Home
ಟೆಕ್ ನೌಕರಿ

ಡೆಬಿಟ್/ಕ್ರೆಡಿಟ್ ಕಾರ್ಡ್‌ ಪಾಸ್‌ವರ್ಡ್ ಮರೆತರೆ ATMನಲ್ಲಿಯೇ ರೀಸೆಟ್ ಮಾಡಿಕೊಳ್ಳುವುದು ಹೇಗೆ?

By Bhaskar N J

ದಿನಗಳಲ್ಲಿ ಪ್ರತಿಯೊರ್ವರು ಎರಡು ಮತ್ತು ಅದಕ್ಕಿಂತ ಹೆಚ್ಚು ಬ್ಯಾಂಕ್‌ ಅಕೌಂಟ್‌ಗಳನ್ನು ಹೊಂದಿರುತ್ತಾರೆ. ಇನ್ನು ಒಂದೊಂದು ಬ್ಯಾಂಕ್ ಅಕೌಂಟ್‌ಗೂ ಒಂದೊಂದು ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹಾಗಾಗಿ, ಇವರೆಲ್ಲರ ದೊಡ್ಡ ಪ್ರಾಬ್ಲಮ್ ಏನು ಅಂದರೆ ಎಲ್ಲಾ ಎಟಿಎಂ ಕಾರ್ಡ್‌ಗಳ ಪಿನ್‌ ಸಂಖ್ಯೆ ನೆನಪಿಟ್ಟುಕೊಳ್ಳುವುದು!

ಪಾಸ್‌ವರ್ಡ್ ಎಂದರೆ ಒಬ್ಬರಿಗೆ ಮಾತ್ರ ತಿಳಿದು ಬೇರೆ ಯಾರಿಗೂ ತಿಳಿಯಬಾರದ ಸಂಖ್ಯೆ. ಹಾಗಾಗಿ, ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಇದು ಕೆಲವೊಮ್ಮೆ ಸಮಸ್ಯೆಗಳನ್ನು ಸಹ ತರುತ್ತದೆ. ಮರೆವು ಅನ್ನುವುದು ಎಲ್ಲರಲ್ಲಿಯೂ ಸಾಮಾನ್ಯವಾಗಿರುವುದರಿಂದ ಪ್ರಮುಖವಾದ ಎಟಿಎಂ ಪಿನ್‌ಗಳನ್ನು ಸಹ ನಾವು ಮರೆತು ಬಿಡುತ್ತೇವೆ.

 ಡೆಬಿಟ್ ಕಾರ್ಡ್‌ ಪಾಸ್‌ವರ್ಡ್ ಮರೆತರೆ ATMನಲ್ಲಿ ರೀಸೆಟ್ ಮಾಡಿಕೊಳ್ಳುವುದು ಹೇಗೆ?

ಆದರೆ ,ಇನ್ನು ಆ ಚಿಂತೆ ಬಿಡಿ. ನಿಮ್ಮ ಎಟಿಎಂ ಪಾಸ್‌ವರ್ಡ್‌ ಮರೆತರೆ ಪಿನ್‌ ಸಂಖ್ಯೆ ಪಡೆಯಲು ನೀವುಬ್ಯಾಂಕ್‌ಗೆ ಹೋಗಬೇಕಿಲ್ಲ! ನಿಮ್ಮ ಹತ್ತಿರದ ಯಾವುದಾದರೂ ಎಟಿಎಂ ಮಷಿನ್ ಮೂಲಕ ನೀವು ಬೇರೊಂದು ಪಿನ್ ನಂಬರ್ ಪಡೆಯಬಹುದು! ನಿಮ್ಮ ಬ್ಯಾಂಕ್‌ ಅಕೌಂಟ್ ನಂಬರ್ ಮತ್ತು ನಿಮ್ಮ ಅಕೌಂಟ್‌ ನಂಬರ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್‌ ನಂಬರ್‌ ಹೊಂದಿದ್ದರೆ ಹತ್ತಿರದ ಎಟಿಎಂನಲ್ಲಿ ನೂತನ ಪಾಸ್‌ವರ್ಡ್ ಹೇಗೆ ಜನರೆಟ್ ಮಾಡಿಕೊಳ್ಳಬಹುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

