ಶಿಯೋಮಿ ಸ್ಮಾರ್ಟ್‌ಫೋನ್‌ನಲ್ಲಿ ಆಡ್‌ಗಳನ್ನು ಸ್ಟಾಪ್ ಮಾಡುವುದು ಹೇಗೆ..?


Get to know how to disable ads on your Xiaomi smartphone

ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ, ಸಾಕಷ್ಟು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯ ಪಾಲನ್ನು ಪಡೆದುಕೊಂಡಿದೆ. ದಿನೇ ದಿನೇ ಹೆಚ್ಚಿನ ಬಳಕೆದಾರರನ್ನು ಪಡೆಯುತ್ತಿರುವ ಸಂದರ್ಭದಲ್ಲಿ ತನ್ನ ಸ್ಮಾರ್ಟ್‌ಫೋನಿನಲ್ಲಿ ಆಡ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೋರಿಸಲು ಮುಂದಾಗಿದೆ. ಶಿಯೋಮಿ ಪೋನಿನಲ್ಲಿ ಇರುವ ಶಿಯೋಮಿ ಆಪ್‌ಗಳು ಹೆಚ್ಚಿನ ಪ್ರಮಾದ ಆಡ್‌ಗಳನ್ನು ಪ್ರದರ್ಶಿಸುತ್ತಿವೆ.

ಈ ಹಿನ್ನಲೆಯಲ್ಲಿ ಇಂದು ನಿಮ್ಮ ಶಿಯೋಮಿ ಸ್ಮಾರ್ಟ್‌ಫೋನಿನಲ್ಲಿ ಹೇಗೆ ಆಡ್‌ಗಳನ್ನು ಬ್ಲಾಕ್ ಮಾಡುವುದು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಇದರ ಮೂಲಕ ನೀವು ಇನ್ನು ಮುಂದೆ ನಿಮ್ಮ ಶಿಯೋಮಿ ಸ್ಮಾರ್ಟ್‌ಪೋನಿನಲ್ಲಿ ಆಡ್‌ಗಳನ್ನು ಡಿಸೆಬಲ್ ಮಾಡಬಹುದಾಗಿದೆ. ಅದು ಹೇಗೆ ಎಂಬುದನ್ನು ಮುಂದಿನಂತೆ ನೋಡುವ.

ಆಡ್‌ಗಳನ್ನು ತಡೆಯುವುದು ಹೇಗೆ..?

ಹಲವು ಮಂದಿ ಶಿಯೋಮಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಬರುತ್ತಿರುವ ಆಡ್‌ಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಹಿನ್ನಲೆಯಲ್ಲಿ ಆಡ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನು ಹಲವು ಬಾರಿ ಕೇಳುತ್ತಿದ್ದರು. ಈ ಹಿನ್ನಲೆಯಲ್ಲಿ ಶಿಯೋಮಿ ಫೋನ್‌ಗಳಲ್ಲಿ ಹೇಗೆ ಆಡ್ ಬ್ಲಾಕ್ ಮಾಡುವುದು ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಮಾದರಿ ಒಂದು:

ಶಿಯೋಮಿ ಸ್ಮಾರ್ಟ್‌ಫೋನಿನಲ್ಲಿ ಆಡ್‌ ತೋರಿಸುತ್ತಿರುವ ಆಪ್‌ ಆಡ್‌ ಗಳನ್ನು ಬ್ಲಾಕ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಮೊದಲಿಗೆ ಆಪ್‌ ಸೆಟ್ಟಿಂಗ್ಸ್‌ ನಲ್ಲಿ receive recommendations ಎಂಬ ಆಯ್ಕೆಯನ್ನು ಆಪ್ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯ ಆಡ್‌ಗಳನ್ನು ನೀವು ನೋಡುವುದಿಲ್ಲ.

ಮತ್ತೊಂದು ಮಾದರಿ:

ಇದಲ್ಲದೇ ಸೆಟ್ಟಿಂಗ್ಸ್‌ನಲ್ಲಿ ಇನ್ನೊಂದು ಮಾದರಿಯಲ್ಲಿ ಬದಲಾವಣೆಯನ್ನು ಮಾಡುವ ಮೂಲಕವೂ ನೀವು ಆಡ್‌ಗಳನ್ನು ನೋಡದಂತೆ ಮಾಡಬಹುದಾಗಿದೆ. ಇದು ಹೇಗೆ ಎಂಬುದನ್ನು ಮುಂದಿನಂತೆ ನೊಡುವ.

ಹಂತ 01:

ಮೊದಲಿಗೆ ಶಿಯೋಮಿ ಫೋನಿನಲ್ಲಿ ಸೆಟ್ಟಿಂಗ್ಸ್ ಆಯ್ಕೆಯನ್ನು ಓಪನ್ ಮಾಡಿರಿ. ಮಾಡಿದ ನಂತರದಲ್ಲಿ Settings > Additional Settings > ಆಯ್ಕೆಯನ್ನು ಓಪನ್ ಮಾಡಿರಿ.

ಹಂತ 02:

Additional Settings >ಆಯ್ಕೆಯನ್ನು ಓಪನ್ ಮಾಡಿದ ನಂತರದಲ್ಲಿ Authorisation and revocation > ಎಂಬ ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಅದನ್ನು ಓಪನ್ ಮಾಡಿರಿ.

ಹಂತ 03:

ಇದಾದ ನಂತರದಲ್ಲಿ ನೀವು ಆಪ್‌ಗಳ ಲಿಸ್ಟ್‌ವೊಂದು ಕಾಣಿಸಿಕೊಳ್ಳಲಿದೆ. ಅದರಲ್ಲಿ msa ಎಂಬ ಆಯ್ಕೆಯನ್ನು ಡಿಸೆಬಲ್ ಮಾಡಿ. ಹೀಗೇ ಮಾಡಿದ ನಂತರದಲ್ಲಿ ನೀವು ಶಿಯೋಮಿ ಫೋನಿನಲ್ಲಿ ಆಡ್ ಬರದಂತೆ ತಡೆಯಬಹುದಾಗಿದೆ.


Read More About: how to xiaomi smartphone ads
Have a great day!
Read more...

English Summary

How to stop Xiaomi smartphone showing ads. to know more visit kannada.gizbot.com