಕ್ವೆಸ್ಟ್ಗಳನ್ನು ನೀಡಲು ಯಾವ ಪದಗಳನ್ನು ಬಳಸಬೇಕು ಎಂಬುದನ್ನು ಅದು ನಿರ್ಧರಿಸುತ್ತದೆ.

ಈಗ ನಿಮ್ಮ ಮೊದಲ ಅಲೆಕ್ಸಾ ಸ್ಕಿಲ್ ಅಭಿವೃದ್ಧಿ ಪಡಿಸೋಣ. ಈ ಕೆಳಗಿರುವ ವೀಡಿಯೋ ಟ್ಯುಟೋರಿಯಲ್ ಅನ್ನು ನೋಡಲು ಮರೆಯದಿರಿ

ಹಂತ 1: ನಿಮ್ಮ ಅಲೆಕ್ಸಾ ಸ್ಕಿಲ್ ನ ತಯಾರಿ

ಹಂತ 1: ನಿಮ್ಮ ಅಲೆಕ್ಸಾ ಸ್ಕಿಲ್ ನ ತಯಾರಿ

ಮೊದಲಿಗೆ ಅಲೆಕ್ಸಾ ಸ್ಕಿಲ್ ತಯಾರಿಸಲು ಅಮೇಜಾನ್ ಅಲೆಕ್ಸಾ ಡೆವೆಲಪರ್ ಪೋರ್ಟಲ್ ಗೆ ಹೋಗಿ. developer.amazon.com/alexa ಗೆ ಹೋಗಿ ಸೈನ್ ಇನ್ ಮಾಡಿ

1.ಮೇಲಿರುವ "ಅಲೆಕ್ಸಾ" ಬಟನ್ ಕ್ಲಿಕ್ ಮಾಡಿ

2.ಅಲೆಕ್ಸಾ ಸ್ಕಿಲ್ ಸೆಟ್ ಕೆಳಗಿರುವ "ಗೆಟ್ ಸ್ಟಾರ್ಟೆಡ್" ಬಟನ್ ಕ್ಲಿಕ್ ಮಾಡಿ

3. ಪರದೆಯ ಮೇಲ್ಭಾಗದಲ್ಲಿ ಬಲಬದಿಯಲ್ಲಿರುವ "ಆಡ್ ನ್ಯೂ ಸ್ಕಿಲ್" ಮೇಲೆ ಕ್ಲಿಕ್ ಮಾಡಿ

ಇದು ನಿಮ್ಮ ಹೊಸ ಅಲೆಕ್ಸಾ ಸ್ಕಿಲ್ ನ ಮೊದಲ ಪೇಜ್ ಗೆ ಕರೆದೊಯ್ಯುತ್ತದೆ.

4. ಸ್ಕಿಲ್ ಇನ್ಫೊರ್ಮೇಶನ್ ಸ್ಕ್ರೀನ್ ತುಂಬಿಸಿ

ಸ್ಕಿಲ್ ಇನ್ಫೊರ್ಮೇಶನ್ : ಇದು ನಿಮ್ಮ ಸ್ಕಿಲ್ ಅನ್ನು ಗುರುತಿಸಲು ಸಹಾಯಮಾಡುತ್ತದಲ್ಲದೆ ಅದು ಅಲೆಕ್ಸಾ ಜೊತೆಗೆ ಹೇಗೆ ವ್ಯವಹರಿಸುತ್ತದೆ ಎಂದು ತಿಳಿಯಲು ಸಹಾಯಮಾಡುತ್ತದೆ.

