ಗೂಗಲ್‌ ಪ್ಲೇ ಸ್ಟೋರ್‌ ಡಿಲೀಟ್‌ ಆಗಿದಿಯಾ..? ಚಿಂತೆ ಬೇಡ.. ಇಲ್ಲಿದೆ ಪರಿಹಾರ..!


ಆಂಡ್ರಾಯ್ಡ್‌ ಒಎಸ್‌ಗಾಗಿ ಗೂಗಲ್ ಪ್ಲೇ ಸ್ಟೋರ್‌ನ್ನು ಮೊದಲೇ ಇನ್‌ಸ್ಟಾಲ್‌ ಮಾಡಲಾಗಿರುತ್ತದೆ. ಬಳಕೆದಾರರು ತಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವಿವಿಧ ಅಪ್ಲಿಕೇಶನ್‌ಗಳನ್ನು ಬ್ರೌಸ್ ಮಾಡಲು ಮತ್ತು ಡೌನ್‌ಲೋಡ್ ಮಾಡಲು ಪ್ಲೇ ಸ್ಟೋರ್‌ ಅನುಮತಿಸುತ್ತದೆ. ಪ್ಲೇ ಸ್ಟೋರ್ ಸಹಾಯದಿಂದ, ನೀವು ಎಲ್ಲಾ ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್‌ ಮಾಡಬಹುದು.

ಪ್ಲೇ ಪ್ರೊಟೆಕ್ಟ್ ಎಂಬ ಫೀಚರ್‌ನಿಂದ ನಕಲಿ ಆಪ್‌ಗಳನ್ನು ಪ್ಲೇ ಸ್ಟೋರ್‌ ಸ್ಕ್ಯಾನ್‌ ಮಾಡುತ್ತದೆ. ಇಷ್ಟೆಲ್ಲಾ ಅಂಶಗಳನ್ನು ಹೊಂದಿರುವ ಗೂಗಲ್‌ ಪ್ಲೇ ಸ್ಟೋರ್‌ನ್ನು ಆಕಸ್ಮಿಕವಾಗಿ ಡಿಲೀಟ್‌ ಮಾಡಿದ್ದರೆ, ಆಪ್‌ಗಳನ್ನು ಡೌನ್‌ಲೋಡ್‌ ಮಾಡೋದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರುತ್ತದೆ. ಆಕಸ್ಮಿಕವಾಗಿ ಡಿಲೀಟ್‌ ಆಗಿರುವ ಗೂಗಲ್ ಪ್ಲೇ ಸ್ಟೋರ್‌ನ್ನು ಪುನಃ ಇನ್‌ಸ್ಟಾಲ್‌ ಮಾಡಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ. ಗೂಗಲ್ ಪ್ಲೇ ಸ್ಟೋರ್‌ನ್ನು ಮರಳಿ ಪಡೆಯಲು ವಿಭಿನ್ನ ಮಾರ್ಗಗಳಿದ್ದು, ಅವುಗಳ ವಿವರಣೆ ಕೆಳಗಿನಂತಿದೆ.

