ನೀವು ಕಾರ್ಡ್ ಸ್ವೈಪ್ ಮಾಡುವ 'ಸ್ವೈಪಿಂಗ್ ಮಷಿನ್' ಫೇಕ್ ಆಗಿದ್ದರೆ ಗುರುತಿಸುವುದು ಹೇಗೆ?
Swiping, Machines, Card Swipe Machine, Fake, ಎಟಿಎಂ, ಸ್ವೈಪಿಂಗ್ ಮಷಿನ್, ತಂತ್ರಜ್ಞಾನ, news
ನಮ್ಮ ಬ್ಯಾಂಕ್ ದಾಖಲೆಗಳು ಕಳ್ಳರ ಪಾಲಾಗಿ ನಾವು ಹಣಕಳೆದುಕೊಳ್ಳುವ ವಿಷಯವು ಬ್ಯಾಂಕ್ ಅಕೌಂಟ್ ನಿಂದ ನಮ್ಮ ಹಣ ಖಾಲಿಯಾಗುವವರೆಗೂ ನಮಗೇ ತಿಳಿದಿರುವುದಿಲ್ಲ.! ಇಂತಹ ಎಷ್ಟೋ ಘಟನೆಗಳು ಇಲ್ಲಿಯವರೆಗೂ ನಡೆದಿವೆ ಮತ್ತು ನಡೆಯುತ್ತಿವೆ. ಆದರೆ, ಗ್ರಾಹಕರಿಗೆ ತಾವು ಮಾಡುತ್ತಿರುವ ಕೆಲ ಸಣ್ಣ ಸಣ್ಣ ತಪ್ಪುಗಳನ್ನು ತಿಳಿಯದೇ ಮೋಸ ಹೋಗುತ್ತಿದ್ದಾರೆ.!
ಇಂದಿನ ಡಿಜಿಟಲ್ ಕಾಲದಲ್ಲಿ ಎಟಿಎಂ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಆ ಮೂಲಕವೇ ಹಣವನ್ನು ಕದಿಯಲು ಕಳ್ಳರು ಕರಾಮತ್ತು ನಡೆಸುತ್ತಿದ್ದಾರೆ. ಇದಕ್ಕೆ ಇಂದು ಸ್ಪಷ್ಟ ಉದಾಹರಣೆ ಎಂದರೆ ಪೆಟ್ರೊಲ್ ಬಂಕ್ ಮತ್ತು ಅಂಗಡಿಗಗಳಲ್ಲಿ ಬಳಸುತ್ತಿರುವ ಸ್ವೈಪಿಂಗ್ ಮಷಿನ್ ಅಥವಾ ಎಲೆಕ್ಟ್ರಾನಿಕ್ ಡಾಟಾ ಕ್ಯಾಪ್ಚರ್ ಮಷಿನ್ ಎಂದರೆ ತಪ್ಪಾಗುವುದಿಲ್ಲ.!

ಸ್ವೈಪಿಂಗ್ ಮಷಿನ್ ಅನ್ನೇ ಕಾರ್ಡ್ ಸ್ಕಿಮ್ಮರ್ ಮಷಿನ್ಗಳನ್ನಾಗಿ ಉಪಯೋಗಿಸಿ ಕೆಲಸ ಮಾಡುವ ಕಿರಾತಕರು ಈಗಾಗಲೇ ಹುಟ್ಟಿಕೊಳ್ಳುತ್ತಿದ್ದಾರೆ. ಸ್ವೈಪಿಂಗ್ ಮಷಿನ್ ಮೂಲಕವೇ ಕಾರ್ಡ್ಗಳ ಮಾಹಿತಿ ಕದ್ದು ನಮ್ಮ ಕಾರ್ಡ್ಗಳನ್ನು ಹೋಲುವ ಕಾರ್ಡ್ಗಳನ್ನು ಡೂಪ್ಲಿಕೇಟ್ ರೂಪದಲ್ಲಿ ತಯಾರಿಸಿ ಅವುಗಳ ಮೂಲಕ ಹಣ ಕದಿಯುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ನಕಲಿ ಸ್ವೈಪಿಂಗ್ ಮಷಿನ್ ಅನ್ನು ಗುರುತಿಸುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.

ಕಾರ್ಡ್ ಸ್ವೈಪ್ ಮಾಡುವಾಗ ಗಮನಿಸಿ!
ಸಾಮಾನ್ಯವಾಗಿ ನಾವು ಕಾರ್ಡ್ ಸ್ವೈಪಿಂಗ್ ಮೆಷಿನ್ನಲ್ಲಿ ಹಾಕಿದಾಗ ಅದರಲ್ಲಿ ಬಹಳಷ್ಟು ಭಾಗ ಹೊರಗೆ ಬರುತ್ತದೆ. ಇದರಿಂದ ಆ ಮೆಷಿನ್ ನಿಜವಾದ ಮೆಷಿನ್ ಆಗಿ, ಸ್ಕಿಮ್ಮರ್ ಮೆಷಿನ್ ಅಲ್ಲ ಎಂದು ನಮಗೆ ಗೊತ್ತಾಗುತ್ತದೆ. ಅದೇ ಸ್ಕಿಮ್ಮರ್ ಮೆಷಿನ ಆದರೆ ಕಾರ್ಡ್ ಬಹಳಷ್ಟು ಒಳಗೆ ಹೋಗುತ್ತದೆ.!