ಈ ಫೀಲ್ಡ್ ಗಳನ್ನು ತುಂಬಿಸಿ; ಸ್ಕಿಲ್ ಟೈಪ್ ಗೆ 'ಕಸ್ಟಮ್ ಇಂಟರ್ಯಾಕ್ಷನ್ ಮಾಡೆಲ್', ನೇಮ್ ಗೆ 'ಟೆಸ್ಟ್' ಮತ್ತು ಇನ್ವೊಕೇಶನ್ ನೇಮ್ ಗೆ 'ಟೆಸ್ಟ್ ಬಾಟ್' ಎಂದು ತುಂಬಿಸಿ. ನಿಮ್ಮ ಈ ಹೊಸ ಸ್ಕಿಲ್ ಅನ್ನು ಓಡಿಸಲು 'ಹೇ ಅಲೆಕ್ಸಾ, ಆಸ್ಕ್ ಟೆಸ್ಟ್ ಬಾಟ್ [ನಿಮ್ಮ ಫ್ರೇಸ್] ' ಎಂದು ಟೈಪ್ ಮಾಡಬೇಕು. ನಂತರ ಪರದೆಯ ಕೆಳಭಾಗದಲ್ಲಿ ಬಲಬದಿಯಲ್ಲಿರುವ ನೆಕ್ಸ್ಟ್ ಅನ್ನು ಒತ್ತಿ.

5. ಈ ಎಲ್ಲಾ ಮಾಹಿತಿ ತುಂಬಿದ ನಂತರ ನೆಕ್ಸ್ಟ್ ಒತ್ತುವ ಮೂಲಕ ಇಂಟರ್ಯಾಕ್ಷನ್ ಮಾಡೆಲ್ ಗೆ ತೆರಳಿ.

6.ನಂತರ "ಲಾಂಚ್ ಸ್ಕಿಲ್ ಬಿಲ್ಡರ್ ಬೀಟಾ" ಮೇಲೆ ಕ್ಲಿಕ್ ಮಾಡುವ ಮೂಲಕ ಹೊಸ ಸ್ಕಿಲ್ ಬಿಲ್ಡರ್ ಡ್ಯಾಶ್ಬೋರ್ಡ್ ಲಾಂಚ್ ಮಾಡಿ.

ಹಂತ 2: ಇಂಟರ್ಯಾಕ್ಷನ್ ಮಾಡೆಲ್ ನ ತಯಾರಿ

ಹಂತ 2: ಇಂಟರ್ಯಾಕ್ಷನ್ ಮಾಡೆಲ್ ನ ತಯಾರಿ

ಈ ಇಂಟರ್ಯಾಕ್ಶನ್ ಮಾಡೆಲ್ ನಿಮ್ಮ ರಿಕ್ವೆಸ್ಟ್ಗಳಿಗೆ ಅಲೆಕ್ಸಾ ಹೇಗೆ ಪ್ರತಿಕ್ರಯಿಸುತ್ತದೆ ಎಂದು ನಿರ್ಧರಿಸುತ್ತದೆ. ಉದಾಹರಣೆಗೆ "ಹೇ ಅಲೆಕ್ಸಾ, ಆಸ್ಕ್ ಟೆಸ್ಟ್ ಬಾಟ್ [ನಿಮ್ಮ ರಿಕ್ವೆಸ್ಟ್] " ಎನ್ನುವ ವಾಕ್ಯವನ್ನು ಅಲೆಕ್ಸಾ ಹೇಗೆ ಅರ್ಥೈಸಿಕೊಳ್ಳುತ್ತದೆ ಎಂದು ನೋಡೋಣ.

ಇಂಟೆಂಟ್ಸ್

ನಿಮ್ಮ ಸ್ಕಿಲ್ ಬಳಸಬಹುದಾದ ವಿಭಿನ್ನ ಫಂಕ್ಷನ್ಗಳನ್ನು ಇಂಟೆಂಟ್ ಎನ್ನುತ್ತಾರೆ. ಇಂಟೆಂಟ್ ಗಳು 'ಅಟ್ಟರೆನ್ಸಸ್' ನ ಆಧಾರದ ಮೇಲೆ ವಾಕ್ಯವನ್ನು ಅರ್ಥೈಸಿಕೊಳ್ಳುತ್ತದೆ.ಈ 'ಅಟ್ಟರೆನ್ಸಸ್' ನ ಮೂಲಕ 'ಸ್ಲಾಟ್ಸ್'(ವೇರಿಯೇಬಲ್ಸ್) ಗಳನ್ನು ತುಂಬುತ್ತದೆ.

