ಆನ್ಲೈನಿನಲ್ಲಿ 'ಯುಎಎನ್' ಆಕ್ಟಿವೇಟ್ ಮಾಡುವುದು ಹೇಗೆ?..ಪಿಎಫ್ ವೆಬ್ಸೈಟ್ ಪ್ರಯೋಜನಗಳು?
ಉದ್ಯೋಗಿಗಳ ನೆರವಿಗೆ ಬರುವ ಪಿಎಫ್ ಸಂಬಂಧಿ ವ್ಯವಹಾರಗಳಿಗೆ ಇಪಿಎಫ್ಒ ಜಾಲತಾಣವು ಉದ್ಯೋಗಿಗಳಿಗೆ ಹೆಚ್ಚು ನೆರವು ನೀಡುವಂತೆ ರೂಪಿತವಾಗಿದೆ.. ಪಿಎಫ್ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲದೇ, ಒಂದೇ ಜಾಲತಾಣದಲ್ಲಿ ಪಿಎಫ್ಗೆ ಸಂಬಂಧಿಸಿದ ಬಹುತೇಕ ಸೇವೆಗಳು ಲಭ್ಯ ಇವೆ.!!

ಈಗ ಪಿಎಫ್ ಕ್ಲೈಮ್ಗಳನ್ನು ಆನ್ಲೈನ್ ಮೂಲಕವೇ ಮಾಡಲು ಜಾಲತಾಣ ಪೂರಕವಾಗಿದ್ದು, ಕಾಗದರಹಿತ ವ್ಯವಹಾರ ಸಾಧ್ಯ. ಪಿಎಫ್ ಸದಸ್ಯರು www.epfindia.gov.in ಜಾಲತಾಣಕ್ಕೆ ಭೇಟಿ ನೀಡಿ, ಪಿಎಫ್ ಸಂಬಂಧಿ ವ್ಯವಹಾರಗಳನ್ನು ಪಡೆಯಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಪಿಎಫ್ ವೆಬ್ಸೈಟ್ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ಯುಎಎನ್ ಸಂಖ್ಯೆ ಹೊಂದಿರಬೇಕು?
ಪಿಎಫ್ ಜಾಲತಾಣದ ಸೇವೆ ಪಡೆಯಲು ಸದಸ್ಯರು ಮೊದಲಿಗೆ ಯುಎಎನ್ ಸಂಖ್ಯೆ ಹೊಂದಿರಬೇಕು. ಮತ್ತು ಅದು ಸಕ್ರಿಯವಾಗಿರಬೇಕು. ಅಲ್ಲಿ Our Service ಅನ್ನು ಕ್ಲಿಕ್ ಮಾಡಿ. ನಂತರ For Employees ಅನ್ನು ಕ್ಲಿಕ್ ಮಾಡಿದರೆ Member UAN, Online services ಎನ್ನುವ ನಾನಾ ಆಯ್ಕೆಯನ್ನು ಗಮನಿಸಬಹುದು.

ಯುಎಎನ್ ಆಕ್ಟೀವ್ ಹೇಗೆ?
ವೇತನ ಚೀಟಿಯಲ್ಲಿರುವ ಯುಎಎನ್ ಅನ್ನು ಸಕ್ರಿಯಗೊಳಿಸಲು https://unifiedportal-mem.epfindia.gov.in/memberinterface/ ಜಾಲತಾಣಕ್ಕೆ ಹೋಗಬೇಕು. ಅಲ್ಲಿ 'Activate UAN' ಅನ್ನು ಕ್ಲಿಕ್ಕಿಸಬೇಕು. ಯುಎಎನ್ ಸಂಖ್ಯೆ, ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ವಿವರಗಳನ್ನು ನೀಡಿದಾಗ ಪಿನ್ ಬರುತ್ತದೆ. ಅದನ್ನು ನಮೂದಿಸಿದಾಗ ಯುಎಎನ್ ಸಕ್ರಿಯವಾಗುತ್ತದೆ.

