'ವಿಂಡೋಸ್ 10' ರಿಸ್ಟೋರ್ ಮಾಡಿ ಕಂಪ್ಯೂಟರ್ ಹ್ಯಾಂಗ್ ಆಗುವುದನ್ನು ತಪ್ಪಿಸಿ!!
ಮೈಕ್ರೊಸಾಫ್ಟ್ ಕಂಪೆನಿಯ 'ವಿಂಡೋಸ್ 10' ಆಪರೆಟಿಂಗ್ ಸಿಸ್ಟಮ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಬಳಸುತ್ತಿರಬಹುದು. ಈ ಆಪರೇಟಿಂಗ್ ಸಿಸ್ಟಮ್ ಎಷ್ಟೇ ಉತ್ತಮವಾಗಿದ್ದರೂ ಕೂಡ ಕೆಲವೊಮ್ಮೆ ಹ್ಯಾಂಗ್ ಆಗುವ ತೊಂದರೆ ತಪ್ಪಿದ್ದಲ್ಲ. ಏಕೆಂದರೆ, ಕಂಪ್ಯೂಟರ್ ಸಾಫ್ಟ್‌ವೇರ್ ಮೇಲೆ ನಾವು ಹೆಚ್ಚೆಚ್ಚು ಒತ್ತಡವನ್ನು ಹೇರಿದಂತೆ ಈ ತೊಂದರೆ ಕಾಣಿಸುವುದು ಸಹಜ.
ದಿನಕ್ಕೆ ಹತ್ತಾರು ಅಪ್ಲಿಕೇಷನ್ಗಳನ್ನು ಡೌನ್‌ಲೋಡ್ ಮಾಡಿ, ಹತ್ತಾರು ಬಾರಿ ಪೆನ್‌ಡ್ರೈವ್ ಹಾಕಿ ಕಂಪ್ಯೂಟರ್ ಸಾಫ್ಟ್‌ವೇರ್ ಮೇಲೆ ಬಹಳಷ್ಟು ಒತ್ತಡವನ್ನು ನಾವು ಹಾಕುತ್ತೇವೆ. ಜೊತೆಗೆ ಅಂತರ್ಜಾಲದ ಕಸವನ್ನೆಲ್ಲಾ ಕಂಪ್ಯೂಟರ್‌ನಲ್ಲಿಯೇ ತುಂಬುವ ಕೆಲಸ ಶುರುವಾಗಿರುವುದರಿಂದ, ಈಗಂತೂ ಕಂಪ್ಯೂಟರ್ ಹ್ಯಾಂಗ್ ಆಗುವುದು ಸಾಮಾನ್ಯ ವಿಷಯ ಎಂಬಂತಾಗಿದೆ.

ಒಮ್ಮೆ ನಿಮ್ಮ ಕಂಪ್ಯೂಟರ್ ಈ ತೊಂದರೆಗೆ ಸಿಲುಕಿದರೆ ಯಾವ ಆಯಂಟಿ ವೈರಸ್ ಇದ್ದರೂ ಕೂಡ ನಿಮ್ಮ ಸಿಸ್ಟಮ್ ಸ್ಲೋ ಮತ್ತು ಹ್ಯಾಂಗ್ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ನಾವೇ ವಿಂಡೋಸ್ 10 ಅನ್ನು ರಿಸ್ಟೋರ್ ಮಾಡುವ ಮೂಲಕ ಕಂಪ್ಯೂಟರ್ ಹ್ಯಾಂಗಿಂಗ್ ಸಮಸ್ಯೆಯನ್ನು ತಪ್ಪಿಸುವುದು ಹೇಗೆ? ಎಂಬುದನ್ನು ತಿಳಿಯೊಣ.

ವಿಂಡೋಸ್ 10 ರಿಸ್ಟೋರ್ ಮಾಡಿದರೆ ಏನಾಗುತ್ತದೆ.?
ಸಿಸ್ಟಮ್ ಸ್ಲೋ ಮತ್ತು ಹ್ಯಾಂಗ್ ಆಗುತ್ತಿದ್ದರೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ರಿಸ್ಟೋರ್ ಮಾಡುವುದು ಒಳ್ಳೆಯದು. ರಿಸ್ಟೋರ್ ಮಾಡುವುದರಿಂದ ಕಂಪ್ಯೂಟರ್‌ನಲ್ಲಿರುವ ಜಂಕ್ ಫೈಲ್‌ಗಳು ಡಿಲೀಡ್ ಆಗಿ ಕಂಪ್ಯೂಟರ್ ಕಾರ್ಯನಿರ್ವಹಣೆ ಉತ್ತಮವಾಗುತ್ತದೆ. ಹೊಸದಾಗಿ ಖರೀದಿಸಿದಾಗ ಇದ್ದಂತಹ ಕಂಪ್ಯೂಟರ್ ಸಾಫ್ಟ್‌ವೇರ್ ಇರುತ್ತದೆ.

