Home
ಸುದ್ದಿಜಾಲ

ಬೆಂಗಳೂರಿನಲ್ಲಿ ಆಪಲ್‌ ಕಂಪೆನಿಯಿಂದ ಹೊಸ ಎಜುಕೇಶನ್ ಹಬ್ ಪ್ರಾರಂಭ!

ವಿಶ್ವ ಟೆಕ್ ದೈತ್ಯ ಸಂಸ್ಥೆ ಆಪಲ್ ಭಾರತದಲ್ಲಿ ತನ್ನ ಉತ್ಪನ್ನಗಳ ಸರಬರಾಜು ಕೆಲಸ ಮಾಡುವ ಉದ್ಯೋಗಿಗಳ ಕೌಶಲ್ಯಾಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬುಧವಾರ ಕಂಪನಿ ಅಧಿಕೃತವಾಗಿ ಪ್ರಕಟಿಸಿದಂತೆ, ಉತ್ಪಾದನಾ ಚಟುವಟಿಕೆಗಳು ಹೆಚ್ಚು ನಡೆಯುವ ಪ್ರದೇಶಗಳಲ್ಲಿ ಉದ್ಯೋಗಿಗಳಿಗೆ ಗುಣಮಟ್ಟದ ತರಬೇತಿ ಮತ್ತು ಹೊಸ ಕೌಶಲ್ಯಗಳ ಅವಕಾಶ ನೀಡುವ ಉದ್ದೇಶದಿಂದ ಈ ಯೋಜನೆಗಳನ್ನು ವಿಸ್ತರಿಸಲಾಗುತ್ತಿದೆ. ಇದರ ಭಾಗವಾಗಿ ಭಾರತದಲ್ಲಿ ಅದರಲ್ಲೂ ನಮ್ಮ ಬೆಂಗಲುರಿನಲ್ಲಿ ಹೊಸ ಶಿಕ್ಷಣ ಹಬ್ ಆರಂಭಿಸಿರುವುದು ವಿಶೇಷ ಗಮನ ಸೆಳೆದಿದೆ.

ಹೌದು, ಭಾರತದಲ್ಲಿ ಈ ಹೊಸ ಶಿಕ್ಷಣ ಕೇಂದ್ರವು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಸಹಯೋಗದಲ್ಲಿ ಸ್ಥಾಪನೆಯಾಗಿದೆ. ಮಾರ್ಚ್ ತಿಂಗಳಿಂದಲೇ ಇಲ್ಲಿ ವಿವಿಧ ತಾಂತ್ರಿಕ ಕೋರ್ಸ್‌ಗಳು ಲಭ್ಯವಾಗಲಿದ್ದು, ಉದ್ಯೋಗಿಗಳಿಗೆ ದಿನನಿತ್ಯದ ಕೆಲಸದ ಹೊರತಾಗಿ ಹೊಸ ತಂತ್ರಜ್ಞಾನಗಳನ್ನು ಕಲಿಯಲು ಅವಕಾಶ ಕಲ್ಪಿಸಲಿದೆ. ಡಿಜಿಟಲ್ ಲಿಟರಸಿ, ಸ್ವಿಫ್ಟ್ ಕೋಡಿಂಗ್ ಮುಂತಾದ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶಿಕ್ಷಕರಿಂದ ನೇರ ತರಬೇತಿ ಪಡೆಯುವ ವ್ಯವಸ್ಥೆ ಈ ಹಬ್‌ನ ಪ್ರಮುಖ ವೈಶಿಷ್ಟ್ಯವಾಗಿದೆ.

ಭಾರತದಲ್ಲಿ ತಾಂತ್ರಿಕ ತರಬೇತಿ ವಿಸ್ತರಣೆಯ ಬಗ್ಗೆ ಮಾತನಾಡಿದ ಆಪಲ್‌ನ ಪರಿಸರ ಮತ್ತು ಸರಬರಾಜು ಸರಣಿ ನವೀನತೆಯ ಉಪಾಧ್ಯಕ್ಷೆ ಸಾರಾ ಚಾಂಡ್ಲರ್, ಈ ಯೋಜನೆಯಿಂದ ಸಾವಿರಾರು ಉದ್ಯೋಗಿಗಳು ಹೊಸ ಕೌಶಲ್ಯಗಳನ್ನು ಕಲಿತು ತಮ್ಮ ವೃತ್ತಿಜೀವನದಲ್ಲಿ ಮುಂದಿನ ಹಂತಕ್ಕೆ ಸಾಗಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಉದ್ಯೋಗಿಗಳನ್ನು ಸಿದ್ಧಪಡಿಸುವುದೇ ಈ ಯೋಜನೆಯ ಮೂಲ ಗುರಿಯಾಗಿದೆ.

