Home
ಟೆಕ್ ನೌಕರಿ

ಫೋನ್‌ನಲ್ಲಿ ಕ್ಲಿಕ್ಕಿಸಿದ ಫೋಟೋ ಎಲ್ಲಿ ತೆಗೆದಿದ್ದು ಎಂಬುದು ತಿಳಿಬೇಕಾ..?

By Gizbot Bureau

ಎರಡು ಮೂರು ದಶಕದ ಹಿಂದಿನ ಮಾತು. ಫೋಟೋ ತೆಗಿಬೇಕು ಅಂದರೆ ರೀಲ್ ಸುತ್ತಿ ಫೋಟೋ ಹೇಗೆ ಬಂದಿದೆ ಎಂಬುದು ಕೂಡ ತಿಳಿದಿರುತ್ತಿರಲಿಲ್ಲ. ಆದರೆ ಕಾಲ ಉರುಳಿದ ಹಾಗೆ ಛಾಯಾಗ್ರಹಣದ ಪ್ರಪಂಚ ಅದೆಷ್ಟು ಬೆಳೆದುಬಿಟ್ಟಿದೆ ಅಂದರೆ ಊಹಿಸಲೂ ಕೂಡ ಅಸಾಧ್ಯ. ಅದರಲ್ಲೂ ಫೋನ್ ಗಳಲ್ಲಿ ಕ್ಯಾಮರಾಗಳು ಕಾಲಿಟ್ಟ ಮೇಲೆ ನಡೆಯುತ್ತಿರುವ ಬದಲಾವಣೆಗಳು ಮೂಗಿನ ಮೇಲೆ ಬೆರಳಿಡುವಂತದ್ದಾಗಿದೆ. ಈಗಂತೂ ನಿಂತಲ್ಲಿ ಕುಂತಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಮಂದಿಯೇ ಹೆಚ್ಚು.

ಕೆಲವು ವರ್ಷಗಳ ಹಿಂದೆ ಈ ಫೋಟೋ ಎಲ್ಲಿ ತೆಗೆದದ್ದು ಅಂತ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ನೀವು ಯಾವತ್ತೋ ಕ್ಲಿಕ್ಕಿಸಿದ ಫೋಟೋ ಬಗೆಗಿನ ಸಂಪೂರ್ಣ ವಿವರವನ್ನು ಪಡೆಯಲು ಸಾಧ್ಯವಿದೆ. ಎಲ್ಲಿ ತೆಗದದ್ದು, ಯಾವಾಗ ತೆಗೆದದ್ದು, ಯಾವ ಮೊಬೈಲಿನ ಯಾವ ಕ್ಯಾಮರಾದಲ್ಲಿ ತೆಗೆದದ್ದು ಹೀಗೆ ಎಲ್ಲ ವಿವರವೂ ಲಭ್ಯವಾಗುತ್ತದೆ.

ಫೋನ್‌ನಲ್ಲಿ ಕ್ಲಿಕ್ಕಿಸಿದ ಫೋಟೋ ಎಲ್ಲಿ ತೆಗೆದಿದ್ದು ಎಂಬುದು ತಿಳಿಬೇಕಾ..?

ಈಗ ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಗಳ ಕ್ಯಾಮರಾ ವಿಭಾಗವು ಹೆಚ್ಚು ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಅತ್ಯುತ್ತಮ ಕ್ಯಾಮರಾ ಫೋನ್ ಗಳು ಕಡಿಮೆ ಬಜೆಟ್ ಗೆ ಲಭ್ಯವಾಗುತ್ತಿದೆ. ಇತ್ತೀಚೆಗೆ ಬರುತ್ತಿರುವ ಸ್ಮಾರ್ಟ್ ಫೋನ್ ಗಳಲ್ಲಿ ಕ್ಲಿಕ್ಕಿಸಲಾಗುವ ಫೋಟೋಗಳಲ್ಲಿ ಫೋಟೋ ಬಗೆಗಿನ ಸಾಮಾನ್ಯ ಮಾಹಿತಿಗಳಾದ ಮೋಡ್, ಶಟರ್ ಸ್ಪೀಡ್, ಐಎಸ್ಓ, ದ್ಯುತಿರಂಧ್ರ ಮತ್ತು ಸ್ಥಳದ ವಿವರಗಳು ಲಭ್ಯವಾಗುತ್ತದೆ.