ಕಾರ್ಡ್ ಎರರ್ ಬಂದರೆ ಹುಷಾರು!!
ನಮ್ಮ ಕಾರ್ಡ್ ಸ್ವೈಪ್ ಮಾಡುವಾಗ ಎರಡರಿಂದ ಮೂರು ಬಾರಿ ಎರರ್ ಬಂದರೂ ನಮಗೆ ಬ್ಯಾಂಕಿನಿಂದ ಯಾವುದೇ ಮೆಸೇಜ್ ಬರದಿದ್ದರೆ ಅದು ಸ್ಕಿಮ್ಮರ್ ಮಷಿನ್ ಆಗಿರಬಹುದು. ಬ್ಯಾಲೆನ್ಸ್ ಇದ್ದರೂ ಸ್ವೈಪ್ ಮಾಡುವಾಗ ಎರರ್ ಬಂದರೆ ಆಗ ಆ ಮೆಷಿನ್ನ್ನು ಸ್ಕಿಮ್ಮರ್ ಸ್ವೈಪಿಂಗ್ ಮೆಷಿನ್ ಎಂದು ಅನುಮಾನಿಸಬೇಕು.

ಸ್ವೈಪಿಂಗ್ ಮಷಿನ್ ಗುರುತು!!
ನೀವು ನಿಮ್ಮ ಎಟಿಎಂ ಕಾರ್ಡ್ ಅನ್ನು ಎಲ್ಲಿಯೇ ಸ್ವೈಪ್ ಮಾಡಿದರೂ ಸಹ ಆ ಸ್ಥಳದ ಗುರುತು ನಿಮಗಿರಲಿ. ಗುರುತು ಪರಿಚಯ ಇಲ್ಲದ ಸ್ಥಳಗಳಲ್ಲಿ ಕಾರ್ಡ್ ಮೂಲಕ ಸ್ವೈಪಿಂಗ್ ಮಾಡಬೇಡಿ. ಹೆದ್ದಾರಿಗಳಲ್ಲಿ ವಸ್ತುವನ್ನು ಖರೀದಿಸಿ ಸ್ವೈಪ್ ಮಾಡಿದ ಎರಡು ದಿನಗಳ ಒಳಗೆ ಓರ್ವರ ಅಕೌಂಟ್ ಖಾಲಿಯಾಗಿತ್ತು. ಆಸಾಮಿನು ನಾಪತ್ತೆಯಾಗಿದ್ದ.

ಸ್ಟೈಲಸ್ ಇದ್ದರೆ( ನುಣುಪಾದ ಕಡ್ಡಿ)
ಸ್ವೈಪಿಂಗ್ ಮೆಷಿನ್ಗಳಿಗೆ ಪೆನ್ನಿನಂತಹ ಸ್ಟೈಲಸ್ ಇದ್ದರೆ ಅದು ಖಚಿತವಾಗಿ ಸ್ಕಿಮ್ಮರ್ ಮೆಷಿನ್ ಆಗಿ ಇರುತ್ತದೆ. ಆದಕಾರಣ ನೀವು ಕಾರ್ಡ್ ಸ್ವೈಪ್ ಮಾಡುವ ಮೆಷಿನ್ಗೆ ಸ್ಟೈಲಸ್ ಇದೆಯೋ ಇಲ್ಲವೋ ಒಮ್ಮೆ ಚೆಕ್ ಮಾಡಿದರೆ ಸ್ಕಿಮ್ಮರ್ ಮೆಷಿನ್ ಅಲ್ಲವೇ, ಹೌದೆ ಎಂಬುದನ್ನು ಕಂಡುಹಿಡಿಯಬಹುದು.


ಗ್ರೀನ್ ಲೈಟ್
ಸಾಮಾನ್ಯ ಕಾರ್ಡ್ ಸ್ವೈಪಿಂಗ್ ಮೆಷಿನ್ಗಳಿಗೆ ಹೋಲಿಸಿದರೆ ಸ್ಕಿಮ್ಮರ್ ಮೆಷಿನ್ಗಳು ಸ್ವಲ್ಪ ಅಗಲವಾಗಿ ಇರುತ್ತವೆ ಮತ್ತು ಅಸಲಿ ಸ್ವೈಪಿಂಗ್ ಮೆಷಿನ್ನಲ್ಲಿ ನಾವು ಕಾರ್ಡ್ ಹಾಕಿದರೆ ಗ್ರೀನ್ ಲೈಟ್ ಬರುತ್ತದೆ. ಸ್ಕಿಮ್ಮರ್ ಸ್ವೈಪಿಂಗ್ ಮೆಷಿನ್ನಲ್ಲಿ ಗ್ರೀನ್ ಲೈಟ್ ಬರದಿರುವುದನ್ನು ಗಮನಿಸಬಹುದು. ಈಗ ಗ್ರೀನ್ ಲೈಟ್ ಬರುವ ಮೆಷಿನ್ಗಳು ಸಹ ಇವೆ ಎಂಬ ಎಚ್ಚರವಿರಲಿ .


Click it and Unblock the Notifications








