ಏರ್‌ಟೆಲ್‌ V/S ಜಿಯೋ : ಯಾವುದು ಬೆಸ್ಟ್‌..? ಹೊಸ ಪ್ಲಾನ್‌ಗಳಲ್ಲಿ ಏನೇನಿದೆ..?


ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ರಿಲಾಯನ್ಸ್ ಜಿಯೋ ಮೂರು ಟೆಲಿಕಾಂ ಆಪರೇಟರ್‌ಗಳು ತೆರಿಗೆಯನ್ನು ಹೆಚ್ಚಿಸಿದ್ದು, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಗ್ರಾಹಕರಿಗೆ ಡಿಸೆಂಬರ್‌ 3 ರಿಂದ ಹೊಸ ಬೆಲೆಗಳು ಜಾರಿಗೆ ಬಂದಿವೆ. ರಿಲಾಯನ್ಸ್ ಜಿಯೋ ಕೂಡ ತನ್ನ ಗ್ರಾಹಕರಿಗೆ ಪರಿಷ್ಕೃತ ದರಗಳನ್ನು ಡಿಸೆಂಬರ್ 6 ರಿಂದ ಜಾರಿಗೆ ತಂದಿದ್ದು, ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ರಿಲಾಯನ್ಸ್ ಜಿಯೋದ ಹೊಸ ಯೋಜನೆಗಳು 129 ರೂ.ಗಳಿಂದ ಪ್ರಾರಂಭವಾಗಿ, 2,199 ರೂ.ಗಳವರೆಗೆ ದರ ಹೊಂದಿವೆ. ಜಿಯೋ ಪ್ರಕಾರ, ಹೊಸ ಪ್ಲಾನ್‌ಗಳು ಮೊದಲಿಗಿಂತ ಶೇ.300ರಷ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದ್ದು, ಜಿಯೋಟಿವಿ, ಜಿಯೋ ಸಿನೆಮಾ, ಜಿಯೋ ಸಾವನ್‌, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ, ಜಿಯೋಕ್ಲೌಡ್ ಮತ್ತು ಜಿಯೋ ಹೆಲ್ತ್ ಸೇವೆಗಳ ಚಂದಾದಾರಿಕೆಯನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ. ಜಿಯೋದ ಹೊಸ ಯೋಜನೆಗಳು ಮತ್ತು ಹಳೇ ಯೋಜನೆಗಳೊಂದಿಗೆ ಹೋಲಿಸಲಾಗಿದ್ದು, ಏರ್‌ಟೆಲ್‌ನ ಹಳೇ ಯೋಜನೆಗಳನ್ನು ಹೊಸ ಯೋಜನೆಗಳೊಂದಿಗೆ ಹೋಲಿಕೆ ಮಾಡಲಾಗಿದ್ದು, ವಿವರಗಳು ಮುಂದಿನಂತಿವೆ.

ರಿಲಾಯನ್ಸ್ ಜಿಯೋ 129 ರೂ. ಪ್ಲಾನ್‌

ಹಿಂದಿನ 98 ರೂ. ಪ್ಲಾನ್‌ಗೆ ಹೋಲಿಸಿದರೆ 31 ರೂ. ಹೆಚ್ಚಾಗಿದ್ದು, ಬಳಕೆದಾರರು 1000 ಐಯುಸಿ ನಿಮಿಷಗಳನ್ನು ಪಡೆಯುತ್ತಾರೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟು 2 ಜಿಬಿ ಡೇಟಾ ದೊರೆಯುತ್ತದೆ.

ಏರ್‌ಟೆಲ್ 148 ರೂ. ಯೋಜನೆ

ಹಿಂದಿನ 129 ರೂ. ಪ್ಲಾನ್‌ಗೆ ಹೋಲಿಸಿದರೆ 19 ರೂ. ಹೆಚ್ಚಾಗಿದ್ದು, ಬಳಕೆದಾರರು 2 ಜಿಬಿ ಡೇಟಾವನ್ನು ಪಡೆಯಲಿದ್ದಾರೆ. 28 ದಿನಗಳ ವ್ಯಾಲಿಡಿಟಿಯಲ್ಲಿ 300 ಉಚಿತ ಎಸ್‌ಎಂಎಸ್‌ಗಳು ಗ್ರಾಹಕರಿಗೆ ದೊರೆಯುತ್ತವೆ. ಎಫ್‌ಯುಪಿ ಮಿತಿಗಳನ್ನು ಮೀರಿದ ಎಲ್ಲಾ ಕರೆಗಳಿಗೆ ನಿಮಿಷಕ್ಕೆ 6 ಪೈಸೆ ದರ ವಿದಿಸಲಾಗುತ್ತದೆ.