ಇಂಟೆಂಟ್ ಗೆ ಇಂಟೆಂಟ್ ಸ್ಕೀಮಾದ ಅಗತ್ಯವಿದ್ದು, 'ಹೆಲೋವರ್ಲ್ಡ್' ಎಂಬ ಸರಳ ಇಂಟೆಂಟ್ ಸೃಷ್ಟಿಸೋಣ. ಎಡಬದಿಯಲ್ಲಿರುವ ಸೆಟಪ್ ಅನ್ನು ಕಾಪಿ ಮಾಡಿ. ಇದನ್ನು ಒಂದು ಸರಳವಾದ 'ಅಟ್ಟರೆನ್ಸ್' ಗೆ ಲಿಂಕ್ ಮಾಡೋಣ.

ಅಟ್ಟರೆನ್ಸಸ್

ಅಟ್ಟರೆನ್ಸಸ್

ನಿರ್ದಿಷ್ಟ ಇಂಟೆಂಟ್ ಅನ್ನು ಟ್ರಿಗ್ಗರ್ ಮಾಡಲು ಅಲೆಕ್ಸಾ ಗೆ ತಿಳಿಸಲು ಬಳಸುವ ವಾಕ್ಯವೇ ಅಟ್ಟರೆನ್ಸಸ್. ಹೆಲೋವರ್ಲ್ಡ್ ಇಂಟೆಂಟ್ ಅನ್ನು ಟ್ರಿಗ್ಗರ್ ಮಾಡಲು 'ಹೌ ಆರ್ ಯೂ' ಎನ್ನುವ ವಾಕ್ಯವನ್ನು ಬಳಸೋಣ

ಈಗ ನಾವು ನಮ್ಮ ಅಲೆಕ್ಸಾ ಸ್ಕಿಲ್ ಗೆ ಕೋಡ್ ಬರೆಯಲು ತಯಾರಾಗಿದ್ದೇವೆ

1.ಸ್ಕಿಲ್ ಬಿಲ್ಡರ್ ಡ್ಯಾಶ್ಬೋರ್ಡ್ ನಲ್ಲಿ ಇಂಟೆಂಟ್ಸ್ ನ ಸಮೀಪ ಎಡಬದಿಯಲ್ಲಿ ಮೇಲಿರುವ 'ಆಡ್+' ಬಟನ್ ಒತ್ತಿ

2. ಅಲ್ಲಿ ಬರುವ ಟೆಕ್ಸ್ಟ್ ಬಾಕ್ಸ್ ನಲ್ಲಿ ಹೊಸ ಇಂಟೆಂಟ್ ನ ಹೆಸರು ಬರೆಯಿರಿ : ' GetNewFactIntent' . ನಂತರ 'ಕ್ರಿಯೇಟ್ ಇಂಟೆಂಟ್' ಬಟನ್ ಒತ್ತಿ

3.ನಿಮ್ಮ ಇಂಟೆಂಟ್ ಗೆ 10-15 ಸ್ಯಾಂಪಲ್ ಅಟ್ಟರೆನ್ಸಸ್ ಗಳನ್ನು ಆಡ್ ಮಾಡಿ. ಉದಾಹರಣೆಗೆ 'ಗಿವ್ ಮಿ ಅ ಫ್ಯಾಕ್ಟ್', 'ಟೆಲ್ ಮಿ ಅ ಫ್ಯಾಕ್ಟ್'

4.ಸೇವ್ ಮಾಡೆಲ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಬಿಲ್ಡ್ ಮಾಡೆಲ್ ಬಟನ್ ಕ್ಲಿಕ್ ಮಾಡಿ