ಜಿಪಿಎಸ್ ತಂತ್ರಜ್ಞಾನದ ಮುಖಾಂತರ ಸ್ಮಾರ್ಟ್ ಫೋನ್ ಕ್ಯಾಮರಾಗಳು ಫೋಟೋ ಕ್ಲಿಕ್ಕಿಸಲಾಗಿರುವ ಸ್ಥಳದ ವಿವರವನ್ನು ಸ್ವಯಂಚಾಲಿತವಾಗಿ ಫೋಟೋಗೆ ಸೇರಿಸುತ್ತದೆ. ಹಾಗಾದ್ರೆ ಫೋಟೋ ಕ್ಲಿಕ್ಕಿಸಿದ ಸ್ಥಳದ ವಿವರವನ್ನು ತಿಳಿಯಬೇಕಾದರೆ ನೀವೇನು ಮಾಡಬೇಕು.

ಈ ವಿಚಾರವನ್ನು ನೀವು ತಿಳಿಯುವ ಮುನ್ನ ಕೆಲವು ಪ್ರಮುಖ ಅಂಶಗಳನ್ನು ನೆನಪಿನಲ್ಲಿ ಇಡಬೇಕು, ಲೊಕೇಷನ್ ಟ್ಯಾಗ್ ಸೇವ್ ಆಗಬೇಕು ಅಂದರೆ ಜಿಪಿಎಸ್ ಟ್ಯಾಗ್ ಆಯ್ಕೆ ಅನೇಬಲ್ ಆಗಿರಬೇಕು. ಕ್ಯಾಮರಾಗೂ ಕೂಡ ಜಿಪಿಎಸ್ ಆಕ್ಸಿಸ್ ಮಾಡಲು ಅಗತ್ಯವಿರುವ ಪರ್ಮಿಷನ್ ಗಳನ್ನು ನೀಡಿರಬೇಕಾಗುತ್ತದೆ. ಹೆಚ್ಚಿನ ವಿವರ ತಿಳಿಯಲು ಮುಂದೆ ಓದಿ.

ಫೋನ್‌ನಲ್ಲಿ ಕ್ಲಿಕ್ಕಿಸಿದ ಫೋಟೋ ಎಲ್ಲಿ ತೆಗೆದಿದ್ದು ಎಂಬುದು ತಿಳಿಬೇಕಾ..?

ಲೊಕೇಷನ್ ಟ್ಯಾಗ್ ನ್ನು ಅನೇಬಲ್ ಮಾಡುವ ವಿಧಾನ :

ಆಂಡ್ರಾಯ್ಡ್ ಬಳಕೆದಾರರಿಗೆ:

1. ಕ್ಯಾಮರಾ ಆಪ್ ನ್ನು ತೆರೆಯಿರಿ

2. ಕ್ಯಾಮರಾ ಆಪ್ ನ ಸೆಟ್ಟಿಂಗ್ಸ್ ಗೆ ತೆರಳಿ

3. ಲೊಕೇಷನ್ ಟ್ಯಾಗ್ ಅಥವಾ ಸೇವ್ ಲೊಕೇಷನ್ ಆಯ್ಕೆಯನ್ನು ಅನೇಬಲ್ ಮಾಡಿ.

