ಬ್ಯಾಕ್‌ಗ್ರೌಂಡ್‌ನಲ್ಲಿ ಯೂಟ್ಯೂಬ್‌ ವಿಡಿಯೋ ಪ್ಲೇ ಮಾಡೋದು ಹೇಗೆ..? ಇಲ್ಲಿದೆ ಪರಿಹಾರ..!


ವೆಬ್‌ಸೈಟ್ ಆಗಲಿ ಅಥವಾ ಅಪ್ಲಿಕೇಶನ್‌ ಆಗಿರಲಿ ಯೂಟ್ಯೂಬ್ ಈಗಲೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಂಗೀತದ ಮೂಲವಾಗಿದೆ. ಇದಕ್ಕೆ ಪ್ರಮುಖ ಕಾರಣ ಯೂಟ್ಯೂಬ್‌ನಲ್ಲಿರುವ ದೊಡ್ಡ ಲೈಬ್ರರಿ. ಕಸ್ಟಮ್ ರೀಮಿಕ್ಸ್ ಮತ್ತು ತಮ್ಮ ನೆಚ್ಚಿನ ಕಲಾವಿದರ ಕವರ್‌ಗಳ ಜೊತೆಗೆ ಅಲ್ಲಿನ ಪ್ರತಿಯೊಂದು ಹಾಡನ್ನು ಸ್ಟ್ರೀಮ್ ಮಾಡಲು ಯೂಟ್ಯೂಬ್ ಬಳಕೆದಾರರಿಗೆ ನೀಡುತ್ತದೆ. ಇಷ್ಟೆಲ್ಲಾ ಅಂಶಗಳಿರುವ ಯೂಟ್ಯೂಬ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಪ್ಲೇ ಫೀಚರ್‌ ಇಲ್ಲದಿರುವುದು ಪ್ರಮುಖ ನ್ಯೂನತೆಯಾಗಿದೆ. ಇದರಿಂದ ಬಳಕೆದಾರರಿಗೆ ಬಹಳಷ್ಟು ಸಂದರ್ಭಗಳಲ್ಲಿ ನಿರಾಶೆ ಉಂಟಾಗಿದೆ.

ಯೂಟ್ಯೂಬ್ ಅಪ್ಲಿಕೇಶನ್ ಸ್ವತಃ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗಲು ಹಲವು ಮಾರ್ಗಗಳಿವೆ, ಆದರೆ, ಅವೆಲ್ಲ ಮಾರ್ಗಗಳು ಯಶಸ್ವಿ ಆಗಬೇಕೆಂದರೆ ನಿಮ್ಮ ಫೋನ್‌ನ್ನು ರೂಟ್‌ ಮಾಡಬೇಕಾದ ಅವಶ್ಯಕತೆ ಇದೆ. ಆದಾಗ್ಯೂ, ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ತ್ವರಿತ ಹ್ಯಾಕ್‌ ಒಂದನ್ನು ಮಾಡಬಹುದಾಗಿದೆ. ಇದಕ್ಕೆ ನಿಮಗೆ ಬೇಕಾಗಿರುವುದು ವಿಎಲ್‌ಸಿ ಮೀಡಿಯಾ ಪ್ಲೇಯರ್‌, ಪ್ಲೇ ಸ್ಟೋರ್‌ನಲ್ಲಿ ದೊರೆಯುವ ಮೀಡಿಯಾ ಪ್ಲೇಯರ್ ಅಪ್ಲಿಕೇಶನ್‌ನ್ನು ಹೆಚ್ಚಿನವರು ಈಗಾಗಲೇ ಹೊಂದಿದ್ದಾರೆ. ಹಾಗಾದರೆ, ವಿಎಲ್‌ಸಿ ಮೀಡಿಯಾ ಪ್ಲೇಯರ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ಹೇಗೆ ಪ್ಲೇ ಮಾಡಬಹುದು ಎಂಬುದನ್ನು ಮುಂದಿನ ಹಂತಗಳನ್ನು ಅನುಸರಿಸಿ..

ಹಂತ 1

ನಿಮ್ಮ ಫೋನ್‌ನಲ್ಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ಹೊಂದಿಲ್ಲದಿದ್ದರೆ, ಗೂಗಲ್ ಪ್ಲೇ ಸ್ಟೋರ್‌ಗೆ ತೆರಳಿ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿ.

ಹಂತ 2

ನೀವು ವಿಎಲ್‌ಸಿ ಮೀಡಿಯಾ ಪ್ಲೇಯರ್ ಇನ್‌ಸ್ಟಾಲ್‌ ಮಾಡಿದ ನಂತರ, ಯೂಟ್ಯೂಬ್ ಒಪನ್‌ ಮಾಡಿ. ನಂತರ, ನೀವು ಪ್ಲೇ ಮಾಡಲು ಬಯಸುವ ವಿಡಿಯೋಗೆ ತೆರಳಿ.

