ಗೂಗಲ್‌ ಪ್ಲೇ ನಲ್ಲಿ ಕಂಟ್ರಿಕೋಡ್‌ ಬದಲಾಯಿಸಲು ಹೀಗೆ ಮಾಡಿ?


ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸವಿರಲಿ ಅದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಆಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆಯಾ ಅಂತಾ ಸರ್ಚ್‌ ಮಾಡೋದೇ ಜಾಸ್ತಿ. ಅದರಲ್ಲೂ ಗೂಗಲ್‌ ಪ್ಲೆ ಸ್ಟೋರ್‌ನಲ್ಲಿ ಲಭ್ಯವಿರೋ ಆಪ್ಲಿಕೇಶನ್‌ಗಳು ಗೇಮ್‌ಗಳ ಬಗ್ಗೆ ಆಗಾಗ ಸರ್ಚ್ ಮಾಡ್ತಾ ಇರ್ತಾರೆ. ಆದ್ರೆ ಎಲ್ಲಾ ರಾಷ್ಟ್ರಗಳಲ್ಲೂ ಒಂದೇ ಮಾದರಿಯಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಲಭ್ಯವಿರುವುದಿಲ್ಲ. ಆ ದೇಶದ ನಿಯಮಕ್ಕೆ ತಕ್ಕಂತೆ ಯಾವ ಗೇಮ್‌ ಇರಬಹುದು ಯಾವ ಆಪ್ಲಿಕೇಶನ್‌ ಲಭ್ಯವಿರಬೇಕು ಅನ್ನೊದನ್ನ ಗೂಗಲ್‌ ಪ್ಲೇ ಸ್ಟೋರ್‌ ನಿರ್ಧರಿಸುತ್ತದೆ.

ಹೌದು, ಆಂಡ್ರಾಯ್ಡ್ ಬಳಕೆದಾರರು ತಮ್ಮ ಗೂಗಲ್ ಪ್ಲೇ ಸ್ಟೋರ್ ಖಾತೆಯಲ್ಲಿ ಯಾವ ವಿಷಯವನ್ನು ನೋಡಬಹುದು ಎಂಬುದನ್ನು ಗೂಗಲ್ ಪ್ಲೇ ಕಂಟ್ರಿ ನಿರ್ಧರಿಸುತ್ತದೆ. ಆದರಿಂದ ದೇಶದ ನಿಯಮಗಳನ್ನ ಅವಲಂಬಿಸಿ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿನ ಅಪ್ಲಿಕೇಶನ್‌ಗಳು, ಗೇಮ್‌ಗಳು ಮತ್ತು ಇತರ ವಿಷಯಗಳು ಬದಲಾಗಬಹುದು. ಆದ್ದರಿಂದ, ಆಂಡ್ರಾಯ್ಡ್ ಬಳಕೆದಾರರಾಗಿ, ನೀವು ಹೊಸ ದೇಶಕ್ಕೆ ತೆರಳಿ ನಿಮ್ಮ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೇಶವನ್ನು ಬದಲಾಯಿಸಲು ಬಯಸಿದರೆ, ನೀವು ಅನುಸರಿಸಬೇಕಾದ ಕೆಲವು ಸರಳ ಹಂತಗಳಿವೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೇಶದ ಆಯ್ಕೆ ಕಾಲಂ ಬದಲಾಯಿಸುವುದು ಹೇಗೆ ?

ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕಂಟ್ರಿಕೋಡ್‌ ಬದಲಾಯಿಸಲು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನಲ್ಲಿ ಹೊಸ ದೇಶದ ಆಯ್ಕೆಯ ಕಾಲಂ ಅನ್ನು ಹೊಂದಿಸಬೇಕಾಗುತ್ತದೆ. ಕಾಲಂನಲ್ಲಿ ಹೊಸ ದೇಶವನ್ನ ಆಯ್ಕೆ ಮಾಡಲು, ಗೂಗಲ್ ಪ್ರಕಾರ, ನೀವು ಆ ದೇಶದಲ್ಲಿರಬೇಕು ಮತ್ತು ಆ ದೇಶದಿಂದ ಹಣ ಪಾವತಿ ವಿಧಾನವನ್ನು ಹೊಂದಿರಬೇಕು. ನಿಮ್ಮ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೇಶವನ್ನು ಬದಲಾಯಿಸಲು ಕೆಳಗೆ ತಿಳಿಸಲಾದ ಈ ಹಂತಗಳನ್ನು ಅನುಸರಿಸಿ.

