Home
ಟೆಕ್ ನೌಕರಿ

ಸ್ಮಾರ್ಟ್‌ಫೋನ್ ಮೂಲಕ ಎಲ್ಲಿಯೋ ಇರುವ ಕಂಪ್ಯೂಟರ್ ಬಳಸುವುದು ಹೇಗೆ?..ಆಶ್ಚರ್ಯವೇ!?

By Bhaskar N J

ನೀವು ಹೊರಗಡೆ ಎಲ್ಲಿಯಾದರೂ ಇದ್ದು ನಿಮ್ಮ ಮನೆಯಲ್ಲಿನ ಅಥವಾ ಆಫಿಸ್‌ನಲ್ಲಿನ ಕಂಪ್ಯೂಟರ್ ಬಳಸಬೇಕು ಎನ್ನುವ ಪ್ರಸಂಗ ಬರುತ್ತದೆ. ಮನೆಯಲ್ಲಿಯೇ ಕುಳಿತು ಆಫಿಸ್ ಕೆಲಸವನ್ನು ನಿರ್ವಹಿಸಬೇಕಾದ ಸಮಯ ಕೂಡ ಬರುತ್ತದೆ.! ಆದರೆ, ಇದು ಸಾಧ್ಯವೇ ಎಂದುಕೊಳ್ಳಬೇಡಿ. ಏಕೆಂದರೆ ಇದನ್ನು ಸಾಧ್ಯವಾಗಿಸುತ್ತಿದೆ ಇಂದಿನ ತಂತ್ರಜ್ಞಾನ.!!

ಸ್ಮಾರ್ಟ್‌ಫೋನ್ ಮೂಲಕ ಎಲ್ಲಿಯೋ ಇರುವ ಕಂಪ್ಯೂಟರ್ ಬಳಸುವುದು ಹೇಗೆ?..ಆಶ್ಚರ್ಯವೇ!?

ಹೌದು, ಗೂಗಲ್ ಸೇವೆಯ ಮೂಲಕ ಮನೆಯಲ್ಲಿನ ಅಥವಾ ಆಫಿಸ್‌ನಲ್ಲಿನ ಕಂಪ್ಯೂಟರ್ ಅನ್ನು ಎಲ್ಲಿಂದವಾದರೂ ಬಳಸುವ ಆಯ್ಕೆ ಇದ್ದು, ಹೊಸ ತಂತ್ರಾಂಶವೊಂದು ಕಂಪ್ಯೂಟರ್ ಬಳಕೆದಾರರಿಗೆ ವರವಾಗಿದೆ.! ಹಾಗಾದರೆ, ಎಲ್ಲಿಯೋ ಕುಳಿತು ಇನ್ನೊಂದು ಕಂಪ್ಯೂಟರ್ ಬಳಕೆ ಮಾಡುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕ್ರೋಮ್‌ ರಿಮೋಟ್‌ ಡೆಸ್ಕ್‌ಟಾಪ್‌!!

ಕ್ರೋಮ್‌ ರಿಮೋಟ್‌ ಡೆಸ್ಕ್‌ಟಾಪ್‌!!

ಗೂಗಲ್ ಸಂಸ್ಥೆ ತನ್ನ ಅಧಿಕೃತ ವೆಬ್ ಬ್ರೌಸರ್ ಗೂಗಲ್ ಕ್ರೋಮ್‌ಗೆ ಹೊಸ ಕ್ರೋಮ್‌ ರಿಮೋಟ್‌ ಡೆಸ್ಕ್‌ಟಾಪ್‌ ಎಂಬ ಎಕ್ಸ್‌ಟೆನ್ಷನ್‌ ಬಿಡುಗಡೆಗೊಳಿಸಿದೆ. ಇದರಿಂದ ನೀವು ಇರುವ ಸ್ಥಳದಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬಹುದಾಗಿದೆ.!!

ಮೊಬೈಲ್ ಮೂಲಕವೂ ಬಳಕೆ ಮಾಡಬಹುದು.!!

ಮೊಬೈಲ್ ಮೂಲಕವೂ ಬಳಕೆ ಮಾಡಬಹುದು.!!

ಕ್ರೋಮ್‌ ರಿಮೋಟ್‌ ಡೆಸ್ಕ್‌ಟಾಪ್‌ ಎಂಬ ಎಕ್ಸ್‌ಟೆನ್ಷನ್ ಮೂಲಕ ನೀವು ಇರುವ ಸ್ಥಳದಿಂದಲೇ ನಿಮ್ಮ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ನಿಂದ ಇತರ ಯಾವುದೇ ಕಂಪ್ಯೂಟರ್ ಒಳಹೊಕ್ಕು ಪ್ರವೇಶ ಮಾಡಿ ಕೆಲಸ ಮಾಡಬಹುದಾಗಿದೆ. ಭೌತಿಕವಾಗಿ ಆ ಕಂಪ್ಯೂಟರ್‌ನ ಮುಂದೆ ಇಲ್ಲವಾದರೂ ‘ಕ್ರೋಮ್‌ ರಿಮೋಟ್‌ ಡೆಸ್ಕ್‌ಟಾಪ್‌ ನಿಮ್ಮ ಸಹಾಯಕ್ಕೆ ಬರಲಿದೆ!!

