Home
ಟೆಕ್ ನೌಕರಿ

ಬಳಕೆದಾರರಿಗೆ ತಿಳಿಯದಂತೆ ಮೊಬೈಲ್ ಲೋಕೆಷನ್ ಟ್ರ್ಯಾಕ್ ಮಾಡುವುದು ಹೇಗೆ..?

By Gizbot Bureau

ವಿಶ್ವವು ತಂತ್ರಜ್ಞಾನದ ವಿಚಾರದಲ್ಲಿ ಬಹಳ ಮುಂದುವರಿಯುತ್ತಿದ್ದು ಅದನ್ನು ನಾವು ಹೇಗೆ ಎಂದು ಊಹಿಸಲೂ ಕೂಡ ಅಸಾಧ್ಯವಾಗುವಂತಿದೆ. ತಂತ್ರಜ್ಞಾನ ಜಗತ್ತು ಆಶ್ಚರ್ಯಕರ ರೀತಿಯಲ್ಲಿ ವಿಕಸನಗೊಳ್ಳುತ್ತಿದೆ. ಜಗತ್ತಿನ ಜನರು ಅದಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಆದರೆ ಒಂದು ಒಳ್ಳೆಯದರ ಹಿಂದೆ ಅನೇಕ ಕೆಡುಕುಗಳೂ ಇರುವುದು ಪ್ರಕೃತಿ ಧರ್ಮವಲ್ಲವೇ ? ಹಾಗೆಯೇ ಈ ಅಭಿವೃದ್ಧಿಯು ಹಳೆಯ ಸಮಸ್ಯೆಗಳನ್ನು ನಿವಾರಿಸಿರುವಂತೆ ಕಂಡುಬಂದರೂ ಹೊಸದೊಂದು ಸಮಸ್ಯೆಗೆ ಬುನಾದಿಯಾಗುತ್ತಿದೆ.

ನಾವು ನಮ್ಮ ಪ್ರೀತಿಪಾತ್ರರ ಬಗ್ಗೆ ಚಿಂತಿಸುವುದು ಮತ್ತು ಅವರಿಗೆ ಎದುರಾಗುವ ಸಮಸ್ಯೆಯನ್ನು ನಿವಾರಿಸುವ ಬಗ್ಗೆ ಯೋಚಿಸುವುದು ಸಹಜವೇ. ಅದರಲ್ಲೂ ಯಾವುದೇ ಒಂದು ಸಮಸ್ಯೆ ನಮ್ಮ ಮಕ್ಕಳಿಗೆ ಅಥವಾ ವಯಸ್ಸಿಗೆ ಬಂದ ಯುವಕಯುವತಿಯರಿಗೆ ಆಗುತ್ತಿದೆ ಎಂದಾದಲ್ಲಿ ಹೆಚ್ಚು ಚಿಂತಿತರಾಗುತ್ತೇವೆ. ನೀವು ನಿಮ್ಮ ಮಕ್ಕಳ ಮೇಲೆ ನಂಬಿಕೆ ಇಡುವುದೇನೋ ಸರಿ. ಆದರೆ ಅದನ್ನು ಹೊರತುಪಡಿಸಿ ಅವರ ಮೇಲೊಂದು ಕಣ್ಣಿಟ್ಟಿರಬೇಕಾಗಿರುವುದು ಪೋಷಕರಾದ ನಿಮ್ಮ ಜವಾಬ್ದಾರಿ.

ಮಕ್ಕಳು ತಪ್ಪು ದಾರಿ

ಈಗಂತೂ ಮಕ್ಕಳು ತಪ್ಪು ದಾರಿ ಹಿಡಿಯುವುದಕ್ಕೆ ಸಾಕಷ್ಟು ಅವಕಾಶಗಳು ತೆರೆದುಕೊಂಡಿರುತ್ತದೆ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ನಮ್ಮ ಮಕ್ಕಳು ನಮಗೆ ಮುದ್ದಾಗಿಯೇ ಇರುತ್ತವೆ ಮತ್ತು ಒಳ್ಳೆಯವರಾಗಿಯೇ ಇರುತ್ತಾರೆ. ಯಾವುದೇ ಒಂದು ತಪ್ಪು ನಡೆದಾಗ ಅದು ಸಹವಾಸ ದೋಷದಿಂದ ಎಂದು ಜರಿದುಬಿಡುವುದು ಅಷ್ಟು ಸಮಂಜಸ ಪರಿಹಾರವಾಗಲಾರದು. ಹಾಗಾಗಿ ಆದಷ್ಟು ನಿಮ್ಮ ಮಕ್ಕಳ ಚಟುವಟಿಕೆಯ ಬಗ್ಗೆ ನೀವು ಜಾಗೃತರಾಗಿರಬೇಕಾಗಿರುವುದು ಬಹಳ ಮುಖ್ಯ ವಿಚಾರವಾಗಿರುತ್ತದೆ.

