24 ಗಂಟೆ ಬರುವ ಬ್ಯಾಟರಿ ಬಾಳಿಕೆಯನ್ನು 48 ಗಂಟೆ ಬರುವಂತೆ ಮಾಡುವುದು ಹೇಗೆ?
ಇಂದಿನ ಸ್ಮಾರ್ಟ್ಫೋನ್ ಬಳಕೆದಾರರು ಹೆಚ್ಚು ಕೇಳುವ ಪ್ರಶ್ನೆ ಎಂದರೆ, ಯಾವುದೇ ಸ್ಮಾರ್ಟ್ಫೋನ್ ಖರೀದಿಸಿದರೂ ಬ್ಯಾಟರಿ ಬಾಳಿಕೆ ಸಾಕಾಗುತ್ತಿಲ್ಲ. ನಾವು ಖರೀದಿಸಿದ ಫೋನಿನಲ್ಲಿ ಮೊಬೈಲ್ ಕಂಪನಿಗಳು ಎಷ್ಟೇ ಬ್ಯಾಟರಿ ಸಾಮರ್ಥ್ಯವಿದೆ ಅಂತ ಹೇಳಿಕೊಂಡರೂ ಸಹ, ಅದರಲ್ಲಿ ಚಾರ್ಜ್ ಇರುವುದು ಅಬ್ಬಬ್ಬಾ ಅಂದ್ರೆ 24 ಗಂಟೆ ಮಾತ್ರ. ಯಾಕೆ ಹೀಗೆ.?
ಹೌದು, ಯಾಕೆ ಹೀಗೆ?, ಮೊದಲೆಲ್ಲಾ 2000Amh ಬ್ಯಾಟರಿ ಶಕ್ತಿ ಹೊಂದಿರುವ ಸ್ಮಾರ್ಟ್ಪೋನ್ ಖರೀದಿಸಿದ್ದರೂ ಅದರ ಬಾಳಿಕೆ ಈಗಿನಷ್ಟೇ ಇತ್ತು. ಆದರೆ, ಈಗ ಹಾಗಿಲ್ಲ. ನೀವು 5000Amh ಬ್ಯಾಟರಿ ಶಕ್ತಿ ಹೊಂದಿರುವ ಸ್ಮಾರ್ಟ್ಫೋನ್ ಖರೀದಿಸಿದರೂ ಬ್ಯಾಟರಿ ಒಂದು ದಿನದ ಮೇಲೆ ನಿಲಲ್ಲ.! ಇದಕ್ಕೆ ಕಾರಣ ಏನು ಎಂದು ಹುಡುಕಿ ಹೊರಟರೇ ಅದಕ್ಕೆ ಕಾರಣಗಳು ಹಲವು.

ಒಂದು ಕಾರಣವೆಂದರೆ, ಇತ್ತೀಚಿನ ನಿಮ್ಮ ಫೋನ್ ಹೆಚ್ಚು ಫೀಚರ್ಸ್ ಹೊತ್ತು ಹೆಚ್ಚು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಸ್ಮಾರ್ಟ್ಫೋನ್ ಹೆಚ್ಚು ಬ್ಯಾಟರಿಯನ್ನು ಉಪಯೋಗಿತ್ತುತ್ತಿದೆ. ಮತ್ತೊಂದು ನೀವು ನಿಮ್ಮ ಬ್ಯಾಟರಿಯನ್ನು ಸರಿಯಾಗಿ ವಿನಿಯೋಗಿಸುತ್ತಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಹೆಚ್ಚು ಬ್ಯಾಟರಿ ಬಾಳಿಕೆ ಬರುವಂತೆ ಮಾಡುವುದು ಹೇಗೆ ಎಂದು ತಿಳಿಯೋಣ.

