ಆಪಲ್ ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಮಿನಿ ಹೇಗಿದೆ ಗೊತ್ತಾ?


ಅಮೇರಿಕಾದ ಕ್ಯೂಪರ್ಟಿನೋ ಮೂಲದ ಟೆಕ್ನಾಲಜಿ ದೈತ್ಯ ಸಂಸ್ಥೆ ಆಪಲ್ ಮಾರ್ಚ್ 18 ರಂದು ಐಪ್ಯಾಡ್ ಏರ್(2019) ನ್ನು ಮರುಪರಿಚಯಿಸಿದೆ. ಐಪ್ಯಾಡ್ ಪ್ರೋ ಬಿಡುಗಡೆಗೊಂಡ ಸಂದರ್ಬದಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಐಪ್ಯಾಡ್ ಏರ್ ಜೊತೆಗೆ ಕಂಪೆನಿ ಐಪ್ಯಾಡ್ ಮಿನಿ(2019) ನ್ನು ಕೂಡ ಬಿಡುಗಡೆಗೊಳಿಸಿದೆ.ಕೆಲವು ಹೊಸ ಫೀಚರ್ ಗಳನ್ನೂ ಸೇರಿಸಿರುವ ಸಂಸ್ಥೆ ಮತ್ತು ತುಂಬಾ ಸಮಯದ ನಂತರ ಐಪ್ಯಾಡ್ ನ್ನು ಕೈಗೆಟುಕುವ ಬೆಲೆಗೆ ತಂದಿದೆ.ನಾವಿಲ್ಲಿ ವೈಶಿಷ್ಟ್ಯತೆಗಳು, ಭಾರತೀಯ ಬೆಲೆ ಸೇರಿದಂತೆ ಇತ್ಯಾದಿ ಎಲ್ಲಾ ವಿವರಗಳನ್ನು ತಿಳಿಸುತ್ತಿದ್ದೇವೆ.

Advertisement

ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಮಿನಿಯ ವೈಶಿಷ್ಟ್ಯತೆಗಳು

2019ರ ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಮಿನಿ ಮಿಡ್ ರೇಂಜಿನ ಡಿವೈಸ್ ಗಳಾಗಿದ್ದು ಆಪಲ್ ನ ಫ್ಲ್ಯಾಗ್ ಶಿಪ್ ಎ12 ಬಯೋನಿಕ್ ಚಿಪ್ ಸೆಟ್ ನಿಂದ ಜೊತೆಗೆ ನ್ಯೂರಲ್ ಇಂಜಿನ್ ನಿಂದ ಪವರ್ಡ್ ಆಗಿದೆ. ಡಿಸ್ಪ್ಲೇ ಸೈಜ್ ನ್ನು ಹೊರತು ಪಡಿಸಿದರೆ ಮತ್ತು ಎಲ್ಲಾ ಆಕ್ಸಸರೀಸ್ ಗಳಿಗೂ ಕೂಡ ಕಂಪ್ಯಾಟಬಲ್ ಆಗಿದೆ. ಎರಡೂ ಐಪ್ಯಾಡ್ ಗಳಲ್ಲೂ ಒಂದೇ ರೀತಿಯ ವೈಶಿಷ್ಟ್ಯತೆಗಳಿದೆ. ಐಪ್ಯಾಡ್ ಏರ್ 10.5-ಇಂಚಿನದ್ದಾಗಿದ್ದು ಐಪಿಎಸ್ ರೆಟಿನಾ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಐಪ್ಯಾಡ್ ಮಿನಿ 7.9-ಇಂಚಿನದ್ದಾಗಿದ್ದು ಐಪಿಎಸ್ ರೆಟಿನಾ ಡಿಸ್ಪ್ಲೇ ಯಿಂದ ಲ್ಯಾಮಿನೇಟ್ ಆಗಿದೆ.

ಏರಡೂ ಡಿವೈಸ್ ಗಳಲ್ಲೂ ವೈಫೈ ಮತ್ತು ವೈಫೈ+ಎಲ್ ಟಿಇ ವೇರಿಯಂಟ್ ನದ್ದಾಗಿದೆ. ಬೆಳ್ಳಿಯ ಬಣ್ಣ, ಸ್ಪೇಸ್ ಗ್ರೇ(ಬೂದು), ಚಿನ್ನದ ವರ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಇವು ಹೊಂದಿದ್ದು ಮುಂಭಾಗದಲ್ಲಿ ಬಟನ್ ನ್ನು ಒಳಗೊಂಡಿದೆ. ಎರಡು ರೀತಿಯ ಸ್ಟೋರೇಜ್ ವೇರಿಯಂಟ್ ನ್ನು ಎರಡೂ ಐಪ್ಯಾಡ್ ಗಳು ಹೊಂದಿದೆ. 64GB ಮತ್ತು 256GB.