#1 ಬ್ಯಾಂಕಿಂಗ್ ಐಕಾನ್ ಆಯ್ಕೆ ಮಾಡಿ

#1 ಬ್ಯಾಂಕಿಂಗ್ ಐಕಾನ್ ಆಯ್ಕೆ ಮಾಡಿ

ನಿಮ್ಮ ಹತ್ತಿರದ ಯಾವುದಾದರೂ ಎಟಿಎಂಗೆ ಹೋಗಿ ನಿಮ್ಮ ಕಾರ್ಡ್‌ ಹಾಕಿರಿ. ನಂತರ "ಬ್ಯಾಂಕಿಗ್" ಆಯ್ಕೆಯನ್ನು ಒತ್ತಿರಿ. ನಂತರ " ಪಿನ್‌ ಜನರೇಟ್" ಅಥವಾ "ಎಟಿಎಂ ಪಿನ್ ರೀಸೆಟ್" ಐಕಾನ್‌ಗಳನ್ನು ಸೆಲೆಕ್ಟ್ ಮಾಡಿ.

#2 ಅಕೌಂಟ್ ನಂಬರ್‌ ಎಂಟರ್ ಮಾಡಿ

#2 ಅಕೌಂಟ್ ನಂಬರ್‌ ಎಂಟರ್ ಮಾಡಿ

"ಪಿನ್‌ ಜನರೇಟ್" ಅಥವಾ "ಎಟಿಎಂ ಪಿನ್ ರೀಸೆಟ್"ಎಂದು ಕ್ಲಿಕ್ ಮಾಡಿದ ನಂತರ ಎಟಿಎಂನಲ್ಲಿ ನಿಮ್ಮ ಅಕೌಂಟ್‌ ನಮೂದಿಸಲು ಸೂಚಿಸುತ್ತದೆ. ನಿಮ್ಮ ಅಕೌಂಟ್ ನಂಬರ್‌ ನಮೂದಿಸಿ.

#3 ಫೋನ್‌ ನಂಬರ್ ನಮೂದಿಸಿ.

#3 ಫೋನ್‌ ನಂಬರ್ ನಮೂದಿಸಿ.

ಅಕೌಂಟ್ ನಂಬರ್‌ ನಮೂದಿಸಿದ ನಂತರ ನಿಮ್ಮ ಫೋನ್‌ ನಂಬರ್‌ ನಮೂದಿಸಲು ರಿಕ್ವೆಸ್ಟ್‌ ಬರುತ್ತದೆ. ನಂತರ ನಿಮ್ಮ ಫೋನ್ ನಂಬರ್‌ ಎಂಟರ್ ಮಾಡಿ.

#4 OTP ಎಂಟರ್ ಮಾಡಿ.

#4 OTP ಎಂಟರ್ ಮಾಡಿ.

ನಿಮ್ಮ ಫೋನ್‌ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಒಂದು ಬಾರಿಯ ಪಾಸ್‌ವರ್ಡ್ (OTP) ಬರುತ್ತದೆ ಅದನ್ನು ತುಂಬಿರಿ

How To Link Aadhaar With EPF Account Without Login (KANNADA)
#5 ಪಿನ್ ಬದಲಾಯಿಸಿ

#5 ಪಿನ್ ಬದಲಾಯಿಸಿ

OTP ಎಂಟರ್ ಮಾಡಿದ ನಂತರ ನೂತನ ಪಿನ್‌ ಸಂಖ್ಯೆಯನ್ನು ಬದಲಾಯಿಸುವಂತೆ ಕೆಳುತ್ತದೆ. ನಿಮ್ಮಿಷ್ಟದ ನಾಲ್ಕು ಸಂಖ್ಯೆಯನ್ನು ನಮೂದಿಸಿ ಹೊಸ ಪಿನ್‌ ಸಂಖ್ಯೆ ಪಡೆಯಿರಿ.

Best Mobiles in India

English summary
Insert your ATM card at the any Bank ATM and on the language selection screen, choose. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+