ಸಂಪರ್ಕ

ತಂತ್ರಜ್ಞಾನವು ನಮ್ಮ ಸಂಪರ್ಕವನ್ನು ಸುಲಭಗೊಳಿಸಿದೆ ಎಂಬುದು ನಿಜ ಸಂಗತಿಯೇ, ಆದರೆ ಅದೆಷ್ಟೋ ಸಂದರ್ಬದಲ್ಲಿ ನಾವು ಅವರ ಮೇಲೊಂದು ಕಣ್ಣಿಟ್ಟಿರಬೇಕು ಎಂದುಕೊಳ್ಳುವ ವ್ಯಕ್ತಿಯು ನಮ್ಮ ಕರೆಗಳಿಗೆ ಅಥವಾ ನಮ್ಮ ಮೆಸೆಜ್ ಗಳಿಗೆ ಪ್ರತ್ಯುತ್ತರ ನೀಡದೇ ಇದ್ದರೆ, ಆಗ ಅವರ ಮೇಲೆ ಹೇಗೆ ನಮ್ಮ ದೃಷ್ಟಿ ಇಟ್ಟಿರುವುದು ಎಂಬ ಪ್ರಶ್ನೆಗೆ ಇಂದು ನಾವು ಈ ಲೇಖನದಲ್ಲಿ ಉತ್ತರ ಕೊಡುತ್ತಿದ್ದೇವೆ. ಹಾಗಂತ ಕೇವಲ ಕರೆ ಅಥವಾ ಮೆಸೇಜ್ ಗಳಿಗೆ ಮಾತ್ರ ಸೀಮಿತವಾಗುವ ವಿಷಯವಲ್ಲ, ಆ ವ್ಯಕ್ತಿ ಎಲ್ಲಿದ್ದಾರೆ ಎಂಬುದು ತಿಳಿದುಕೊಳ್ಳಬೇಕಾದರೆ ನೀವು ಏನು ಮಾಡಬೇಕು ಎಂಬ ವಿಚಾರವು ಈ ಲೇಖನದಲ್ಲಿ ಪ್ರಸ್ತಾಪಿಸಲಾಗುತ್ತಿದೆ. ಹೆಚ್ಚಾಗಿ ಇಂತಹ ಸಂದರ್ಬವು ಮಕ್ಕಳ ವಿಚಾರದಲ್ಲಿ ಎದುರಾಗುತ್ತದೆ.

ನಿಟ್ಟಿನಲ್ಲಿ

ಒಂದು ವೇಳೆ ನೀವು ನಿಮ್ಮ ಮಕ್ಕಳು ಎಲ್ಲಿದ್ದಾರೆ ಎಂದು ತಿಳಿಯುತ್ತಿರುವುದು ಅವರಿಗೆ ಗೊತ್ತಾಗದಂತೆ ಇರಬೇಕು ಎಂದು ಬಯಸುವುದಾದರೆ ಅದಕ್ಕೆ ಖಂಡಿತ ಒಂದಷ್ಟು ಮಾರ್ಗಗಳಿವೆ. ಮಕ್ಕಳ ಮೇಲೆ ನಂಬಿಕೆ ಇರಬೇಕು ಎಂಬುದೇನೋ ಸರಿ, ಆದರೂ ಅವರ ಚಲನವಲನದ ಬಗ್ಗೆ ಸ್ವಲ್ಪ ಕಾಳಜಿ ಇಟ್ಟುಕೊಳ್ಳಬೇಕಾಗಿರುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ಹೇಗೆ ನೀವು ಅವರಿಗೆ ತಿಳಿಯದಂತೆ ಅವರು ಎಲ್ಲಿದ್ದಾರೆ ಎಂದು ಟ್ರ್ಯಾಕ್ ಮಾಡುವುದು ಎಂಬ ಬಗ್ಗೆ ಇಲ್ಲಿ ನಾವು ನಿಮಗೆ ಕೆಲವು ಅಂಶಗಳನ್ನು ತಿಳಿಸುತ್ತಿದ್ದೇವೆ.

ಫೋನ

1. ಫೋನಿನ ಸ್ಥಳವನ್ನು ಹುಡುಕಾಡುವುದು ಅಷ್ಟೇನು ಕಷ್ಟದ ವಿಚಾರವಲ್ಲ, ಆದರೆ ಅದು ಬಳಕೆದಾರರಿಗೆ ತಿಳಿಯದಂತೆ ಟ್ರ್ಯಾಕ್ ಮಾಡುವುದು ಅಷ್ಟು ಸುಲಭದ ವಿಚಾರವಾಗಿರುವುದಿಲ್ಲ. ಕೋಕೋಸ್ಪೈ ಅನ್ನುವ ಒಂದು ಆಪ್ ನ್ನು ಬಳಸಿ ನೀವು ಸೆಲ್ ಫೋನ್ ಎಲ್ಲಿದೆ ಎಂಬುದನ್ನು ಟ್ರ್ಯೇಸ್ ಮಾಡಬಹುದು.