ಎರಡೂ ಕೂಡ ಆಪಲ್ ಪೆನ್ಸಿಲ್(ಮೊದಲ ಜನರೇಷನ್ ) ಗೆ ಬೆಂಬಲಿಸುತ್ತದೆ ಮತ್ತು ಬ್ಲೂಟೂತ್ ಕೀಬೋರ್ಡ್ ಗೆ ಕಂಪ್ಯಾಟಿಬಲ್ ಆಗಿವೆ. ಐಪ್ಯಾಡ್ ಏರ್ ಆಪಲ್ ಸ್ಮಾರ್ಟ್ ಕೀಬೋರ್ಡ್ ಜೊತೆಗೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ. 8ಮೆಗಾಪಿಕ್ಸಲ್ ನ ಲೆನ್ಸ್ f/2.4 ಅಪರ್ಚರ್ ನ್ನು ಹಿಂಭಾಗದಲ್ಲಿ ಹೊಂದಿದ್ದು 7ಎಂಪಿ ಫೇಸ್ ಟೈಮ್ ಇರುವ ಹೆಚ್ ಡಿ ಕ್ಯಾಮರಾವನ್ನು ಮುಂಭಾಗದಲ್ಲಿ ಹೊಂದಿದೆ.

Advertisement
ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಮಿನಿಯ ಭಾರತೀಯ ಬೆಲೆ

ಐಪ್ಯಾಡ್ ಮಿನಿಯ ಆರಂಭಿಕ ಬೆಲೆ ರುಪಾಯಿ 34,900 ರುಪಾಯಿ ಆಗಿದ್ದು ವೈಫೈ ಮಾಡೆಲ್ ಆಗಿರುತ್ತದೆ ಮತ್ತು ವೈಫೈ+ ಸೆಲ್ಯೂಲರ್ ಮಾಡೆಲ್ ಗೆ 45,900 ರುಪಾಯಿ ಇದೆ. ಇತರೆ ಹ್ಯಾಂಡ್ ಗಳ ಐಪ್ಯಾಡ್ ಏರ್ ನ ವೈಫೈ ಮಾಡೆಲ್ ಆರಂಭಿಕ ಬೆಲೆ 44,900 ರುಪಾಯಿ ಆಗಿದ್ದು, ವೈಫೈ+ಸೆಲ್ಯುಲರ್ ಮಾಡೆಲ್ ಗೆ 55,900 ರುಪಾಯಿ ಇದೆ.ಕೆಲವು ಆಯ್ದ ದೇಶಗಳಲ್ಲಿ ಮಾತ್ರವೇ ಸದ್ಯಕ್ಕೆ ಇದು ಲಭ್ಯವಿದೆ. ಸಧ್ಯದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆ ಇದೆ. ಆಪಲ್ ನ ಅಧಿಕೃತ ಸ್ಟೋರ್ ಗಳಲ್ಲಿ ಇದು ಖರೀದಿಗೆ ಲಭ್ಯವಾಗುತ್ತದೆ.

ಆಪಲ್ ಪೆನ್ಸಿಲ್(ಮೊದಲ ಜನರೇಷನ್) ಖರೀದಿಗೆ ಸಪರೇಟ್ ಆಗಿ ಲಭ್ಯವಾಗುತ್ತಿದ್ದು 8,500 ರುಪಾಯಿಗೆ ಸಿಗುತ್ತದೆ. 10.5 ಇಂಚಿನ ಐಪ್ಯಾಡ್ ಏರ್ ಗೆ ಆಗುವಂತಹ ಸ್ಮಾರ್ಟ್ ಕೀಬೋರ್ಡ್ ಬೆಲೆ 3,500 ರುಪಾಯಿ ಜೊತೆಗೆ 30 ಭಾಷೆಗಳ ಲೇಔಟ್ ಇರುತ್ತದೆ ಅದರಲ್ಲಿ ಚೈನೀಸ್, ಫ್ರೆಚ್, ಜರ್ಮನ್, ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಸೇರಿವೆ.

ಐಪ್ಯಾಡ್ ಮಿನಿ

ಐಪ್ಯಾಡ್ ಮಿನಿ ಗೆ ಸ್ಮಾರ್ಟ್ ಕವರ್ ಕೂಡ ಲಭ್ಯವಾಗುತ್ತಿದ್ದು ಅದರ ಬೆಲೆ 3,500 ರುಪಾಯಿಗಳು ಮತ್ತು ಐಪ್ಯಾಡ್ ಏರ್ ಗೆ 3,700 ರುಪಾಯಿ ಆಗಿರುತ್ತದೆ. ಇವುಗಳು ಚಾರ್ ಕೋಲ್ ಗ್ರೇ, ಬಿಳಿ, ಪಿಂಕ್, ಸ್ಯಾಂಡ್ ಮತ್ತು ಹೊಸ ಪಪ್ಪಾಯ ಬೆಲೆಯಲ್ಲಿ ಲಭ್ಯವಿದ್ದು ಹೆಚ್ಚುವರಿಯಾಗಿ ಲೆದರ್ ಸ್ಮಾರ್ಟ್ ಕವರ್ ಕೂಡ ಸಿಗುತ್ತದೆ. ಐಪ್ಯಾಡ್ ಏರ್ ಕಪ್ಪು, ಸ್ಯಾಡಲ್ ಬ್ರೌನ್, ಮಿಡ್ ನೈಟ್ ಬ್ಲೂ(ನೀಲಿ) ಮತ್ತು ಕೆಂಪು ಬಣ್ಣಗಳ ಶ್ರೇಣಿಯಲ್ಲಿ ಸಿಗುತ್ತದೆ.

Best Mobiles in India

English Summary

Apple iPad Air, iPad Mini launched: Indian pricing, specifications, & more