5.ನಿಮ್ಮ ಇಂಟರ್ಯಾಕ್ಷನ್ ಮಾಡೆಲ್ ಯಶಸ್ವಿಯಾಗಿ ಬಿಲ್ಡ್ ಆದರೆ ಕಾನ್ಫಿಗರೇಶನ್ ಬಟನ್ ಒತ್ತಿ

ಮುಂದೆ ನಾವು AWS ಡೆವಲಪರ್ ಕನ್ಸೋಲ್ ನಲ್ಲಿ ಲ್ಯಾಂಬ್ಡಾ ಫಂಕ್ಷನ್ ಸೃಷ್ಟಿಸೋಣ

ಹಂತ 3: ನಿಮ್ಮ ಸ್ಕಿಲ್ ಗೆ ಕೋಡ್ ಬರೆದು ಟೆಸ್ಟ್ ಮಾಡುವುದು

ಹಂತ 3: ನಿಮ್ಮ ಸ್ಕಿಲ್ ಗೆ ಕೋಡ್ ಬರೆದು ಟೆಸ್ಟ್ ಮಾಡುವುದು

ನಿಮ್ಮ ಸ್ಕಿಲ್ ಗೆ ಮುಖ್ಯ ಕೋಡಿಂಗ್ ಟಾಸ್ಕ್ ಎಂದರೆ ಅಲೆಕ್ಸಾ ಸರ್ವೀಸ್ ನಿಂದ ರಿಕ್ವೆಸ್ಟ್ ಅನ್ನು ಸ್ವೀಕರಿಸಿ ಸೂಕ್ತ ಪ್ರತಿಕ್ರಿಯೆ ನೀಡಬಲ್ಲ ಸರ್ವೀಸ್ ಒಂದನ್ನು ಸೃಷ್ಟಿಸುವುದು

ಮೊದಲಿಗೆ ನಿಮ್ಮ ಸ್ಕಿಲ್ ಗೆ AWS ಲ್ಯಾಂಬ್ಡಾ ಫಂಕ್ಷನ್ ಬರೆಯೋಣ. ಈ ಸರ್ವೀಸ್ ಸರ್ವರ್ಗಳ ಚಿಂತೆಯಿಲ್ಲದೆ ಕ್ಲೌಡ್ ಮೂಲಕ ನಿಮ್ಮ ಕೋಡ್ ಅನ್ನು ರನ್ ಮಾಡುತ್ತದೆ. ಇದಲ್ಲದೆ ನೀವು ವೆಬ್ ಸರ್ವೀಸ್ ಬಿಲ್ಡ್ ಮಾಡಿ ಯಾವುದೇ ಕ್ಲೌಡ್ ಪ್ರೊವೈಡರ್ ನಲ್ಲಿ ಅದನ್ನು ಹೋಸ್ಟ್ ಮಾಡಬಹುದು.

1. http://aws.amazon.com ಗೆ ಹೋಗಿ ಕನ್ಸೋಲ್ ಗೆ ಸೈನ್ ಇನ್ ಮಾಡಿ.

2.ಪರದೆಯ ಮೇಲ್ಭಾಗದಲ್ಲಿರುವ 'ಸರ್ವೀಸಸ್' ಮೇಲೆ ಕ್ಲಿಕ್ ಮಾಡಿ ಸರ್ಚ್ ಬಾಕ್ಸ್ ನಲ್ಲಿ ಲ್ಯಾಂಬ್ಡಾ ಎಂದು ಟೈಪ್ ಮಾಡಿ. ಅಥವಾ ಸರ್ವೀಸಸ್ ನಲ್ಲಿ ಕಂಪ್ಯೂಟ್ ಸೆಕ್ಷನ್ ನಲ್ಲಿ ನೀವು ಲ್ಯಾಂಬ್ಡಾ ಅನ್ನು ಕಾಣಬಹುದು.

3. ನಿಮ್ಮ AWS ರೀಜನ್ ಅನ್ನು ಪರೀಕ್ಷಿಸಿ. AWS ಲ್ಯಾಂಬ್ಡಾ ಅಲೆಕ್ಸಾ ಸ್ಕಿಲ್ ಕಿಟ್ ನೊಂದಿಗೆ ಕೇವಲ US ಈಸ್ಟ್ ಮತ್ತು EU ರೀಜನ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ.