ಹಂತ 3

ನಿಮ್ಮ ಸ್ನೇಹಿತರೊಂದಿಗೆ ವಿಡಿಯೋ ಹಂಚಿಕೊಳ್ಳಲು ನೀವು ಸಾಮಾನ್ಯವಾಗಿ ಬಳಸುವ ಶೇರ್‌ ಬಟನ್ ಕ್ಲಿಕ್ ಮಾಡಿ. ಅಲ್ಲಿ ಬರುವ ಪಟ್ಟಿಯನ್ನು ಸ್ಕ್ರಾಲ್ ಮಾಡಿ ಮತ್ತು ಅಲ್ಲಿ ‘ವಿಎಲ್‌ಸಿಯೊಂದಿಗೆ ಪ್ಲೇ ಮಾಡಿ' ಎಂಬುದನ್ನು ಆಯ್ಕೆಮಾಡಿ.

ಹಂತ 4

ಈಗ ವಿಎಲ್‌ಸಿ ಪ್ಲೇಯರ್ ಮೂಲಕ ವಿಡಿಯೋ ಸ್ಟ್ರೀಮಿಂಗ್ ಪ್ರಾರಂಭಿಸಬೇಕು. ಕೆಳಗಿನ ಬಲಭಾಗದಲ್ಲಿರುವ ತ್ರಿ-ಡಾಟ್ ಮೆನುವನ್ನು ಒತ್ತಿ ಮತ್ತು ‘ಪ್ಲೇ ಆಸ್‌ ಆಡಿಯೋ' ಎಂಬ ಆಯ್ಕೆ ಕ್ಲಿಕ್ ಮಾಡಿ.

ಮ್ಯೂಸಿಕ್‌ ಪ್ಲೇಯರ್‌ನಂತೆ ಕಾರ್ಯ

ನಿಮ್ಮ ವಿಡಿಯೋ ಈಗ ಆಡಿಯೊ ಫೈಲ್ ಆಗಿ ಪ್ಲೇ ಮಾಡಲು ಪ್ರಾರಂಭಿಸಬೇಕು. ಇದರರ್ಥ ಇದು ಯಾವುದೇ ಆಡಿಯೋ ಪ್ಲೇಯರ್ (ಸ್ಪಾಟಿಫೈ, ಜಿಯೋ ಸಾವನ್‌, ಗಾನಾ ಅಥವಾ ನಿಮ್ಮ ಫೋನ್‌ನ ಮ್ಯೂಸಿಕ್ ಪ್ಲೇಯರ್) ನಂತೆ ವರ್ತಿಸುತ್ತದೆ. ಆದ್ದರಿಂದ ನೀವು ಮುಂದುವರಿಯಬಹುದು ಮತ್ತು ಇತರ ಅಪ್ಲಿಕೇಶನ್‌ಗಳಿಗೆ ಬದಲಾಯಿಸಬಹುದು ಅಥವಾ ಸ್ಕ್ರೀನ್‌ ಆಫ್ ಮಾಡಬಹುದು ಮತ್ತು ಆಡಿಯೋ ಇನ್ನೂ ಪ್ಲೇ ಆಗುತ್ತದೆ.

ಪಾಪ್‌-ಅಪ್‌ ಪ್ಲೇಯರ್‌

ಇದಲ್ಲದೆ, ನಿಮ್ಮ ನೊಟಿಫಿಕೇಷನ್‌ ಬಾರ್‌ನಲ್ಲಿ ವಿಎಲ್‌ಸಿಯ ಸಂಗೀತ ನಿಯಂತ್ರಣ ಫಲಕ ಪಡೆಯುತ್ತೀರಿ. ನೀವು ಇತರ ಅಪ್ಲಿಕೇಶನ್‌ಗಳ ಜೊತೆಗೆ ಪಾಪ್-ಅಪ್ ಪ್ಲೇಯರ್‌ನಲ್ಲಿ ವಿಡಿಯೋ ನೋಡಲು ಬಯಸಿದರೆ, ನೀವು ವಿಎಲ್‌ಸಿಯಲ್ಲಿ ‘ಪಾಪ್-ಅಪ್ ಪ್ಲೇಯರ್' ಸಹ ಆಯ್ಕೆ ಮಾಡಬಹುದು.

Most Read Articles
Best Mobiles in India

Have a great day!
Read more...

English Summary

How to Play YouTube Videos With Screen Turned Off Using VLC App