Ambrane: ಫೈರ್‌ಬೂಮ್‌ ಬ್ಲೂಟೂತ್‌ ಸ್ಪೀಕರ್‌ ಲಾಂಚ್‌!..ಬೆಲೆ 3,999ರೂ.!


ಇತ್ತಿಚಿನ ದಿನಗಳಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ವಾಯರ್‌ಲೆಸ್‌ ಸ್ಪೀಕರ್‌ಗಳ ಹಾವಳಿ ಸ್ವಲ್ಪ ಜಾಸ್ತಿನೆ ಇದೆ. ಇಯರ್‌ಫೋನ್‌ಗಳ ಸ್ಥಾನವನ್ನ ಇಯರ್‌ಬಡ್‌ಗಳು ಆಕ್ರಮಿಸಿದಂತೆ ಈಗಾಗ್ಲೆ ಸ್ಪೀಕರ್‌ಗಳ ಸ್ಥಾನವನ್ನ ವಾಯರ್‌ ಲೆಸ್‌ ಸ್ಪೀಕರ್‌ಗಳು ಆಕ್ರಮಿಸಿಕೊಂಡಿದ್ದಾಗಿದೆ. ವೈವಿದ್ಯ ಬಗೆಯ ವಾಯರ್‌ಲೆಸ್‌ ಸ್ಪೀಕರ್‌ಗಳು ಮಾರುಕಟ್ಟೆಯಲ್ಲಿ ಲಭ್ಯಇವೆ. ಇದೀಗ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಆಂಬ್ರೇನ್‌ ಕಂಪೆನಿ ಹೊಸ ಮಾದರಿಯ ವಾಯರ್‌ ಲೆಸ್‌ ಸ್ಪೀಕರ್‌ ಅನ್ನ ಬಿಡುಗಡೆ ಮಾಡಿದೆ.

Advertisement

ಹೌದು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಜನಪ್ರಿಯ ಕಂಪೆನಿ ಆಂಬ್ರೇನ್‌ ಕಂಪೆನಿ ಆಂಬ್ರೇನ್‌ ಫೈರ್‌ಬೂಮ್‌ ಹೆಸರಿನ ಬ್ಲೂಟೂತ್‌ ಸ್ಪೀಕರ್‌ ಅನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಈಗಾಗ್ಲೆ ಹಲವು ಮಾದರಿಯ ಪವರ್‌ ಬ್ಯಾಂಕ್‌ ಸೇರಿದಂತೆ ಇತರೆ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿರುವ ಆಂಬ್ರೇನ್‌ ಈ ಹೊಸ ಬ್ಲೂಟೂತ್‌ ಸ್ಪೀಕರ್‌ಗಳ ಮೂಲಕ ಸ್ಪೀಕರ್‌ ಮಾರುಕಟ್ಟೆಯಲ್ಲಿ ಬದಲಾವಣೆ ತರುವ ಸೂಚನೆ ನೀಡಿದೆ.

Advertisement

ಸದ್ಯ ಆಂಬ್ರೇನ್‌ ಕಂಪೆನಿಯ ಫೈರ್‌ಬೂಮ್‌ ಬ್ಲೂಟೂತ್‌ ಸ್ಪೀಕರ್‌ ಹೊಸ ಡಿಟ್ಯಾಚೇಬಲ್ ವಿನ್ಯಾಸವನ್ನು ಹೊಂದಿದ್ದು, ಇದು ಸ್ಪೀಕರ್ ಅನ್ನು ಎರಡು ಪ್ರತ್ಯೇಕ ಸ್ಪೀಕರ್‌ಗಳಾಗಿ ವಿಂಗಡಿಸಲು ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ ಈ ಸ್ಪೀಕರ್ ಅನ್ನು ಎರಡು ಭಾಗಗಳಾಗಿ ವಿಭಜಿಸುವುದು ತುಂಬಾ ಸುಲಭವಾಗಿದೆ. ಇನ್ನು ಈ ಸ್ಪೀಕರ್ ಯೂನಿಟ್‌ನಿಂದ ಉತ್ತಮವಾದ ಸಂಗೀತವನ್ನ ಆಲಿಸಲು ಆಂಬ್ರೇನ್ ಫೈರ್‌ಬೂಮ್ ಅನ್ನು ಬಳಸಬಹುದಾಗಿದ್ದು, ಸ್ಟಿರಿಯೊ ಧ್ವನಿ ಯನ್ನು ಸಹ ಆನಂದಿಸಬಹುದಾಗಿದೆ.

