ಒಂದು ರೂಪಾಯಿ ಪಾವತಿಸದೇ ರೈಲ್ವೇ ಟಿಕೆಟ್‌ ಬುಕ್‌..! ಹೇಗೆ ಗೊತ್ತಾ..?


ಐಆರ್‌ಸಿಟಿಸಿ ತನ್ನ ಬಳಕೆದಾರರಿಗಾಗಿ ಇತ್ತೀಚೆಗೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆ ಬಳಕೆದಾರರು ಯಾವುದೇ ಹಣ ಪಾವತಿಸದೆ ರೈಲು ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡುತ್ತದೆ. ಬುಕ್ ನೌ, ಪೇ ಲೇಟರ್ ಎಂದು ಕರೆಯಲ್ಪಡುವ ಹೊಸ ಸೇವೆ ಬಳಕೆದಾರರಿಗೆ ಹಣ ಪಾವತಿಸದೆ ಟಿಕೆಟ್ ಬುಕ್ ಮಾಡಲು ಮತ್ತು ನಂತರ ಪಾವತಿಗೆ ಆಯ್ಕೆಯನ್ನು ನೀಡುತ್ತದೆ. ಆದರೆ, ಬಳಕೆದಾರರು 14 ದಿನಗಳೊಳಗೆ ಟಿಕೆಟ್‌ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, 14 ದಿನಗಳ ನಂತರ ಐಆರ್‌ಸಿಟಿಸಿ ಟಿಕೆಟ್‌ ಹಣದ ಮೇಲೆ ಶೇ.3.5ರಷ್ಟು ಬಡ್ಡಿ ವಿಧಿಸಲು ಪ್ರಾರಂಭಿಸುತ್ತದೆ.

ಈ ಹೊಸ ಸೇವೆಯನ್ನು ಹೇಗೆ ಬಳಸಬೇಕು ಎಂಬ ಕುತೂಹಲ ಇದ್ದರೆ, ಮುಂದೆ ನಾವು ನೀಡಿರುವ ಹಂತಗಳನ್ನು ಅನುಸರಿಸಿ.

ಹಂತ 1

ಐಆರ್‌ಸಿಟಿಸಿ ವೆಬ್‌ಸೈಟ್ ತೆರೆಯಿರಿ, ಲಾಗ್ ಇನ್ ಮಾಡಿ ಮತ್ತು ನಿಮ್ಮ ಪ್ರಯಾಣವನ್ನು ಪ್ಲಾನ್‌ ಮಾಡಿ. ನೀವು ಐಆರ್‌ಸಿಟಿಸಿ ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ, ಪ್ರಯಾಣದ ದಿನಾಂಕ, ನಿಲ್ದಾಣಗಳಿಂದ ಮತ್ತು ನಿಲ್ದಾಣಗಳಿಗೆ ಪ್ರಯಾಣದ ವಿವರಗಳನ್ನು ನಮೂದಿಸಿ ಮತ್ತು ರೈಲುಗಳನ್ನು ಹುಡುಕಿ ಬಟನ್ ಕ್ಲಿಕ್ ಮಾಡಿ.

ಹಂತ 2

ಈ ಹಂತದಲ್ಲಿ ಪ್ರಯಾಣಿಕರ ವಿವರಗಳನ್ನು ನಮೂದಿಸಿ. ನಂತರ ಕ್ಯಾಪ್ಚಾ ನಮೂದಿಸಿ ಮತ್ತು ಹಣ ಪಾವತಿಗಾಗಿ ಮುಂದುವರಿಯಿರಿ.

ಹಂತ 3

ನಂತರ "ಪೇ-ಆನ್ ಡೆಲಿವರಿ / ಪೇ ಲೇಟರ್‌" ಆಯ್ಕೆಯನ್ನು ಆರಿಸಿ ಮತ್ತು ಇಪೇ ಲೇಟರ್ ಪೋರ್ಟಲ್ ಮೂಲಕ ಪಾವತಿಸಿ.

ಒಟಿಪಿ ಬಳಸಿ ಲಾಗಿನ್‌ ಆಗಿ

ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ವೀಕರಿಸಿದ ಒಟಿಪಿ ಬಳಸಿ ಲಾಗಿನ್ ಆಗಿ ಮತ್ತು ಪಾವತಿಸಿ. ನಂತರ, ಅದು ಸ್ವಯಂಚಾಲಿತವಾಗಿ ಐಆರ್‌ಸಿಟಿಸಿ ವೆಬ್‌ಸೈಟ್‌ ಯಶಸ್ವಿ ಪಾವತಿ ಮತ್ತು ಬುಕಿಂಗ್ ವಿವರಗಳನ್ನು ತೋರಿಸುತ್ತದೆ.

Most Read Articles
Best Mobiles in India
Read More About: irctc how to tips and tricks news

Have a great day!
Read more...

English Summary

IRCTC Pay Later Service Introduced: Here's How To Use It