ಕಳೆದ ಮೊಬೈಲ್‌ ಫೋನ್‌ಗಳನ್ನು ಹುಡುಕುವುದು ಕಷ್ಟ..! ಏಕೆ ಗೊತ್ತಾ..?


ಕದ್ದ ಮತ್ತು ಕಳೆದುಹೋದ ಮೊಬೈಲ್ ಫೋನ್‌ಗಳ ನಿರ್ಬಂಧ ಮತ್ತು ಪತ್ತೆಗೆ ಸರ್ಕಾರ ಕೇಂದ್ರ ನೋಂದಾವಣಿಯನ್ನು ಪ್ರಾರಂಭಿಸಿದೆ. ಆದರೆ, ಈ ರಿಜಿಸ್ಟ್ರಿ ಸೀಮಿತ ಪರಿಣಾಮ ಬೀರುತ್ತಿದ್ದು, ಅನೇಕ ಸಾಧನಗಳನ್ನು ಸುಲಭವಾಗಿ ವಿದೇಶಕ್ಕೆ ಕೊಂಡೊಯ್ಯಬಹುದು ಎಂದು ಹ್ಯಾಂಡ್‌ಸೆಟ್ ತಜ್ಞರು ಹೇಳಿದ್ದಾರೆ. ರಿಜಿಸ್ಟ್ರಿ ಮೂಲಕ ಕದ್ದ ಮತ್ತು ಕಳೆದುಹೋದ ಮೊಬೈಲ್ ಫೋನ್‌ಗಳ IMEI ಸಂಖ್ಯೆಯನ್ನು ನಿರ್ಬಂಧಿಸಲು ಸರ್ಕಾರ ಉದ್ದೇಶಿಸಿದೆ. IMEI ಸಂಖ್ಯೆ ನಿರ್ಬಂಧವಾದ ಫೋನ್‌ಗಳಲ್ಲಿ ಯಾವುದೇ ಭಾರತೀಯ ಟೆಲಿಕಾಂ ಆಪರೇಟರ್‌ ನೀಡುವ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ.

Advertisement

ಸರಳ IMEI ಬದಲಾವಣೆ

ಕೇಂದ್ರ ಸರ್ಕಾರದ ಹೊಸ ಕಾರ್ಯವಿಧಾನಕ್ಕೆ ದೊಡ್ಡ ಮಿತಿಯೆಂದರೆ, ಪ್ರತಿ ಸಾಧನಕ್ಕೂ ವಿಶಿಷ್ಟವಾಗಿರುವ ಇಂಟರ್‌ನ್ಯಾಷನಲ್ ಮೊಬೈಲ್‌ ಎಕ್ವಿಪ್‌ಮೆಂಟ್‌ ಐಡೆಂಟಿಟಿ (IMEI) ಅನ್ನು ಸುಲಭವಾಗಿ ಬದಲಾಯಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಮುರಿದ ಅಥವಾ ಅಸಮರ್ಪಕ ಮೊಬೈಲ್ ಫೋನ್ ರಿಪೇರಿ ಸಂದರ್ಭದಲ್ಲೂ IMEI ಬದಲಾಯಿಸಬಹುದು.

Advertisement
ಪಿಸಿಬಿಎ ಬದಲಾದರೆ IMEI ಬದಲು

ನೀವು ಸಾಧನದ ಪಿಸಿಬಿಎ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ) ಅನ್ನು ಬದಲಾಯಿಸಿದರೆ, IMEI ಕೂಡ ಸ್ವಯಂಚಾಲಿತವಾಗಿ ಬದಲಾಗುತ್ತದೆ. ಆದರೆ, ಹೆಚ್ಚಿನ ಬಳಕೆದಾರರು ರಿಪೇರಿಗಾಗಿ ಅಗ್ಗದ ದರದಲ್ಲಿ ದೊರೆಯುವ ಸ್ಥಳೀಯ ಅಂಗಡಿಗಳಿಗೆ ಹೋಗುತ್ತಾರೆ ಎಂದು ಸಂಶೋಧನಾ ವಿಶ್ಲೇಷಕ ಫೈಸಲ್ ಕಾವೂಸಾ ಹೇಳಿದ್ದಾರೆ. ಬಳಕೆದಾರರು ಕರೆ ಮಾಡಿದಾಗ, ಫೋನ್ ಸಂಖ್ಯೆಯ ರೆಕಾರ್ಡ್ ಮತ್ತು ಕರೆ ಮಾಡಿದ ಹ್ಯಾಂಡ್‌ಸೆಟ್‌ನ IMEI ಅನ್ನು ರಚಿಸಲಾಗುತ್ತದೆ, ಇದು ಸಾಧನದ ಬಳಕೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಬೇರೆ ಸಿಮ್ ಕಾರ್ಡ್ ಬಳಸಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದಾದರೂ, ವಿಶೇಷ ಸಾಧನಗಳನ್ನು ಬಳಸುವ ತಾಂತ್ರಿಕ ವ್ಯಕ್ತಿಯಿಂದ ಮಾತ್ರ IMEI ಬದಲಾಯಿಸಲು ಸಾಧ್ಯ.

