ಪೇಟಿಎಂ ಆಪ್ನಲ್ಲಿ ಹೂಡಿಕೆ ಮಾಡಬಹುದು..! ಹೇಗೆ ಗೊತ್ತಾ..?
ಭಾರತೀಯ ಪೇಮೆಂಟ್ ಮಾರುಕಟ್ಟೆಯಲ್ಲಿ ಸಾಕಷ್ಟು ವೇಗವಾಗಿ ಬೆಳವಣಿಗೆಯನ್ನು ಸಾಧಿಸುತ್ತಿರುವ ಪೆಮೆಂಟ್ ಆಪ್ ಪೇಟಿಎಂ, ತನ್ನ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಇನ್ನು ಮುಂದೆ ಪೇಟಿಎಂ ಬಳಕೆದಾರರು ವೆಬ್ಸೈಟ್ ಇಲ್ಲವೇ ಆಫ್ ಮೂಲಕವೇ ಮ್ಯೂಚಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಆಯ್ಕೆಯೊಂದು ಒಂದು ಕಾಣಿಸಿಕೊಂಡಿದೆ.

ರೂ.100 ಗಳಿಂದ ಹಿಡಿದು ನಿಮಗೆ ಎಷ್ಟು ಬೇಕಾದರೂ ಹೂಡಿಕೆ ಮಾಡುವಂತಹ ಅವಕಾಶಶ ವನ್ನು ಪೇಟಿಎಂ ಮಾಡಿಕೊಟ್ಟಿದ್ದು, ಇಲ್ಲಿ ನೀವು ಹೇಗೆ ಪೇಟಿಎಂ ಮೂಲಕ ಹೂಡಿಕೆ ಮಾಡುವುದು ಎಂಬುದನ್ನು ತಿಳಿಸಿಕೊಡಲಾಗಿದೆ.
ಹಂತಗಳು
ಮೊದಲಿಗೆ ಪೇಟಿಎಂ ಆಪ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಆಪಲ್ ಹಾಗೂ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ನೀವು ಈ ಆಪನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಮಾಡಿದ ನಂತರದಲ್ಲಿ ನಿಮ್ಮ ಪೇಟಿಎಂ ಅಕೌಂಟ್ ನೊಂದಿಗೆ ಆಪ್ ನಲ್ಲಿ ಸೈನ್ ಇನ್ ಆಗಿ, ಮೊಬೈಲ್ ನಂಬರ್ ಇಲ್ಲವೇ ಇ-ಮೇಲ್ ಐಡಿ ನೀಡುವ ಮೂಲಕ ನೀವು sign in ಆಗಬಹುದು.

ನಂತರ ಅಪ್ಲೈ ಫಾರ್ ಆಕ್ಸಿಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ರಿಜಿಸ್ಟ್ರೇಷನ್ ಗಾಗಿ ಕ್ಯೂ ಕಾಣಿಸಿಕೊಳ್ಳುವುದು ಕ್ಯೂನಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳಲಿದೆ.
ನೀವು ವೇಗವಾಗಿ ಕ್ಯೂನಲ್ಲಿ ಮಂಜು ಹೋಗಬೇಕಾದರೆ ಫಾಸ್ಟ್ ರಿಜಿಸ್ಟರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಕೆ ವೈ ಸಿ ಮಾಡುವುದು ಹೇಗೆ..?
ನೀವು ಹೂಡಿಕೆ ಮಾಡುವ ಸಲುವಾಗಿ ಮಾಡುವ ಕೆವೈಸಿ ಪೂರ್ತಿ ಮಾಡುವುದು ಅನಿವಾರ್ಯವಾಗಿದೆ. ಹಿನ್ನಲೆಯಲ್ಲಿ ಇಲ್ಲಿ ನೀವು ನಿಮ್ಮ ಪಾನ್ ಕಾರ್ಡ್ ನಂಬರ್, ನಿಮ್ಮ ಬ್ಯಾಂಕ್ ಅಕೌಂಟ್ ಡಿಟೈಲ್ಸ್ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಾಗಿದೆ.
ಇದಾದ ನಂತರ ದಲ್ಲಿ ನಿಮ್ಮ ಡಿಜಿ ಟಲ್ ಸಹಿಯನ್ನು ಮಾಡಬೇಕಾಗಿದ್ದು, ಇದಕ್ಕಾಗಿ ಒಂದು ಪೇಪರ್ ನಲ್ಲಿ ನಿಮ್ಮ ಸಹಿಯನ್ನು ಮಾಡಿ ಅದನ್ನು ಫೋಟೋ ತೆಗೆದು ಅದನ್ನು ಆಪ್ ನಲ್ಲಿ ಅಪ್ ಲೋಡ್ ಮಾಡಿ.

ನಂತರದಲ್ಲಿ ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕಾಗಿದ್ದು ಇದಕ್ಕಾಗಿ ನಿಮ್ಮ ಮುಖ ಸರಿಯಾಗಿ ಕಾಣುವಂತೆ ಮಾಡಿ
ಇದಾದ ನಂತರ ದಲ್ಲಿ ಸಣ್ಣದೊಂದು ವಿಡಿಯೋ ಕಾಣಿಸಿಕೊಳ್ಳಲಿದ್ದು ಇರಲಿ ನಿಮ್ಮ ಪೂರ್ಣ ಹೆಸರು ಕಾಣಿಸಿಕೊಳ್ಳಲು ಆನಂತರದಲ್ಲಿ ನಿಮಗೆ ಕೆವೈಸಿ ಪೂರ್ಣವಾಗಲಿದೆ. ನೀವು ಇದಾದ ನಂತರ ದಲ್ಲಿ ನೀವು ಪೂರ್ಣ ಪ್ರಮಾಣದ ಹೂಡಿಕೆ ಮಾಡಬಹುದಾಗಿದೆ.


Click it and Unblock the Notifications








