2021ಕ್ಕೆ ನಿಮಗೆ ಸಿಗಲಿದೆ 5G..! ವೇಗದ ಇಂಟರ್‌ನೆಟ್‌ಗೆ ಮತ್ತೇನು ಬೇಕು..?


ಭಾರತದಲ್ಲಿ ಡೇಟಾ ಹಸಿವು ಹೆಚ್ಚಾಗುತ್ತಿದ್ದು, ಫೋನ್‌ನಲ್ಲಿ ಮಾತನಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. 3Gಯಿಂದ 4Gಗೆ ಮೇಲ್ಪಂಕ್ತಿಗೆ ಬಂದಿದ್ದರೂ, ಕಾಲ್‌ ಡ್ರಾಪ್‌ ಸಮಸ್ಯೆ ತಗ್ಗಿಲ್ಲ ಮತ್ತು ಡೌನ್‌ಲೋಡ್‌ ವೇಗವೇನು ಬಹಳಷ್ಟು ವೃದ್ಧಿಸಿಲ್ಲ. ಅದಕ್ಕಾಗಿಯೇ ವೇಗದ ಇಂಟರ್‌ನೆಟ್‌ಗೆ ಎದುರು ನೋಡುತ್ತಿರುವ ಭಾರತ ಮುಂದಿನ ವರ್ಷದ ಆರಂಭದಲ್ಲಿ ಎರಡು ಪ್ರಮುಖ ಉಪಗ್ರಹಗಳನ್ನು ಉಡಾವಣೆ ಮಾಡಿ ಇಂಟರ್‌ನೆಟ್‌ ವೇಗವನ್ನು ಹೆಚ್ಚಿಸಲಿದೆ. ಆದ್ದರಿಂದ ಭಾರತ 5G ತಂತ್ರಜ್ಞಾನದ ಕಡೆ ಮುಖ ಮಾಡಿದೆ.

Advertisement

ಹೌದು, ಹೀಗಾಗಲೇ ಭಾರತದಲ್ಲಿ 5G ತಂತ್ರಜ್ಞಾನವನ್ನು ಪ್ರಾರಂಭಿಸುವ ಕುರಿತು ಬಹಳಷ್ಟು ಪ್ರಯತ್ನ ನಡೆಯುತ್ತಿದ್ದು, ಸರ್ಕಾರವು ಸಹ ಉತ್ಸುಕವಾಗಿದೆ. ಕೇಂದ್ರ ಸರ್ಕಾರದಿಂದ ಹೂಡಿಕೆಯಾಗಿರುವ 5G ಟೆಸ್ಟ್‌ ಬೆಡ್‌ ಯೋಜನೆಯಲ್ಲಿ 300 ಜನ ತರಬೇತಿ ಪಡೆದಿದ್ದು, 2021ಕ್ಕೆ ಭಾರತದಲ್ಲಿ ಸಂಪೂರ್ಣವಾಗಿ 5G ತಂತ್ರಜ್ಞಾನ ಬರಲಿದೆ ಎಂದು ಯೋಜನೆಯ ರಾಷ್ಟ್ರೀಯ ಸಂಯೋಜಕ ಭಾಸ್ಕರ್‌ ರಾಮಮೂರ್ತಿ ಹೇಳಿದ್ದಾರೆ. ಆಗಿದ್ದರೆ, 5G ತಂತ್ರಜ್ಞಾನದ ಸಿದ್ಧತೆ ಹೇಗಿದೆ..? ಏನಿದು 5G ಟೆಸ್ಟ್‌ ಬೆಡ್‌..? ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮುಂದೆ ನೋಡಿ..

Advertisement

2019ರ ವರ್ಷಾಂತ್ಯಕ್ಕೆ ಟೆಸ್ಟ್ ಬೆಡ್‌ನ ಮೊದಲ ಆವೃತ್ತಿ

ಐಐಟಿ ಮದ್ರಾಸ್‌ನ ನಿರ್ದೇಶಕ ಹಾಗೂ ಸಂವಹನ ತಂತ್ರಜ್ಞಾನದ ಪ್ರೊಪೆಸರ್ ಆಗಿರುವ ಭಾಸ್ಕರ್ ರಾಮಮೂರ್ತಿ ಹೇಳುವಂತೆ ಟೆಸ್ಟ್ ಬೆಡ್‌ನ ಮೊದಲ ಆವೃತ್ತಿ 2019ರ ಅಂತ್ಯಕ್ಕೆ ತಯಾರಾಗುತ್ತದೆ, ಹಾಗೂ ಅಂತಿಮ ಆವೃತ್ತಿ 2021ಕ್ಕೆ ರೆಡಿಯಾಗುತ್ತದೆ.