ಶಿಕ್ಷಾರ್ಹ ಅಪರಾಧ

ಕವೂಸಾ ಪ್ರಕಾರ, ನವೀಕರಿಸಿದ ಅಥವಾ ಸೆಕೆಂಡ್‌ಹ್ಯಾಂಡ್ ಫೋನ್ ವ್ಯವಹಾರದಲ್ಲಿ ನಕಲಿ IMEI ಮೂಲಕ ತಾಂತ್ರಿಕ ಫ್ಲ್ಯಾಷ್ ಮಾಡಿ ಸಾಧನಗಳನ್ನು ಹಾಳುಮಾಡಲಾಗುತ್ತದೆ. ಸಿಕ್ಕಿಹಾಕಿಕೊಳ್ಳಬಾರದೆಂದು ಕೆಲವು ಹಾರ್ಡ್‌ವೇರ್‌ಗಳನ್ನು ಬದಲಾಯಿಸಲಾಗುತ್ತದೆ. ಅಧಿಕೃತ ಹ್ಯಾಂಡ್‌ಸೆಟ್ ತಯಾರಕರು ಹೊರತುಪಡಿಸಿ, 15 ಅಂಕಿಯ IMEI ಹಾಳು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.

CEIR ಉದ್ಘಾಟನೆ

ಕೇಂದ್ರ ಸಾಧನ ಅಭಿವೃದ್ಧಿ ನೋಂದಾವಣೆ (Central Equipment Information Registry) ಯನ್ನು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಉದ್ಘಾಟಿಸಿದ್ದಾರೆ. ಈ ಕೇಂದ್ರವನ್ನು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ವಿನ್ಯಾಸಗೊಳಿಸಿದ್ದು, ಆನ್‌ಲೈನ್ ಪೋರ್ಟಲ್‌ನಲ್ಲಿ ಬಳಕೆದಾರರು ದೂರು ದಾಖಲಿಸಿದರೆ ನೋಂದಾವಣೆ ಸಾಧನದ IMEI ಸಂಖ್ಯೆಯನ್ನು ನಿರ್ಬಂಧಿಸುತ್ತದೆ. ಆದರೆ, ಕದ್ದ ಸಾಧನಗಳನ್ನು ವಿದೇಶಕ್ಕೆ ರವಾನಿಸಬಹುದು ಮತ್ತು ವಿದೇಶಿ ನೆಟ್‌ವರ್ಕ್‌ನಲ್ಲಿ ಬಳಸಬಹುದು ಎಂದು ತಜ್ಞರು ಮಿತಿಗಳನ್ನು ತಿಳಿಸಿದ್ದಾರೆ.

ಕಠಿಣ ಐಫೋನ್‌

ಆಪಲ್‌ನ ಪ್ರತಿ ಐಫೋನ್‌ಗಳು ವಿಶಿಷ್ಟ ಸರಣಿ ಸಂಖ್ಯೆಯನ್ನು ಹೊಂದಿದ್ದು, ಬದಲಾಯಿಸುವುದು ಕಠಿಣವಾಗಿದೆ. "ನಿಮಗೆ 4-ಅಂಕಿಯ ಅಥವಾ 6-ಅಂಕಿಯ ಪಾಸ್‌ಕೋಡ್ ತಿಳಿದಿಲ್ಲದಿದ್ದರೆ, ಸಿಮ್ ಬದಲಾಯಿಸುವುದನ್ನು ಹೊರತುಪಡಿಸಿದರೆ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ. ಈಗ, ಕೇವಲ ಸಿಮ್‌ ಬದಲಾಯಿಸಿದರೆ ನೀವು ಸಿಕ್ಕಿಹಾಕಿಕೊಳ್ಳುತ್ತೀರಿ ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಆಂಡ್ರಾಯ್ಡ್ ಫೋನ್‌ಗಳನ್ನು ಅನ್‌ಲಾಕ್ ಮಾಡಬಹುದು ಮತ್ತು ಸಾಫ್ಟ್‌ವೇರ್‌ನ್ನು ಸಂಪೂರ್ಣ ಅಳಿಸಿಹಾಕಬಹುದು ಎಂದು ಹೇಳಿದ್ದಾರೆ.

Best Mobiles in India

English Summary

Lost Your Phone? It Might Be Difficult To Track: Here's Why