ಮೊಬೈಲ್ ಖರೀದಿಸಿದರೂ ಅಥವಾ ಮಾರಿದರೂ ಮೊದಲು ಮಾಡಬೇಕಾದ ಮುಖ್ಯ ಕೆಲಸ ಇದು!!
ನೀವು ಹೊಸ ಮೊಬೈಲ್ ಖರೀದಿಸಿದರೂ ಅಥವಾ ನಿಮ್ಮ ಹಳೆಯ ಮೊಬೈಲ್ ಅನ್ನು ಮಾರಾಟ ಮಾಡಿದರೂ ಸಹ ಮರೆಯದೇ ಮಾಡಲೇಬೇಕಾದ ಒಂದು ಕೆಲಸ ಎಂದರೆ ಬ್ಯಾಕ್‌ಅಪ್ ಇಟ್ಟುಕೊಳ್ಳುವುದು. ಇನ್ನೊಬ್ಬರಿಗೆ ನಿಮ್ಮ ಮೊಬೈಲ್ ಮಾರಾಟ ಮಾಡುವ ಮುನ್ನ ನಿಮ್ಮ ವೈಯಕ್ತಿಕ ಮಾಹಿತಿ ಅದರಲ್ಲಿ ಉಳಿದುಕೊಳ್ಳದಂತೆ ಎಚ್ಚರವಹಿಸುವುದು ಇನ್ನೂ ಅಗತ್ಯ.
ಹಾಗಾಗಿ, ಏನೇ ಮಾಡುವ ಮೊದಲು ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲ ಮಾಹಿತಿಯನ್ನು ಬ್ಯಾಕ್‌ಅಪ್ ಇಟ್ಟುಕೊಳ್ಳಿ. ಇದರಿಂದ ನಿಮ್ಮ ನೆನಪಿನ ಬುಟ್ಟಿಯಂತಿರುವ ಅಮೂಲ್ಯ ಫೋಟೊಗಳು, ಬಹುಮುಖ್ಯ ಸಂಪರ್ಕ ಸಂಖ್ಯೆಗಳು ಮತ್ತು ನೀವು ಬಳಸುತ್ತಿರುವ ಎಲ್ಲಾ ಅಪ್ಲಿಕೇಷನ್‌ಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಮತ್ತೆ ಬ್ಯಾಕ್‌ಅಪ್‌ನಿಂದ ಪಡೆದುಕೊಳ್ಳಬಹುದು.

ಹಾಗಾಗಿ, ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಮತ್ತು ಐಪೋನ್ ಬಳಕೆದಾರರು ಮೊಬೈಲ್ ಬ್ಯಾಕಪ್ ತೆಗೆದುಕೊಳ್ಳಲು ಮಾಡಬೇಕಾದ ಕಾರ್ಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಮೊಬೈಲ್ ಬ್ಯಾಕಪ್ ತೆಗೆದುಕೊಳ್ಳುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡುತ್ತಿದ್ದೇವೆ.

ಆಂಡ್ರಾಯ್ಡ್ ಬಳಕೆದಾರರು!!
ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಕಾಂಟ್ಯಾಕ್ಟ್ಸ್, ಕ್ಯಾಲೆಂಡರ್ ಮತ್ತು ಇಂತಹುದೇ ಇತರ ಮಾಹಿತಿಗಳು ನಿಮ್ಮ ಗೂಗಲ್ ಖಾತೆಯಲ್ಲಿ ಸಿಂಕ್ ಆಗಿರುತ್ತವೆ. ಹೀಗಾಗಿ ನೀವು ಆಪ್ ಮಾಹಿತಿ, ಕರೆ ವಿವರ, ಸಾಧನದ ಸೆಟ್ಟಿಂಗ್ಸ್, ಫೋಟೊಗಳು, ಟೆಕ್ಸ್ಟ್ ಸಂದೇಶಗಳು ಮುಂತಾದವನ್ನು ತನ್ನಷ್ಟಕ್ಕೆ ತಾನೇ ಬ್ಯಾಕ್‌ಅಪ್ ಆಗುವಂತೆ ಮಾಡಬಹುದು.

ಆಂಡ್ರಾಯ್ಡ್ ಬ್ಯಾಕಪ್ ಹೇಗೆ?
ಫೋಟೊಗಳು, ಟೆಕ್ಸ್ಟ್ ಸಂದೇಶಗಳು ಮುಂತಾದವನ್ನು ತನ್ನಷ್ಟಕ್ಕೆ ತಾನೇ ಬ್ಯಾಕ್‌ಅಪ್ ಆಗುವಂತೆ ಮಾಡಲು ಸೆಟ್ಟಿಂಗ್ಸ್ ತೆರೆದು ಅದರಲ್ಲಿರುವ ಸಿಸ್ಟಂ ಆಯ್ಕೆ ಮಾಡಿ. ಅದರಲ್ಲಿ ಬ್ಯಾಕ್‌ಅಪ್ ಕ್ಲಿಕ್ ಮಾಡಿ. ಕೆಲವು ಆಪ್‌ಗಳಿಗೆ ಪ್ರತ್ಯೇಕವಾಗಿ ಹೋಗಿ ಅವುಗಳನ್ನು ಪ್ರತ್ಯೇಕವಾಗಿಯೇ ಬ್ಯಾಕ್‌ಅಪ್ ಮಾಡಬೇಕು.ಇವುಗಳನ್ನು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುಬಹುದು.