4. ಸ್ಕ್ರೀನ್ ನ ಮೇಲ್ಭಾಗದಲ್ಲಿರುವ "ಕ್ರಿಯೇಟ್ ಅ ಲ್ಯಾಂಬ್ಡಾ ಫಂಕ್ಷನ್" ಬಟನ್ ಮೇಲೆ ಕ್ಲಿಕ್ ಮಾಡಿ

5. 'alexa-skill-kit-sdk-factskill' ಹೆಸರಿನ ಬ್ಲೂಪ್ರಿಂಟ್ ಆಯ್ಕೆ ಮಾಡಿ. ಈ ಬ್ಲೂಪ್ರಿಂಟ್ ನಿಮ್ಮ ಲ್ಯಾಂಬ್ಡಾ ಫಂಕ್ಷನ್ ಗೆ 'ಅಲೆಕ್ಸಾ SDK' ಅನ್ನು ಆಡ್ ಮಾಡುತ್ತದೆ.

6.ನಿಮ್ಮ ಟ್ರಿಗರ್ ಅನ್ನು ಕಾನ್ಫಿಗರ್ ಮಾಡಿ

7.ನಿಮ್ಮ ಫಂಕ್ಷನ್ ಅನ್ನು ಕಾನ್ಫಿಗರ್ ಮಾಡಿ. ನಿಮ್ಮ ಲ್ಯಾಂಬ್ಡಾ ಫಂಕ್ಷನ್ ನ ಮುಖ್ಯ ಭಾಗಗಳನ್ನು ಇಲ್ಲಿ ಸೆಟ್ ಮಾಡಲಾಗುತ್ತದೆ. ನಿಮ್ಮ ಫಂಕನ್ ಗೆ ಅರ್ಥಪೂರ್ಣ ಹೆಸರನ್ನಿಡಿ. ಸಧ್ಯಕ್ಕೆ ನಿಮ್ಮ ಫಂಕ್ಷನ್ ಗೆ " SpaceFacts" ಎಂದು ಹೆಸರಿಡೋಣ

8. ಲ್ಯಾಂಬ್ಡಾ ಫಂಕ್ಷನ್ ಕೋಡ್ ಬಾಕ್ಸ್ ನಲ್ಲಿ ಅಗತ್ಯ ಕೋಡ್ ಬರೆಯಿರಿ

9.ನಿಮ್ಮ ಲ್ಯಾಂಬ್ಡಾ ಫಂಕ್ಷನ್ ನ ರೋಲ್ ಸೆಟ್ ಮಾಡಿ. ಲ್ಯಾಂಬ್ಡಾ ದ ರೋಲ್ ಸೆಟ್ ಮಾಡಲು ಅಮೇಜಾನ್ ವಿವರಣೆಯನ್ನು ನೀಡುತ್ತದೆ. ಈ ಮೊದಲು ಇದನ್ನು ನೀವು ಮಾಡಿದ್ದರೆ ನಿಮ್ಮ ರೋಲ್ ನ ವಾಲ್ಯೂ ಅನ್ನು ' lambdabasicexecution' ಗೆ ಸೆಟ್ ಮಾಡಿ.

10. ಈ ಗೈಡ್ ನಲ್ಲಿ ಅಡ್ವಾನ್ಸ್ಡ್ ಸೆಟ್ಟಿಂಗ್ ಗಳನ್ನು ಬಿಡೋಣ

11.ನೆಕ್ಸ್ಟ್ ಬಟನ್ ಒತ್ತಿ ರಿವ್ಯೂ ಸ್ಕ್ರೀನ್ ಗೆ ಹೋಗಿ. ಕೆಳಭಾಗದಲ್ಲಿ ಎಡಬದಿಯಲ್ಲಿರುವ ಕ್ರಿಯೇಟ್ ಫಂಕ್ಷನ್ ಬಟನ್ ಒತ್ತಿ.

12.ಫಂಕ್ಷನ್ ಕ್ರಿಯೇಟ್ ಮಾಡಿದ ಮೇಲೆ ಮೇಲ್ಭಾಗದಲ್ಲಿ ಎಡಬದಿಯಲ್ಲಿ ARN ವಾಲ್ಯೂ ಬರುತ್ತದೆ. ಮುಂದಿನ ಭಾಗದಲ್ಲಿ ಬಳಸಲು ಈ ವಾಲ್ಯೂ ಅನ್ನು ಕಾಪಿ ಮಾಡಿಕೊಳ್ಳಿ