ಆಪ್‌ ಡ್ರಾಯರ್‌ನ್ನು ಹೋಮ್ ಸ್ಕ್ರೀನ್‌ಗೆ ಮೂವ್‌ ಮಾಡಿ

ನೀವು ಹೋಮ್ ಸ್ಕ್ರೀನ್‌ನಿಂದ ಗೂಗಲ್ ಪ್ಲೇ ಸ್ಟೋರ್‌ನ್ನು ತೆಗೆದುಹಾಕುವ ಸಾಧ್ಯತೆಗಳಿರುತ್ತವೆ. ಆಂಡ್ರಾಯ್ಡ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಲಾದ ಎಲ್ಲಾ ಆಪ್‌ಗಳು ಹೋಮ್ ಸ್ಕ್ರೀನ್ ಮತ್ತು ಆಪ್‌ ಡ್ರಾಯರ್‌ನಲ್ಲಿರುತ್ತವೆ. ಇನ್‌ಸ್ಟಾಲ್‌ ಆದ ಎಲ್ಲಾ ಅಪ್ಲಿಕೇಶನ್‌ಗಳು ಆಪ್‌ ಡ್ರಾಯರ್‌ನಲ್ಲಿ ಇರುತ್ತವೆ. ಅಲ್ಲಿಂದ, ಮುಖಪುಟ ಪರದೆಯಲ್ಲಿ ಬೇಕಾದ ಕೆಲವು ಆಪ್‌ಗಳನ್ನು ನೀವು ಆಯ್ಕೆ ಮಾಡಬಹುದು. ಮೊದಲಿಗೆ, ಆಪ್‌ ಡ್ರಾಯರ್ ಐಕಾನ್‌ ಪ್ರೆಸ್‌ ಮಾಡುವ ಮೂಲಕ ಅಥವಾ ಮುಖಪುಟ ಪರದೆಯಲ್ಲಿ ಸ್ವೈಪ್ ಮಾಡುವ ಮೂಲಕ ಆಪ್‌ ಡ್ರಾಯರ್ ತೆರೆಯಿರಿ. ನಂತರ ಗೂಗಲ್ ಪ್ಲೇ ಸ್ಟೋರ್‌ನ ಚಿಹ್ನೆಗಾಗಿ ಹುಡುಕಿ. ಪ್ಲೇ ಸ್ಟೋರ್‌ ಐಕಾನ್ ಸಿಕ್ಕ ನಂತರ ಹೋಮ್ ಸ್ಕ್ರೀನ್‌ಗೆ ಎಳೆಯಿರಿ.

ಗೌಪ್ಯ ಆಪ್‌ಗಳನ್ನು ಪರಿಶೀಲಿಸಿ

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಆಕಸ್ಮಿಕವಾಗಿ ಗೂಗಲ್‌ ಪ್ಲೇ ಸ್ಟೋರ್‌ನ್ನು ಮರೆಮಾಚುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿನ ಎಲ್ಲಾ ಗುಪ್ತ ಆಪ್‌ಗಳನ್ನು ನೀವು ಪರಿಶೀಲಿಸಬೇಕಾಗುತ್ತದೆ. ಲಾಂಚರ್‌ ಸೆಟ್ಟಿಂಗ್ಸ್‌ನಲ್ಲಿ ಗೌಪ್ಯ ಆಪ್‌ಗಳ ಆಯ್ಕೆ ದೊರೆಯುತ್ತದೆ. ಲಾಂಚರ್ ಸೆಟ್ಟಿಂಗ್ಸ್‌ ತೆರೆದು, ಹೈಡ್‌ ಆಪ್‌ ಕ್ಲಿಕ್‌ ಮಾಡಿ, ಅಲ್ಲಿಂದ ಗೂಗಲ್‌ ಪ್ಲೇ ಸ್ಟೋರ್‌ನ್ನು ರದ್ದುಮಾಡಿ.

ಸೆಟ್ಟಿಂಗ್ಸ್‌ನಲ್ಲಿ ಸಕ್ರಿಯಗೊಳಿಸಿ

ಗೂಗಲ್‌ ಪ್ಲೇ ಸ್ಟೋರ್‌ನ್ನು ನಿಷ್ಕ್ರಿಯಗೊಳಿಸಬಹುದು. ಆದರೆ ಅನ್‌ಇನ್‌ಸ್ಟಾಲ್‌ ಮಾಡಲಾಗುವುದಿಲ್ಲ. ಅದನ್ನು ನಿಷ್ಕ್ರಿಯಗೊಳಿಸಿದಾಗ, ಗೂಗಲ್‌ ಪ್ಲೇ ಸ್ಟೋರ್‌ ಚಿಹ್ನೆ ಕಣ್ಮರೆಯಾಗುತ್ತದೆ. ಮತ್ತು ಅದನ್ನು ಒಪನ್‌ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ, ಗೂಗಲ್‌ ಪ್ಲೇ ಸ್ಟೋರ್‌ನ್ನು ಸಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿನ ಸೆಟ್ಟಿಂಗ್ಸ್‌ಗೆ ಹೋಗಿ. ನಂತರ ಅಪ್ಲಿಕೇಶನ್‌ಗಳು ಮತ್ತು ಅಧಿಸೂಚನೆ ಅಥವಾ ಫೋನ್‌ನ ಮಾದರಿಯತೆ ಇನ್‌ಸ್ಟಾಲ್ಡ್‌ ಆಪ್ಸ್‌ ಅಥವಾ ಅಪ್ಲಿಕೇಶನ್ ಮ್ಯಾನೇಜರ್ ಒಪನ್‌ ಮಾಡಿ.