ರಿಲಾಯನ್ಸ್ ಜಿಯೋ 199 ರೂ. ಪ್ಲಾನ್‌

ಹಿಂದಿನ 153 ರೂ. ಯೋಜನೆಗೆ ಹೋಲಿಸಿದರೆ 46 ರೂ, ಹೆಚ್ಚಾಗಿದ್ದು, ಬಳಕೆದಾರರಿಗೆ 1000 ಐಯುಸಿ ನಿಮಿಷಗಳು 28 ದಿನಗಳ ವ್ಯಾಲಿಡಿಟಿಯೊಂದಿಗೆ ದೊರೆಯುತ್ತವೆ. ಹೊಸ ಯೋಜನೆಯು 1000 ಐಯುಸಿ ನಿಮಿಷಗಳ ಜೊತೆ ಅನಿಯಮಿತ ಜಿಯೋ-ಟು-ಜಿಯೋ ಕರೆಗಳನ್ನು ನೀಡುತ್ತದೆ. ದಿನಕ್ಕೆ 1.5 ಜಿಬಿಯೊಂದಿಗೆ ಒಟ್ಟು 42 ಜಿಬಿ ಡೇಟಾ ಲಭ್ಯವಾಗುತ್ತದೆ.

ಏರ್‌ಟೆಲ್ 248 ರೂ. ಪ್ಲಾನ್‌

ಹಳೆಯ 169 ಮತ್ತು 199 ರೂ.ಗಳನ್ನು ಈ ಪ್ಲಾನ್‌ ಸಂಯೋಜಿಸುತ್ತದೆ. ಹೊಸ ಯೋಜನೆಯು ದಿನಕ್ಕೆ 100 ಉಚಿತ ಎಸ್‌ಎಂಎಸ್ ಮತ್ತು ದಿನಕ್ಕೆ 1.5 ಜಿಬಿ ಡೇಟಾ ದೊರೆಯುತ್ತದೆ.

ರಿಲಾಯನ್ಸ್ ಜಿಯೋ 249 ರೂ. ಪ್ಲಾನ್‌

ಹಿಂದಿನ 198 ರೂ. ಯೋಜನೆಗೆ ಹೋಲಿಸಿದರೆ 51 ರೂ. ಹೆಚ್ಚಾಗಿದೆ. ಬಳಕೆದಾರರಿಗೆ 1000 ಐಯುಸಿ ನಿಮಿಷಗಳು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತಿದ್ದು, ಹೊಸ ಯೋಜನೆಯು ದಿನಕ್ಕೆ 2 ಜಿಬಿ ಡೇಟಾ ನೀಡುತ್ತದೆ.

ಏರ್‌ಟೆಲ್ 298 ರೂ. ಪ್ಲಾನ್‌

ಹಿಂದಿನ 249 ರೂ. ಪ್ಲಾನ್‌ಗೆ ಹೋಲಿಸಿದರೆ 49 ರೂ. ಹೆಚ್ಚಾಗಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್‌ ದೊರೆಯುತ್ತದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 2ಜಿಬಿ ಮೊಬೈಲ್ ಡೇಟಾ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ.

ರಿಲಾಯನ್ಸ್ ಜಿಯೋ 329 ರೂ. ಪ್ಲಾನ್‌

ಈ ಯೋಜನೆಯನ್ನು ರಿಲಾಯನ್ಸ್ ಜಿಯೋ ಹೊಸದಾಗಿ ಪರಿಚಯಿಸಿದ್ದು, 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಇಲ್ಲಿ ಗ್ರಾಹಕರಿಗೆ 6ಜಿಬಿ ಮೊಬೈಲ್ ಡೇಟಾ ಮಾತ್ರ ಸಿಗಲಿದ್ದು, ಹೆಚ್ಚು ಐಯುಸಿ ನಿಮಿಷಗಳನ್ನು ಹೊಂದಿದೆ.

ರಿಲಾಯನ್ಸ್ ಜಿಯೋ 349 ರೂ. ಪ್ಲಾನ್‌

ಹಿಂದಿನ 299 ರೂ. ಪ್ಲಾನ್‌ಗೆ ಹೋಲಿಸಿದರೆ 50 ರೂ. ಏರಿಕೆಯಾಗಿದೆ. ಬಳಕೆದಾರರು 1000 ಐಯುಸಿ ನಿಮಿಷಗಳನ್ನು ಪಡೆಯಲಿದ್ದು, ದಿನಕ್ಕೆ 3 ಜಿಬಿ ಮೊಬೈಲ್ ಡೇಟಾದಂತೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟು 84 ಜಿಬಿ ಡೇಟಾ ಪಡೆಯಲಿದ್ದಾರೆ.