ಮೊಬೈಲ್ ಆಪ್ಗಳಿಗೆ ಫ್ರೀಜರ್ ಆಪ್!
ಮೊಬೈಲ್ ಆಪ್ಗಳಿಗೂ ಫ್ರೀಜರ್ ಎಂಬ ಒಂದು ಆಪ್ ಇದೆ. ಈ ಆಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಂಡು ಅದರೊಳಕ್ಕೆ ಯಾವುದೇ ಇತರೆ ಆಪ್ ಅನ್ನು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿದರೆ ಆ ಆಪ್ಗಳು ಹಿನ್ನಲೆಯಲ್ಲಿ ಕೆಲಸವನ್ನು ನಿಲ್ಲಿಸುತ್ತವೆ. ಹಿನ್ನೆಲೆಯಲ್ಲಿ ಸಕ್ರಿಯವಾಗುತ್ತಿರುವ ಆಪ್ಗಳ ಕೆಲಸ ನಿಂತರೆ ಅದು ಬ್ಯಾಟರಿ ಉಳಿತಾಯಕ್ಕೆ ಕಾರಣವಾಗುತ್ತದೆ.

ಪವರ್ ಸೇವಿಂಗ್ ಮೋಡ್
ಬ್ಯಾಟರಿ ಚಾರ್ಜ್ ಉಳಿತಾಯ ಮಾಡಬಲ್ಲ ಪವರ್ ಸೇವಿಂಗ್ ಮೋಡ್ ಇದ್ದರೆ (ಇತ್ತೀಚಿನ ಫೋನ್ಗಳಲ್ಲಿ ಸೆಟ್ಟಿಂಗ್ಸ್ ಮೆನುವಿನಲ್ಲಿರುತ್ತದೆ) ಅದನ್ನು ಬಳಸಿ. ಇನ್ನು ನಿಮ್ಮ ಸ್ಮಾರ್ಟ್ಫೋನಿನ ಸ್ಕ್ರೀನ್ ಬ್ರೈಟ್ನೆಸ್ ಕಡಿಮೆ ಮಾಡಿಕೊಳ್ಳಿ. ನಿಮಗೆ ಗೊತ್ತಿರಲಿ, ಪೋನಿನಲ್ಲಿ ಅತಿಹೆಚ್ಚು ಬ್ಯಾಟರಿಯನ್ನು ಸ್ಕ್ರೀನ್ ಬಳಸಿಕೊಳ್ಳುತ್ತದೆ. ಮತ್ತು ಇದರಿಂದ ಕಣ್ಣುಗಳಿಗೂ ಹಿತ, ಬ್ಯಾಟರಿಗೂ ಒಳಿತು.

ಮೊಬೈಲ್ ಡೇಟಾ ಆಫ್ ಮಾಡಿ
ಪ್ಪತ್ತನಾಲ್ಕು ಗಂಟೆ ಆನ್ಲೈನ್ ಇದ್ದರೆ ಮೊಬೈಲ್ ಬ್ಯಾಟರಿ ಬಾಳಿಕೆ ಬರುವುದು ಹೇಗೆ?, ಹಾಗಾಗಿ, ಉಪಯೋಗವಿಲ್ಲದಾಗ ಮೊಬೈಲ್ ಡೇಟಾವನ್ನು ಆಫ್ ಮಾಡಿಬಿಡಿ. ಸಾಧ್ಯವಿದ್ದಾಗಲೆಲ್ಲ ಇಂಟರ್ನೆಟ್ಗಾಗಿ ಮೊಬೈಲ್ ಡೇಟಾ ಬದಲು, ವೈಫೈ ಬಳಸಿ. ವೀಡಿಯೊ ಮತ್ತು ಗೇಮ್ಸ್ ಹೆಚ್ಚಾದರೂ ಮೊಬೈಲ್ ಬ್ಯಾಟರಿ ಚಾರ್ಜ್ ಬೇಗನೇ ಖಾಲಿಯಾಗುತ್ತದೆ ಎಂಬುದು ನೆನಪಿರಲಿ.