ಆಂಬ್ರೇನ್ ಫೈರ್‌ಬೂಮ್ ಎರಡು 10W ಸ್ಪೀಕರ್‌ಗಳನ್ನು ಹೊಂದಿದ್ದು, ಡಿಟ್ಯಾಚೇಬಲ್ ಕಾರ್ಯವನ್ನು ಮಾಡಲಿದೆ. ಇದಲ್ಲದೆ ಇದರ ಸ್ಪೀಕರ್‌ಗಳು ಐಪಿಎಕ್ಸ್ 7 ವಾಟರ್‌ ಪ್ರೂಪ್‌ ಶೈಲಿಯನ್ನ ಹೊಂದಿದ್ದು, ಮಳೆಯಲ್ಲೂ ಕೂಡ ಈ ಸ್ಪೀಕರ್ ಅನ್ನು ಬಳಸ ಬಹುದಾಗಿದೆ. ಇನ್ನು ಈ ಸ್ಪೀಕರ್ಅನ್ನ ಸಿಂಗಲ್-ಸ್ಪೀಕರ್ ಆಗಿ ಉಪಯೋಗಿಸಿದಾಗ ಇದರಲ್ಲಿನ ಟ್ರೂಲಿ ವೈರ್‌ಲೆಸ್ ಸ್ಟಿರಿಯೊ ಸೌಂಡ್‌ ಔಟ್‌ಪುಟ್ 20W ಎಚ್‌ಡಿ ಇರಲಿದೆ. ಇದಲ್ಲದೆ, ಆಂಬ್ರೇನ್ ಫೈರ್‌ಬೂಮ್ 360 ಡಿಗ್ರಿ ಸ್ಪೀಕರ್ ಆಗಿದ್ದು ಅದು ನಿಮ್ಮ ಸಂಗೀತವನ್ನು ಪ್ರತಿಯೊಂದು ದಿಕ್ಕಿಗೂ ಹರಡುವಂತೆ ಮಾಡುತ್ತೆ.

ಇನ್ನು ಆಂಬ್ರೇನ್ ಫೈರ್‌ಬೂಮ್ ಸ್ಪೀಕರ್‌ 3,000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಎಂಟು ಗಂಟೆಗಳವರೆಗೆ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಜೊತೆಗೆ ಸ್ಪೀಕರ್ 10 ಮೀಟರ್ ವರೆಗೆ ತನ್ನ ಸೌಂಡಿಂಗ್‌ ಸಿಸ್ಟಂ ವ್ಯಾಪ್ತಿಯನ್ನು ಹೊಂದಿದೆ. ಇದಲ್ಲದೆ ಈ ಫೈರ್‌ಬೂಮ್ ಸ್ಪೀಕರ್‌ನಲ್ಲಿ ಸಿಲಿಕೋನ್ ಕವಚವಿದ್ದು, ಸ್ಪೀಕರ್‌ ಅನ್ನು ರಕ್ಷಿಸುತ್ತದೆ. ಸದ್ಯ ಈ ಒಂದು ವರ್ಷದ ಖಾತರಿಯೊಂದಿಗೆ 3,999 ರೂ ಬೆಲೆಯನ್ನ ಹೊಂದಿದೆ. ಇ-ಕಾಮರ್ಸ್ ಪೋರ್ಟಲ್‌ಗಳು ಮತ್ತು ಭಾರತೀಯ ಟೆಕ್‌ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದ್ದು, ಸ್ಪೀಕರ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ.

Best Mobiles in India

English Summary

Electronic accessories brand Ambrane India is trying to change that with its recently announced Fireboom speaker.to know more visit to kannada.gizbot.com