ಪಾರ್ಕಿಂಗ್‌ ಸ್ಥಳ ಹುಡುಕುವುದು ಈಗ ಇನ್ನು ಸುಲಭ..! ಗೂಗಲ್‌ ಮ್ಯಾಪ್ಸ್‌ನಿಂದ ಹೊಸ ಫೀಚರ್‌..!


ಬೆಂಗಳೂರಿನಂತಹ ಮಹಾಗರಗಳಲ್ಲಿ ಪಾರ್ಕಿಂಗ್‌ನದ್ದೇ ದೊಡ್ಡ ಸಮಸ್ಯೆ. ಶಾಪಿಂಗ್‌ಗಾಗಿ ಹೋದಾಗ ಹೆಚ್ಚಿನವರು ಈ ಸಮಸ್ಯೆಯನ್ನು ಎದುರಿಸಿರುತ್ತಾರೆ. ಈ ಕಿರಿಕಿರಿಯನ್ನು ತಪ್ಪಿಸಲು ಗೂಗಲ್‌ ಮ್ಯಾಪ್ಸ್‌ ಒಂದು ವಿಶಿಷ್ಟ ಫೀಚರ್‌ ಒಂದನ್ನು ಬಿಡುಗಡೆ ಮಾಡಿದೆ. ನಿಮಗೆ ಪಾರ್ಕಿಂಗ್‌ ಸ್ಥಳ ಸಿಗದ ಪರಿಸ್ಥಿತಿಯಲ್ಲಿದ್ದರೆ, ಅಥವಾ ನೀವು ಹೋಗಲು ಪ್ಲಾನ್‌ ಮಾಡಿಕೊಂಡಿರುವ ಸ್ಥಳದಲ್ಲಿ ಪಾರ್ಕಿಂಗ್ ಸುಲಭವಾಗಿ ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಲು ಗೂಗಲ್‌ ಮ್ಯಾಪ್ಸ್‌ನ ಈ ಫೀಚರ್‌ ನಿಮಗೆ ಸಹಾಯ ಮಾಡುತ್ತದೆ.

ಹೊಸ ಫೀಚರ್‌ ಬಗ್ಗೆ ಒಂದಿಷ್ಟು ಕುತೂಹಲ ಸೃಷ್ಟಿಯಾಯಿತಲ್ಲ. ಈ ಕೌತುಕವನ್ನು ತಣಿಸಲು ಮುಂದೆ ನಾವು ನೀಡಿರುವ ಹಂತ ಹಂತದ ಮಾರ್ಗದರ್ಶಿ ಅನುಸರಿಸಿ. ನಾವು ನೀಡಿರುವ ವಿಧಾನ ಅನುಸರಿಸುವ ಮೊದಲು ಪ್ರಸ್ತುತ ಪಾರ್ಕಿಂಗ್ ಎಲ್ಲಿ ಲಭ್ಯವಿದೆ ಎಂದು ಮ್ಯಾಪ್ಸ್‌ ನಿಮಗೆ ನಿಖರವಾಗಿ ತಿಳಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದರೆ, ಆ ಸ್ಥಳದಲ್ಲಿ, ಪಾರ್ಕಿಂಗ್ ಕಂಡುಹಿಡಿಯುವುದು ಕಠಿಣ ಕಾರ್ಯ ಎಂದು ಮ್ಯಾಪ್ಸ್‌ ಸೂಚಿಸುತ್ತದೆ.

ಏನೇನು ಬೇಕು..?

ಈ ಫೀಚರ್‌ ಬಳಸಲು ನಿಮ್ಮ ಬಳಿ ಇತ್ತೀಚಿನ ಗೂಗಲ್‌ ಮ್ಯಾಪ್ಸ್‌ ಆವೃತ್ತಿ ಅವಶ್ಯವಾಗಿ ಇರಬೇಕು. ನಂತರ, ಲೊಕೇಷನ್‌ ಸೇವೆಗಳು ಸಕ್ರಿಯವಾಗಿರಬೇಕು. ನಿಮ್ಮ ಫೋನ್‌ ಅಥವಾ ಡಿವೈಸ್‌ನಲ್ಲಿ ಇಂಟರ್‌ನೆಟ್ ಸಂಪರ್ಕ ಅಗತ್ಯವಾಗಿ ಬೇಕು.

ಹಂತ 1

ಮೊದಲು, ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಡಿವೈಸ್‌ನಲ್ಲಿ ಗೂಗಲ್‌ ಮ್ಯಾಪ್ಸ್‌ ಆಪ್‌ ಒಪನ್‌ ಮಾಡಿ. ಮತ್ತು ನೀವು ಹೋಗಬೇಕಾದ ಸ್ಥಳವನ್ನು ನಮೂದಿಸಿ.

ಹಂತ 2

ಗಮ್ಯಸ್ಥಾನವನ್ನು ನಮೂದಿಸಿದ ನಂತರ, ಕೆಳಗೆ ಇರುವ "ಡೈರೆಕ್ಷನ್‌" ಗುಂಡಿಯನ್ನು ಟ್ಯಾಪ್ ಮಾಡಿ. ನ್ಯಾವಿಗೇಷನ್‌ ಪ್ರಾರಂಭಿಸಿ.

ಹಂತ 3

ನಂತರ ನಿಮಗೆ ಅಂದಾಜು ಸಮಯ ಮತ್ತು ದಟ್ಟಣೆಯ ವಿವರಗಳೊಂದಿಗೆ ನಿಮ್ಮ ಪ್ರಸ್ತುತ ಸ್ಥಳ ಮತ್ತು ಗುರಿಯನ್ನು ತೋರಿಸುವ ನಿರ್ದೇಶನಗಳ ಪುಟ ತೆರೆಯುತ್ತದೆ. "ಸ್ಟಾರ್ಟ್‌" ಗುಂಡಿ ಬರುವವರೆಗೆ ಕೆಳಗಿರುವ ಪಟ್ಟಿಯನ್ನು ಸ್ಲೈಡ್‌ ಮಾಡಿ.

ಹಂತ 4

ನಂತರ ಅಲ್ಲಿ, "ಪಿ" ಗುರುತಿನ ಚಿಹ್ನೆ ನಿಮಗೆ ಕಾಣುತ್ತದೆ. ಅದು, "ಈ ಸ್ಥಳದ ಬಳಿ ಸಾಮಾನ್ಯವಾಗಿ ಪಾರ್ಕಿಂಗ್ ಸುಲಭವಲ್ಲ" ಎಂದು ಉಲ್ಲೇಖಿಸುತ್ತದೆ.

Most Read Articles
Best Mobiles in India
Read More About: google news how to tips and tricks

Have a great day!
Read more...

English Summary

How To Check If There Is A Car Parking Space Available Using Google Maps