ಐಫೋನ್ ಬಳಕೆದಾರರು
ನೀವು ‘ಐಕ್ಲೌಡ್'ಗೆ ಸೈನ್‌ಇನ್ ಆಗಿದ್ದರೆ, ನಿಮ್ಮ ಡೇಟಾವೆಲ್ಲಾ ತನ್ನಷ್ಟಕ್ಕೆ ತಾನೇ ಎಲ್ಲ ಮಾಹಿತಿಯನ್ನು ಬ್ಯಾಕ್‌ಅಪ್ ಮಾಡುವ ವ್ಯವಸ್ಥೆ ಇರುತ್ತದೆ. ಈ ಬಗ್ಗೆ ನೀವು ಸೆಟ್ಟಿಂಗ್ಸ್‌ಗೆ ಹೋಗಿ, ನಿಮ್ಮ ಹೆಸರು ನಮೂದಿಸಿ. ನಂತರ ಅದರಲ್ಲಿರುವ ಐಕ್ಲೌಡ್ ಆಯ್ಕೆಯ ಐಕ್ಲೌಡ್ ಬ್ಯಾಕ್‌ಅಪ್ ಆನ್ ಇದೆಯೇ ಎಂಬುದನ್ನು ಪರೀಕ್ಷಿಸಿ. ಐಕ್ಲೌಡ್ ಸಂಗ್ರಹ ಸಾಮರ್ಥ್ಯ ಕಡಿಮೆ ಇರುವುದರಿಂದ ನಿಮ್ಮೆಲ್ಲಾ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಆದ್ದರಿಂದ, ನಿಮ್ಮ ಕಂಪ್ಯೂಟರ್‌ನಲ್ಲಿರುವ ಐಟ್ಯೂನ್ಸ್‌ನಲ್ಲಿ ಬ್ಯಾಕ್‌ಅಪ್ ಮಾಡುವುದು ಒಳ್ಳೆಯದು.

ಐಟ್ಯೂನ್ಸ್‌ನಲ್ಲಿ ಬ್ಯಾಕ್‌ಅಪ್ ಒಳ್ಳೆಯದು.!!
ನಿಮ್ಮ ಕಂಪ್ಯೂಟರ್ ಅಥವಾ ಮ್ಯಾಕ್‌ಗೆ ನಿಮ್ಮ ಐಫೋನ್ ಸಂಪರ್ಕ ನೀಡಿ. ಅದರಲ್ಲಿರುವ ‘ಐಟ್ಯೂನ್ಸ್' ಆಯ್ಕೆ ಮಾಡಿ. ಟೂಲ್‌ಬಾರ್‌ನ ಎಡಭಾಗದಲ್ಲಿ ಇರುವ ‘ಐಫೋನ್' ಎಂಬ ಆಯ್ಕೆ ಕ್ಲಿಕ್ ಮಾಡಿ. ಅದರಲ್ಲಿ ‘ಬ್ಯಾಕ್‌ಅಪ್ ನೌ' ಆಯ್ಕೆ ಕ್ಲಿಕ್ ಮಾಡಿ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ನಿಮಿಷ ಹಿಡಿಯುತ್ತದೆ.ಈಗ ನಿಮ್ಮ ಎಲ್ಲ ಮಾಹಿತಿಯೂ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುತ್ತದೆ. ನಂತರ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಐಟ್ಯೂನ್ಸ್‌ನಿಂದ ಪುನಃ ಪಡೆದುಕೊಳ್ಳಬಹುದು.


ಪ್ರತಿಯೊಂದು ಮಾಹಿತಿಯನ್ನೂ ಅಳಿಸಿ!!
ಸ್ಮಾರ್ಟ್‌ಫೋನ್ ಅನ್ನು ನೀವು ಇತರರಿಗೆ ಮಾರುವಾಗ, ನಿಮ್ಮ ಮೊಬೈಲ್‌ನಿಂದ ಪ್ರತಿಯೊಂದು ಮಾಹಿತಿಯನ್ನೂ ಅಳಿಸುವ ಮುನ್ನ ನೀವು ಎಲ್ಲ ಖಾತೆಗಳಿಂದ ‘ಡಿರಿಜಿಸ್ಟರ್' ಆಗಿ. ಇದರಿಂದ ನಿಮ್ಮ ಫೋನ್ ಪಡೆಯುವವರು, ಅದನ್ನು ಆಕ್ಟಿವೇಟ್ ಮಾಡಿದಾಗ ಯಾವುದೇ ಸಮಸ್ಯೆಗಳನ್ನು ಎದುರಿಸಲಾರರು ಮತ್ತು ನಿಮಗೂ ಸಮಸ್ಯೆ ಇರುವುದಿಲ್ಲ. ಅಲ್ಲದೆ, ನೀವು ಸಹ ಅದನ್ನು ಮತ್ತೆ ಟ್ರ್ಯಾಕ್ ಮಾಡಲು ಸಾಧ್ಯವಾಗದು.


Click it and Unblock the Notifications