ಹಂತ 2: ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ, ಇನ್‌ಸ್ಟಾಲ್‌ ಮಾಡಿದ ಆಪ್‌ಗಳನ್ನು ನೇರವಾಗಿ ಕಾಣಬಹುದು. ಇಲ್ಲದಿದ್ದರೆ ಎಲ್ಲಾ ಆಪ್‌ಗಳು ಆಯ್ಕೆಯನ್ನು ಕ್ಲಿಕ್‌ ಮಾಡಿ.

ಹಂತ 3: ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಗೂಗಲ್ ಪ್ಲೇ ಸ್ಟೋರ್‌ ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಪಟ್ಟಿಯಲ್ಲಿ ನಿಮಗೆ ಪ್ಲೇ ಸ್ಟೋರ್‌ ಕಾಣದಿದ್ದರೆ, ಮೂರು-ಡಾಟ್ ಐಕಾನ್ ಕ್ಲಿಕ್‌ ಮಾಡಿ, ನಂತರ, ಸಿಸ್ಟಮ್ ಅಪ್ಲಿಕೇಶನ್‌ಗಳನ್ನು ತೋರಿಸು ಟ್ಯಾಪ್ ಮಾಡಿ. ಇಲ್ಲಿ, ನೀವು ಗೂಗಲ್ ಪ್ಲೇ ಸ್ಟೋರ್ ಕಾಣಬಹುದು.

ಎಪಿಕೆ ಫೈಲ್‌ನಿಂದ ಇನ್‌ಸ್ಟಾಲ್‌

ನೀವು ಆರಂಭದಲ್ಲಿ ಎಪಿಕೆ ಫೈಲ್‌ನಿಂದ ಗೂಗಲ್ ಪ್ಲೇ ಸ್ಟೋರ್ ಇನ್‌ಸ್ಟಾಲ್‌ ಮಾಡಿದ್ದರೆ, ನಂತರ ನೀವು ಅದನ್ನು ಪುನಃ ಇನ್‌ಸ್ಟಾಲ್‌ ಮಾಡಲು ಬಳಸಬಹುದು. ಗೂಗಲ್‌ ಪ್ಲೇ ಸ್ಟೋರ್‌ನ್ನು ಡೌನ್‌ಲೋಡ್‌ ಮಾಡಲು APKMirror.com ನಂತಹ ವಿಶ್ವಾಸಾರ್ಹ ಸೈಟ್‌ಗಳಿಗೆ ಹೋಗಿ. ಯಶಸ್ವಿಯಾಗಿ ಎಪಿಕೆ ಫೈಲ್‌ ಇನ್‌ಸ್ಟಾಲ್‌ ಮಾಡಿದ ನಂತರ, ಗೂಗಲ್‌ ಪ್ಲೇ ಸ್ಟೋರ್‌ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಬರುತ್ತದೆ. ಪ್ಲೇ ಸ್ಟೋರ್ ಅಪ್‌ಡೇಟ್‌ಗಾಗಿ ಎಪಿಕೆ ಫೈಲ್‌ ಬಳಸಬಹುದು.

Most Read Articles
Best Mobiles in India
Read More About: google news how to tips and tricks

Have a great day!
Read more...

English Summary

How To Restore Google Play Store That You Accidentally Deleted