ಐಓಎಸ್ (ಐಫೋನ್/ಐಓಎಸ್) ಬಳಕೆದಾರರಿಗೆ :

1. ಸೆಟ್ಟಿಂಗ್ಸ್ ನ್ನು ತೆರೆಯಿ ಮತ್ತು ಪ್ರೈವೆಸಿ ಆಯ್ಕೆಗೆ ಹೋಗಿ

2. ಲೊಕೆಷನ್ ಸರ್ವೀಸ್ ನ್ನು ಆನ್ ಮಾಡಿ

3. ಈಗ, ಸ್ಕ್ರೋಲ್ ಡೌನ್ ಮಾಡಿ ಮತ್ತು ಕ್ಯಾಮರಾ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು “ವೈಲ್ ಯ್ಯೂಸಿಂಗ್ ದಿ ಆಪ್” ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಛಾಯಾಚಿತ್ರವನ್ನು ತೆಗೆದ ಸ್ಥಳದ ಮಾಹಿತಿ ಪಡೆಯುವ ವಿಧಾನ :

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ :

1. ಡಿಫಾಲ್ಟ್ ಆಗಿರುವ ಗ್ಯಾಲರಿ ಆಪ್ ನ್ನು ತೆರೆಯಿರಿ ಮತ್ತು ಚಿತ್ರವನ್ನು ಆಯ್ಕೆ ಮಾಡಿ.

2. ಈಗ, ಬಲಭಾಗದ ಮೇಲ್ತುದಿಯಲ್ಲಿರುವ ಮೂರು ಲಂಬವಾಗಿರುವ ಚುಕ್ಕಿಗಳನ್ನು ಟ್ಯಾಪ್ ಮಾಡಿ.

3. ಇನ್ಫೋ ಅಥವಾ ಡಿಟೇಲ್ಸ್ ಆಯ್ಕೆಯನ್ನು ಗುರುತಿಸಿ ಒತ್ತಬೇಕು ( ನೀವು ಯಾವ ಗ್ಯಾಲರಿ ಆಪ್ ನ್ನು ಬಳಸುತ್ತಿದ್ದೀರಿ ಎಂಬುದನ್ನು ಆಧರಿಸಿರುತ್ತದ).

4. ಇಲ್ಲಿ ನೀವು ಚಿತ್ರವನ್ನು ತೆಗೆದ ಸ್ಥಳದ ಮಾಹಿತಿಯನ್ನು ಗಮನಿಸಬಹುದು ಮತ್ತು ಅದರ ಜೊತೆಗೆ ಸೈಜ್, ಶಟರ್ ಸ್ಪೀಡ್, ಐಎಸ್ಓ ಇತ್ಯಾದಿ ಮಾಹಿತಿಗಳೂ ಕೂಡ ಒಳಗೊಂಡಿರುತ್ತದೆ.

ಐಓಎಸ್ (ಐಫೋನ್/ಐಓಎಸ್) ಡಿವೈಸ್ ಗಳಲ್ಲಿ :

1. ಫೋಟೋಸ್ ಆಪ್ ನ್ನು ಲಾಂಚ್ ಮಾಡಿ ಮತ್ತು ಆಲ್ಬಮ್ಸ್ ಟ್ಯಾಬ್ ಗೆ ಸ್ವಿಚ್ ಆಗಿ.

2. ಮ್ಯಾಪ್ ನಲ್ಲಿ ಇಮೇಜ್ ಗಳ ಸ್ಥಳದ ಗುರುತಿಸುವಿಕೆಗಾಗಿ “ಪ್ಲೇಸಸ್” ಆಯ್ಕೆಯನ್ನ ಟ್ಯಾಪ್ ಮಾಡಿ.

3. ನಿಖರವಾದ ಸ್ಥಳದ ಗುರುತಿಸುವಿಕೆಗಾಗಿ ಯಾವುದೇ ಚಿತ್ರವನ್ನು ಟ್ಯಾಪ್ ಮಾಡಿ ಗಮನಿಸಬಹುದು.

Best Mobiles in India

English summary
How to know the location of the photo taken using from our smartphone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+