ಪಿಎಫ್ ಖಾತೆಗೆ ಕೆವೈಸಿ ಅಪ್ಡೇಟ್
ಇಪಿಎಫ್ಒ ಜಾಲತಾಣದ ಮೂಲಕ ಪಿಎಫ್ ಖಾತೆಗೆ ಆಧಾರ್, ಪ್ಯಾನ್, ಬ್ಯಾಂಕ್ ಖಾತೆ ಸೇರಿದಂತೆ ನಾನಾ ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡಲು ಸಾಧ್ಯ. ಕೆವೈಸಿ ವಿವರಗಳನ್ನು ಅಪ್ಲೋಡ್ ಮಾಡಿದರೆ, ನಿಮ್ಮ ಪಿಎಫ್ ಕ್ಲೈಮ್ಗಳು ಸರಾಗವಾಗುತ್ತವೆ.

ಯುಎಎನ್ಗೆ ಆಧಾರ್ ಜೋಡಣೆ!
ಇಪಿಎಫ್ಒ ಜಾಲತಾಣದ ಮೂಲಕ ಆಧಾರ್ ಸಂಖ್ಯೆಯನ್ನು ಯುಎಎನ್ಗೆ ಜೋಡಣೆ ಮಾಡಲು ಈ ಜಾಲತಾಣದಲ್ಲಿ ಅವಕಾಶವಿದೆ. ವೆಬ್ಸೈಟ್ ತೆರದರೆ ಅಲ್ಲಿಯೇ ಯುಎಎನ್ಗೆ ಆಧಾರ್ ಜೋಡಣೆ ಮಾಡಬಹುದಾದ ಆಯ್ಕೆನ್ನು ನೀವು ಕಾಣಬಹುದು.!

ಆನ್ಲೈನ್ ಕ್ಲೈಮ್ಗಳಿಗೆ ಅವಕಾಶ!
ಪಿಎಫ್ ಹಣ ಹಿಂಪಡೆಯುವುದು, ವರ್ಗಾವಣೆ ಮಾಡುವುದು ಮತ್ತು ಸೆಟ್ಲ್ಮೆಂಟ್ ಸೇರಿದಂತೆ ಇತರೆ ಆನ್ಲೈನ್ ಕ್ಲೈಮ್ಗೆ ಈಗ ಅವಕಾಶವಿದೆ. ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ, ಪಿಂಚಣಿ ಖಾತೆಗೆ ಎಷ್ಟು ಸೇರಿದೆ ಎನ್ನುವ ವಿವರಗಳನ್ನು ಈ ಜಾಲತಾಣದಲ್ಲಿನ ಇ-ಪಾಸ್ಬುಕ್ನಲ್ಲಿ ಗಮನಿಸಬಹುದು.

ನಿಮ್ಮ ವಿವರಗಳನ್ನು ಗಮನಿಸಿ!!
ನಿಮ್ಮ ಪಿಎಫ್ ಖಾತೆಗೆ ಸಂಬಂಧಿಸಿದಂತೆ ಜನ್ಮದಿನಾಂಕ, ನಿಮ್ಮ ಹೆಸರು, ತಂದೆ ಹೆಸರು ಸೇರಿದಂತೆ ಎಲ್ಲಾ ಸ್ವವಿವರಗಳು ಸರಿಯಾಗಿವೆಯೇ ಎಂಬುದನ್ನು ಈ ಜಾಲತಾಣದಲ್ಲಿ ಪರಿಶೀಲಿಸಬಹುದು. ಒಂದು ವೇಳೆ ತಪ್ಪಾಗಿದ್ದರೆ, ಅವುಗಳನ್ನು ಆನ್ಲೈನ್ ಮೂಲಕವೇ ಸರಿಪಡಿಸಿಕೊಳ್ಳಬಹುದಾದ ಆಯ್ಕೆ ಕೂಡ ಇದೆ.


Click it and Unblock the Notifications