ಈಗ ಎರಡು ಭಾಗಗಳನ್ನು ಒಂದಾಗಿ ಜೋಡಿಸುವ ಸಮಯ

ಈಗ ಎರಡು ಭಾಗಗಳನ್ನು ಒಂದಾಗಿ ಜೋಡಿಸುವ ಸಮಯ

1. ಅಮೇಜಾನ್ ಡೆವಲಪರ್ ಪೋರ್ಟಲ್ ಗೆ ಹೋಗಿ ನಿಮ್ಮ ಸ್ಕಿಲ್ ಸೆಟ್ ಅನ್ನು ಆಯ್ಕೆ ಮಾಡಿ

2. ಎಡಬದಿಯಲ್ಲಿರುವ ಕಾನ್ಫಿಗರೇಶನ್ ಟ್ಯಾಬ್ ತೆರೆಯಿರಿ

3. ನಿಮ್ಮ ಜಿಯೋಗ್ರಾಫಿಕಲ್ ರೀಜನ್ ಆಗಿ ನಾರ್ತ್ ಅಮೇರಿಕಾ ಅಥವಾ ಯುರೋಪ್ ಅನ್ನು ಆಯ್ಕೆ ಮಾಡಿ

4. ಈಗ ಎಂಡ್ ಪಾಯಿಂಟ್ ಗೆ 'AWS ಲ್ಯಾಂಬ್ಡಾ ARN' ಅನ್ನು ಆಯ್ಕೆ ಮಾಡಿ

5. ಅಲ್ಲಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ ನಿಮ್ಮ ಲ್ಯಾಂಬ್ಡಾ ನ ARN ಅನ್ನು ತುಂಬಿ

6. ಅಕೌಂಟ್ ಲಿಂಕಿಂಗ್ ಅನ್ನು 'ನೋ' ಎಂದು ಸೆಟ್ ಮಾಡಿ

ನಿಮ್ಮ ಸ್ಕಿಲ್ ಅನ್ನು ಪೂರ್ತಿ ಗೊಳಿಸಿದ ನಂತರ ನಿಮ್ಮ ಸ್ಕಿಲ್ ಗೆ ಬೀಟಾ ಟೆಸ್ಟ್ ಅನ್ನು ಆಯೋಜಿಸಬಹುದು. ನಿಮ್ಮ ಆಯ್ಕೆಯ ಒಂದಷ್ಟು ಟೆಸ್ಟರ್ಗಳಿಗೆ ಮಾತ್ರ ನಿಮ್ ಸ್ಕಿಲ್ ಸಿಗುವಂತೆ ಮಾಡಬಹುದು

1.ಅಮೇಜಾನ್ ಡೆವೆಲಪರ್ ಪೋರ್ಟಲ್ ಗೆ ಹೋಗಿ ನಿಮ್ಮ ಸ್ಕಿಲ್ ಅನ್ನು ಆಯ್ಕೆ ಮಾಡಿ

2.ಎಡಬದಿಯಲ್ಲಿರುವ ಟೆಸ್ಟ್ ಟ್ಯಾಬ್ ತೆರೆಯಿರಿ

3.ನಿಮ್ಮ ಸ್ಕಿಲ್ ಅನ್ನು ಸರ್ವೀಸ್ ಸಿಮ್ಯುಲೇಟರ್ ಮೂಲಕ ಟೆಸ್ಟ್ ಮಾಡಿ. ನಿಮ್ಮ ಸ್ಕಿಲ್ ನೀವೆಣಿಸದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಈ ಮೂಲಕ ಖಚಿತಪಡಿಸಿಕೊಳ್ಳಿ. 'ಎಂಟರ್ ಅಟ್ಟರೆನ್ಸ್' ಟೆಕ್ಸ್ಟ್ ಬಾಕ್ಸ್ ನಲ್ಲಿ "ಗಿವ್ ಮಿ ಅ ಫ್ಯಾಕ್ಟ್" ಎಂದು ಟೈಪ್ ಮಾಡಿ

ನಿಮ್ಮ ಸ್ಕಿಲ್ ಅನ್ನು ಸಾರ್ವಜನಿಕರಿಗೆ ಲಭಿಸುವಂತೆ ಮಾಡಲು ಸ್ಕಿಲ್ ಅನ್ನು ಸರ್ಟಿಫಿಕೇಶನ್ ಗೆ ಸಲ್ಲಿಸಿ. ಬೀಟಾ ಟೆಸ್ಟ್ ನಲ್ಲಿರುವಾಗಲೇ ನೀವು ನಿಮ್ಮ ಸ್ಕಿಲ್ ಅನ್ನು ಸರ್ಟಿಫಿಕೇಶನ್ ಗೆ ಸಲ್ಲಿಸಬಹುದು.