ಈ ತರಬೇತಿ ಪಠ್ಯಕ್ರಮಗಳನ್ನು MAHEನ ಅಧ್ಯಾಪಕರು ಮೊದಲು ಸರಬರಾಜುದಾರ ಸಂಸ್ಥೆಗಳ ತರಬೇತುದಾರರಿಗೆ ಬೋಧಿಸಲಿದ್ದಾರೆ. ನಂತರ ಈ ತರಬೇತುದಾರರು ತಮ್ಮ ಸಂಸ್ಥೆಗಳೊಳಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ತರಬೇತಿ ನೀಡಲಿದ್ದಾರೆ. ಆರಂಭಿಕ ಹಂತದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್‌ನಿಂದ ಈ ಕೋರ್ಸ್‌ಗಳು ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ 25ಕ್ಕೂ ಹೆಚ್ಚು ಸರಬರಾಜುದಾರ ಘಟಕಗಳಲ್ಲಿ ವಿಸ್ತರಿಸಲ್ಪಡಲಿದೆ. ಡಿಜಿಟಲ್ ಕೌಶಲ್ಯ, ಸ್ವಿಫ್ಟ್ ಕೋಡಿಂಗ್, ರೋಬೋಟಿಕ್ಸ್, ಆಟೋಮೇಶನ್ ತಂತ್ರಜ್ಞಾನ ಮತ್ತು ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಪ್ರಮುಖ ತರಬೇತಿ ಕ್ಷೇತ್ರಗಳಾಗಿವೆ.

ಬೆಂಗಳೂರಿನಲ್ಲಿ ಆಪಲ್‌ ಕಂಪೆನಿಯಿಂದ ಹೊಸ ಎಜುಕೇಶನ್ ಹಬ್ ಪ್ರಾರಂಭ!

ಈ ಹೊಸ ಕೋರ್ಸ್‌ಗಳು ಆಪಲ್‌ನ ಜಾಗತಿಕ $50 ಮಿಲಿಯನ್ (ಸುಮಾರು ರೂ. 452 ಕೋಟಿ) ಮೌಲ್ಯದ ಸಪ್ಲೈಯರ್ ಎಂಪ್ಲಾಯೀ ಡೆವಲಪ್‌ಮೆಂಟ್ ಫಂಡ್‌ನ ಭಾಗವಾಗಿವೆ. ಈ ನಿಧಿಯ ಮೂಲಕ ಆಪಲ್ ವಿಶ್ವದ ಹಲವು ದೇಶಗಳಲ್ಲಿ ಸರಬರಾಜುದಾರ ಸಂಸ್ಥೆಗಳ ಉದ್ಯೋಗಿಗಳಿಗೆ ದೀರ್ಘಕಾಲಿಕ ಕೌಶಲ್ಯಾಭಿವೃದ್ಧಿ ಅವಕಾಶಗಳನ್ನು ಒದಗಿಸುತ್ತಿದೆ. ಇತ್ತೀಚಿನ ವಿಸ್ತರಣೆಯೊಂದಿಗೆ, ಭಾರತದಲ್ಲಿ ಆಪಲ್ ಮತ್ತು ಅದರ ಪಾಲುದಾರರು ಈಗ 75ಕ್ಕೂ ಹೆಚ್ಚು ತರಬೇತಿ ಕೋರ್ಸ್‌ಗಳನ್ನು ನೀಡುತ್ತಿದ್ದಾರೆ

2024ರ ಡಿಸೆಂಬರ್‌ನಲ್ಲಿ ಆರಂಭಗೊಂಡ ರೋಬೋಟಿಕ್ಸ್ ತರಬೇತಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, 2025ರಲ್ಲಿ ಅದನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ. ರೋಬೋಟಿಕ್ಸ್ ಲ್ಯಾಬ್‌ಗಳಲ್ಲಿ ಫ್ಯಾಕ್ಟರಿ ಶಿಕ್ಷಕರನ್ನು ತರಬೇತಿ ನೀಡಿ, ಅವರು ತಮ್ಮ ಘಟಕಗಳ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸಿ ತರಬೇತಿ ನೀಡುವ ಮಾದರಿಯನ್ನೂ ಆಪಲ್ ಜಾರಿಗೆ ತರುತ್ತಿದೆ.ಭಾರತದಲ್ಲಿ ಉತ್ಪಾದನಾ ವಲಯ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಉದ್ಯೋಗಿಗಳ ಕೌಶಲ್ಯವನ್ನು ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸುವ ಆಪಲ್‌ನ ಈ ಕ್ರಮ ಸ್ಥಳೀಯ ಉದ್ಯೋಗ ಮಾರುಕಟ್ಟೆಗೆ ಹೊಸ ಶಕ್ತಿ ನೀಡುವಂತಿದೆ.

ದೀರ್ಘಕಾಲಿಕ ವೃತ್ತಿ ಬೆಳವಣಿಗೆ, ಉತ್ತಮ ಉದ್ಯೋಗಾವಕಾಶ ಮತ್ತು ತಾಂತ್ರಿಕ ನೈಪುಣ್ಯ ಹೆಚ್ಚಳಕ್ಕೆ ಈ ಶಿಕ್ಷಣ ಹಬ್ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ ಎಂಬುದು ನಮ್ಮ ಅಭಿಪ್ರಾಯ. ಆದರೆ, ಕೋರ್ಸ್‌ಗಳಿಗೆ ಪ್ರವೇಶ ಹೇಗಿತಲಿದೆ ಮತ್ತು ಸ್ಥಳ ಕುರಿತ ಮತ್ತಷ್ಟು ಮಾಹಿತಿಗಳನ್ನು ನಾವು ಕೂಡ ಎದುರುನೋಡುತ್ತಿದ್ದೇವೆ.

Best Mobiles in India

English summary
Apple has expanded its skill development initiatives in India by launching a new education hub in Bengaluru in collaboration with Manipal Academy of Higher Education. The centre will offer technical training, digital literacy, and Swift coding courses to enhance the skills of supply chain employees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+