ಪಾಪ್ಅಪ್ ಜಾಹೀರಾತು ಕ್ಲಿಕ್ ಮಾಡಲೇಬೇಡಿ.
ಇಂಟರ್ನೆಟ್ನಲ್ಲಿ ಬ್ರೌಸ್ ಮಾಡುವಾಗ ಪಾಪ್ಅಪ್ ಆಗುವ ಜಾಹೀರಾತುಗಳನ್ನು ನೋಡದೇ ಕ್ಲಿಕ್ ಮಾಡಲೇಬೇಡಿ. ಬ್ರೌಸ್ ಮಾಡುವಾಗ ಪಾಪ್ಅಪ್ ಜಾಹಿರಾತುಗಳು ಕ್ರಿಮಿನಲ್ ಕೆಲಸಕ್ಕಾಗಿರುತ್ತವೆ. ಜೊತೆಗೆ ಅವುಗಳು ನಿಮ್ಮ ಬ್ಯಾಟರಿ ಖಾಲಿ ಮಾಡಬಲ್ಲ ಅನಗತ್ಯ ತಂತ್ರಾಂಶಗಳನ್ನು/ಮಾಲ್ವೇರ್ಗಳನ್ನು ಅಳವಡಿಸುವ ತಂತ್ರಗಳು ಸಹ ಆಗಿರಬಹುದು.

ಈ ಸಮಯದಲ್ಲಿ ಫ್ಲೈಟ್ ಮೋಡ್ನಲ್ಲಿ ಇಡಿ
ನಿಮ್ಮ ಸ್ಮಾರ್ಟ್ಫೋನನ್ನು ಪ್ರಯಾಣದ ಸಮಯದಲ್ಲಿ ಅಗತ್ಯವಿಲ್ಲವೆಂದಾದರೆ ಯಾವಾಗಲೂ ಫ್ಲೈಟ್ ಮೋಡ್ನಲ್ಲಿ ಇಡಿ. ಏಕೆಂದರೆ, ಸಿಗ್ನಲ್ ಸಮಸ್ಯೆ ಇರುವಾಗ ನಿಮ್ಮ ಮೊಬೈಲ್ ಸಿಗ್ನಲ್ಗಾಗಿ ಹುಡುಕಾಡುತ್ತಿರುತ್ತದೆ. ಇದು ಬ್ಯಾಟರಿಯನ್ನು ಹೀರಿಕೊಳ್ಳುತ್ತದೆ. ಹಾಗಾಗಿ, ಸೂಕ್ತ ನೆಟ್ವರ್ಕ್ ಕವರೇಜ್ ಇರುವ ಸ್ಥಳಕ್ಕೆ ಬಂದಾಗ, ಫ್ಲೈಟ್ ಮೋಡ್ ಆಫ್ ಮಾಡಿ.

ಬ್ಯಾಟರಿ ಉಳಿಸಲು ಇತರೆ ಸಲಹೆಗಳು!
ಈ ಮೇಲೆ ತಿಳಿಸಿದ ಸಲಹೆಗಳು ಖಂಡಿತವಾಗಿಯೂ ನಿಮ್ಮ ಫೋನ್ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತವೆ. ಜೊತೆಗೆ, ವೈಬ್ರೇಷನ್ ಆಫ್ ಮಾಡುವುದು, ಬ್ಲೂಟೂತ್, ವೈಫೈ ಸಂಪರ್ಕಗಳನ್ನು ಆಫ್ ಕ್ಯಾಮೆರಾ ಬಳಸುವಾಗಅನಗತ್ಯ ಫ್ಲ್ಯಾಶ್ ಲೈಟ್ ಆನ್ ಆಗದಂತೆ ನೋಡಿಕೊಳ್ಳುವುದು ಮತ್ತು ಮೊಬೈಲ್ ಫೋನನ್ನು ರೀಸ್ಟಾರ್ಟ್ ಮಾಡುವುದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತದೆ.

