ವಾಟ್ಸಪ್ ಬ್ಲೂ ಟಿಕ್ ಕಾಣುತ್ತಿಲ್ಲವೇ?..ಮೆಸೆಜ್ ಓದಿದ್ದಾರೋ, ಇಲ್ಲವೋ ತಿಳಿಯುವುದು ಹೇಗೆ?


ವಾಟ್ಸ್‌ಆಪ್‌ 2014ರಲ್ಲಿ 'ಬ್ಲೂ ಟಿಕ್ಸ್’ ಫೀಚರ್‌ನ್ನು ತಂದಿತು. ಈ ವೈಶಿಷ್ಟ್ಯ ಸ್ವೀಕರಿಸುವವರು ಸಂದೇಶ ಓದಿದ್ದಾರೋ ಇಲ್ಲವೋ ಎಂಬುದನ್ನು ಕಳುಹಿಸಿದವರೆಗೆ ತಿಳಿಯಲು ಅವಕಾಶ ಮಾಡಿಕೊಟ್ಟಿತು. ಈ ಫೀಚರ್‌ ಪ್ರಾರಂಭವಾದ ನಂತರ, ಸಿಂಗಲ್ ಟಿಕ್ ಎಂದರೆ ಸಂದೇಶ ಕಳುಹಿಸಲಾಗಿದೆ, ಡಬಲ್ ಗ್ರೇ ಟಿಕ್ಸ್ ಎಂದರೆ ಸಂದೇಶ ಸ್ವೀಕರಿಸಲಾಗಿದೆ. ಮತ್ತು ಎರಡು ನೀಲಿ ಟಿಕ್ಸ್‌ ಬಂದರೆ ರಿಸೀವರ್ ಸಂದೇಶ ಓದಿದ್ದಾನೆ ಎಂಬುದು ಸಾಮಾನ್ಯ ವಿಷಯ.

Advertisement

ಆದರೆ, ಎಲ್ಲಾ ಬಳಕೆದಾರರು ಜನರು ಕಳುಹಿಸಿದ ಪಠ್ಯಗಳನ್ನು ಓದಿದ್ದೇನೆ ಎಂಬುದನ್ನು ತಿಳಿಸಲು ಬಯಸುವುದಿಲ್ಲ, ಆದ್ದರಿಂದ, ಅವರು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಂದ ರೀಡ್ ರಿಶಿಪ್ಟ್‌ ಫೀಚರ್‌ನ್ನು ನಿಷ್ಕ್ರಿಯಗೊಳಿಸುತ್ತಾರೆ. ಆದಾಗ್ಯೂ, ರೀಡ್‌ ರಿಶಿಪ್ಟ್‌ ಆಫ್‌ ಮಾಡಿರುವ ಬಳಕೆದಾರರು ನಿಮ್ಮ ಸಂದೇಶಗಳನ್ನು ನೋಡಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ತಂತ್ರಗಳನ್ನು ಬಳಸಿ.

Advertisement

* ರೀಡ್‌ರಿಶಿಪ್ಟ್‌ ಫೀಚರ್‌ ನಿಷ್ಕ್ರಿಯಗೊಳಿಸಿದ್ದಾರೆ ಎಂದು ನೀವು ಭಾವಿಸುವ ವ್ಯಕ್ತಿಯ ವಾಟ್ಸ್‌ಆಪ್ ಚಾಟ್ ತೆರೆಯಿರಿ.

* ಅದಾದ ಮೇಲೆ ಆ ವ್ಯಕ್ತಿಗೆ ವಾಯ್ಸ್‌ ನೋಟ್‌ ಕಳುಹಿಸಿ.

* ವ್ಯಕ್ತಿಯು ವಾಯ್ಸ್ ನೋಟ್‌ ಕೇಳಿಸಿಕೊಂಡರೆ, ಮೈಕ್ರೊಫೋನ್ ಐಕಾನ್ ನೀಲಿ ಬಣ್ಣಕ್ಕೆ ತಿರುಗುತ್ತದೆ, ಅದು, ವ್ಯಕ್ತಿಯು ನಿಮ್ಮ ಸಂದೇಶಗಳನ್ನು ಓದುತ್ತಿದ್ದಾನೆ ಮತ್ತು ಪ್ರತ್ಯುತ್ತರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಬಳಕೆದಾರರು ನಿಮ್ಮ ಸಂದೇಶಗಳನ್ನು ಓದುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಇದು ಹೊಸ ವಿಧಾನ ಏನಲ್ಲ. ಇದನ್ನು, ಮೊದಲ ಬಾರಿಗೆ 2018ರ ಮಾರ್ಚ್‌ನಲ್ಲಿ ಕಂಡುಹಿಡಿಯಲಾಯಿತು. ಆದರೆ, ಇದುವರೆಗೂ, ವಾಟ್ಸ್‌ಆಪ್ ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.

Best Mobiles in India

English Summary

How To Check If WhatsApp Message Is Read, Apart From Blue Tick