ರಿಲಾಯನ್ಸ್ ಜಿಯೋ 399 ರೂ. ಪ್ಲಾನ್‌

ಈ ಪ್ಲಾನ್‌ನಲ್ಲಿ ಬಳಕೆದಾರರು ನಿಗದಿತ 2000 ಐಯುಸಿ ನಿಮಿಷಗಳು ಮತ್ತು ದಿನಕ್ಕೆ 1.5 ಜಿಬಿ ಡೇಟಾವನ್ನು ಪಡೆಯುಲಿದ್ದು, 56 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.

ರಿಲಾಯನ್ಸ್ ಜಿಯೋ 444 ರೂ. ಯೋಜನೆ

ಈ ಪ್ಲಾನ್‌ನ ಬೆಲೆ ಬದಲಾಗಿಲ್ಲ. ಆದರೆ, 2000 ಐಯುಸಿ ನಿಮಿಷ ಮತ್ತು 56 ಜಿಬಿ ಡೇಟಾ ಪಡೆಯಲಿದ್ದಾರೆ. ಪ್ಲಾನ್‌ನ ವ್ಯಾಲಿಡಿಟಿ 56 ದಿನಗಳು ಆಗಿರಲಿದೆ.

ರಿಲಾಯನ್ಸ್ ಜಿಯೋ 555 ರೂ. ಪ್ಲಾನ್‌

ಈ ಪ್ಲಾನ್‌ನಲ್ಲಿ ಬೆಲೆ ಬದಲಾಗಿಲ್ಲ. ಆದರೆ, ಡೇಟಾ ಕಡಿಮೆಯಾಗಿದ್ದು, 3000 ಐಯುಸಿ ನಿಮಿಷಗಳು ದೊರೆಯಲಿವೆ. 42 ಜಿಬಿ ಕಡಿಮೆ ಡೇಟಾ ಸಿಗಲಿದೆ.

ಏರ್‌ಟೆಲ್ 598 ರೂ. ಪ್ಲಾನ್‌

ಹಿಂದಿನ 448 ರೂ. ಪ್ಲಾನ್‌ಗೆ ಹೋಲಿಸಿದರೆ 150 ರೂ ಹೆಚ್ಚಾಗಿದೆ. ವ್ಯಾಲಿಡಿಟಿಯನ್ನು 82 ದಿನಗಳಿಂದ 84 ದಿನಗಳಿಗೆ ಹೆಚ್ಚಿಸಲಾಗಿದೆ. ದಿನಕ್ಕೆ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್ ದೊರೆಯಲಿದ್ದು, ಎಫ್‌ಯುಪಿ ಮಿತಿ ಮೀರಿದ ನಂತರ ನಿಮಿಷಕ್ಕೆ 6 ಪೈಸೆ ವಿಧಿಸಲಾಗುತ್ತದೆ.

ರಿಲಯನ್ಸ್ ಜಿಯೋ 599 ರೂ. ಪ್ಲಾನ್‌

ಹಿಂದಿನ 594 ರೂ. ಪ್ಲಾನ್‌ಗೆ ಹೋಲಿಸಿದರೆ 5 ರೂ. ಹೆಚ್ಚಾಗಿದ್ದು, 3000 ಐಯುಸಿ ನಿಮಿಷಗಳು ಮತ್ತು 168 ಜಿಬಿ ಡೇಟಾ ದೊರೆಯಲಿದೆ. 84 ದಿನಗಳ ಮಾನ್ಯತೆಯನ್ನು ಹೊಂದಿದ್ದು, ದಿನಕ್ಕೆ 2 ಜಿಬಿ ಡೇಟಾ ಸಿಗಲಿದೆ.

ಏರ್‌ಟೆಲ್ 698 ರೂ. ಪ್ಲಾನ್‌

ಹಿಂದಿನ 499 ರೂ. ಪ್ಲಾನ್‌ಗೆ ಹೋಲಿಸಿದರೆ 199 ರೂ. ಹೆಚ್ಚಾಗಿದೆ. ವ್ಯಾಲಿಡಿಟಿ ಕೂಡ 2 ದಿನಗಳು ಹೆಚ್ಚಾಗಿದ್ದು, 82 ರಿಂದ 84 ದಿನಗಳವರೆಗೆ ಮಾನ್ಯತೆ ಹೊಂದಿದೆ. ಬಳಕೆದಾರರಿಗೆ ಅನಿಯಮಿತ ಕರೆ, ದಿನಕ್ಕೆ 2 ಜಿಬಿ ಡೇಟಾ ಮತ್ತು 100 ಉಚಿತ ಎಸ್‌ಎಂಎಸ್ ಸಿಗಲಿದೆ.