ವಿಂಡೋಸ್ 10 ರಿಸ್ಟೋರ್ ಮಾಡುವ ಮುನ್ನ ಏನು ಮಾಡಬೇಕು.
ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಕಂಪ್ಯೂಟರ್ ರಿಸ್ಟೋರ್ ಮಾಡುವ ಮುನ್ನ ಬ್ಯಾಕಪ್ ತೆಗೆದುಕೊಳ್ಳಿರಿ. ಏಕೆಂದರೆ ಸಿಸ್ಟಮ್ ರಿಸ್ಟೋರ್ ಮಾಡಿದ ನಂತರ ನೀವು ಇನ್‌ಸ್ಟಾಲ್ ಮಾಡಿದ ಆಪ್ಸ್, ಮತ್ತು ಡಾಕ್ಸುಮೆಂಟ್ಸ್‌ಗಳೆಲ್ಲವೂ ಡಿಲೀಟ್ ಆಗುತ್ತದೆ. ಬ್ಯಾಕಪ್ ತೆಗೆದಿಟ್ಟುಕೊಳ್ಳದಿದ್ದರೆ ಅವುಗಳನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ.

ವಿಂಡೋಸ್ 10 ರಿಸ್ಟೋರ್ ಮಾಡುವುದು ಹೇಗೆ? ಹಂತ 1
ವಿಂಡೋಸ್ 10 ಬಳಕೆದಾರರು ಸ್ಟಾರ್ಟ್ ಕ್ಲಿಕ್ ಮಾಡಿ ಸರ್ಚ್ ಬಟನ್‌ನಲ್ಲಿ ರಿಸ್ಟೋರ್ ಎಂದು ಟೈಪ್ ಮಾಡಿ.ನಂತರ ರಿಸ್ಟೋರ್ ಪಾಯಿಂಟ್ ಆಯ್ಕೆ ಮಾಡಿ .ಸಿಸ್ಟಮ್ ಪ್ರೊಟೆಕ್ಷನ್ ಟ್ಯಾಬ್ ತೆರೆದು, ಪ್ರೊಟೆಕ್ಷನ್ ಸೆಟ್ಟಿಂಗ್ ತೆರೆದು ಎನೆಬಲ್ ಐಕಾನ್ ಕ್ಲಿಕ್ ಮಾಡಿ. ಕೆಲವು ನಿಮಿಷದ ನಂತರ ಒಂದು ಮೆಸೇಜ್ ಬರುತ್ತದೆ.

ವಿಂಡೋಸ್ 10 ರಿಸ್ಟೋರ್ ಮಾಡುವುದು ಹೇಗೆ? ಹಂತ 2
ಸ್ಟಾರ್ಟ್ ಕ್ಲಿಕ್ ಮಾಡಿ ಸರ್ಚ್ ಬಟನ್‌ನಲ್ಲಿ ರಿಸ್ಟೋರ್ ಎಂದು ಟೈಪ್ ಮಾಡಿ. ನಂತರ ರಿಸ್ಟೋರ್ ಪಾಯಿಂಟ್ ಆಯ್ಕೆ ಮಾಡಿ .ಸಿಸ್ಟಮ್ ಪ್ರೊಟೆಕ್ಷನ್ ಟ್ಯಾಬ್ ತೆರೆದು, ಪ್ರೊಟೆಕ್ಷನ್ ಸೆಟ್ಟಿಂಗ್ ತೆರೆದು ಎನೆಬಲ್ ಐಕಾನ್ ಕ್ಲಿಕ್ ಮಾಡಿ. ನಂತರ ಒಂದು ಮೆಸೇಜ್ ಬರುತ್ತದೆ. ಈ ಮೆಸೇಜ್‌ನಲ್ಲಿ ರಿಸ್ಟೋರ್ ಬಗೆಗಿನ ಸಂಪೂರ್ಣ ಮಾಹಿತಿ ಇರುತ್ತದೆ.ನಂತರ "ಸ್ಕ್ಯಾನ್ ಫಾರ್ ಅಫೆಕ್ಟೆಡ್ ಪ್ರೋಗ್ರಾಮ್' ಆಯ್ಕೆ ಕ್ಲಿಕ್ ಮಾಡಿ. ವಿಂಡೋಸ್ ಮತ್ತೊಮ್ಮೆ ನಿಮ್ಮನ್ನು ಎಚ್ಚರಿಸುತ್ತದೆ. ರಿಸ್ಟೋರ್ ಮಾಡಲು 'ನೆಕ್ಸ್ಟ್' ಐಕಾನ್ ಕ್ಲಿಕ್ ಮಾಡಿ.

ರಿಸ್ಟೋರ್ ಆಗುತ್ತದೆ ಕಾಯಿರಿ.
ಈ ಮೇಲಿನ ಹಂತಗಳನ್ನು ಪಾಲಿಸಿದ ನಂತರ ನಿಮ್ಮ ಕಂಪ್ಯೂಟರ್ ರಿಸ್ಟೋರ್ ಆಗಲು ತಯಾರಾಗುತ್ತದೆ. ರಿಸ್ಟೋರ್ ಆಗಲು ಕನಿಷ್ಟವೆಂದರೂ 3 ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ರಿಸ್ಟೋರ್ ಆದನಂತರ ಕಂಪ್ಯೂಟರ್ ತಾನಾಗಿಯೇ ರಿಸ್ಟಾರ್ಟ್ ಆಗುತ್ತದೆ, ಮತ್ತು ಹೊಸದಾಗಿ ಖರೀದಿಸಿದಾಗ ಇದ್ದಂತಹ ಕಂಪ್ಯೂಟರ್ ಸಾಫ್ಟ್‌ವೇರ್ ಇರುತ್ತದೆ.


Click it and Unblock the Notifications