'ಮೊಬೈಲ್ ಬ್ಯಾಟರಿ' ಸುರಕ್ಷತೆ ಬಗ್ಗೆ ನೀವು ನಂಬಿರುವ ಹಸಿಬಿಸಿ ಸುಳ್ಳುಗಳಿವು!!
ನಮಗೆ ನಮ್ಮ ಮೊಬೈಲ್ ಬ್ಯಾಟರಿ ಬಗ್ಗೆ ಇರುವಷ್ಟು ಗೊಂದಲ ಬೇರೆ ಯಾವ ಗ್ಯಾಜೆಟ್ ಮೇಲೂ ಸಹ ಇಲ್ಲ ಎನ್ನಬಹುದು. ಏಕೆಂದರೆ, ಬ್ಯಾಟರಿ ಸುರಕ್ಷತೆಯ ಬಗ್ಗೆ ನಾವು ಎಷ್ಟೇ ಜಾಗರೂಕರಾಗಿದ್ದರೂ ಸಹ ಅದು ಕಡಿಮೆಯೇ. ಎಷ್ಟೇ ಜಾಗೃತವಾಗಿದ್ದರೂ ನನ್ನ ಸ್ಮಾರ್ಟ್ಪೊನ್ ಬ್ಯಾಟರಿ ಹಾಳಾಗುತ್ತದೆ ಎಂಬ ಅನುಭವ ಎಲ್ಲರಿಗೂ ಬರುವುದು ಇದಕ್ಕೆ ಕಾರಣ.
ಸಾವಿರಾರು ರೂ. ಹಣತೆತ್ತು ಖರೀದಿಸಿದ ಸ್ಮಾರ್ಟ್ಫೋನ್ ಬ್ಯಾಟರಿ ಬಹುಬೇಗ ಹಾಳಾದರೆ ಎಂಬ ಭಯ ಎಲ್ಲರಿಗೂ ಕಾಡುತ್ತದೆ. ಹಾಗಾಗಿಯೇ, ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿ ಇಡಲು ಹಲವು ಸಲಹೆಗಳನ್ನು ಮೊಬೈಲ್ ಬಳಕೆದಾರರು ಕೇಳಿ ತಿಳಿದುಕೊಳ್ಳುತ್ತಾರೆ. ಆದರೆ, ಅವರು ಹೀಗೆ ತಿಳಿದ ಸಲಹೆಗಳಲ್ಲಿ ಹಲವು ಸುಳ್ಳು ಎಂಬುದೇ ಅವರಿಗೆ ತಿಳಿದಿಲ್ಲ.!
ಹೌದು, ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿಡುವುದು ಹೇಗೆ? ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳು ಇವೆ. ಆದರೆ, ಮೊಬೈಲ್ ಫೋನ್ ಬ್ಯಾಟರಿ ಬಗ್ಗೆ ವಿಶ್ವದೆಲ್ಲೆಡೆ ಹಲವಾರು ಸುಳ್ಳುಗಳು ಹರಿದಾಡುತ್ತಲೇ ಇವೆ. ಹಾಗಾಗಿ, ಇಂದಿನ ಲೇಖನದಲ್ಲಿ ಬ್ಯಾಟರಿ' ಕುರಿತು ನೀವು ನಂಬಿರುವ ಸುಳ್ಳುಗಳ ಬಗ್ಗೆ ತಿಳಿಯೋಣ.

ಮಿಥ್ಯ: ಚಾರ್ಜಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು?
ಸತ್ಯ : ಚಾರ್ಜಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಿದರೆ ಮೊಬೈಲ್ ಬ್ಲಾಸ್ಟ್ ಆಗುವುದಿಲ್ಲ. ಮೊಬೈಲ್ ಬ್ಯಾಟರಿ ಹಾರ್ಡ್ವೇರ್ ಅಥವಾ ಸಾಫ್ಟ್ವೇರ್ನಲ್ಲಿ ಸಮಸ್ಯೆ ಎದುರಾಗಿದ್ದರೆ ಯಾವ ಸಮಯದಲ್ಲಿಯಾದರೂ ಮೊಬೈಲ್ ಬ್ಲಾಸ್ಟ್ ಆಗಬಹುದು.

ಮಿಥ್ಯ : ಬ್ಯಾಟರಿ ಪೂರ್ತಿಯಾಗಿ ಖಾಲಿಯಾದ ನಂತರವಷ್ಟೇ ಚಾರ್ಜ್ ಮಾಡಬೇಕು.
ಸತ್ಯ :ಬ್ಯಾಟರಿ 0% ಆದ ಮೇಲೆ ನೀವು ಚಾರ್ಜ್ ಮಾಡಿದರೆ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ. ಹಾಗಾಗಿ, ಬ್ಯಾಟರಿ ಖಾಲಿಯಾಗುವ ಮುನ್ನವೇ ಮೊಬೈಲ್ ಚಾರ್ಜ್ ಮಾಡಿದರೆ ಒಳ್ಳೆಯದು.