ಹಂತ 1: ಮೊದಲನೆಯದಾಗಿ, ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೀವು ಗೂಗಲ್ ಪ್ಲೇ ಸ್ಟೋರ್ ಅನ್ನು ತೆರೆಯಬೇಕು.

ಹಂತ 2: ಇಲ್ಲಿ, ನೀವು ಮೆನು, ನಂತರ ಖಾತೆ ಮತ್ತು ನಂತರ ದೇಶ ಮತ್ತು ಪ್ರೊಫೈಲ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಹಂತ 3: ನೀವು ಖಾತೆಯನ್ನು ಸೇರಿಸಲು ಬಯಸುವ ದೇಶವನ್ನು ಟ್ಯಾಪ್ ಮಾಡಬೇಕು.

ಹಂತ 4: ಈಗ, ಆ ದೇಶಕ್ಕೆ ಪಾವತಿ ವಿಧಾನವನ್ನು ಸೇರಿಸಲು ನೀವು ತೆರೆಯ ಮೇಲಿನ ಸೂಚನೆಗಳನ್ನು ಪಾಲಿಸಬೇಕು.

ಹಂತ 5: ಮೊದಲ ಪಾವತಿ ವಿಧಾನವು ನೀವು ಪ್ರೊಫೈಲ್ ಸೇರಿಸುತ್ತಿರುವ ದೇಶದಿಂದ ಇರಬೇಕು. ನೀವು ಪ್ರೊಫೈಲ್ ಅನ್ನು ರಚಿಸಿದ ನಂತರ ನೀವು ಇತರ ದೇಶಗಳಿಂದ ಪಾವತಿ ವಿಧಾನಗಳನ್ನು ಸೇರಿಸಬಹುದು.

ಹಂತ 6: ಇದು ಹೊಸ ದೇಶಕ್ಕೆ ಲಿಂಕ್ ಮಾಡಲಾದ ಹೊಸ ಗೂಗಲ್‌ ಪಾವತಿ ವಿಧಾನದ ಪ್ರೊಫೈಲ್ ಅನ್ನು ರಚಿಸುತ್ತದೆ. ಗೂಗಲ್ ಪ್ಲೇ ಸ್ಟೋರ್ ಸ್ವಯಂಚಾಲಿತವಾಗಿ ಹೊಸ ದೇಶಕ್ಕೆ ಬದಲಾಗುತ್ತದೆ. ಇದು ಬದಲಾಗಲು 24 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.

ಈ ಹಂತಗಳನ್ನು ಅನುಸರಿಸುವುದರಿಂದ ನಿಮ್ಮ Google Play ನಲ್ಲಿ ದೇಶದ ಆಯ್ಕೆ ಕಾಲಂ ಅನ್ನ ಬದಲಾಯಿಸಲು ಸಹಾಯ ಮಾಡುತ್ತದೆ. ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಗೂಗಲ್‌ ಪ್ಲೇ ಕಂಟ್ರಿಕೋಡ್‌ನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಬದಲಾಯಿಸಬಹುದು. ಆದ್ದರಿಂದ ನೀವು ಒಮ್ಮೆ ನಿಮ್ಮ ಕಂಟ್ರಿಕೊಡ್‌ ಬದಲಾಯಿಸಿದರೆ, ಅದನ್ನು ಮತ್ತೆ ಬದಲಾಯಿಸಲು ಒಂದು ವರ್ಷದವರೆಗೂ ಕಾಯಬೇಕಾಗುತ್ತದೆ. ಅಲ್ಲದೆ ಒಂದು ವರ್ಷದವರೆಗೂ ಹಳೆಯ ಕಂಟ್ರಿಕೋಡ್‌ನಲ್ಲಿ ನಿಮ್ಮ ಗೂಗಲ್‌ ಪ್ಲೇ ಸಮತೋಲನವನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಸಹ ನೆನಪಿಡಬೇಕಾಗುತ್ತದೆ.

Most Read Articles
Best Mobiles in India
Read More About: google country available news

Have a great day!
Read more...

English Summary

Google Play country determines what content Android users can be able to see in their Google Play Store account. Depending upon the country, the apps, games, and other content in the Google Play Store can vary. So, as an Android user, if you move to a new country and want to change your Google Play country, there are some simple steps you need to follow.