ನಿಮ್ಮ ಯಾವುದೇ ಖಾಸಗಿ ಡೇಟಾ ಅಂದರೆ ಸಂದೇಶಗಳು, ಇನ್ ಸ್ಟಾಲ್ ಮಾಡಿರುವ ಅಪ್ಲಿಕೇಶನ್ ಗಳನ್ನು ಹೊಂದಿಲ್ಲದೇ ಇರುವ ಪ್ರತ್ಯೇಕ ಗೆಸ್ಟ್ ಪ್ರೊಫೈಲ್ ಗೆ ನಿಮ್ಮನ್ನು ಬದಲಾಯಿಸುತ್ತದೆ. ಅದುವೇ ಗೆಸ್ಟ್ ಮೋಡ್ ಆಗಿದೆ. ಇನ್ನು ಇದರಿಂದ ಗೂಗಲ್ ಖಾತೆಗೆ ನೀವು ಪ್ರವೇಶವನ್ನು ಪಡೆಯುತ್ತಿರುವಂತೆಯೇ ಗೆಸ್ಟ್ ಮೋಡ್ ನಲ್ಲಿ ಉಳಿಸಲಾದ ಎಲ್ಲಾ ಡೇಟಾ ಅಳಿದು ಹೋಗುತ್ತದೆ. ಇದು ನಿಮ್ಮ 5.0 ಲಾಲಿಪಪ್ ಓಎಸ್ ಇರುವ ಫೋನ್ ನಲ್ಲಿ ಮಾತ್ರ ಸಾಧ್ಯ ಎಂಬುದು ನೆನಪಿನಲ್ಲಿರಲಿ. ಇಂದಿನ ಲೇಖನದಲ್ಲಿ ಈ ಗೆಸ್ಟ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಪರದೆಯ ಮೇಲ್ಭಾಗದಿಂದ ನೋಟಿಫಿಕೇಶನ್ ಪಟ್ಟಿಯನ್ನು ಕೆಳಕ್ಕೆ ಎಳೆಯಿರಿ. ಬಲ ಮೇಲ್ಭಾಗದಲ್ಲಿ ನಿಮ್ಮ ಇಮೇಜನ್ನು ಸೇರಿಸಿ ನಿಮಗೀಗ ಮೂರು ಐಕಾನ್ ಗಳು ಕಂಡುಬರುತ್ತವೆ ನಿಮ್ಮ ಗೂಗಲ್ ಖಾತೆ, ಏಡ್ ಗೆಸ್ಟ್ ಮತ್ತು ಏಡ್ ಯೂಸರ್. ಏಡ್ ಗೆಸ್ಟ್ ಸ್ಪರ್ಶಿಸಿ. ಇದೀಗ ನಿಮ್ಮ ಸ್ಮಾರ್ಟ್ ಫೋನ್ ಗೆಸ್ಟ್ ಮೋಡ್ ಗೆ ಬದಲಾಗುತ್ತದೆ. ಗೆಸ್ಟ್ ಮೋಡ್ ನಿಮ್ಮ ಫೋನ್ ನಲ್ಲಿ ಸಕ್ರಿಯಗೊಂಡ ನಂತರ, ನಿಮ್ಮ ಗೂಗಲ್ ಖಾತೆಗೆ ಬದಲಾಗಬಹುದು.