ಕೋಕೋಸ್ಪೈ

ಕೋಕೋಸ್ಪೈ ಎಪಿಕೆಯನ್ನು ನೀವು ಗುರುತಿಸಿದ ನಂತರ, ಅದನ್ನು ನೀವು ಟ್ರ್ಯಾಕ್ ಮಾಡಬೇಕು ಅಂದುಕೊಳ್ಳುವ ಫೋನ್ ನಲ್ಲಿ ಇನ್ಸ್ಟಾಲ್ ಮಾಡಬಹುದು. ಒಮ್ಮೆ ನೀವು ಆಪ್ ನ್ನು ಇನ್ಸ್ಟಾಲ್ ಮಾಡಿ ಮ್ಯಾನೇಜ್ ಮಾಡಲು ಆರಂಭಿಸಿದರೆ, ಕೋಕೋ ಸ್ಪೈ ಡ್ಯಾಶ್ ಬೋರ್ಡ್ ಮೂಲಕ ನಿಮ್ಮ ಡಿವೈಸ್ ಎಲ್ಲಿದೆ ಎಂಬುದನ್ನು ರಿಯಲ್ ಟೈಮ್ ನಲ್ಲಿ ಟ್ರೇಸ್ ಮಾಡಲು ಸಾಧ್ಯವಾಗುತ್ತದೆ.

ಆದರೆ ನಿಮ್ಮ ಟಾರ್ಗೆಟ್ ಡಿವೈಸ್ ಅಥವಾ ನಿಮ್ಮ ಮಕ್ಕಳ ಬಳಿ ನೀವು ಕಳುಹಿಸಿಕೊಟ್ಟಿರುವ ಮೊಬೈಲಿನ ಇಂಟರ್ ನೆಟ್ ಸರ್ವೀಸ್ ಯಾವಾಗಲೂ ಆನ್ ಆಗಿರಬೇಕು ಮತ್ತು ಲೋಕೇಷನ್ ಸೇವೆಯೂ ಕೂಡ ಆನ್ ಆಗಿರುವಂತೆ ನೋಡಿಕೊಳ್ಳಬೇಕು. ಕೋಕೋಸ್ಪೈ ಆಪ್ ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುತ್ತದೆ ಮತ್ತು ಅದು ಬಳಕೆದಾರರನಿಗೆ ಬ್ಯಾಕ್ ಗ್ರೌಂಡ್ ನ ಆಪ್ ಲಿಸ್ಟ್ ನಲ್ಲಿ ಗೋಚರಿಸುವುದಿಲ್ಲ. ಇದು ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಕೂಡ ಕೆಲಸ ಮಾಡುತ್ತದೆ. ಈ ಆಪ್ ಬಳಸಿ ಪೋಷಕರು ತಮ್ಮ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಟ್ರೇಸ್ ಮಾಡಲು ಸಾಧ್ಯವಾಗುತ್ತದೆ.

ಫೈಂಡ್ ಮೈ ಡಿವೈಸ್

2) ಫೈಂಡ್ ಮೈ ಡಿವೈಸ್ ಕೂಡ ಒಂದು ಐಓಎಸ್ ಮತ್ತು ಆಂಡ್ರಾಯ್ಡ್ ಎರಡೂ ಫೋನ್ ಗಳಲ್ಲೂ ಕೂಡ ಲೋಕೇಷನ್ ಟ್ರೇಸ್ ಮಾಡಲು ಬಳಸಬಹುದಾದ ಮತ್ತೊಂದು ಅತ್ಯದ್ಭುತ ಮಾರ್ಗವಾಗಿದೆ. ಈ ಸೇವೆಯನ್ನು ಪಡೆಯಲು ನಿಮಗೆ ಲಾಗಿನ್ ಕ್ರಿಡೆನ್ಶಿಯಲ್ ನ ಅಗತ್ಯವಿದೆ. ಆ ಮೂಲಕ ನೀವು ನಿಮ್ಮ ಮಕ್ಕಳ ಬಳಿ ಇರುವ ಡಿವೈಸ್ ನ ಸ್ಥಳವನ್ನು ಟ್ರೇಸ್ ಮಾಡಬಹುದು. ಆಂಡ್ರಾಯ್ಡ್ ನಲ್ಲಿ ಗೂಗಲ್ ಅಕೌಂಟ್ ಮತ್ತು ಐಫೋನ್ ಗಳಲ್ಲಿ ಐಕ್ಲೌಡ್ ಇದ್ದರೆ ಮಾತ್ರ ಇದನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ಎರಡು ವಿಧಾನದಲ್ಲಿ ಯಾವುದೇ ವಿಧಾನವನ್ನು ಬಳಸಿದರೂ ಕೂಡ ನಿಮ್ಮ ಮಕ್ಕಳ ಬಳಿ ಇರುವ ಡಿವೈಸ್ ಯಾವ ಸ್ಥಳದಲ್ಲಿ ಇದೆ ಎಂಬುದನ್ನು ನೀವು ಅವರಿಗೆ ತಿಳಿಯದಂತೆ ಟ್ರೇಸ್ ಮಾಡಲು ಸಾಧ್ಯವಾಗುತ್ತದೆ. ಆ ಮೂಲಕ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಲು ನೆರವಾಗುತ್ತದೆ.

Best Mobiles in India

English summary
How to track the location of a mobile phone without user's knowledge. to know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+