ಮಾನವ ಸಂಪನ್ಮೂಲಕ್ಕೆ ತರಬೇತಿ

ಹೀಗಾಗಲೇ ಟೆಸ್ಟ್ ಬೆಡ್‌ನ ಕಾರ್ಯದಲ್ಲಿ 170 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಯೋಜನೆಯ ಅಂತ್ಯಕ್ಕೆ 300 ರಿಂದ 400 ವ್ಯಕ್ತಿಗಳು 5Gಯಲ್ಲಿ ತರಬೇತಿ ತೆಗೆದುಕೊಳ್ಳುತ್ತಾರೆ. ನಂತರ ಅವರು ಟೆಲಿಕಾಂ ಆಪರೇಟರ್‌ಗಳ ಜತೆ ಕೂಡಿ ಕೆಲಸ ಮಾಡುತ್ತಾರೆ ಎಂದು ರಾಮಮೂರ್ತಿ ಹೇಳಿದ್ದಾರೆ.

ಮೂರು ವರ್ಷದ ಯೋಜನೆ

ಭಾರತವು ಇತರೆ ದೇಶಗಳೊಂದಿಗೆ 5G ಸೇವೆಗಳನ್ನು ಏಕಕಾಲದಲ್ಲಿ ತರಲು ಯೋಜನೆ ತರಲಾಗಿದ್ದು, ಬೇಡಿಕೆಗೆ ತಕ್ಕಂತೆ ವೃತ್ತಿಪರರಿಗೆ ತರಬೇತಿ ನೀಡಲು ನಡೆಸುತ್ತಿರುವ ಪ್ರಕ್ರಿಯೆ ಇದಾಗಿದೆ. 3G ಮತ್ತು 4G ನೆಟ್‌ವರ್ಕ್‌ಗಳಂತೆ ಇಡೀ ದೇಶಾದ್ಯಂತ 5Gಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಪ್ರಯತ್ನಗಳ ಫ¯ವಾಗಿ ಕೇಂದ್ರವು ಮೂರು ವರ್ಷದ ಎಂಡ್ ಟು ಎಂಡ್ 5G ಟೆಸ್ಟ್ ಬೆಡ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, 5Gಯಲ್ಲಿ ಅತ್ಯಾಧುನಿಕ ಸಂಶೋಧನೆಯನ್ನು ಕೈಗೊಳ್ಳಲಾಗುತ್ತಿದೆ.

ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ

ಐಐಟಿ ಮದ್ರಾಸ್, ಐಐಟಿ ಹೈದರಾಬಾದ್, ಐಐಟಿ ದೆಹಲಿ, ಐಐಟಿ ಕಾನ್ಪುರ್, ಸೆಂಟರ್ ಆಫ್ ಎಕ್ಸ್ಲೆಂನ್ಸ್ ಇನ್ ವೈರ್ಲೆಜಸ್ ಟೆಕ್ನಾಲಜಿ, ಸೊಸೈಟಿ ಫಾರ್ ಅಪ್ಲಾಯಿಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ರಿಸರ್ಚ್ ಮತ್ತು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಸಂಸ್ಥೆಗಳಲ್ಲಿ ಸುಮಾರು 224 ಕೋಟಿ ರೂ. ಯೋಜನೆಯ ಸಂಶೋಧನೆ ಮತ್ತು ತರಬೇತಿ ನಡೆಯುತ್ತಿದೆ.

ಸ್ಟಾರ್ಟ್ಅಪ್ ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಹಯೋಗ

ಈ ಯೋಜನೆ ಸ್ಟಾರ್ಟ್ಅಪಪ್ ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಹಯೋಗವನ್ನು ರೂಪಿಸುತ್ತದೆ. ಮತ್ತು ನೈಜ ಪ್ರಪಂಚದ 5ಉ ನಿಯೋಜನೆಯನ್ನು ಹೋಲುವ ಪರಿಸರ ವ್ಯವಸ್ಥೆಯನ್ನು ರಚಿಸುತ್ತದೆ ಎಂದು ರಾಮಮೂರ್ತಿ ಹೇಳಿದರು.

ಮುಂದಿನ ವರ್ಷ 5G ತರಂಗ ಹರಾಜು

ಮುಂದಿನ ವರ್ಷದ ಜೂನ್ ನಂತರ 5ಉ ತರಂಗದ ಹರಾಜು ಹಾಕಲಾಗುವುದು ಎಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರ್‌ರಾಜನ್ ಹೇಳಿದ್ದಾರೆ. ಹೀಗಾಗಲೇ 12 ಸ್ಟಾರ್ಟ್ಅಪ್‌ಗಳು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅರುಣಾ ಹೇಳಿದ್ದಾರೆ.

Best Mobiles in India

English Summary

5G test bed may get fully operational by 2021 in India. To know more this visit kannada.gizbot.com