1. ಸರ್ಟಿಫೀಕೇಶನ್ ಅನ್ನು ಮುಂದುವರೆಸಲು ಮೊದಲಿಗೆ ನಿಮ್ಮ ಸ್ಕಿಲ್ ಸಬ್ಮಿಶನ್ ಚೆಕ್ ಲಿಸ್ಟ್ ಗೆ ಅನುಗುಣವಾಗಿದೆಯೇ ಎಂದು ನೋಡಿ. ಈ ಚೆಕ್ ಲಿಸ್ಟ್ ನಲ್ಲಿ ಅಮೇಜಾನ್ ನ ಸರ್ಟಿಫಿಕೇಶನ್ ತಂಡ ಮಾಡುವ ಟೆಸ್ಟ್ ಗಳ ಪಟ್ಟಿಯೂ ಇದೆ. ಹಾಗಾಗಿ ಎಲ್ಲಾ ಟೆಸ್ಟ್ ಗಳನ್ನು ಪಾಸ್ ಮಾಡುವ ಮೂಲಕ ಸರ್ಟಿಫಿಕೇಶನ್ ಪ್ರಕ್ರಿಯೆ ಬೇಗ ನೆರವೇರುತ್ತದೆ.

2. ನೀವು ನಿಮ್ಮ ಸ್ಕಿಲ್ ಅನ್ನು ಸಾರ್ವಜನಿಕರಿಗೆ ನೀಡಲು ಸಿದ್ಧರಾದಾಗ ಮತ್ತು ಸರ್ಟಿಫಿಕೇಶನ್ ಚೆಕ್ ಲಿಸ್ಟ್ ನ ಎಲ್ಲಾ ಬೇಡಿಕೆಗಳನ್ನು ಪೂರೈಸಿದಾಗ ನಿಮ್ಮ ಸ್ಕಿಲ್ ಅನ್ನು ಸರ್ಟಿಫಿಕೇಶನ್ ಗೆ ಸಲ್ಲಿಸಿ.

ನಿಮ್ಮ ಸ್ಕಿಲ್ ಪ್ರಕಟಗೊಂಡ ಮೇಲೆ ಆಮೇಜಾನ್ ಗ್ರಾಹಕರು ಅದನ್ನು ಅಲೆಕ್ಸಾ ಆಪ್ ನಲ್ಲಿ ನೋಡಬಹುದು ಮತ್ತು ಬಳಸಬಹುದು ಕೂಡ.

ಜೊತೆಗೆ ನೀವು ನಿಮ್ಮ ಸ್ಕಿಲ್ ನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲು, ಅದರಲ್ಲಿರುವ ನ್ಯೂನತೆಗಳನ್ನು ನಿವಾರಿಸಲು ಮತ್ತು ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲು ಸ್ಕಿಲ್ ನ ಮೇಲೆ ನಿರಂತರ ಕೆಲಸ ಮಾಡುತ್ತಿರಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ 'ಸಬ್ಮಿಟಿಂಗ್ ದಿ ಸ್ಕಿಲ್ ಫಾರ್ ಸರ್ಟಿಫಿಕೇಶನ್' ವಿಭಾಗದಲ್ಲಿ "ಕ್ರಿಯೇಟಿಂಗ್ ಅ ನ್ಯೂ ವರ್ಶನ್ ಆಫ್ ಲೈವ್ ಸ್ಕಿಲ್' ನೋಡಿ.

Best Mobiles in India

English summary
Here's how to build a custom skill for the Echo devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+