ಮಿಥ್ಯ : ಬ್ಯಾಟರಿಯನ್ನು ಐಸ್ನೊಳಗೆ ಇಟ್ಟರೆ ಅದರ ಲೈಫ್ ಹೆಚ್ಚಾಗುತ್ತದೆ.
ಸತ್ಯ :Li-Ion ಬ್ಯಾಟರಿಗಳು ಚಳಿ ಮತ್ತು ಬಿಸಿಯಿಂದ ಬೇಗನೆ ಹಾಳಾಗುತ್ತದೆ. ಬ್ಯಾಟರಿಗಳನ್ನು ಫ್ರಿಡ್ಜ್ನಲ್ಲಿಟ್ಟರೆ ಅದು ಹಾಳಾಗುತ್ತದೆ. ಬ್ಯಾಟರಿಗೆ ಬೆಸ್ಟ್ ಟೆಂಪ್ರೇಚರ್ ಎಂದರೆ ರೂಮ್ ಟೆಂಪ್ರೇಚರ್ ಆಗಿದೆ.

ಮಿಥ್ಯ : ಮೊಬೈಲ್ ಅನ್ನು ಪದೇ ಪದೇ ಸ್ವಿಚ್ ಆಫ್ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.
ಸತ್ಯ : ಮೊಬೈಲ್ ಅನ್ನು ಒಮ್ಮೊಮ್ಮೆ ಸ್ವಿಚ್ ಆಫ್ ಮಾಡುವುದರಿಂದ ಯಾವುದೇ ಬ್ಯಾಟರಿ ಹಾಳಾಗುವುದಿಲ್ಲ. ಆದರೆ, ಪದೇ ಪದೇ ಸ್ವಿಚ್ ಆಫ್ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.

ಮಿಥ್ಯ: ಮತ್ತೆ ಮತ್ತೆ ಚಾರ್ಜ್ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.
ಸತ್ಯ : ಮತ್ತೆ ಮತ್ತೆ ಚಾರ್ಜ್ಮಾಡುವುದರಿಂದ ಬ್ಯಾಟರಿ ಹಾಳಾಗುವುದಿಲ್ಲ. ಆದರೆ, ಬ್ಯಾಟರಿ ಸಾಕೆಟ್ಗಳನ್ನು ಇದು ಹಾಳುಮಾಡಬಹುದು.

ಮಿಥ್ಯ : ಥರ್ಡ್ ಪಾರ್ಟಿ ಆಪ್ ಬ್ಯಾಟರಿ ಲೈಫ್ ಹೆಚ್ಚಿಸಲು ನೆರವಾಗುತ್ತದೆ.
ಸತ್ಯ :ಯಾವುದೇ ಥರ್ಡ್ ಪಾರ್ಟಿ ಆಪ್ಗಳಿಂದ ಬ್ಯಾಟರಿ ಲೈಫ್ ಹೆಚ್ಚಾಗಲು ಸಾಧ್ಯವೇ ಇಲ್ಲ. ಬದಲಾಗಿ, ಅವುಗಳು ಸಹ ನಿಮ್ಮ ಮೊಬೈಲ್ ಬ್ಯಾಟರಿಯನ್ನು ತಿನ್ನುತ್ತವೆ.

ಮಿಥ್ಯ : ಫೋನ್ ಮೊದಲ ಬಾರಿ ಬಳಕೆ ಮಾಡುವ ಮೊದಲು ಫುಲ್ ಚಾರ್ಜ್ ಮಾಡಿ.
ಸತ್ಯ : ಇದು ಸುಳ್ಳು. ಎಲ್ಲಾ ಗ್ರಾಹಕರು ತೆಗೆದುಕೊಳ್ಳುವ ಫೋನ್ನಲ್ಲಿ ಚಾರ್ಜ್ ಮೊದಲೇ ಇರುತ್ತದೆ. ಇದನ್ನು ಸ್ವಿಚ್ ಆಗುವವರೆಗೂ ಬಳಕೆ ಮಾಡಬಾರದು ಎಂದು ಹಾಗೆ ಹೇಳುತ್ತಾರೆ.


Click it and Unblock the Notifications