ರಿಲಯನ್ಸ್ ಜಿಯೋ 1,299 ರೂ. ಯೋಜನೆ

1,299 ರೂ. ಪ್ಲಾನ್‌ ಕರೆಗಾಗಿಯೇ ಮೀಸಲಾಗಿರುವ ಪ್ಲಾನ್‌ ಆಗಿದ್ದು, 12000 ಐಯುಸಿ ನಿಮಿಷಗಳು ಬಳಕೆದಾರರಿಗೆ ದೊರೆಯುತ್ತವೆ. ಇದು 365 ದಿನಗಳ ಸಿಂಧುತ್ವ ಹೊಂದಿದ್ದು, 24 ಜಿಬಿ ಡೇಟಾ ಸಿಗಲಿದೆ.

ರಿಲಾಯನ್ಸ್ ಜಿಯೋ 2,199 ರೂ. ಪ್ಲಾನ್

ಹಿಂದಿನ 1,699 ರೂ. ಪ್ಲಾನ್‌ಗೆ ಹೋಲಿಸಿದರೆ 500 ರೂ. ಹೆಚ್ಚಾಗಿದ್ದು, ಬಳಕೆದಾರರು 12,000 ಐಯುಸಿ ನಿಮಿಷಗಳನ್ನು ಪಡೆಯಲಿದ್ದಾರೆ. 365 ದಿನಗಳ ಸಿಂಧುತ್ವ ಹೊಂದಿರುವ ಪ್ಲಾನ್‌ನಲ್ಲಿ ಗ್ರಾಹಕರಿಗೆ ದಿನಕ್ಕೆ 1.5GB ಡೇಟಾದಂತೆ 547.5 ಜಿಬಿ ಡೇಟಾ ಲಭ್ಯವಾಗಲಿದೆ.

ಏರ್‌ಟೆಲ್ 2,398 ರೂ. ಪ್ಲಾನ್‌

ಹಿಂದಿನ 1,699 ರೂ. ಪ್ಲಾನ್‌ಗೆ ಹೋಲಿಸಿದರೆ 699 ರೂ. ಹೆಚ್ಚಾಗಿದೆ. 365 ದಿನಗಳ ಮಾನ್ಯತೆ ಹೊಂದಿರುವ ಪ್ಲಾನ್‌ನಲ್ಲಿ ದಿನಕ್ಕೆ 1.5GB ಮತ್ತು 100 SMS ದೊರೆಯಲಿದ್ದು, ಎಫ್‌ಯುಪಿ ದರ ನಿಮಿಷಕ್ಕೆ 6 ಪೈಸೆ ಇದೆ.

ಏರ್‌ಟೆಲ್ 19 ರೂ. ಯೋಜನೆ

ಈ ಪ್ಲಾನ್‌ನಲ್ಲಿ ಬಳಕೆದಾರರು ದಿನಕ್ಕೆ 100 ಉಚಿತ ಎಸ್‌ಎಂಎಸ್‌ ಹಾಗೂ 150 ಎಂಬಿ ಡೇಟಾ ಮತ್ತು ಅನಿಯಮಿತ ಕರೆಗಳನ್ನು ಪಡೆಯಲಿದ್ದು, 2 ದಿನಗಳ ಮಾನ್ಯತೆ ಹೊಂದಿದೆ.

ಏರ್‌ಟೆಲ್ 49 ರೂ. ಪ್ಲಾನ್‌

ಹಿಂದಿನ 35 ರೂ. ಪ್ಲಾನ್‌ಗೆ ಹೋಲಿಸಿದರೆ 14 ರೂ. ಏರಿಕೆಯಾಗಿದ್ದು, ಬಳಕೆದಾರರು 38.52 ರೂ. ಟಾಕ್-ಟೈಮ್ ಪಡೆಯಲಿದ್ದಾರೆ. ಈ ಪ್ಲಾನ್‌ನಲ್ಲಿ 28 ದಿನಗಳ ಮಾನ್ಯತೆಯೊಂದಿಗೆ 100MB ಡೇಟಾ ಕೂಡ ಸಿಗಲಿದೆ.

ಏರ್‌ಟೆಲ್ 79 ರೂ. ಪ್ಲಾನ್‌

ಹಿಂದಿನ 65 ರೂ. ಪ್ಲಾನ್‌ಗೆ ಹೋಲಿಸಿದರೆ 14 ರೂ. ಹೆಚ್ಚಾಗಿದ್ದು, ಗ್ರಾಹಕರು 63.95 ಟಾಕ್‌ಟೈಮ್ ಪಡೆಯಲಿದ್ದಾರೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ 200MB ಡೇಟಾ ದೊರೆಯುತ್ತದೆ.

Most Read Articles
Best Mobiles in India
Read More About: airtel jio news telecom

Have a great day!
Read more...

English Summary

Airtel Vs Jio New Prepaid Plans Compared