ಹೇಗೆ ಕೆಲಸ ಮಾಡುತ್ತದೆ? ಸ್ಟೆಪ್ 1.!!

ಹೇಗೆ ಕೆಲಸ ಮಾಡುತ್ತದೆ? ಸ್ಟೆಪ್ 1.!!

ಕಂಪ್ಯೂಟರ್/ಮೊಬೈಲ್‌ನಲ್ಲಿ ಕ್ರೋಮ್ ವೆಬ್ ಬ್ರೌಸರ್ ಇದ್ದರೆ ಡೆಸ್ಕ್‌ಟಾಪ್‌ ಎಕ್ಸ್‌ಟೆನ್ಷನ್ ಅನ್ನು ಇನ್‌ಸ್ಟಾಲ್ ಮಾಡಬೇಕು. ನೀವು ಮೊಬೈಲ್‌ ಮೂಲಕ ಕಂಪ್ಯೂಟರ್‌ ನಿಯಂತ್ರಿಸಬೇಕಿದ್ದರೆ ಮೊಬೈಲ್‌ನಲ್ಲಿರುವ ರಿಮೋಟ್ ಎಕ್ಸ್‌ಟೆನ್ಷನ್‌ನಲ್ಲಿ ಕೋಡ್ ಜನರೇಟ್ ಮಾಡಬೇಕು.!!

ಹೇಗೆ ಕೆಲಸ ಮಾಡುತ್ತದೆ? ಸ್ಟೆಪ್ 2.!!

ಹೇಗೆ ಕೆಲಸ ಮಾಡುತ್ತದೆ? ಸ್ಟೆಪ್ 2.!!

ಜನರೇಟ್ ಮಾಡಿದ ಆ ಕೋಡ್ ಅನ್ನು ಕಂಪ್ಯೂಟರ್‌ನ ರಿಮೋಟ್ ಎಕ್ಸ್‌ಟೆನ್ಷನ್‌ನಲ್ಲಿ ನಮೂದಿಸಿದರೆ ಎರಡೂ ಗ್ಯಾಜೆಟ್‌ಗಳ ನಡುವೆ ಇಂಟರ್‌ನೆಟ್ ಸಹಾಯದಿಂದ ಸಂಪರ್ಕ ಸಾಧ್ಯವಾಗುತ್ತದೆ. ನಿಮ್ಮ ಮೊಬೈಲ್ ಪರದೆ ಮೇಲೆ ಕಂಪ್ಯೂಟರ್‌ನ ಪರದೆ ಮೂಡುತ್ತದೆ.! ಈಗ ನೀವು ನಿಮ್ಮ ಮೊಬೈಲ್ ಪರದೆಯಿಂದ ಕಂಪ್ಯೂಟರ್ ನಿಯಂತ್ರಿಸಬಹುದು.!!

How to Sharing a Mobile Data Connection with Your PC (KANNADA)
ಸಂಪೂರ್ಣ ಉಚಿತ!!

ಸಂಪೂರ್ಣ ಉಚಿತ!!

ಈ ತಂತ್ರಜ್ಞಾನದಿಮದ ವಿಂಡೋಸ್, ಮ್ಯಾಕ್, ಲೂನಿಕ್ಸ್ ಓಎಸ್ ಹೊಂದಿರುವ ಸಿಸ್ಟಮ್‌ಗಳ ನಡುವೆ ಪರಸ್ಪರ ಸಂಪರ್ಕ ಸಾಧಿಸಬಹುದು. ಇದಕ್ಕೆ ಇನ್ಯಾವುದೇ ಸಾಫ್ಟ್‌ವೇರ್‌ಗಳ ಸಹಾಯ ಕೂಡ ಬೇಕಿಲ್ಲ ಮತ್ತು ಕ್ರೋಮ್ ರಿಮೋಟ್ ಡೆಸ್ಕ್‌ಟಾಪ್ ಎಕ್ಸ್‌ಟೆನ್ಷನ್‌ ಸಂಪೂರ್ಣ ಉಚಿತವಾಗಿದೆ.!!

Best Mobiles in India

English summary
How do I add computers to Google Remote Desktop?. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+