ಫಾಸ್ಟ್‌ಟ್ಯಾಗ್‌ ಆಕ್ಟಿವ್‌ ಮತ್ತು ರೀಚಾರ್ಜ್‌ ಮಾಡೋದು ಹೇಗೆ..?


ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಡಿಸೆಂಬರ್‌ 15ರಿಂದ ದೇಶಾದ್ಯಂತ ಎಲ್ಲಾ ಟೋಲ್ ಪಾವತಿಗಾಗಿ ವಾಣಿಜ್ಯ ಮತ್ತು ಖಾಸಗಿ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ನ್ನು ಕಡ್ಡಾಯಗೊಳಿಸಿದೆ. ಹೆದ್ದಾರಿಗಳಲ್ಲಿ ಉಂಟಾಗುತ್ತಿದ್ದ ಅಡಚಣೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ಪ್ರಯತ್ನ ಮಾಡಿದೆ. ಆದಾಗ್ಯೂ, ನೀವು ಈಗಾಗಲೇ ಫಾಸ್ಟ್‌ಟ್ಯಾಗ್‌ಗಳನ್ನು ಮೀಸಲಾದ ಪಿಒಎಸ್ ಕೇಂದ್ರಗಳು, ಆನ್‌ಲೈನ್ ಮಳಿಗೆಗಳು ಅಥವಾ ಸೇರ್ಪಡೆಗೊಂಡ ಬ್ಯಾಂಕುಗಳಿಂದ ಖರೀದಿಸಿದ್ದೀರಿ ಎಂದುಕೊಂಡರು, ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ಬಳಸಲು ಅದನ್ನು ಸಕ್ರಿಯಗೊಳಿಸಬೇಕಾಗುತ್ತದೆ.

ಆದ್ದರಿಂದ, ನೀವು ಇನ್ನೂ ಫಾಸ್ಟ್‌ಟ್ಯಾಗ್‌ ಸಕ್ರಿಯಗೊಳಿಸಲು ಪರದಾಡುತ್ತಿದ್ದರೆ ಅಥವಾ ನಿಮ್ಮ ಫಾಸ್ಟ್‌ಟ್ಯಾಗ್‌ನ್ನು ಹೇಗೆ ರೀಚಾರ್ಜ್ ಮಾಡೋದು ಎಂದು ಯೋಚಿಸುತ್ತಿದ್ದರೆ, ಮುಂದೆ ನೀಡಿರುವ ಹಂತಗಳನ್ನು ಅನುಸರಿಸಿ.

ಎರಡು ಮಾರ್ಗ

ಫಾಸ್ಟ್‌ಟ್ಯಾಗ್‌ನ್ನು ಸಕ್ರಿಯಗೊಳಿಸಲು ಎರಡು ಮಾರ್ಗಗಳಿವೆ. ಮೈಫಾಸ್ಟ್‌ಟ್ಯಾಗ್ ಅಪ್ಲಿಕೇಶನ್ ಬಳಸಿ ಸ್ವಯಂ-ಸಕ್ರಿಯಗೊಳಿಸುವುದು ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಕ್ರಿಯಗೊಳಿಸುವುದು.

ವಿಧಾನ 1: ಮೈಫಾಸ್ಟ್‌ಟ್ಯಾಗ್ ಆಪ್‌ ಬಳಕೆ

ಅಮೆಜಾನ್‌ನಂತಹ ಆನ್‌ಲೈನ್ ವ್ಯಾಪಾರಿಗಳಿಂದ ಫಾಸ್ಟ್‌ಟ್ಯಾಗ್‌ನ್ನು ನೀವು ಖರೀದಿಸಿದ್ದರೆ ಮಾತ್ರ ಇಲ್ಲಿ ಸ್ವಯಂ-ಸಕ್ರಿಯಗೊಳಿಸಬಹುದು. ಸಕ್ರಿಯ ಪ್ರಕ್ರಿಯೆಯು ಸರಳವಾಗಿದೆ. ಇಲ್ಲಿ ನೀವು ಮಾಡಬೇಕಿರುವುದು ಏನೆಂದರೆ, ನಿಮ್ಮ ವಾಹನದ ವಿವರಗಳನ್ನು ಮೈಫಾಸ್ಟ್‌ಟ್ಯಾಗ್ ಅಪ್ಲಿಕೇಶನ್‌ಗೆ ನಮೂದಿಸಿದರೆ ಸಾಕು, ಅದು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ.

ವಿಧಾನ 2: ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ

ಪ್ರಮಾಣೀಕೃತ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಖರೀದಿಸಿದ ನಂತರ ಫಾಸ್ಟ್‌ಟ್ಯಾಗ್‌ಗಳನ್ನು ಯಾವುದೇ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು ಮತ್ತು ಫಾಸ್ಟ್‌ಟ್ಯಾಗ್‌ನ್ನು ಸಕ್ರಿಯಗೊಳಿಸಬಹುದು. ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಬಳಕೆದಾರರು ತಮ್ಮ ಕೆವೈಸಿಯ ಅಗತ್ಯ ದಾಖಲೆಗಳು ಮತ್ತು ವಾಹನದ ನೋಂದಣಿ ಪ್ರಮಾಣಪತ್ರವನ್ನು (ಆರ್‌ಸಿ) ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ..?

ಫಾಸ್ಟ್‌ಟ್ಯಾಗ್‌ಗಳನ್ನು ಸಾಮಾನ್ಯವಾಗಿ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಲಾಗಿರುವುದರಿಂದ, ಎಲ್ಲಾ ಪಾವತಿಗಳನ್ನು ನೇರವಾಗಿ ಲಿಂಕ್ ಮಾಡಿದ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಬಳಕೆದಾರರಿಗೆ ಎನ್‌ಎಚ್‌ಎಐ ಪ್ರಿಪೇಯ್ಡ್ ವ್ಯಾಲೆಟ್‌ ರಚಿಸಲು, ರೀಚಾರ್ಜ್ ಮಾಡಲು ಮತ್ತು ಪಾವತಿಗಳಿಗಾಗಿ ಫಾಸ್ಟ್‌ಟ್ಯಾಗ್‌ನೊಂದಿಗೆ ಸಂಯೋಜಿಸಲು ಸಹ ಅವಕಾಶವಿದೆ. ಪರ್ಯಾಯವಾಗಿ, ಮೈಫಾಸ್ಟ್‌ಟ್ಯಾಗ್ ಅಪ್ಲಿಕೇಶನ್ ಮೂಲಕ ಯುಪಿಐ ಬಳಸಿ ನಿಮ್ಮ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಬಹುದು.

Most Read Articles
Best Mobiles in India
Read More About: fastag news how to tips and tricks

Have a great day!
Read more...

English Summary

How To Buy And Activate New Fastag For Your Vehicle